HOME » NEWS » National-international » AMIT SHAH INTERVIEW SHAHS IRONY ABOUT RAHUL GANDHI MAK

Amit Shah Interview: ಕೆಲವರ ದೃಷ್ಟಿಯೇ ವಕ್ರವಾಗಿರುತ್ತದೆ, ಅಂತವರನ್ನು ಜನ ಗಂಭೀರವಾಗಿ ಪರಿಗಣಿಸುವುದಿಲ್ಲ: ರಾಹುಲ್​ ಗಾಂಧಿ ಬಗ್ಗೆ ಶಾ ವ್ಯಂಗ್ಯ

ಬಿಜೆಪಿ ಇದನ್ನು ಕೇವಲ ಘೋಷಣೆಯಾಗಿ ನೋಡಿಲ್ಲ. ಬದಲಾಗಿ ದೇಶದಲ್ಲಿ 20 ಕೋಟಿ ಜನರಿಗೆ ಬ್ಯಾಂಕ್‌ ಖಾತೆ ತೆರೆದು ಅವರಿಗೆ ಹಣ ನೀಡಲಾಗಿದೆ. 3 ಕೊಟಿ ಜನರಿಗೆ ಅಂಗವೈಕಲ್ಯ ವೇತನ, ವಿಧವಾ ವೇತನ, ವಯಸ್ಕರ ವೃತನ ನೀಡಲಾಗಿದೆ. ರೈತರ ಖಾತೆಗೆ ಹಣ ಜಮಾ ಮಾಡಲಾಗಿದೆ ಎಂದು ಅಮಿತ್‌ ಶಾ ತಿಳಿಸಿದ್ದಾರೆ.

MAshok Kumar | news18-kannada
Updated:June 1, 2020, 8:45 PM IST
Amit Shah Interview: ಕೆಲವರ ದೃಷ್ಟಿಯೇ ವಕ್ರವಾಗಿರುತ್ತದೆ, ಅಂತವರನ್ನು ಜನ ಗಂಭೀರವಾಗಿ ಪರಿಗಣಿಸುವುದಿಲ್ಲ: ರಾಹುಲ್​ ಗಾಂಧಿ ಬಗ್ಗೆ ಶಾ ವ್ಯಂಗ್ಯ
ಕೇಂದ್ರ ಗೃಹ ಸಚಿವ ಅಮಿತ್​ ಶಾ
  • Share this:
ನವ ದೆಹಲಿ (ಜೂನ್ 01); ಲಾಕ್‌ಡೌನ್‌ ಸಂದರ್ಭದಲ್ಲಿ ವಲಸೆ ಕಾರ್ಮಿಕರ ವಿಚಾರದಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂಬ ಕಾಂಗ್ರೆಸ್‌ ಸಂಸದ ರಾಹುಲ್ ಗಾಂಧಿ ಟೀಕೆಗೆ ನ್ಯೂಸ್‌ 18 ಸಂದರ್ಶನದಲ್ಲಿ ಖಾರವಾಗಿ ಪ್ರತಿಕ್ರಿಯಿಸಿರುವ ಗೃಹ ಸಚಿವ ಅಮಿತ್‌ ಶಾ, "ಕೆಲವರ ದೃಷ್ಟಿಯೇ ವಕ್ರವಾಗಿರುತ್ತದೆ, ಅಂತವರನ್ನು ಜನ ಗಂಭೀರವಾಗಿ ಪರಿಗಣಿಸುವುದಿಲ್ಲ ಎಂದು ರಾಹುಲ್​ ಗಾಂಧಿ ಬಗ್ಗೆ ಗೃಹ ಸಚಿವ ಅಮಿತ್‌ ಶಾ ವ್ಯಂಗ್ಯವಾಡಿದ್ದಾರೆ. 

ದೇಶದಲ್ಲಿ ಲಾಕ್‌ಡೌನ್ ಘೋಷಣೆ ಮಾಡಿ ಎರಡು ತಿಂಗಳೇ ಕಳೆದಿವೆ. ಆದರೆ, ಈವರೆಗೆ ವಲಸೆ ಕಾರ್ಮಿಕರ ಮಹಾ ನಡಿಗೆ ನಿಂತಿಲ್ಲ. ಈ ಕುರಿತು ಟೀಕೆ ಮಾಡಿದ್ದ ರಾಹುಲ್‌ ಗಾಂಧಿ, "ಕೇಂದ್ರ ಸರ್ಕಾರ ವಲಸೆ ಕಾರ್ಮಿಕರ ವಿಚಾರದಲ್ಲಿ ಸರಿಯಾಗಿ ನಡೆದುಕೊಂಡಿಲ್ಲ. ಪರಿಣಾಮ ನೂರಾರು ವಲಸೆ ಕಾರ್ಮಿಕರ ಸಾವಿಗೆ ಕೇಂದ್ರ ಸರ್ಕಾರ ನೇರ ಕಾರಣವಾಗಿದೆ" ಎಂದು ಆರೋಪಿಸಿದ್ದರು. ಈ ಆರೋಪ ರಾಷ್ಟ್ರ ಮಟ್ಟದಲ್ಲಿ ದೊಡ್ಡ ಸುದ್ದಿಯಾಗಿತ್ತು.

ನ್ಯೂಸ್‌ 18 ಜೊತೆಗಿನ ಸಂದರ್ಶನದಲ್ಲಿ ಈ ಕುರಿತ ಪ್ರಶ್ನೆಗೆ ಉತ್ತರ ನೀಡಿರುವ ಅಮಿತ್‌ ಶಾ, "ಕಾಂಗ್ರೆಸ್‌ ನಾಯಕರಾದ ರಾಹುಲ್‌ ಗಾಂಧಿ ಚುನಾವಣಾ ಸಂದರ್ಭದಲ್ಲಿ ನಿರುದ್ಯೋಗಿಗಳ ಮತ್ತು ಬಡವರ ಖಾತೆಗೆ ಅಪಾರ ಪ್ರಮಾಣದ ಹಣ ಹಾಕುವುದಾಗಿ ಘೋಷಿಸಿದ್ದರು. ಇದು ಕೇವಲ ಚುನಾವಣಾ ಘೋಷಣೆ ಅಷ್ಟೆ.

ಆದರೆ, ಬಿಜೆಪಿ ಇದನ್ನು ಕೇವಲ ಘೋಷಣೆಯಾಗಿ ನೋಡಿಲ್ಲ. ಬದಲಾಗಿ ದೇಶದಲ್ಲಿ 20 ಕೋಟಿ ಜನರಿಗೆ ಬ್ಯಾಂಕ್‌ ಖಾತೆ ತೆರೆದು ಅವರಿಗೆ ಹಣ ನೀಡಲಾಗಿದೆ. 3 ಕೊಟಿ ಜನರಿಗೆ ಅಂಗವೈಕಲ್ಯ ವೇತನ, ವಿಧವಾ ವೇತನ, ವಯಸ್ಕರ ವೃತನ ನೀಡಲಾಗಿದೆ. ರೈತರ ಖಾತೆಗೆ ಹಣ ಜಮಾ ಮಾಡಲಾಗಿದೆ.

ಅಷ್ಟೇ ಅಲ್ಲ ಶ್ರಮಿಕ್‌ ರೈಲನ್ನು ಸಂಚರಿಸುವ ಮೂಲಕ ದೇಶದ ಮೂಲೆ ಮೂಲೆಯಲ್ಲಿರುವ ಸುಮಾರು 55 ಲಕ್ಷ ವಲಸೆ ಕಾರ್ಮಿಕರನ್ನು ಅವರವರ ರಾಜ್ಯಗಳಿಗೆ ತಲುಪಿಸಲಾಗಿದೆ. ಅಲ್ಲದೆ, ಅವರೆಲ್ಲರಿಗೂ ಸರ್ಕಾರಿ ಹಣದಲ್ಲಿ ಕ್ವಾರಂಟೈನ್‌ ವ್ಯವಸ್ಥೆ ಕಲ್ಪಿಸಲಾಗಿದೆ. ಹೀಗೆ ಬಿಜೆಪಿ ಸರ್ಕಾರ ಎಲ್ಲಾ ವಿಚಾರವನ್ನು ಸಮರ್ಥವಾಗಿ ಎದುರಿಸಿದೆ ಎಂಬುದಕ್ಕೆ ಸಾಕಷ್ಟು ಉದಾಹರಣೆ ಇದೆ. ಆದರೆ, ಕೆಲವರ ದೃಷ್ಟಿಯೇ ವಕ್ರವಾಗಿರುತ್ತದೆ, ಅಂತವರ ಮಾತನ್ನು ಜನ ಗಂಭೀರವಾಗಿ ಪರಿಗಣಿಸುವುದಿಲ್ಲ" ಎಂದು ನೇರಾನೇರ ರಾಹುಲ್​ ಗಾಂಧಿ ಬಗ್ಗೆ ಅಮಿತ್‌ ಶಾ ವ್ಯಂಗ್ಯವಾಡಿದ್ದಾರೆ.

ಇದನ್ನೂ ಓದಿ : Amit Shah On News18; ರೈತರ-ಅಸಂಘಟಿತ ವಲಯದ ಮತ್ತು ಸಣ್ಣ ಉದ್ಯಮಗಳ ಬೆಳವಣಿಗೆಗೆ ಶ್ರಮಿಸಲಾಗಿದೆ; ಅಮಿತ್‌ ಶಾ
Youtube Video
First published: June 1, 2020, 8:45 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories