HOME » NEWS » National-international » AMIT SHAH ASKS WHAT ABOUT 130 BJP WORKERS KILLED BY TMC SESR

Amit Shah: ದೀದಿ ಶೀಘ್ರ ಚೇತರಿಕೆಯಾಗಲಿ ಎಂದು ಆಶಿಸುತ್ತೇನೆ. ಆದರೆ...; ಕೇಂದ್ರ ಸಚಿವ ಅಮಿತ್​ ಶಾ

ಬಂಗಾಳದಲ್ಲಿ 130 ಬಿಜೆಪಿ ಕಾರ್ಯಕರ್ತರ ಸಾವಿಗೆ ಕಾರಣ ಯಾರು ಎಂದು ನಾನು ಕೇಳಲು ಬಯಸುತ್ತೇನೆ

news18-kannada
Updated:March 15, 2021, 6:58 PM IST
Amit Shah: ದೀದಿ ಶೀಘ್ರ ಚೇತರಿಕೆಯಾಗಲಿ ಎಂದು ಆಶಿಸುತ್ತೇನೆ. ಆದರೆ...; ಕೇಂದ್ರ ಸಚಿವ ಅಮಿತ್​ ಶಾ
ಅಮಿತ್ ಶಾ.
  • Share this:
ಕೊಲ್ಕತ್ತಾ (ಮಾ. 15): ನಂದಿಗ್ರಾಮದಲ್ಲಿ ನಾಮಪತ್ರ ಸಲ್ಲಿಕೆ ದಿನ ಅಪಘಾತದಿಂದ ಕಾಲು ಗಾಯಗೊಂಡಿದ್ದರೂ ಟಿಎಂಸಿ ನಾಯಕಿ, ಸಿಎಂ ಮಮತಾ ಬ್ಯಾನರ್ಜಿ ವೀಲ್​ಚೇರ್​ನಲ್ಲಿಯೇ ಚುನಾವಣಾ ಪ್ರಚಾರ ನಡೆಸುತ್ತಿದ್ದಾರೆ. ಈ ನಡುವೆ ಅವರ ಪರಿಸ್ಥಿತಿ ಕುರಿತು ಮೊದಲ ಬಾರಿ ಮೌನ ಮುರಿದಿರುವ ಕೇಂದ್ರ ಗೃಹ ಸಚಿವ ಅಮಿತ್​ ಶಾ,ಅವರ ಶೀಘ್ರ ಚೇತರಿಕೆಗೆ ಆಗ್ರಹಿಸಿದ್ದಾರೆ. ಇದೇ ವೇಳೆ ಟಿಎಂಸಿ ಗೂಂಡಾಗಳಿಂದ ಕೊಲ್ಲಲ್ಪಟ್ಟ 130 ಬಿಜೆಪಿ ಕಾರ್ಯಕರ್ತರ ನೋವಿನ ಸ್ಥಿತಿ ಏನು ಎಂದು ಪ್ರಶ್ನಿಸಿದ್ದಾರೆ. ಬಂಕುರಾ ಜಿಲ್ಲೆಯ ರಾಣಿಬಂದ್​ನಲ್ಲಿ ಚುನಾವಣಾ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ತಮ್ಮ ಹೆಲಿಕ್ಯಾಪ್ಟರ್​ ತಾಂತ್ರಿಕ ಸಮಸ್ಯೆಯಿಂದಾಗಿ ತಡವಾಗಿ ಬಂದಿರುವುದಾಗಿ ತಿಳಿಸಿದರು. ಇದೇ ವೇಳೆ ಮಮತಾ ಬ್ಯಾನರ್ಜಿ ಆರೋಪಕ್ಕೆ ತಿರುಗೇಟು ನೀಡಿದ ಅವರು ನನ್ನ ಹೆಲಿಕ್ಯಾಪ್ಟರ್​ನಲ್ಲಿ ಕೆಲವು ಸಮಸ್ಯೆ ಇದೆ. ಅದನ್ನು ಪಿತೂರಿ ಎಂದು ಕರೆಯುವುದಿಲ್ಲ ಎಂದರು.

ಮಮತಾ ದೀದಿ ಕಾಲು ಗಾಯಗೊಂಡರು ವೀಲ್​​ಚೇರ್​ಮೇಲೆ ಕುಳಿತು ಮತ ಪ್ರಚಾರ ನಡೆಸುತ್ತಿದ್ದಾರೆ. ಅವರ ಶೀಘ್ರ ಚೇತರಿಕೆಗಾಗಿ ನಾನು ಆಶಿಸುತ್ತೇನೆ. ಆದರೆ, ಬಂಗಾಳದಲ್ಲಿ 130 ಬಿಜೆಪಿ ಕಾರ್ಯಕರ್ತರ ಸಾವಿಗೆ ಕಾರಣ ಯಾರು ಎಂದು ನಾನು ಕೇಳಲು ಬಯಸುತ್ತೇನೆ ಎಂದರು. ರಾಜಕೀಯ ಹಿಂಸಾಚಾರದಲ್ಲಿ ಸಾವನ್ನಪ್ಪಿದ 130 ಮಕ್ಕಳ ತಾಯಂದಿರ ನೋವಿನ ಬಗ್ಗೆ ಅವರಿಗೆ ಕಾಳಜಿ ಇದೆಯಾ ಎಂದು ಪ್ರಶ್ನಿಸಿದರು.

ನಂದಿಗ್ರಾಮದಲ್ಲಿ ಏನಾಯಿತು ಎಂಬುದು ಇನ್ನೂ ತಿಳಿದಿಲ್ಲ. ಇದನ್ನು ಪಿತೂರಿ ಎಂದು ಟಿಎಂಸಿ ಆರೋಪಿಸುತ್ತಿದೆ. ಆದರೆ, ಚುನಾವಣಾ ಆಯೋಗ ಅಪಘಾತ ಎನ್ನುತ್ತಿದೆ. ಯಾವುದು ನಿಜ ಎಂಬುದು ದೇವರಿಗೆ ಗೊತ್ತು. ಆದರೆ ನಮ್ಮ ಹೆಲಿಕ್ಯಾಪ್ಟರ್​ನಲ್ಲಿ ತಾಂತ್ರಿಕ ಸಮಸ್ಯೆ ಇತ್ತು ಹೊರತು ಪಿತೂರಿ ಅಲ್ಲ ಎಂದು ಇದೇ ವೇಳೆ ವ್ಯಂಗ್ಯವಾಡಿದರು.

ಶಾ ಇಂದು ಜಾರ್ಗ್ರಾಮ್​ನಲ್ಲಿ ಚುನಾವಣಾ ಸಾರ್ವಜನಿಕ ಸಮಾವೇಶದಲ್ಲಿ ಭಾಗಿಯಾಗಬೇಕಿತ್ತು. ಆದರೆ ಅವರ ಚಾಪರ್​ನಲ್ಲಿ ಕೆಲವು ತಾಂತ್ರಿಕ ದೋಷ ಕಾಣಿಸಿಕೊಂಡಿದ್ದ ಹಿನ್ನಲೆ ಇದರಲ್ಲಿ ಭಾಗಿಯಾಗಲಿಲ್ಲ. ಬದಲಾಗಿ ರಾಣಿಬಂದ್​ನಲ್ಲಿ ನಿಗದಿಯಾಗಿದ್ದ ಸಭೆಯಲ್ಲಿ ಭಾಗಿಯಾದರು.

ಇದನ್ನು ಓದಿ: ನಾನು ಎಂದಿಗೂ ತಲೆಬಾಗುವುದಿಲ್ಲ; ವೀಲ್​ ಚೇರ್​ನಲ್ಲೇ ಚುನಾವಣೆ ರ‍್ಯಾಲಿ ನಡೆಸಿದ ಮಮತಾ ಬ್ಯಾನರ್ಜಿ

ಈ ವೇಳೆ ಟಿಎಂಸಿ ವಿರುದ್ಧ ಹರಿಹಾಯ್ದ ಅವರು ಬುಡುಕಟ್ಟು ಜನರು ಆಡಳಿತರೂಢ ಟಿಎಂಸಿಯನ್ನು ಕಡೆಗಣಿಸಿದ್ದಾರೆ. ಆದರೆ, ನಾನು ನಿಮ್ಮೆಲ್ಲಾ ಆಕಾಂಕ್ಷೆಗಳನ್ನು ಈಡೇರಿಸುವ ಭರವಸೆ ನೋಡುತ್ತೇನೆ. ರಾಜ್ಯದಲ್ಲಿ ಮುಂದೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದ್ದು, ಈ ವೇಳೆ ಬುಡುಕಟ್ಟು ಜನರಿಗೆ ಸಹಾಯವಾಗಲು ಸ್ಟ್ರಾಂಡ್​ ಅಪ್ ಇಂಡಿಯಾ ಯೋಜನೆ ಅಡಿ 100 ಕೋಟಿ ಅನುಧಾನ ನೀಡಲಾಗುವುದು. ಜೊತೆಗೆ 12ನೇ ತರಗತಿಯಲ್ಲಿ ಶೇ 70ಕ್ಕಿಂತ ಹೆಚ್ಚು ಅಂಕಗಳಿಸುವ ಬುಡುಕಟ್ಟು ಸಮುದಾಯದ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಶೇ 50 ರಷ್ಟು ಆರ್ಥಿಕ ಸಹಾಯ ಮಾಡಲಾಗುವುದು ಎಂದು ಭರವಸೆ ನೀಡಿದರು.

ಟಿಎಂಸಿ ಸರ್ಕಾರ ಕಳೆದ 10 ವರ್ಷಗಳ ಆಡಳಿತದಲ್ಲಿ ಕೇಂದ್ರದ ಯೋಜನೆಗಳನ್ನು ರಾಜ್ಯದ ಜನರಿಗೆ ನೀಡುತ್ತಿಲ್ಲ. ದೀದಿ ಆಯುಷ್ಮಾನ್​ ಭಾರತ್​ ಸೇರಿದಂತೆ ಪ್ರಮುಖ ಕೇಂದ್ರದ ಯೋಜನೆಗಳನ್ನು ರಾಜ್ಯದಲ್ಲಿ ಜಾರಿಗೊಳಿಸುತ್ತಿಲ್ಲ. ಆಯುಷ್ಮಾನ್​ ಭಾರತ್​ ಅಡಿ ಭಾರತದಾದ್ಯಂತ ಹಲವಾರು ಕೋಟಿ ಜನರು ಉಚಿತ ಶಸ್ತ್ರ ಚಿಕಿತ್ಸೆಗಳನ್ನು ಪಡೆದಿದ್ದಾರೆ. ಆದರೆ, ದೀದಿ ಈ ಯೋಜನೆಯನ್ನು ಬಂಗಾಳದಲ್ಲಿ ಜಾರಿಗೆ ತಿಂದಿಲ್ಲ ಎಂದರು
Published by: Seema R
First published: March 15, 2021, 6:52 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories