HOME » NEWS » National-international » AMIT SHAH INTERVIEW STRIVES FOR GROWTH OF THE UNORGANIZED SECTOR AND SMALL BUSINESSES SAYS AMIT SHAH MAK

Amit Shah On News18; ರೈತರ-ಅಸಂಘಟಿತ ವಲಯದ ಮತ್ತು ಸಣ್ಣ ಉದ್ಯಮಗಳ ಬೆಳವಣಿಗೆಗೆ ಶ್ರಮಿಸಲಾಗಿದೆ; ಅಮಿತ್‌ ಶಾ

ಪ್ರತಿಯೊಬ್ಬ ರೈತರಿಗೂ ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆಯ ಮೂಲಕ 6,000 ಸಹಾಯ ಧನವನ್ನು ಅವರ ಖಾತೆಗೆ ಜಮಾ ಮಾಡಲಾಗಿದೆ. ಇದಕ್ಕೆಂದು ಸುಮಾರು 75,000 ಕೋಟಿ ಹಣವನ್ನು ವ್ಯಯಿಸಲಾಗಿದೆ. ಅಲ್ಲದೆ, ಇನ್ನೂ ಅನೇಕ ರೈತರಿಗೆ ಮತ್ತು ವಲಸೆ ಕಾರ್ಮಿಕರಿಗೂ ಸಹ ‌ಈ ಯೋಜನೆಯ ಮೂಲಕ ಸಹಾಯ ಮಾಡಲಾಗುವುದು ಎಂದು ಅಮಿತ್‌ ಶಾ ಹೇಳಿದ್ದಾರೆ.

MAshok Kumar | news18-kannada
Updated:June 1, 2020, 8:26 PM IST
Amit Shah On News18; ರೈತರ-ಅಸಂಘಟಿತ ವಲಯದ ಮತ್ತು ಸಣ್ಣ ಉದ್ಯಮಗಳ ಬೆಳವಣಿಗೆಗೆ ಶ್ರಮಿಸಲಾಗಿದೆ; ಅಮಿತ್‌ ಶಾ
ಅಮಿತ್​ ಶಾ
  • Share this:
ನವ ದೆಹಲಿ; ಬಿಜೆಪಿ ಸರ್ಕಾರ ಕಳೆದ 6 ವರ್ಷಗಳಿಂದ ರೈತರ, ಅಸಂಘಟಿತ ವಲಯದ ಮತ್ತು ಸಣ್ಣ ಉದ್ಯಮದ ಬೆಳವಣಿಗೆಗೆ ಸಾಕಷ್ಟು ಶ್ರಮಿಸಿದೆ. ಅಲ್ಲದೆ, ಕಳೆದ ಒಂದು ವರ್ಷದ ಅವಧಿಯಲ್ಲಿ ಅದರಲ್ಲೂ ಪ್ರಮುಖವಾಗಿ ಕೊರೋನಾ ಲಾಕ್‌ಡೌನ್ ಸಂದರ್ಭದಲ್ಲಿ ಕೇಂದ್ರ ಸರ್ಕಾರ ರೈತರ ಬೆನ್ನಿಗೆ ನಿಂತಿದೆ. ಸುಮಾರು 9.5 ಕೋಟಿ ರೈತರಿಗೆ ಸುಮಾರು 72,000 ಕೋಟಿ ನೀಡಲಾಗಿದೆ ಎಂದು ಗೃಹ ಸಚಿವ ಅಮಿತ್‌ ಶಾ ತಿಳಿಸಿದ್ದಾರೆ.

ಲಾಕ್‌ಡೌನ್‌ ನಂತರ ನ್ಯೂಸ್‌ 18 ಜೊತೆಗಿನ ಮೊದಲ ಸಂದರ್ಶನದಲ್ಲಿ ಬಿಜೆಪಿ ಸರ್ಕಾರದ ಯಶಸ್ವಿ ಆಡಳಿತದ ಕುರಿತು ಮಾತನಾಡಿರುವ ಅಮಿತ್‌ ಶಾ, "ಕಳೆದ 6 ವರ್ಷದಿಂದ ದೇಶದ ಅಭಿವೃದ್ಧಿಗಾಗಿ ಬಿಜೆಪಿ ಸರ್ಕಾರ ದುಡಿದಿದೆ. ಸಂಕಷ್ಟದಲ್ಲಿರುವ ರೈತರಿಗಾಗಿ ಶ್ರಮಿಸಿದೆ. ಲಾಕ್‌ಡೌನ್ ಸಂದರ್ಭದಲ್ಲಿ ದೇಶದ ಕೃಷಿಕ ವರ್ಗ ಸಂಕಷ್ಟಕ್ಕೆ ಸಿಲುಕಿತ್ತು. ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಅವರ ಬೆನ್ನಿಗೆ ನಿಂತಿದೆ.

ಪ್ರತಿಯೊಬ್ಬ ರೈತರಿಗೂ ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆಯ ಮೂಲಕ 6,000 ಸಹಾಯ ಧನವನ್ನು ಅವರ ಖಾತೆಗೆ ಜಮಾ ಮಾಡಲಾಗಿದೆ. ಇದಕ್ಕೆಂದು ಸುಮಾರು 75,000 ಕೋಟಿ ಹಣವನ್ನು ವ್ಯಯಿಸಲಾಗಿದೆ. ಅಲ್ಲದೆ, ಇನ್ನೂ ಅನೇಕ ರೈತರಿಗೆ ಮತ್ತು ವಲಸೆ ಕಾರ್ಮಿಕರಿಗೂ ಸಹ ‌ಈ ಯೋಜನೆಯ ಮೂಲಕ ಸಹಾಯ ಮಾಡಲಾಗುವುದು.

ಅಸಂಘಟಿಯ ವಲಯ ಮತ್ತು ಬೀದಿ ವ್ಯಾಪಾರಿಗಳ ಯೋಗಕ್ಷೇಮಕ್ಕಾಗಿ 20,000 ಕೋಟಿ ಹಣವನ್ನು ಮೀಸಲಿಡಲಾಗಿದೆ. ಇನ್ನೂ ಸಣ್ಣ ಮತ್ತು ಮಧ್ಯಮ ಗಾತ್ರ ಉದ್ಯಮಗಳು ಅಭಿವೃದ್ಧಿಯ ಕೀಲಿ ಕೈ. ಇಂತಹ ಉದ್ಯಮಗಳ ಅಭಿವೃದ್ಧಿಗಾಗಿ ಸಾಕಷ್ಟು ಯೋಜನೆಗಳನ್ನು ರೂಪಿಸಿ ಯಶಸ್ವಿಗೊಳಿಸಲಾಗಿದೆ. ಅಲ್ಲದೆ, ಜಿಎಸ್‌ಟಿ ಮೂಲಕ ಸಾಕಷ್ಟು ಹಣವನ್ನು ಸಂಗ್ರಹಿಸಲಾಗಿದ್ದು, ಈ ಸಂಪನ್ಮೂಲವ್ನನು ಉದ್ಯಮಗಳ ಅಭಿವೃದ್ಧಿಗೆ ಬಳಸಲಾಗಿದೆ" ಎಂದು ಅಮಿತ್‌ ಶಾ ಮಾಹಿತಿ ನೀಡಿದ್ದಾರೆ.

 

ಇದನ್ನೂ ಓದಿ : ಸಚಿವ ಸ್ಥಾನದಂತೆ ಪರಿಷತ್‌ ಸ್ಥಾನವೂ ಸಿ.ಪಿ. ಯೋಗೇಶ್ವರ್‌ ಕೈತಪ್ಪಲಿದೆಯಾ?; ಹೌದು ಎನ್ನುತ್ತಿವೆ ಬಿಜೆಪಿ ಮೂಲಗಳು!
Youtube Video
First published: June 1, 2020, 8:26 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories