ಅಜಾತ ಶತ್ರು ವಾಜಪೇಯಿ ಆರೋಗ್ಯದಲ್ಲಿ ಏರುಪೇರು: ಏಮ್ಸ್​ಗೆ ಅಮಿತ್​ ಶಾ, ರಾಜನಾಥ್​ ಸಿಂಗ್ ಭೇಟಿ, ಆರೋಗ್ಯ ವಿಚಾರಣೆ​​


Updated:August 11, 2018, 10:52 PM IST
ಅಜಾತ ಶತ್ರು ವಾಜಪೇಯಿ ಆರೋಗ್ಯದಲ್ಲಿ ಏರುಪೇರು: ಏಮ್ಸ್​ಗೆ ಅಮಿತ್​ ಶಾ, ರಾಜನಾಥ್​ ಸಿಂಗ್ ಭೇಟಿ, ಆರೋಗ್ಯ ವಿಚಾರಣೆ​​

Updated: August 11, 2018, 10:52 PM IST
ನ್ಯೂಸ್​-18 ಕನ್ನಡ

ನವದೆಹಲಿ(ಆಗಸ್ಟ್​.11): ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ದೇಶದ ಮಾಜಿ ಪ್ರಧಾನಿ, ಬಿಜೆಪಿ ಹಿರಿಯ ಮುಖಂಡ ಅಟಲ್​ ಬಿಹಾರಿ ವಾಜಪೇಯಿ ಅವರಿಗೆ ದೆಹಲಿಯ ಏಮ್ಸ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.

ಹಲವು ದಿನಗಳಿಂದ ಅನಾರೋಗ್ಯ ವಾಜಪೇಯಿ ಅವರನ್ನು ಕಾಡುತ್ತಿತ್ತು. ಇದೀಗ ಅಜಾತ ಶತ್ರುವಿನ ಆರೋಗ್ಯದಲ್ಲಿ ಮತ್ತಷ್ಟು ಏರುಪೇರು ಕಂಡಿದ್ದು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್​ ಶಾ ಮತ್ತು ಕೇದ್ರ ಗೃಹ ಸಚಿ ರಾಜನಾಥ್​ ಸಿಂಗ್​ ಏಮ್ಸ್​​ ಆಸ್ಪತ್ರಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ಧಾರೆ ಎನ್ನಲಾಗಿದೆ.

93 ವರ್ಷದ ವಾಜಪೇಯಿ ಕಳೆದ ಕೆಲ ವರ್ಷಗಳಿಂದ ಹಾಸಿಗೆ ಹಿಡಿದಿದ್ದರು. ನೆನಪಿನ ಶಕ್ತಿಯನ್ನು ಕೂಡ ವಾಜಪೇಯಿ ಕಳೆದುಕೊಂಡಿದ್ದಾರೆ ಎನ್ನಲಾಗಿದೆ. ಇದೇ ಹಿನ್ನಲೆಯಲ್ಲಿ ವಾಜಪೇಯಿ ಸಕ್ರಿಯ ರಾಜಕಾರಣದಿಂದ ದೂರ ಉಳಿದಿದ್ದರು. ದೇಶದ ಜನಪ್ರಿಯ ಪ್ರಧಾನಿಗಳಲ್ಲಿ ವಾಜಪೇಯಿ ಒಬ್ಬರಾಗಿ ಗುರುತಿಸಿಕೊಂಡಿದ್ದರು.

ಜತೆಗೆ ಅಧಿಕಾರಾವಧಿಯಲ್ಲಿ ಅಭಿವೃದ್ಧಿ ಕಾಯಕಗಳಿಗೆ ಜೀವ ನೀಡುವ ಮೂಲಕ, ಜನಪರ ನಾಯಕ ಎಂಬ ಹೆಸರು ಪಡೆದಿದ್ದರು. ಸದ್ಯ ಏಮ್ಸ್ ವೈದ್ಯಾಧಿಕಾರಿಳು ವಾಜಪೇಯಿ ಅವರ ಆರೋಗ್ಯ ತಪಾಸಣೆ ಮಾಡುತ್ತಿದ್ದು, ಆರೋಗ್ಯ ಸ್ಥಿತಿಯ ಬಗ್ಗೆ ಕ್ಷಣ ಕ್ಷಣದ ಮಾಹಿತಿ ಪ್ರಧಾನಿ ಕಾರ್ಯಾಲಯ ಪಡೆಯುತ್ತಿದೆ ಎನ್ನುತ್ತಿವೆ ಮೂಲಗಳು.
First published:August 11, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...