News18 India World Cup 2019

ಬಿಜೆಪಿ ರಾಷ್ಟ್ರೀಯ ಮಂಡಳಿ ಸಭೆ: ‘ಮಹಾಘಟಬಂಧನ್ ಕಳ್ಳರ ಕೂಟ’ ಎಂದ ಅಮಿತ್​​ ಶಾ!

ನಾವು ವಿವೇಕಾನಂದರ ಕಲ್ಪನೆಯ ಭಾರತ ಕಟ್ಟಬೇಕಿದೆ. ಇದು ಮೋದಿಯಿಂದ ಮಾತ್ರ ಸಾಧ್ಯವೇ ಹೊರತು, ಬೇರೆ ಯಾರಿಂದಲೂ ವಿವೇಕಾನಂದರ ಕನಸು ನನಸಾಗಿಸಲು ಸಾಧ್ಯವಿಲ್ಲ- ಅಮಿತ್​​ ಶಾ

Ganesh Nachikethu | news18
Updated:January 11, 2019, 6:08 PM IST
ಬಿಜೆಪಿ ರಾಷ್ಟ್ರೀಯ ಮಂಡಳಿ ಸಭೆ: ‘ಮಹಾಘಟಬಂಧನ್ ಕಳ್ಳರ ಕೂಟ’ ಎಂದ ಅಮಿತ್​​ ಶಾ!
ಅಮಿತ್ ಶಾ
Ganesh Nachikethu | news18
Updated: January 11, 2019, 6:08 PM IST
ನವದೆಹಲಿ(ಜ.11): ಉತ್ತರಪ್ರದೇಶದಲ್ಲಿ ಎಸ್​​ಪಿ-ಬಿಎಸ್​​ಪಿ ಮೈತ್ರಿಯನ್ನು ಬಿಜೆಪಿ ಸೋಲಿಸಲಿದೆ. ಮಾಜಿ ಸಿಎಂ ಮಾಯಾವತಿ ನೇತೃತ್ವದ ಬಹುಜನ ಸಮಾಜವಾದಿ ಪಕ್ಷ ಸೇರಿದಂತೆ ಎಸ್​​ಪಿ-ಕಾಂಗ್ರೆಸ್​​ ಮೈತ್ರಿಕೂಟವೂ ಉತ್ತರಪ್ರದೇಶದಲ್ಲಿ ಅಭಿವೃದ್ದಿ ಕೆಲಸ ಮಾಡುವಲ್ಲಿ ವಿಫಲವಾಗಿದೆ. ಅಲ್ಲದೇ ಇದೀಗ ಲೋಕಸಭೆ ಚುನಾವಣೆಗಾಗಿ ಮತ್ತೆ ಅಖಿಲೇಶ್​​ ಯಾದವ್​​ ಹಾಗೂ ಮಾಯಾವತಿ ಒಂದಾಗಿದ್ದಾರೆ. ಈ ಮಹಾಘಟಬಂಧನ್ ದೊಡ್ಡ ಕಳ್ಳರ ಕೂಟ. ಹೀಗಾಗಿ ಚುನಾವಣೆಯಲ್ಲಿ ಎಸ್​​ಪಿ-ಬಿಎಸ್​​ಪಿ ಮೈತ್ರಿಯನ್ನು ಸೋಲಿಸುವ ಮೂಲಕ ಬಿಜೆಪಿ ಪ್ರಚಂಡ ಗೆಲವು ಸಾಧಿಸಲಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್​​ ಶಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ದೆಹಲಿಯ ರಾಮಲೀಲಾ ಮೈದಾನದಲ್ಲಿ ಬಿಜೆಪಿ ರಾಷ್ಟ್ರೀಯ ಮಂಡಳಿ ಸಭೆ ನಡೆಯುತ್ತಿದೆ. ಈ ಸಭೆಯನ್ನುದ್ದೇಶಿಸಿ ಮಾತನಾಡುತ್ತಿರುವ ಅಮಿತ್​​ ಶಾ ಅವರು, ಕಾಂಗ್ರೆಸ್​ ಪಕ್ಷದ ಒಂದೇ ಕುಟುಂಬ 50 ವರ್ಷ ದೇಶವನ್ನಾಳಿದೆ. ಕಾಂಗ್ರೆಸ್​ ಸೇರಿದಂತೆ ಯುಪಿಎ ಮೈತ್ರಿಕೂಟ ಪಕ್ಷಗಳು ದೇಶವನ್ನು ಲೂಟಿಗೈದಿವೆ ಎಂದಿದ್ದಾರೆ. ಇನ್ನು ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ನಡೆಯುತ್ತಿರುವ ಈ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ರಾಜ್ಯ ನಾಯಕರಾದ ಬಿಎಸ್​​ ಯಡಿಯೂರಪ್ಪ, ಈಶ್ವರಪ್ಪ, ಸದಾನಂದಗೌಡ, ಬಿಜೆಪಿ ಶಾಸಕ-ಸಂಸದರು ಭಾಗಿಯಾಗಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: CBI vs CBI | ಅಲೋಕ್ ವರ್ಮಾ ರಾಜೀನಾಮೆ; ರಾಕೇಶ್ ಅಸ್ತನಾ ವಿರುದ್ಧದ ತನಿಖೆಗೆ ತಡೆ ಇಲ್ಲ

ಹೀಗೆ ಮಾತು ಮುಂದುವರೆಸಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು, ಐವತ್ತು ವರ್ಷ ಒಂದೇ ಕುಟುಂಬ ದೇಶವಾಳಿದೆ. ಆದರೂ ಜನರಿಗೆ ಒಂದು ಬ್ಯಾಂಕ್ ಖಾತೆಯನ್ನು ತೆರೆಯಲು ಸಾಧ್ಯವಾಗಿರಲಿಲ್ಲ. ನಾವು ಅಧಿಕಾರಕ್ಕೆ ಬಂದ ಕೂಡಲೇ ಪ್ರಧಾನಿ ಮೋದಿ ಸರ್ಕಾರ ಕೋಟ್ಯಾಂತರ ಜನರಿಗೆ ಬ್ಯಾಂಕ್​​ ಖಾತೆ ತೆಗೆದಿದೆ. 60ಕ್ಕೂ ಹೆಚ್ಚು ವರ್ಷ ಆಡಳಿತ ನಡೆಸಿದ ಕಾಂಗ್ರೆಸ್​ಗೆ ಕೇಲವ ಜನರಿಗೆ ಬ್ಯಾಂಕ್​​ ಖಾತೆ ತೆರೆಯುವ ಸೌಲಭ್ಯ ಒದಗಿಸಲಾಗಲಿಲ್ಲ ಎಂದು ಕಿಡಿಕಾರಿದರು.

ಇದನ್ನೂ ಓದಿ: ಲೋಕಸಭಾ ಜಿದ್ದಾಜಿದ್ದಿ: ಚುನಾವಣೆಗೆ ಬಿಜೆಪಿ ಭರ್ಜರಿ ತಯಾರಿ; ದೆಹಲಿಗೆ ರಾಜ್ಯ ನಾಯಕರು ದೌಡು!

ಸುಧೀರ್ಘವಾಗಿ ದೇಶ ಆಳಿದವರು ಇತ್ತೀಚೆಗೆ ಬರೀ ಭಾಷಣ ಮಾಡುತ್ತಿದ್ದಾರೆ. ಮಹಾಘಟಬಂಧನದಿಂದ ಏನೂ ಆಗುವುದಿಲ್ಲ ಎಂಬುದು ಗೊತ್ತಿರುವ ವಿಷಯ. ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿಯೂ ಬಿಜೆಪಿ ಬಹುಮತ ಪಡೆಯಲಿದೆ. ಉತ್ತರಪ್ರದೇಶದಲ್ಲಿ ಬಿಜೆಪಿ‌ 72 ಸೀಟು ಗೆಲ್ಲಲಿದೆ. ಈ ಚುನಾವಣ ವೈಚಾರಿಕವಾದುದು. ನಾವು ವಿವೇಕಾನಂದರ ಕಲ್ಪನೆಯ ಭಾರತ ಕಟ್ಟಬೇಕಿದೆ. ಇದು ಮೋದಿಯಿಂದ ಮಾತ್ರ ಸಾಧ್ಯವೇ ಹೊರತು, ಬೇರೆ ಯಾರಿಂದಲೂ ವಿವೇಕಾನಂದರ ಕನಸು ನನಸಾಗಿಸಲು ಸಾಧ್ಯವಿಲ್ಲ ಎಂದರು.
Loading...

ಮತ್ತಷ್ಟು ಮಾಹಿತಿಗಾಗಿ ನಿರೀಕ್ಷಿಸಿ...

-----------------
ಮಾಧ್ಯಮದೊಂದಿಗೆ ಜಟಾಪಟಿಗಿಳಿದ ಯಶ್
First published:January 11, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...