• Home
  • »
  • News
  • »
  • national-international
  • »
  • Amit Shah: ಅಸ್ಸಾಂ ಪ್ರವಾಹ ತಡೆಗೆ ಅಮಿತ್ ಶಾ ಮಾಸ್ಟರ್ ಪ್ಲಾನ್

Amit Shah: ಅಸ್ಸಾಂ ಪ್ರವಾಹ ತಡೆಗೆ ಅಮಿತ್ ಶಾ ಮಾಸ್ಟರ್ ಪ್ಲಾನ್

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಅಸ್ಸಾಂ ರಾಜ್ಯದಲ್ಲಿನ ಪ್ರವಾಹವನ್ನು ತಗ್ಗಿಸುವ ಸಲುವಾಗಿ ಅರುಣಾಚಲ ಪ್ರದೇಶದಲ್ಲಿ ಜಲವಿದ್ಯುತ್ ಯೋಜನೆಗಳ   ಜೊತೆಗೆ ಹೆಚ್ಚಿನ ಪ್ರವಾಹ ತಡೆ ಜಲಾಶಯಗಳನ್ನು ನಿರ್ಮಿಸುವ ಯೋಜನೆಗಳನ್ನು ರೂಪಿಸುವ ಕುರಿತು ನಿರ್ಧರಿಸಲಾಗಿದೆ.

  • Share this:

ಗುವಾಹಟಿ: ಪದೇ ಪದೇ ಪ್ರವಾಹಕ್ಕೆ (Flood) ಈಡಾಗುವ ಅಸ್ಸಾಂನ ಸಮಸ್ಯೆಯನ್ನು ದೂರ ಮಾಡುವ ಭವಿಷ್ಯದ ಯೋಜನೆ ರೂಪಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಸೂಚನೆ (Instruction) ನೀಡಿದ್ದಾರೆ. ಅಸ್ಸಾಂ ಸರ್ಕಾರದ 'ಪ್ರವಾಹ ಮುಕ್ತ ಅಸ್ಸಾಂ' ಉಪಕ್ರಮದ ಕುರಿತು ಸಭೆ ನಡೆಸಿದ ನಂತರ, ಕೇಂದ್ರ ಗೃಹ ಸಚಿವ ಅಮಿತ್ ಶಾ (Amith sha) ಅವರು ಕೇಂದ್ರವು ಶೀಘ್ರದಲ್ಲೇ ಜಲ ಶಕ್ತಿ ಸಚಿವಾಲಯ, ವಿದ್ಯುತ್ ಸಚಿವಾಲಯ ಮತ್ತು ಅಸ್ಸಾಂ (Assam) ರಾಜ್ಯ ಸರ್ಕಾರದೊಂದಿಗೆ ಸಭೆ ನಡೆಸಲಿದೆ ಎಂದು ತಿಳಿಸಿದ್ದಾರೆ. ಅಸ್ಸಾಂ ರಾಜ್ಯದಲ್ಲಿನ ಪ್ರವಾಹವನ್ನು ತಗ್ಗಿಸುವ ಸಲುವಾಗಿ ಅರುಣಾಚಲ ಪ್ರದೇಶದಲ್ಲಿ ಜಲವಿದ್ಯುತ್ ಯೋಜನೆಗಳ (hydroelectric projects)  ಜೊತೆಗೆ ಹೆಚ್ಚಿನ ಪ್ರವಾಹ ತಡೆ ಜಲಾಶಯಗಳನ್ನು ನಿರ್ಮಿಸುವ ಯೋಜನೆಗಳನ್ನು ರೂಪಿಸುವ ಕುರಿತು ನಿರ್ಧರಿಸಲಾಗಿದೆ.


