HOME » NEWS » National-international » AMIT SHAH INTERVIEW BJP COME TO POWER IN THE UPCOMING BENGAL ASSEMBLY ELECTIONS SHAH CHALLENGE TO MAMATHA BANERJEE MAK

Amit Shah Interview: ಮುಂಬರುವ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಬಹುಮತದೊಂದಿಗೆ ಅಧಿಕಾರಕ್ಕೆ; ಮಮತಾಗೆ ಶಾ ಚಾಲೆಂಜ್​

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಅವರ ಪಕ್ಷವನ್ನು ಸೋಲಿಸಿ, ಬಹುಮತದ ಸರ್ಕಾರವನ್ನು ರಚನೆ ಮಾಡುವುದು ಖಚಿತ ಎಂದು ಬಹಿರಂಗವಾಗಿಯೇ ಗೃಹ ಸಚಿವ ಅಮಿತ್‌ ಶಾ ಚಾಲೆಂಜ್‌ ನೀಡಿದ್ದಾರೆ.

news18-kannada
Updated:June 1, 2020, 9:00 PM IST
Amit Shah Interview: ಮುಂಬರುವ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಬಹುಮತದೊಂದಿಗೆ ಅಧಿಕಾರಕ್ಕೆ; ಮಮತಾಗೆ ಶಾ ಚಾಲೆಂಜ್​
ಗೃಹ ಸಚಿವ ಅಮಿತ್‌ ಶಾ.
  • Share this:
ನವ ದೆಹಲಿ (ಜೂನ್‌ 01); ಮುಂಬರುವ ಪಶ್ಚಿಮ ಬಂಗಾಳ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ಹೇಳುವ ಮೂಲಕ ಗೃಹ ಸಚಿವ ಅಮಿತ್‌ ಶಾ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿಗೆ ಓಪನ್ ಚಾಲೆಂಜ್‌ ನೀಡಿದ್ದಾರೆ.

ಇಂದು ನ್ಯೂಸ್‌ 18 ಜೊತೆಗಿನ ಸಂದರ್ಶನದಲ್ಲಿ ಪಶ್ಚಿಮ ಬಂಗಾಳದ ರಾಜಕೀಯ ಚಟುವಟಿಕೆ ಮತ್ತು ರಾಜ್ಯದಲ್ಲಿ ಬಿಜೆಪಿ ಬಲಾಬಲದ ಕುರಿತು ಮಾತನಾಡಿರುವ ಅಮಿತ್‌ ಶಾ, "ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಗಾಳಿ ಬದಲಾಗಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ದುರಾಡಳಿತಕ್ಕೆ ಜನ ಸಾಮಾನ್ಯರು ಬೇಸತ್ತಿದ್ದಾರೆ. ಹೀಗಾಗಿ ಜನ ಬದಲಾಗಿದ್ದಾರೆ ಮತ್ತು ಬದಲಾವಣೆಯ ನಿರೀಕ್ಷೆಯಲ್ಲಿದ್ದಾರೆ.

ಅಲ್ಲಿನ ಜನರ ಮನಸ್ಥಿತಿ ನಮಗೆ ಅರ್ಥವಾಗಿದೆ. ಈಗಾಗಲೇ ಕಳೆದ ಲೋಕಸಭಾ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಪಕ್ಷದ ಬಲ ಏನು? ಎಂಬುದನ್ನು ಈಗಾಗಲೇ ಸಾಬೀತುಪಡಿಸಲಾಗಿದೆ. ಅಲ್ಲದೆ, ಬೂತ್ ಮಟ್ಟದಲ್ಲಿ ಪಕ್ಷವನ್ನು ಸಂಘಟಿಸಲಾಗುತ್ತಿದೆ.

ಹೀಗಾಗಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಅವರ ಪಕ್ಷವನ್ನು ಸೋಲಿಸಿ, ಬಹುಮತದ ಸರ್ಕಾರವನ್ನು ರಚನೆ ಮಾಡುವುದು ಖಚಿತ" ಎಂದು ಬಹಿರಂಗವಾಗಿಯೇ ಗೃಹ ಸಚಿವ ಅಮಿತ್‌ ಶಾ ಚಾಲೆಂಜ್‌ ನೀಡಿದ್ದಾರೆ.

ಇದನ್ನೂ ಓದಿ : Amit Shah Interview: ಕೆಲವರ ದೃಷ್ಟಿಯೇ ವಕ್ರವಾಗಿರುತ್ತದೆ, ಅಂತವರನ್ನು ಜನ ಗಂಭೀರವಾಗಿ ಪರಿಗಣಿಸುವುದಿಲ್ಲ: ರಾಹುಲ್​ ಗಾಂಧಿ ಬಗ್ಗೆ ಶಾ ವ್ಯಂಗ್ಯ
Youtube Video
First published: June 1, 2020, 8:59 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories