ಮೋದಿ ಸರ್ಕಾರದಲ್ಲಿ ಗುಂಪು ಹಲ್ಲೆ ಘಟನೆ ಹೆಚ್ಚಾಗಿಲ್ಲ; ಇದರ ನಿಯಂತ್ರಣಕ್ಕೆ ವಿಶೇಷ ಕಾನೂನು ಅಗತ್ಯ ಇಲ್ಲ: ಅಮಿತ್ ಶಾ

ಯಾವುದಾದರೂ ಗ್ರಾಮದಲ್ಲಿ ಕಳ್ಳತನ ಅಥವಾ ದರೋಡೆಯಾದಾಗ ಜನರು ಆ ಕಳ್ಳನನ್ನು ಹಿಡಿದು ಥಳಿಸುತ್ತಾರೆ. ಇದರಿಂದ ಆತ ಸಾವನ್ನಪ್ಪಬಹುದು. ಇಂಥ ಘಟನೆಗಳು ಹಿಂದೆಯೂ ನಡೆದಿವೆ. ಈಗ ಅದಕ್ಕೆ ಬೇರೆ ಬಣ್ಣ ಕಟ್ಟುತ್ತಿದ್ದಾರೆ” ಎಂದು ಅಮಿತ್ ಶಾ ಈ ಸಂದರ್ಶನದಲ್ಲಿ ಹೇಳಿದ್ದಾರೆ.

Vijayasarthy SN | news18
Updated:October 17, 2019, 2:25 PM IST
  • News18
  • Last Updated: October 17, 2019, 2:25 PM IST
  • Share this:
2014ರಲ್ಲಿ ನರೇಂದ್ರ ಮೋದಿ ನೇತೃತ್ವದಲ್ಲಿ ಎನ್​ಡಿಎ ಸರ್ಕಾರ ಬಂದಾಗಿನಿಂದ ದೇಶದಲ್ಲಿ ಗುಂಪು ಹಲ್ಲೆ ಘಟನೆಗಳ ಪ್ರಮಾಣ ಹೆಚ್ಚಾಗಿದೆ ಎಂಬ ಆರೋಪ ಸದಾ ಕೇಳಿಬರುತ್ತಿದೆ. ಈ ವಿಚಾರವನ್ನು ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಸಾರಾಸಗಟಾಗಿ ನಿರಾಕರಿಸಿದ್ಧಾರೆ. ನ್ಯೂಸ್18 ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಅವರು, ಈ ಗುಂಪು ಹಲ್ಲೆ ವಿಚಾರ ವಿರೋಧಿಗಳ ಷಡ್ಯಂತ್ರ ಎಂದು ಟೀಕಿಸಿದ್ದಾರೆ.

“ಯಾರಾದರೂ ವ್ಯಕ್ತಿ ಹತ್ಯೆಯಾದರೆ ಸೆಕ್ಷನ್ 302 ಇದೆ. ಇದು ಎಲ್ಲೆಡೆಯೂ ಬಳಕೆಯಾಗುತ್ತದೆ. ಗುಂಪು ಹಲ್ಲೆ ಘಟನೆಗಳನ್ನು ಬಿಜೆಪಿ ಸರ್ಕಾರ ತನಿಖೆ ನಡೆಸಿ ಶಂಕಿತರ ವಿರುದ್ಧ ಚಾರ್ಜ್​ಶೀಟ್ ಹಾಕಿದೆ. ಈಗ ನೀವು ಇದಕ್ಕೆ ರಾಜಕೀಯ ಬಣ್ಣ ಕಟ್ಟಬೇಕಾ ಅಥವಾ ಇದು ಸಾಮಾಜಿಕ ಅನಿಷ್ಟ ಎಂಬುದನ್ನು ಅರಿತುಕೊಳ್ಳಬೇಕಾ? ಇದನ್ನು ಸಮಾಜ ನಿರ್ಧರಿಸುತ್ತದೆ” ಎಂದು ನ್ಯೂಸ್18 ಸಂದರ್ಶನದಲ್ಲಿ ಅಮಿತ್ ಶಾ ಹೇಳಿದ್ದಾರೆ.

ಇದನ್ನೂ ಓದಿ: ಭಾರತರತ್ನ ಪಡೆಯಲು ಸಾವರ್ಕರ್​ಗಿಂತ ಅರ್ಹ ವ್ಯಕ್ತಿ ಇಲ್ಲ; ಅಮಿತ್​ ಶಾ

ಇತ್ತೀಚಿನ ವರ್ಷಗಳಲ್ಲಿ ದೇಶಾದ್ಯಂತ ಹಲವಾರು ಗುಂಪು ಹಲ್ಲೆ ಘಟನೆಗಳು ನಡೆದಿರುವುದು ಬೆಳಕಿಗೆ ಬಂದಿವೆ. ಇವುಗಳಲ್ಲಿ ಬಹುತೇಕವು ಗೋಹತ್ಯೆ ಅಥವಾ ಗೋಕಳ್ಳಸಾಗಾಣಿಕೆ ಪ್ರಕರಣಗಳಿಗೆ ಸಂಬಂಧಿಸಿದ್ದೇ ಆಗಿವೆ. ಕೇಂದ್ರ ಸರ್ಕಾರ ಗೋಹತ್ಯೆ ನಿಷೇಧ ಕಾನೂನು ರೂಪಿಸಿದ ಬಳಿ ಇಂಥ ಘಟನೆಗಳು ಹೆಚ್ಚಾಗಿ ನಡೆದಿರುವುದು ಕಂಡುಬಂದಿದೆ. ಮುಸ್ಲಿಮ್ ಸಮುದಾಯದವರನ್ನೇ ಗುರಿಯಾಗಿಸಿ, ಅವರಿಂದ ಭಾರತ್ ಮಾತಾ ಕೀ ಜೈ; ಜೈ ಶ್ರೀರಾಮ್ ಇತ್ಯಾದಿ ಘೋಷಣೆ ಕೂಗುವಂತೆ ಕಿರುಕುಳ ನೀಡಿದ್ದಾರೆನ್ನಲಾದ ಕೆಲ ಪ್ರಕರಣಗಳೂ ಇವೆ.

ಗುಂಪು ಹಲ್ಲೆ ಘಟನೆಗಳನ್ನ ನಿಯಂತ್ರಿಸಲು ಪ್ರಬಲ ಕಾನೂನು ರೂಪಿಸಬೇಕೆಂದು ಸುಪ್ರೀಂ ಕೋರ್ಟ್ ಕಳೆದ ವರ್ಷ ಸರ್ಕಾರಕ್ಕೆ ನಿರ್ದೇಶಿಸಿತ್ತು. ಆದರೆ, ಆ ಕಾನೂನು ಇನ್ನೂ ಬಂದಿಲ್ಲ. ನ್ಯೂಸ್18 ಸಂದರ್ಶನದಲ್ಲಿ ನೆಟ್​ವರ್ಕ್18 ಗ್ರೂಪ್​ನ ಪ್ರಧಾನ ಸಂಪಾದಕ ರಾಹುಲ್ ಜೋಷಿ ಅವರು ಈ ವಿಚಾರವನ್ನು ಪ್ರಸ್ತಾಪಿಸಿದಾಗ ಅಮಿತ್ ಶಾ, ಗುಂಪು ಹಲ್ಲೆ ತಡೆಯಲು ಹೊಸ ಕಾನೂನಿನ ಅಗತ್ಯವಿಲ್ಲ ಎಂದು ಪ್ರತಿಪಾದಿಸಿದ್ದಾರೆ.

ಇದನ್ನೂ ಓದಿ: ಮೋದಿ ಆಡಳಿತದಿಂದ ದೇಶದಲ್ಲಿ ಜಾತಿವಾದ, ಕುಟುಂಬ ರಾಜಕಾರಣ, ಸ್ವಜನಪಕ್ಷಪಾತ ನಿರ್ಮೂಲನೆಯಾಗಿದೆ: ಅಮಿತ್ ಶಾ

