• Home
 • »
 • News
 • »
 • national-international
 • »
 • Wildfire - ನಾಗಾಲ್ಯಾಂಡ್​ನಿಂದ ಮಣಿಪುರಕ್ಕೆ ವ್ಯಾಪಿಸಿದ ಕಾಡ್ಗಿಚ್ಚು; ಎನ್​ಡಿಆರ್​ಎಫ್ ಸಹಾಯಕ್ಕೆ ಸಿಎಂ ಮನವಿ

Wildfire - ನಾಗಾಲ್ಯಾಂಡ್​ನಿಂದ ಮಣಿಪುರಕ್ಕೆ ವ್ಯಾಪಿಸಿದ ಕಾಡ್ಗಿಚ್ಚು; ಎನ್​ಡಿಆರ್​ಎಫ್ ಸಹಾಯಕ್ಕೆ ಸಿಎಂ ಮನವಿ

ನಾಗಾಲ್ಯಾಂಡ್-ಮಣಿಪುರದ ಕಾಡ್ಗಿಚ್ಚು

ನಾಗಾಲ್ಯಾಂಡ್-ಮಣಿಪುರದ ಕಾಡ್ಗಿಚ್ಚು

ಮಂಗಳವಾರ ನಾಗಾಲ್ಯಾಂಡ್ನ ಜುಕೋವ್ ಕಣಿವೆಯಲ್ಲಿ ಶುರುವಾದ ಕಾಡ್ಗಿಚ್ಚು ನಿನ್ನೆಯಿಂದ ಮಣಿಪುರಕ್ಕೆ ವ್ಯಾಪಿಸಿ ಅಟ್ಟಹಾಸ ಮೆರೆಯುತ್ತಿದೆ. ಕಾಡ್ಗಿಚ್ಚು ನಂದಿಸಲು ಮಣಿಪುರ ಕೇಂದ್ರ ಸರ್ಕಾರದ ನೆರವು ಯಾಚಿಸಿದೆ.

 • News18
 • Last Updated :
 • Share this:

  ಇಂಫಾಲ್(ಜ. 01): ಮೂರು ದಿನಗಳ ಹಿಂದೆ ನಾಗಾಲ್ಯಾಂಡ್​ನ ಭಾಗದಲ್ಲಿ ಪ್ರಾರಂಭವಾದ ಕಾಡ್ಗಿಚ್ಚು ವೇಗವಾಗಿ ಹರಡುತ್ತಿದ್ದು ಇದೀಗ ಮಣಿಪುರ ರಾಜ್ಯಕ್ಕೆ ಹಬ್ಬಿದೆ. ನಾಗಾಲ್ಯಾಂಡ್​ನ ಡಜುಕೋವ್ ಅರಣ್ಯ ಪ್ರದೇಶದಿಂದ ಇದೀಗ ಮಣಿಪುರದ ಸೇನಾಪತಿ ಪ್ರದೇಶದ ಅರಣ್ಯಭಾಗಕ್ಕೆ ಬೆಂಕಿ ವ್ಯಾಪಿಸಿದೆ. ಪರಿಸ್ಥಿತಿ ಹತೋಟಿಗೆ ತರಲು ಹರಸಾಹಸ ಮಾಡುತ್ತಿರುವಂತೆಯೇ ಮಣಿಪುರ ಮುಖ್ಯಮಂತ್ರಿಗಳು ಕೇಂದ್ರದಿಂದ ಸಹಾಯಹಸ್ತದ ನಿರೀಕ್ಷೆಯಲ್ಲಿದ್ದಾರೆ. ಸಹಾಯ ಕಾರ್ಯಕ್ಕೆ ಎನ್​ಡಿಆರ್​ಎಫ್ ಮತ್ತು ಸೇನಾ ಪಡೆಗಳನ್ನ ಕಳುಹಿಸಿಕೊಡುವಂತೆ ಕೇಂದ್ರ ಸರ್ಕಾರಕ್ಕೆ ಸಿಎಂ ಬಿರೇನ್ ಸಿಂಗ್ ಮನವಿ ಮಾಡಿದ್ದಾರೆ.


  ಮಣಿಪುರ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಅವರು ಕಾಡ್ಗಿಚ್ಚು ಹಬ್ಬಿದ ಸೇನಾಪತಿ ಜಿಲ್ಲೆ ಡಜುಕೋವ್ ಕಣಿವೆಯ ಪ್ರದೇಶದಲ್ಲಿ ನಿನ್ನೆ ವೈಮಾನಿಕ ಸಮೀಕ್ಷೆ ನಡೆಸಿದರು. ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಡಾ. ರಾಜೇಶ್ ಕುಮಾರ್, ಡಿಜಿಪಿ ಅವರೂ ಸಿಎಂ ಜೊತೆಯಲ್ಲಿ ಸಮೀಕ್ಷೆಯಲ್ಲಿ ಪಾಲ್ಗೊಂಡರು.


  ಇದೇ ವೇಳೆ, ಕಾಡ್ಗಿಚ್ಚು ಪರಿಸ್ಥಿತಿ ನಿಭಾಯಿಸಲು ಎನ್​ಡಿಆರ್​ಎಫ್, ಸೇನಾಪಡೆಗಳನ್ನ ಕಳುಹಿಸುವಂತೆ ಮಣಿಪುರ ಸಿಎಂ ಮಾಡಿಕೊಂಡ ಮನವಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಪೂರಕವಾಗಿ ಸ್ಪಂದಿಸಿದ್ದಾರೆ. ಈ ವಿಚಾರವನ್ನು ಸ್ವತಃ ಸಿಎಂ ಅವರೇ ದೃಢಪಡಿಸಿ ಟ್ವೀಟ್ ಮಾಡಿದ್ದಾರೆ. “ಈಗಷ್ಟೇ ಗೃಹ ಸಚಿವ ಅಮಿತ್ ಶಾ ಅವರಿಂದ ಕರೆ ಬಂದಿದೆ. ಡಜುಕೋ ಕಣಿವೆಯಲ್ಲಿನ ಕಾಡ್ಗಿಚ್ಚು ಪರಿಸ್ಥಿತಿ ಬಗ್ಗೆ ಅವಲೋಕಿಸಿದರು. ಕಾಡ್ಗಿಚ್ಚನ್ನ ಶೀಘ್ರದಲ್ಲಿ ನಂದಿಸಲು ಗೃಹ ಸಚಿವಾಲಯದಿಂದ ಅಗತ್ಯ ನೆರವನ್ನು ಒದಗಿಸುವ ಭರವಸೆ ನೀಡಿರು” ಎಂದು ಬೆಳಗ್ಗೆ ಸಿಎಂ ಟ್ವೀಟ್ ಮಾಡಿ ತಿಳಿಸಿದ್ದಾರೆ.


  ಇದನ್ನೂ ಓದಿ: FASTag: ದೇಶಾದ್ಯಂತ ಇಂದಿನಿಂದ ಫಾಸ್ಟ್​ಟ್ಯಾಗ್ ಕಡ್ಡಾಯ; ಫೆ. 15ರವರೆಗೆ ಹೈಬ್ರೀಡ್ ಲೇನ್​ನಲ್ಲಿ ಹಣ ಪಾವತಿಗೆ ಅವಕಾಶ


  ಸದ್ಯ ಮಣಿಪುರ ಮತ್ತು ನಾಗಾಲ್ಯಾಂಡ್ ರಾಜ್ಯಗಳ ಅರಣ್ಯ ಇಲಾಖೆ. ಅಗ್ನಿಶಾಮಕ ದಳ, ಪೊಲೀಸ್ ಸಿಬ್ಬಂದಿ, SAYO ಸಂಘಟನೆ ಕಾರ್ಯಕರ್ತರು ಕಳೆದ ಮೂರು ದಿನಗಳಿಂದ ಬೆಂಕಿ ನಂದಿಸುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ಭಾರತೀಯ ವಾಯುಪಡೆಯ ಹೆಲಿಕಾಪ್ಟರ್​ಗಳನ್ನ ಇವತ್ತು ಈ ಕಾರ್ಯಕ್ಕೆ ಬಳಕೆ ಮಾಡಿಕೊಳ್ಳಲಾಗುತ್ತಿದೆ.


  ಕಾಡ್ಗಿಚ್ಚು ಶಮನ ಕಾರ್ಯದಲ್ಲಿ ಕೈಜೋಡಿಸಿರುವ ಸದರ್ನ್ ಅಂಗಾಮಿ ಯೂಥ್ (SAYO) ಯುವಕರನ್ನ ಮಣಿಪುರ ರಾಜ್ಯಪಾಲರು ಶ್ಲಾಘಿಸಿದ್ದಾರೆ.

  Published by:Vijayasarthy SN
  First published: