• Home
  • »
  • News
  • »
  • national-international
  • »
  • Narendra Modi-Amit Shah: ಮುಂದಿನ ಬಾರಿಯೂ ನರೇಂದ್ರ ಮೋದಿಯವರೇ ಪ್ರಧಾನಿ! ಕೇಂದ್ರ ಸಚಿವ ಅಮಿತ್ ಶಾ ವಿಶ್ವಾಸ

Narendra Modi-Amit Shah: ಮುಂದಿನ ಬಾರಿಯೂ ನರೇಂದ್ರ ಮೋದಿಯವರೇ ಪ್ರಧಾನಿ! ಕೇಂದ್ರ ಸಚಿವ ಅಮಿತ್ ಶಾ ವಿಶ್ವಾಸ

ನರೇಂದ್ರ ಮೋದಿ-ಅಮಿತ್ ಶಾ (ಸಂಗ್ರಹ ಚಿತ್ರ)

ನರೇಂದ್ರ ಮೋದಿ-ಅಮಿತ್ ಶಾ (ಸಂಗ್ರಹ ಚಿತ್ರ)

"ಗುಜರಾತ್ ವಿಧಾನಸಭಾ ಚುನಾವಣಾ ಫಲಿತಾಂಶವು ಬರೀ ಗುಜರಾತ್‌ಗೆ ಮಾತ್ರ ಮುಖ್ಯವಲ್ಲ, ಇಡೀ ದೇಶಕ್ಕೇ ಮುಖ್ಯ. 2024ರಲ್ಲಿ ದೇಶದಲ್ಲಿ ಲೋಕಸಭಾ ಚುನಾವಣೆ ನಡೆಯಲಿದೆ ಮತ್ತು ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ಇಡೀ ದೇಶವು ಸಿದ್ಧವಾಗಿದೆ" ಎಂದು ಅಮಿತ್ ಶಾ ಹೇಳಿದ್ದಾರೆ.

  • Share this:

ಗುಜರಾತ್: ನರೇಂದ್ರ ಮೋದಿಯವರು (Narendra Modi) ಮತ್ತೊಮ್ಮೆ ದೇಶದ ಪ್ರಧಾನಿಯಾಗುತ್ತಾರೆ (Prime Minister of India) ಅಂತ ಕೇಂದ್ರ ಗೃಹಸಚಿವ ಅಮಿತ್ ಶಾ (Union Home Minister Amit Shah) ವಿಶ್ವಾಸದ ಮಾತನ್ನಾಡಿದ್ದಾರೆ. ಕಳೆದ ತಿಂಗಳು ನಡೆದ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ (Gujarat Assembly Election) ಬಿಜೆಪಿ ಮತ್ತೊಮ್ಮೆ ಗೆಲುವು ಸಾಧಿಸಿತ್ತು. ಬಿಜೆಪಿಯ (BJP) ಈ ದಾಖಲೆಯ ಗೆಲುವು 2024ರ ಸಾರ್ವತ್ರಿಕ ಚುನಾವಣೆಯಲ್ಲಿ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಿ ಆಯ್ಕೆಯಾಗುತ್ತಾರೆ ಎಂಬ ಸಂದೇಶವನ್ನು ರವಾನಿಸಿದೆ ಅವರು ಹೇಳಿದ್ದಾರೆ. ಗುಜರಾತ್‌ನಲ್ಲಿ ಮಾತನಾಡಿದ ಅವರು, "ಗುಜರಾತ್ ವಿಧಾನಸಭಾ ಚುನಾವಣಾ ಫಲಿತಾಂಶವು ಬರೀ ಗುಜರಾತ್‌ಗೆ ಮಾತ್ರ ಮುಖ್ಯವಲ್ಲ, ಇಡೀ ದೇಶಕ್ಕೇ ಮುಖ್ಯ. 2024ರಲ್ಲಿ ದೇಶದಲ್ಲಿ ಲೋಕಸಭಾ ಚುನಾವಣೆ (Loka Sabha Election) ನಡೆಯಲಿದೆ ಮತ್ತು ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ಇಡೀ ದೇಶವು ಸಿದ್ಧವಾಗಿದೆ" ಎಂದು ಅಮಿತ್ ಶಾ ಹೇಳಿದ್ದಾರೆ.


“ಮೋದಿ ಸಾಬ್ ಮತ್ತೆ ಪ್ರಧಾನಿಯಾಗುತ್ತಾರೆ”


ಗುಜರಾತ್‌ನ ಸಂದೇಶವು ಕಾಶ್ಮೀರದಿಂದ ಕನ್ಯಾಕುಮಾರಿ ಅಂದರೆ ಉತ್ತರದಿಂದ ದಕ್ಷಿಣಕ್ಕೆ ಮತ್ತು ದ್ವಾರಕಾದಿಂದ ಕಾಮಾಕ್ಯಕ್ಕೆ ಅಂದರೆ ಪಶ್ಚಿಮದಿಂದ ಪೂರ್ವಕ್ಕೆ ಸ್ಪಷ್ಟ ಸಂದೇಶವೊಂದನ್ನು ಸಾರಿದೆ ಅಂತ ಅಮಿತ್ ಶಾ ಹೇಳಿದ್ದಾರೆ. ಮೋದಿ ಸಾಹೇಬ್ ಅವರು 2024 ರಲ್ಲಿ ಮತ್ತೊಮ್ಮೆ ಪ್ರಧಾನಿಯಾಗುತ್ತಾರೆ ಎಂದು ಅಮಿತ್ ಶಾ ಸ್ಪಷ್ಟಪಡಿಸಿದ್ದಾರೆ.“ಮೋದಿ ವಿರೋಧಿಗಳಿಗೆ ಗುಜರಾತ್ ಫಲಿತಾಂಶದಿಂದ ಉತ್ತರ”
182 ಸದಸ್ಯ ಬಲದ ಗುಜರಾತ್ ವಿಧಾನಸಭೆಯಲ್ಲಿ ದಾಖಲೆಯ 156 ಸ್ಥಾನಗಳೊಂದಿಗೆ ಬಿಜೆಪಿ ಅಧಿಕಾರವನ್ನು ಉಳಿಸಿಕೊಂಡಿದೆ. ಈ ಮೂಲಕ ಗುಜರಾತ್ ರಾಜ್ಯ ಮತ್ತು ಪ್ರಧಾನಿ ಮೋದಿಯವರನ್ನು ದೂಷಿಸಲು ಪ್ರಯತ್ನಿಸಿದವರಿಗೆ ಗುಜರಾತ್‌ನ ಜನರು ಪ್ರತ್ಯುತ್ತರ ನೀಡಿದ್ದಾರೆ ಅಂತ ವಿಪಕ್ಷ ಕಾಂಗ್ರೆಸ್ ಹಾಗೂ ಆಮ್ ಆದ್ಮಿ ಪಕ್ಷಕ್ಕೆ ಅಮಿತ್ ಶಾ ತಿರುಗೇಟು ನೀಡಿದ್ರು.


ಇದನ್ನೂ ಓದಿ: Droupadi Murmu: ರಾಷ್ಟ್ರಪತಿ ಕಾಲು ಮುಟ್ಟಿ ನಮಸ್ಕರಿಸಲು ಮುಂದಾಗಿದ್ದ ಮಹಿಳೆಗೆ ಸಂಕಷ್ಟ, ಕೆಲಸದಿಂದಲೇ ಸಸ್ಪೆಂಡ್ ಆದ ಲೇಡಿ ಆಫೀಸರ್!


“ಬಿಜೆಪಿಯಿಂದ ನಿರಂತರ 27 ವರ್ಷಗಳ ಆಡಳಿತ”
ಬಿಜೆಪಿ ಸರ್ಕಾರ ರಾಜ್ಯದ ಅಭಿವೃದ್ಧಿಗೆ ಮಾಡಿರುವ ಕೆಲಸಗಳ ಬಗ್ಗೆ ವಿವರಿಸುವ ಅಗತ್ಯವಿಲ್ಲ, ಚುನಾವಣೆಯಲ್ಲಿ ಜನರು ಅದಕ್ಕೆ ಸ್ಪಂದಿಸುತ್ತಾರೆ ಎಂದು ಅಮಿತ್ ಶಾ ಹೇಳಿದರು. "ಒಂದು ಪಕ್ಷವು 27 ವರ್ಷಗಳ ಕಾಲ ಅಡೆತಡೆಯಿಲ್ಲದೆ ಆಡಳಿತ ನಡೆಸಿದ ಒಂದೇ ಒಂದು ರಾಜ್ಯವಿಲ್ಲ. ಗುಜರಾತ್‌ ಮಾತ್ರ ಈ ದಾಖಲೆ ಮಾಡಿದೆ. ಬಿಜೆಪಿ ಸರ್ಕಾರ 27 ವರ್ಷ ಮತ್ತು ಅದಕ್ಕಿಂತ ಹೆಚ್ಚು ಕಾಲ ರಾಜ್ಯದಲ್ಲಿ ಆಡಳಿತ ನಡೆಸಿದೆ ಎಂದು ಅಮಿತ್ ಶಾ ಹೇಳಿದ್ರು.
ದೆಹಲಿಯಲ್ಲಿ ಮೋದಿ ರೋಡ್ ಶೋ
ನವದೆಹಲಿಯಲ್ಲಿ ಇಂದು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಣಿ ಸಭೆ ನಡೆಯಿತು. ಈ ಸಭೆಗೆ ಹಾಜರಾಗುವ ಮನ್ನ ಪ್ರಧಾನಿ ನರೇಂದ್ರ ಮೋದಿ ಅವರು ಭರ್ಜರಿ ರೋಡ್‌ ಶೋ ನಡೆಸಿದರು. ನಗರದ ಸರ್ದಾರ್ ಪಟೇಲ್ ಮಾರ್ಗ್ ಮತ್ತು ಸೆಂಟ್ರಲ್ ದೆಹಲಿಯ ಎನ್‌ಡಿಎಂಸಿ ಕನ್ವೆನ್ಷನ್ ಸೆಂಟರ್ ನಡುವೆ ಪ್ರಧಾನಿ ಮೋದಿ ಭರ್ಜರಿ ರೋಡ್‌ ಶೋ ನಡೆಸಿದರು.


ಇದನ್ನೂ ಓದಿ: Nitish Kumar: ನಿತೀಶ್ ಕುಮಾರ್ ರಾಮ-ಕೃಷ್ಣನಂತೆ, ಕಂಸ-ರಾವಣ ಮೋದಿಯಂತೆ! ವಿವಾದ ಎಬ್ಬಿಸಿದ ಜೆಡಿಯು ಪೋಸ್ಟರ್


ಮೋದಿ ಪರ ಮೊಳಗಿದ ಘೋಷಣೆ


ಇಂದು ಮಧ್ಯಾಹ್ನ 3 ಗಂಟೆಯಿಂದ ಮೋದಿ ರೋಡ್ ಶೋ ನಡೆಸಿದರು. ಪಟೇಲ್ ಚೌಕ್‌ನಿಂದ ಸಂಸದ್ ಮಾರ್ಗ್ ಮತ್ತು ಜೈ ಸಿಂಗ್ ರಸ್ತೆ ಜಂಕ್ಷನ್‌ವರೆಗೆ, ಪ್ರಧಾನಿ ಮೋದಿ ಅವರ ರೋಡ್‌ ಶೋ ನಡೆಯಿತು. ರೋಡ್ ಶೋ ನಡೆಯುವ ಮಾರ್ಗದ ಸುತ್ತಲಿನ ಪ್ರದೇಶದಲ್ಲಿ ವಿಶೇಷ ಟ್ರಾಫಿಕ್ ವ್ಯವಸ್ಥೆ ಮಾಡಲಾಗಿತ್ತು. ಜಂತರ್ ಮಂತರ್ ರಸ್ತೆ, ಅಶೋಕ ರಸ್ತೆ ಮತ್ತು ಬಾಂಗ್ಲಾ ಸಾಹಿಬ್ ಲೇನ್ ಸೇರಿದಂತೆ ಎಂಟು ರಸ್ತೆಗಳನ್ನು, ರೋಡ್‌ ಶೋ ಕಾರಣಕ್ಕೆ ತಾತ್ಕಾಲಿಕವಾಗಿ ಮುಚ್ಚಲಾಗಿತ್ತು. ಈ ವೇಳೆ ನೆರೆದಿದ್ದ ಬಿಜೆಪಿ ಕಾರ್ಯಕರ್ತರು ಹಾಗೂ ದೆಹಲಿ ನಿವಾಸಿಗಳತ್ತ ಪ್ರಧಾನಿ ಮೋದಿ ಕೈಬೀಸಿದರು, ಮೋದಿ ಪರ ಘೋಷಣೆ ಕೂಗಿದ್ರು.

Published by:Annappa Achari
First published: