ಎಂ. ಎಸ್. ಧೋನಿಯನ್ನು ಭೇಟಿಮಾಡಿದ ಅಮಿತ್ ಶಾ

news18
Updated:August 6, 2018, 3:01 PM IST
ಎಂ. ಎಸ್. ಧೋನಿಯನ್ನು ಭೇಟಿಮಾಡಿದ ಅಮಿತ್ ಶಾ
news18
Updated: August 6, 2018, 3:01 PM IST
ನ್ಯೂಸ್ 18 ಕನ್ನಡ

ಭಾರತೀಯ ಜನತಾ ಪಾರ್ಟಿಯ ಸಾಧನೆಗಳ ಬಗ್ಗೆ ಅರುವು ಮೂಡಿಸುವ 'ಸಂಪರ್ಕ್ ಫಾರ್ ಸಮರ್ಥನ್' ಅಭಿಯಾನದ ಅಂಗವಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ. ಎಸ್. ಧೊನಿ ಅವರನ್ನು ಭೇಟಿಯಾಗಿದ್ದಾರೆ.

ಈ ಬಗ್ಗೆ ಅಮಿತ್ ಶಾ ಅವರು ಟ್ವೀಟ್ ಮಾಡಿದ್ದು, 'ಸಂಪರ್ಕ್ ಫಾರ್ ಸಮರ್ಥನ್ ಪ್ರಚಾರದ ಭಾಗವಾಗಿ ಕ್ರಿಕೆಟ್ ಜಗತ್ತಿನ ದಿ ಗ್ರೇಟ್ ಫಿನಿಷರ್ ಆಗಿರುವ ಧೋನಿ ಅವರನ್ನು ಭೇಟಿ ಮಾಡಿದ್ದು ನರೇಂದ್ರ ಮೋದಿ ಅವರ ಸರ್ಕಾರ 4 ವರ್ಷಗಳಲ್ಲಿ ಮಾಡಿರುವ ಅಭಿವೃದ್ದಿ ಬಗ್ಗೆ ಅವರಿಗೆ ತಿಳಿಸಲಾಗಿದೆ' ಎಂದು ಹೇಳಿದ್ದಾರೆ.

 


Loading...2019ರ ಲೋಕಸಭಾ ಚುನಾವಣದ ಅಂಗವಾಗಿ ಗಣ್ಯಾತಿಗಣ್ಯರನ್ನು ಸಂಪರ್ಕಿಸಿ ಅವರಿಗೆ ಪಕ್ಷದ ಕಾರ್ಯದ ಬಗ್ಗೆ ತಿಳಿಸುತ್ತ ಪಕ್ಷಕ್ಕಾಗಿ ಬೆಂಬಲ ಸೂಚಿಸುವುದು ಇದರ ಉದ್ದೇಶವಾಗಿದೆ. ಮೇ. 29ರಂದು ಶಾ ಈ ಆಂದೋಲನಕ್ಕೆ ಚಾಲನೆ ನೀಡಿದ್ದಾರೆ.
First published:August 6, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...