“ಇದಕ್ಕಾಗಿ ಕಾನೂನುಗಳು ಚಾಲ್ತಿಯಲ್ಲಿವೆ. ಘಟನೆಯನ್ನು ಸರಿಯಾಗಿ ತನಿಖೆ ನಡೆಸಿ ಆ ಕಾನೂನನ್ನು ಬಳಕೆ ಮಾಡುವ ಅಗತ್ಯವಿದೆ. ಈ ಸಂಬಂಧ ಗೃಹ ಸಚಿವಾಲಯವು ಸಂಬಂಧಿತರಿಗೆ ಸಲಹಾಪಟ್ಟಿ ನೀಡಿದೆ” ಎಂದು ಅಮಿತ್ ಶಾ ಸ್ಪಷ್ಟಪಡಿಸಿದ್ದಾರೆ.ಗುಂಪು ಹಲ್ಲೆ ತಡೆಯಲು ರೂಪಿಸಲಾಗಿರುವ ಸಮಿತಿಗೆ ಅಧ್ಯಕ್ಷರಾಗಿರುವ ಅಮಿತ್ ಶಾ, ಗುಂಪು ಹಲ್ಲೆ ಎಂಬುದು ಈ ಸರ್ಕಾರದಲ್ಲಾಗಿರುವ ವಿಶೇಷ ಬೆಳವಣಿಗೆಯಲ್ಲ. ಕಾನೂನು ಸುವ್ಯವಸ್ಥೆ ವಿಚಾರದಲ್ಲಿ ಉದ್ದೇಶಪೂರ್ವಕವಾಗಿ ರಾಜಕೀಯ ಬಣ್ಣ ಲೇಪಿಸುತ್ತಿದ್ಧಾರೆ ಎಂದು ಟೀಕಿಸಿದ್ಧಾರೆ.

ಇದನ್ನೂ ಓದಿ: 2024ರ ವೇಳೆಗೆ ದೇಶಾದ್ಯಂತ ಎನ್​ಆರ್​ಸಿ ಜಾರಿಗೆ ಬರಲಿದೆ; ಕೇಂದ್ರ ಗೃಹ ಸಚಿವ ಅಮಿತ್​ ಶಾ

“ಬಿಜೆಪಿ ಸರ್ಕಾರದ ಅವಧಿಯಲ್ಲಿ ಗುಂಪು ಹಲ್ಲೆ ಘಟನೆಗಳ ಪ್ರಮಾಣ ಹೆಚ್ಚಾಗಿಲ್ಲ. ಇದರ ಹಿಂದೆ ಬೇರೆಯೇ ಅಪಪ್ರಚಾರದ ಪಿತೂರಿ ನಡೆದಿದೆ… ಯಾವುದಾದರೂ ಗ್ರಾಮದಲ್ಲಿ ಕಳ್ಳತನ ಅಥವಾ ದರೋಡೆಯಾದಾಗ ಜನರು ಆ ಕಳ್ಳನನ್ನು ಹಿಡಿದು ಥಳಿಸುತ್ತಾರೆ. ಇದರಿಂದ ಆತ ಸಾವನ್ನಪ್ಪಬಹುದು. ಇಂಥ ಘಟನೆಗಳು ಹಿಂದೆಯೂ ನಡೆದಿವೆ. ಈಗ ಅದಕ್ಕೆ ಬೇರೆ ಬಣ್ಣ ಕಟ್ಟುತ್ತಿದ್ದಾರೆ” ಎಂದು ಅಮಿತ್ ಶಾ ಈ ಸಂದರ್ಶನದಲ್ಲಿ ಹೇಳಿದ್ದಾರೆ.

ಇತ್ತೀಚೆಗೆ, 49 ಗಣ್ಯವ್ಯಕ್ತಿಗಳು ಅಥವಾ ಸೆಲಬ್ರಿಟಿಗಳು ದೇಶದಲ್ಲಾಗುತ್ತಿರುವ ಗುಂಪು ಹಲ್ಲೆ ಘಟನೆ ಹೆಚ್ಚಳದ ಬಗ್ಗೆ ಆತಂಕ ವ್ಯಕ್ತಪಡಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದರು. ಗುಂಪು ಹಲ್ಲೆಗಳಲ್ಲಿ ಮುಸ್ಲಿಮರು ಮತ್ತು ದಲಿತರೇ ಹೆಚ್ಚಾಗಿ ಈಡಾಗುತ್ತಿದ್ದಾರೆಂಬ ಆತಂಕವೂ ವ್ಯಕ್ತವಾಗಿದೆ. ಆದರೆ, ಈ ಆರೋಪವನ್ನು ಅಮಿತ್ ಶಾ ತಳ್ಳಿಹಾಕುತ್ತಾರೆ. “ಮುಸ್ಲಿಮರು ಅಥವಾ ದಲಿತರೇ ಬಲಿಯಾಗುತ್ತಾರೆಂದೇನಿಲ್ಲ. ಹಿಂದಿನ ಘಟನೆಗಳನ್ನ ಅವಲೋಕಿಸಿದಾಗ ಬಡವರು ಬಲಿಯಾಗಿರುವುದು ಕಂಡುಬಂದಿದೆ” ಎಂದು ಅಮಿತ್ ಶಾ ವಾದಿಸುತ್ತಾರೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
First published:October 17, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