ಪ್ರವಾಹ ಮುಕ್ತ ಅಸ್ಸಾಂ ಘೋಷಣೆಯು 2019 ರ ಸಾರ್ವತ್ರಿಕ ಚುನಾವಣೆ ಮತ್ತು 2021 ರ ಅಸ್ಸಾಂ ಚುನಾವಣೆಗಳಲ್ಲಿ ಬಿಜೆಪಿ ನೀಡಿದ ಭರವಸೆಗಳಲ್ಲಿ ಒಂದಾಗಿದೆ. ಆದರೆ ಈ ವರ್ಷ ಅಸ್ಸಾಂ ಮತ್ತೊಮ್ಮೆ ಭಾರಿ ಪ್ರವಾಹವನ್ನು ಎದುರಿಸಿತು.ಅಧಿಕೃತ ಮೂಲಗಳ ಪ್ರಕಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಅಸ್ಸಾಂ ರಾಜ್ಯದಲ್ಲಿನ ಜೌಗು ಪ್ರದೇಶಗಳನ್ನು ರಕ್ಷಿಸಲು ಮತ್ತು ಪುನರುಜ್ಜೀವನಗೊಳಿಸಲು ಮತ್ತು ಅವುಗಳ ಹಿಡುವಳಿ ಸಾಮರ್ಥ್ಯವನ್ನು ಹೆಚ್ಚಿಸಲು ಕ್ರಿಯಾ ಯೋಜನೆಯನ್ನು ರೂಪಿಸಲು ಅಸ್ಸಾಂ ಸರ್ಕಾರಕ್ಕೆ ಸೂಚನೆ ನೀಡಿದ್ದಾರೆ. ಇದರಿಂದಾಗಿ ಅವುಗಳು ಪ್ರವಾಹದ ಸಮಯದಲ್ಲಿ ಸಂಗ್ರಹಣಾ ಜಲಾಶಯಗಳಾಗಿ ಕಾರ್ಯನಿರ್ವಹಿಸುತ್ತವೆ. ಅಲ್ಲದೆ ಜಲಾಶಯಗಳ ರಕ್ಷಣೆಗೆ ಹೊಸ ಕಾನೂನುಗಳನ್ನು ಜಾರಿಗೆ ತರಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಸಚನೆ ನೀಡಿದ್ದಾರೆ.


ಜಲಾಶಯಗಳ ರಕ್ಷಣೆಗೆ ಕಾನೂನು


ನೀರು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸಲು ಜೌಗು ಪ್ರದೇಶಗಳನ್ನು ಪುನರುಜ್ಜೀವನಗೊಳಿಸಬೇಕು ಮತ್ತು ಪ್ರವಾಹದ ಸಮಯದಲ್ಲಿ ಇವುಗಳು ಜಲಾಶಯಗಳಾಗಿ ಕಾರ್ಯನಿರ್ವಹಿಸುತ್ತವೆ ಎಂದು ಅವರು ಹೇಳಿದ್ದಾರೆ. ಜಲಾಶಯಗಳ ರಕ್ಷಣೆಗೆ ಕಾನೂನು ರೂಪಿಸುವುದು, ಜಾರಿಗೊಳಿಸಲು ಯಾಂತ್ರಿಕ ವ್ಯವಸ್ಥೆ ಸೇರಿದಂತೆ ಎಲ್ಲ ಕ್ರಮಗಳನ್ನು ಅಸ್ಸಾಂ ರಾಜ್ಯ ಸರ್ಕಾರ ಕೈಗೊಳ್ಳಬೇಕು ಎಂದು ಅವರು ಸೂಚನೆ ನೀಡಿದ್ದಾರೆ.


ಇದನ್ನೂ ಓದಿ: ಸೀರೆ ಉಟ್ಟ ಮಹಿಳೆಯರ ಮೇಲೆ ದಾಳಿ; ಅಮೆರಿಕದಲ್ಲಿ‌ ಹೆಚ್ಚಿದ ಹಿಂದೂ ವಿರೋಧಿ ಚಟುವಟಿಕೆ


ಅಸ್ಸಾಂನಲ್ಲಿನ ಪ್ರವಾಹವನ್ನು ತಗ್ಗಿಸಲು ಅರುಣಾಚಲ ಪ್ರದೇಶದ ಜಲ ಯೋಜನೆಗಳ ಜೊತೆಗೆ ಹೆಚ್ಚಿನ ಪ್ರವಾಹ ಮಿತ ಜಲಾಶಯಗಳನ್ನು ಸೇರಿಸುವ ಕ್ರಮಗಳನ್ನು ನೋಡಲು ಜಲ ಶಕ್ತಿ, ವಿದ್ಯುತ್ ಮತ್ತು ರಾಜ್ಯ ಸರ್ಕಾರದ ಸಚಿವಾಲಯಗಳೊಂದಿಗೆ ಸಭೆಯನ್ನು ಶೀಘ್ರದಲ್ಲೇ ಕರೆಯಲಾಗುವುದು ಎಂದು ಕೇಂದ್ರ ಸಚಿವರಾದ ಅಮಿತ್ ಶಾ ಅಮಿತ್ ಶಾ ತಿಳಿಸಿದ್ದಾರೆ.


ದೀರ್ಘಾವಧಿಯ ಪರಿಹಾರಕ್ಕೆ ಗೃಹ ಸಚಿವ ಒತ್ತು


ಅಸ್ಸಾಂ ಸರ್ಕಾರವು ಪ್ರವಾಹ ಮುನ್ಸೂಚನೆ ಮತ್ತು ಮುಂಚಿನ ಎಚ್ಚರಿಕೆ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸಲು ಎಂಒಯುಗೆ ಸಹಿ ಹಾಕಿರುವ ಈಶಾನ್ಯ ಬಾಹ್ಯಾಕಾಶ ಅಪ್ಲಿಕೇಶನ್ ಕೇಂದ್ರದ ಸೇವೆಗಳನ್ನು ಬಳಸಿಕೊಳ್ಳಲಿದೆ. ಅಷ್ಟೇ ಅಲ್ಲದೇ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವನ್ನು (ಎನ್‌ಡಿಎಂಎ) ರಾಜ್ಯ ಏಜೆನ್ಸಿಗಳ ಸಾಮರ್ಥ್ಯ ನಿರ್ಮಾಣದಲ್ಲಿ ತೊಡಗಿಸಿಕೊಳ್ಳಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಸೂಚನೆ ನೀಡಿದ್ದಾರೆ. ಸಭೆಯಲ್ಲಿ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಮತ್ತು ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಅಲ್ಲದೇ ಪ್ರವಾಹದ ಬಹುವಾರ್ಷಿಕ ಸಮಸ್ಯೆಗೆ ದೀರ್ಘಾವಧಿಯ ಪರಿಹಾರಕ್ಕೆ ಗೃಹ ಸಚಿವರು ಒತ್ತು ನೀಡಿದ್ದಾರೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಜೊತೆಗಿನ ಸಭೆಯ ನಂತರ ಹೇಳಿದ್ದಾರೆ.


ಇದನ್ನೂ ಓದಿ: ಯೋಗಿ ಸರ್ಕಾರದಿಂದ ವಾಲ್ಮೀಕಿ ಜಯಂತಿ ಆಚರಣೆ ಭರ್ಜರಿ ಸಿದ್ಧತೆ


ಅಸ್ಸಾಂ ಅನ್ನು ಪ್ರವಾಹ ಮುಕ್ತಗೊಳಿಸಲು ಅವರು ಅಂತರ-ಸಚಿವಾಲಯ ಮತ್ತು ಅಂತರ-ಇಲಾಖೆಯ ಸಮನ್ವಯವನ್ನು ಒತ್ತಿ ಹೇಳಿದ್ದಾರೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಜೊತೆಗಿನ ಸಭೆಯ ನಂತರ ಹೇಳಿದ್ದಾರೆ.

First published: