• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Amit Shah: ಆಧುನಿಕ ಭಾರತದ ಇತಿಹಾಸಕ್ಕೆ 4 ಗುಜರಾತಿಗಳು ಬಹುದೊಡ್ಡ ಕೊಡುಗೆ ನೀಡಿದ್ದಾರೆ: ಅಮಿತ್ ಶಾ

Amit Shah: ಆಧುನಿಕ ಭಾರತದ ಇತಿಹಾಸಕ್ಕೆ 4 ಗುಜರಾತಿಗಳು ಬಹುದೊಡ್ಡ ಕೊಡುಗೆ ನೀಡಿದ್ದಾರೆ: ಅಮಿತ್ ಶಾ

ಅಮಿತ್ ಶಾ, ಕೇಂದ್ರ ಗೃಹ ಸಚಿವ

ಅಮಿತ್ ಶಾ, ಕೇಂದ್ರ ಗೃಹ ಸಚಿವ

ಗುಜರಾತಿ ಸಮುದಾಯವು ದೇಶ ಮತ್ತು ಪ್ರಪಂಚದಾದ್ಯಂತ ಹರಡಿಕೊಂಡಿದೆ. ಗುಜರಾತಿಗಳು ಯಾವುದೇ ಸಮಾಜದ ಜೊತೆ ಯಾವಾಗಲೂ ಚೆನ್ನಾಗಿ ಬೆರೆಯುತ್ತಾರೆ. ಮತ್ತು ಅಲ್ಲಿ ಸೇವೆ ಸಲ್ಲಿಸುತ್ತಾರೆ ಎಂದು ಅಮಿತ್ ಶಾ ಹೇಳಿದರು.

  • Share this:

ನವದೆಹಲಿ: ಭಾರತದ ಆಧುನಿಕ ಇತಿಹಾಸದಲ್ಲಿ ನಾಲ್ಕು ಮಂದಿ ಗುಜರಾತಿಗಳು (Gujarati's) ಮಹತ್ವದ ಕೊಡುಗೆ ನೀಡಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರು ಹೇಳಿದ್ದಾರೆ. ದೆಹಲಿ (Delhi) ಗುಜರಾತಿ ಸಮಾಜ 125 ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ ಆಯೋಜಿಸಲಾದ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅಮಿತ್ ಶಾ ಗುಜರಾತಿಗಳ ಸಾಧನೆ ಬಗ್ಗೆ ಮಾತನಾಡಿದರು.


ನಾಲ್ವರು ಗುಜರಾತಿಗಳಾದ ಮಹಾತ್ಮ ಗಾಂಧಿ, ಸರ್ದಾರ್ ವಲ್ಲಭಭಾಯಿ ಪಟೇಲ್, ಮೊರಾರ್ಜಿ ದೇಸಾಯಿ ಮತ್ತು ನರೇಂದ್ರ ಮೋದಿ ಆಧುನಿಕ ಭಾರತದ ಇತಿಹಾಸಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ ಎಂದು ಹೇಳಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಪ್ರಧಾನಿ ನರೇಂದ್ರ ಮೋದಿಯವರಿಂದಾಗಿ ಭಾರತದ ಕೀರ್ತಿ ಪ್ರಪಂಚದಾದ್ಯಂತ ಹರಡುತ್ತಿದೆ ಎಂದು ಹೇಳಿದರು.


ಇದನ್ನೂ ಓದಿ: Crime News: 5 ವರ್ಷದ ಬಾಲಕಿ ಮೇಲೆ ತಂದೆ, ಚಿಕ್ಕಪ್ಪನಿಂದ ಅತ್ಯಾಚಾರ! 84 ವರ್ಷ ಜೈಲು ಶಿಕ್ಷೆ ವಿಧಿಸಿದ ಕೋರ್ಟ್‌


ಗುಜರಾತಿಗಳು ಉತ್ತಮ ಸಾಧನೆ ಮಾಡಿದ್ದಾರೆ


ಗಾಂಧೀಜಿಯವರ ಪ್ರಯತ್ನದಿಂದ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿತು ಎಂದ ಅಮಿತ್ ಶಾ, ಸರ್ದಾರ್ ಪಟೇಲ್‌ ಅವರಿಂದಾಗಿ ದೇಶವು ಏಕವಾಯಿತು, ಮೊರಾರ್ಜಿ ದೇಸಾಯಿ ಅವರಿಂದ ದೇಶದ ಪ್ರಜಾಪ್ರಭುತ್ವ ಪುನರುಜ್ಜೀವನಗೊಂಡಿದೆ ಮತ್ತು ನರೇಂದ್ರ ಮೋದಿ ಅವರಿಂದಾಗಿ ಭಾರತವನ್ನು ವಿಶ್ವದಾದ್ಯಂತ ಕೊಂಡಾಡುತ್ತಿದ್ದಾರೆ. ಈ ನಾಲ್ವರು ಗುಜರಾತಿಗಳು ಉತ್ತಮ ಸಾಧನೆ ಮಾಡಿದ್ದಾರೆ ಮತ್ತು ಅವರು ಇಡೀ ರಾಷ್ಟ್ರದ ಹೆಮ್ಮೆ ಎಂದು ಗುಜರಾತಿ ಭಾಷೆಯಲ್ಲಿ ಮಾಡಿದ ಭಾಷಣದಲ್ಲಿ ಅಮಿತ್ ಶಾ ಹೇಳಿದರು.


ಗುಜರಾತಿ ಸಮುದಾಯವು ದೇಶ ಮತ್ತು ಪ್ರಪಂಚದಾದ್ಯಂತ ಹರಡಿಕೊಂಡಿದೆ ಎಂದ ಅಮಿತ್ ಶಾ, ಗುಜರಾತಿಗಳು ಯಾವುದೇ ಸಮಾಜದ ಜೊತೆ ಯಾವಾಗಲೂ ಚೆನ್ನಾಗಿ ಬೆರೆಯುತ್ತಾರೆ. ಮತ್ತು ಅಲ್ಲಿ ಸೇವೆ ಸಲ್ಲಿಸುತ್ತಾರೆ. ದೆಹಲಿಯಲ್ಲಿ ನೆಲೆಸಿರುವ ಗುಜರಾತಿಗರನ್ನು ಅವರ ಸಂಸ್ಕೃತಿ ಮತ್ತು ನಾಗರಿಕತೆಯೊಂದಿಗೆ ಸಂಪರ್ಕಿಸುವುದರೊಂದಿಗೆ ದೇಶ ಮತ್ತು ಸಮಾಜದ ಸೇವೆಯತ್ತ ಅವರನ್ನು ಪ್ರೇರೇಪಿಸುವ ಕೆಲಸವನ್ನು ಈ ಸಂಸ್ಥೆ ಮಾಡಿದೆ ಎಂದರು. ಇದೇ ವೇಳೆ 125 ವರ್ಷಗಳನ್ನು ಪೂರೈಸಿದ ಗುಜರಾತಿ ಸಮಾಜ  ಸಂಸ್ಥೆಗೆ ಸಂಬಂಧಿಸಿದ ಎಲ್ಲರನ್ನೂ ಅಮಿತ್ ಶಾ ಅಭಿನಂದಿಸಿದರು.


ಇದನ್ನೂ ಓದಿ: Jallikattu Verdict: ಜಲ್ಲಿಕಟ್ಟು ಕ್ರೀಡೆಗೆ ಸುಪ್ರೀಂ ಕೋರ್ಟ್‌ನಲ್ಲಿ ಜೈಕಾರ; ಕಂಬಳಕ್ಕೂ ಉಘೇ ಎಂದ ನ್ಯಾಯಾಲಯ


ಗುಜರಾತಿಗಳನ್ನು ಕೊಂಡಾಡಿದ ಶಾ


ಗುಜರಾತಿ ಸಮುದಾಯದ ಜನರಿಗೆ ಎಲ್ಲವನ್ನೂ ಸ್ವೀಕರಿಸುವ ಗುಣ ಇದೆ ಎಂದ ಅಮಿತ್ ಶಾ, ದೆಹಲಿಯಲ್ಲಿ ನೆಲೆಸಿದ್ದರೂ ಕೂಡ ಗುಜರಾತಿ ಸಮುದಾಯವು ಗುಜರಾತ್‌ನ ಮೂಲತತ್ವವನ್ನು ಉಳಿಸಿಕೊಂಡು, ಅಲ್ಲಿನ ಸಂಸ್ಕೃತಿಯನ್ನು ಬೆಳೆಸುತ್ತಾರೆ. ಪ್ರತಿ ಸಮುದಾಯದ ಜನರು ದೆಹಲಿಯಲ್ಲಿ ವಾಸಿಸುತ್ತಿದ್ದಾರೆ ಮತ್ತು ಗುಜರಾತಿ ಸಮುದಾಯವೂ ನಗರದಲ್ಲಿ ಉತ್ತಮ ದರ್ಜೆಯಲ್ಲಿ ವಾಸಿಸುತ್ತಿದ್ದಾರೆ ಎಂದ ಶಾ, ಪ್ರಧಾನಿ ಮೋದಿಯವರ ಒಂಬತ್ತು ವರ್ಷಗಳ ಅಧಿಕಾರಾವಧಿಯಲ್ಲಿ ದೇಶವು ಅನೇಕ ಸಾಧನೆಗಳನ್ನು ಮಾಡಿದೆ ಎಂದು ಹೇಳಿದರು.



2014ರಲ್ಲಿ ಮೋದಿ ಪ್ರಧಾನಿಯಾದಾಗ ಭಾರತದ ಆರ್ಥಿಕತೆ ವಿಶ್ವದಲ್ಲಿ 11ನೇ ಸ್ಥಾನದಲ್ಲಿತ್ತು, ಇಂದು ಒಂಬತ್ತು ವರ್ಷಗಳ ನಂತರ ಭಾರತದ ಆರ್ಥಿಕತೆ ವಿಶ್ವದಲ್ಲಿ 5ನೇ ಸ್ಥಾನದಲ್ಲಿದೆ ಎಂದ ಅಮಿತ್ ಶಾ, ಈಗ IMF ಸೇರಿದಂತೆ ಹಲವು ಏಜೆನ್ಸಿಗಳು ಭಾರತದ ಆರ್ಥಿಕತೆಯನ್ನು ಪ್ರಕಾಶಮಾನವಾದ ತಾಣವಾಗಿ ನೋಡುತ್ತಿವೆ. ಮೋದಿಯವರ ಪ್ರಬಲ ನಾಯಕತ್ವದಲ್ಲಿ ಸರ್ಜಿಕಲ್ ಮತ್ತು ವೈಮಾನಿಕ ದಾಳಿಗಳನ್ನು ನಡೆಸುವ ಮೂಲಕ ಭಾರತವು ಜಗತ್ತಿಗೆ ಭಾರತದ ಗಡಿಯನ್ನು ಯಾರೂ ಹಾಳುಮಾಡಲು ಸಾಧ್ಯವಿಲ್ಲ ಎಂಬ ಸಂದೇಶವನ್ನು ನೀಡಿದೆ ಎಂದು ಅವರು ಹೇಳಿದರು.

First published: