HOME » NEWS » National-international » AMIT SHAH BACKS BHARAT RATNA FOR SAVARKAR SESR

ಭಾರತರತ್ನ ಪಡೆಯಲು ಸಾವರ್ಕರ್​ಗಿಂತ ಅರ್ಹ ವ್ಯಕ್ತಿ ಇಲ್ಲ; ಅಮಿತ್​ ಶಾ

ಭಾರತ ರತ್ನ ನೀಡಲು ಯಾವ ನಿಯಮ ಇದೆ ಎಂಬುದರ ಬಗ್ಗೆ ನನಗೆ ತಿಳಿದಿಲ್ಲ. ಈ ಬಗ್ಗೆ ತಿಳಿದುಕೊಳ್ಳುತ್ತೇನೆ. ಭಾರತರತ್ನ ಪಡೆಯಲು ಅವರಿಗಿಂತ ಒಳ್ಳೆಯ ವ್ಯಕ್ತಿಯಿಲ್ಲ

Seema.R | news18-kannada
Updated:October 17, 2019, 12:05 PM IST
  • Share this:
ನವದೆಹಲಿ (ಅ.17):  ವೀರ ಸಾವರ್ಕರ್​ ರೀತಿಯ ದೇಶಭಕ್ತರು ಮತ್ತೊಬ್ಬರಿಲ್ಲ. ದೇಶಕ್ಕಾಗಿ ಅವರು ಮಾಡಿದ ತ್ಯಾಗ ಯಾರಿಂದಲೂ ಸಾಧ್ಯವಿಲ್ಲ. ಭಾರತರತ್ನ ಪಡೆಯುವ ಎಲ್ಲಾ ಅರ್ಹತೆ ಸಾವರ್ಕರ್​ಗೆ ಇದೆ ಎಂದು ಕೇದ್ರ ಗೃಹ ಸಚಿವ ಅಮಿತ್​ ಶಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನೆಟ್​ವರ್ಕ್​​​ 18 ಪ್ರಧಾನ ಸಂಪಾದಕ ರಾಹುಲ್​ ಜೋಷಿ ಜೊತೆಗಿನ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, ಭಾರತ ರತ್ನ ನೀಡಲು ಯಾವ ನಿಯಮ ಇದೆ ಎಂಬುದರ ಬಗ್ಗೆ ನನಗೆ ತಿಳಿದಿಲ್ಲ. ಈ ಬಗ್ಗೆ ತಿಳಿದುಕೊಳ್ಳುತ್ತೇನೆ. ಭಾರತರತ್ನ ಪಡೆಯಲು ಅವರಿಗಿಂತ ಒಳ್ಳೆಯ ವ್ಯಕ್ತಿಯಿಲ್ಲ ಎಂದರು.

ಸಾವರ್ಕರ್​ ಅವರ ಕುಟುಂಬ ನೀಡಿದಷ್ಟು ಬಲಿದಾನ ದೇಶಕ್ಕೆ ಬೇರೆ ಯಾರು ನೀಡಿಲ್ಲ. 12 ವರ್ಷ ಒಂದೇ ಜೈಲಿನಲ್ಲಿ ಅಣ್ಣತಮ್ಮಂದಿರು ಇದ್ದರೂ ಒಬ್ಬರನ್ನು ಒಬ್ಬರು ಭೇಟಿಯಾಗಲಿಲ್ಲ. ಜೈಲಿನೊಳಗೆ ತೆಂಗಿನಕಾಯಿ ಒಡೆದು 150 ಗ್ರಾಂ ಎಣ್ಣೆ ತೆಗೆಯುವಂತೆ ಶಿಕ್ಷೆ ವಿಧಿಸಿದರು, ಅವರು ಅದನ್ನು ಮಾಡಿ ತೋರಿಸಿದರು.

ಸಾವರ್ಕರ್​ ರೀತಿ ಒಂದೇ ಜೀವನವನ್ನು ಎರಡು ಬಾರಿ ಜೀವಿಸುವುದಕ್ಕೆ ಯಾರಿದಂಲೂ ಸಾಧ್ಯವಿಲ್ಲ. ಅವರ ಆಸ್ತಿಯನ್ನು ಆರು ಬಾರಿ ಬ್ರಿಟಿಷರು ಕಿತ್ತುಕೊಂಡರೂ ದೇಶಕ್ಕಾಗಿ ಹೋರಾಡಿದರು. ವಿನಮ್ರ ಹಾಗೂ ಉತ್ಸಾಹದ ಚಿಲುಮೆಯಾಗಿ ಅವರು ಬದುಕಿದ್ದರು.

ಇದನ್ನು ಓದಿ: ಮಹಾರಾಷ್ಟ್ರದಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ; ಕೇಂದ್ರ ಗೃಹ ಸಚಿವ ಅಮಿತ್ ಶಾ ಭವಿಷ್ಯ

ಸಾವರ್ಕರ್​ ಭಾರತರತ್ನ ವಿವಾದಕ್ಕೆ ಎಳೆಯುತ್ತಿರುವವರು ದೇಶದ ಜೊತೆ ಆಡವಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನೆಟ್​ವರ್ಕ್​18 ಗ್ರೂಪ್​ ಪ್ರಧಾನ ಸಂಪಾದಕ ರಾಹುಲ್​ ಜೋಶಿಯವರು ನಡೆಸಿರುವ ಸಂದರ್ಶನ ಇಂದು ಸಂಜೆ 7.57ಕ್ಕೆ ನ್ಯೂಸ್​18 ಸಮೂಹ ಮಾಧ್ಯಮಗಳಲ್ಲಿ ಬಿತ್ತರವಾಗಲಿದೆ. ಸಂದರ್ಶನದಲ್ಲಿ ಹಲವು ಮಜಲುಗಳ ಬಗ್ಗೆ ಅಮಿತ್​ ಶಾ ಮನಬಿಚ್ಚಿ ಮಾತನಾಡಿದ್ದಾರೆ. ಹರಿಯಾಣ, ಮಹಾರಾಷ್ಟ್ರ ಸಾರ್ವತ್ರಿಕ ಚುನಾವಣೆ, 2020ರ ಬಿಹಾರ್​ ಚುನಾವಣೆ, ಕಾಶ್ಮೀರ ಸಮಸ್ಯೆ ಕುರಿತಾದ ಹಲವು ಪ್ರಮುಖ ವಿಚಾರಗಳ ಬಗ್ಗೆ ಶಾ ಮಾತನಾಡಿದ್ದಾರೆ.
First published: October 17, 2019, 12:04 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories