HOME » NEWS » National-international » AMIT SHAH INTERVIEW NARENDRA MODI GOVERNMENT WILL NOT COMPROMISE INDIA CHINA BORDER DISPUTE SAYS AMIT SHAH SCT

Amit Shah Interview: ಭಾರತ-ಚೀನಾ ಗಡಿ ವಿಚಾರದಲ್ಲಿ ರಾಜಿಯಾಗುವ ಮಾತೇ ಇಲ್ಲ; ಅಮಿತ್​ ಶಾ

Amit Shah Interview: ನಾವು ಯಾವುದೇ ಗಡಿ ನಿಯಮವನ್ನು ಉಲ್ಲಂಘನೆ ಮಾಡಿಲ್ಲ. ಹಾಗೇ, ನಮ್ಮ ದೇಶದ ಗಡಿಯಲ್ಲಿ ಗಲಭೆ ಎಬ್ಬಿಸುವವರನ್ನು ಹತ್ತಿಕ್ಕುವುದರಲ್ಲಿಯೂ ನಾವು ಹಿಂದೆ ಬಿದ್ದಿಲ್ಲ ಎಂದು ಅಮಿತ್​ ಶಾ ಹೇಳಿದ್ದಾರೆ.

Sushma Chakre | news18-kannada
Updated:June 1, 2020, 9:09 PM IST
Amit Shah Interview: ಭಾರತ-ಚೀನಾ ಗಡಿ ವಿಚಾರದಲ್ಲಿ ರಾಜಿಯಾಗುವ ಮಾತೇ ಇಲ್ಲ; ಅಮಿತ್​ ಶಾ
ಅಮಿತ್ ಶಾ.
  • Share this:
ನವದೆಹಲಿ (ಜೂ. 1): ಲಡಾಖ್​ನಲ್ಲಿ ಕೆಲವು ವಾರಗಳಿಂದ ನಡೆಯುತ್ತಿರುವ ಬಿಕ್ಕಟ್ಟಿನ ಬಗ್ಗೆ ಮಾತನಾಡಿರುವ ಗೃಹ ಸಚಿವ ಅಮಿತ್​ ಶಾ, ಭಾರತ-ಚೀನಾ ಗಡಿಯಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಕುರಿತು ಮಿಲಿಟರಿ ಜೊತೆಗೆ ನಮ್ಮ ಮಾತುಕತೆ ಇನ್ನೂ ನಡೆಯುತ್ತಿದೆ. ಆದರೆ, ಗಡಿ ವಿಚಾರದಲ್ಲಿ ಮೋದಿ ಸರ್ಕಾರ ರಾಜಿಯಾಗುವ ಮಾತೇ ಇಲ್ಲ ಎಂದು ಖಡಕ್​ ಸಂದೇಶ ರವಾನಿಸಿದ್ದಾರೆ.

ಲಾಕ್‌ಡೌನ್‌ ನಂತರ ನ್ಯೂಸ್‌ 18 ಜೊತೆಗಿನ ಮೊದಲ ಸಂದರ್ಶನದಲ್ಲಿ ಗೃಹ ಸಚಿವ ಅಮಿತ್‌ ಶಾ ಮಾತನಾಡಿದ್ದಾರೆ. ಎಲ್​ಎಸಿ ವಿಚಾರವನ್ನು ಯಾವ ದೇಶ ಕೂಡ ಹಗುರವಾಗಿ ಪರಿಗಣಿಸಲು ಸಾಧ್ಯವಿಲ್ಲ. ಗಡಿ ವಿಚಾರದಲ್ಲಿ ನಮ್ಮ ನಿರ್ಧಾರಕ್ಕೆ ನಾವು ಬದ್ಧರಾಗಿದ್ದೇವೆ. ಅದರಲ್ಲಿ ಎರಡನೇ ಮಾತೇ ಇಲ್ಲ. ಚೀನಾದ ಮುಂದಿನ ನಡೆಗಳನ್ನು ನೋಡಿ ನಾವು ಹೆಜ್ಜೆ ಇಡಲಿದ್ದೇವೆ ಎಂದು ತಿಳಿಸಿದ್ದಾರೆ.

ನಾವು ಯಾವುದೇ ಗಡಿ ನಿಯಮವನ್ನು ಉಲ್ಲಂಘನೆ ಮಾಡಿಲ್ಲ. ಹಾಗೇ, ನಮ್ಮ ದೇಶದ ಗಡಿಯಲ್ಲಿ ಗಲಭೆ ಎಬ್ಬಿಸುವವರನ್ನು ಹತ್ತಿಕ್ಕುವುದರಲ್ಲಿಯೂ ನಾವು ಹಿಂದೆ ಬಿದ್ದಿಲ್ಲ. ನಮ್ಮ ದೇಶದ ಗಡಿಯೊಳಗೆ ನುಸುಳಲು ಪ್ರಯತ್ನಿಸುತ್ತಿದ್ದವರಿಗೆ ಸರ್ಜಿಕಲ್ ದಾಳಿಯ ಮೂಲಕ ತಕ್ಕ ಉತ್ತರವನ್ನು ನೀಡಿದ್ದೇವೆ ಎಂದು ಪಾಕಿಸ್ತಾನದ ಮೇಲೆ ನಡೆದ ಸರ್ಜಿಕಲ್ ಸ್ಟ್ರೈಕ್​ ಅನ್ನು ಅಮಿತ್​ ಶಾ ನೆನಪಿಸಿದ್ದಾರೆ.

ಇದನ್ನೂ ಓದಿ: Amit Shah On News18; ರೈತರ-ಅಸಂಘಟಿತ ವಲಯದ ಮತ್ತು ಸಣ್ಣ ಉದ್ಯಮಗಳ ಬೆಳವಣಿಗೆಗೆ ಶ್ರಮಿಸಲಾಗಿದೆ; ಅಮಿತ್‌ ಶಾ

 

 

ಭಾರತ- ಚೀನಾ ಗಡಿಯಲ್ಲಿ ಸಾವಿರಾರು ಸಂಖ್ಯೆಯ ಚೀನೀ ಸೈನಿಕರು ಬೀಡುಬಿಟ್ಟಿದ್ದರು. ಇದರಿಂದಾಗಿ ಭಾರತ ಕೂಡ ಲಡಾಕ್​ನಲ್ಲಿ ಹೆಚ್ಚಿನ ಸೈನಿಕರನ್ನು ನಿಯೋಜನೆ ಮಾಡಿತ್ತು. ಎಲ್​ಎಸಿ ವ್ಯಾಪ್ತಿಯಲ್ಲಿರುವ ಪ್ಯಾಂಗ್ಯಾಂಗ್​ ತ್ಸೋ ನದಿ ಹಾಗೂ ಗಾಲ್ವಾನ್​ ಕಣಿವೆಯ ಬಳಿ ಚೀನೀ ಸೈನಿಕರ ಚಟುವಟಿಕೆಗಳು ಹೆಚ್ಚಾಗಿವೆ. ಈ ಪ್ರದೇಶಗಳಲ್ಲಿ ಹೆಚ್ಚಿನ ಪ್ರಾಬಲ್ಯ ಸಾಧಿಸಲು ಚೀನಾ ಮುಂದಾಗಿದೆ. ಗಡಿ ನಿಯಂತ್ರಣ ರೇಖೆ (ಎಲ್​ಓಸಿ)ಯಲ್ಲಿರುವ ತುಕಡಿಗಳನ್ನು ವಾಸ್ತವ ಗಡಿನಿಯಂತ್ರಣ ರೇಖೆಗೆ (ಎಲ್​ಎಸಿ)ಗೆ  ಕಳುಹಿಸುವ ತುರ್ತು ಸಂದರ್ಭ ಈಗ ಬಂದಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಇಂದು ಹೇಳಿದ್ದರು. ಚೀನಾ-ಭಾರತದ ಗಡಿಯಲ್ಲಿ ಸುಮಾರು 1 ತಿಂಗಳಿಂದ ಚೀನಾದ ತಗಾದೆ ಶುರುವಾಗಿದೆ. 
First published: June 1, 2020, 9:05 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories