• Home
  • »
  • News
  • »
  • national-international
  • »
  • Amit Shah: ಜಮ್ಮು ಕಾಶ್ಮೀರದ ಕುರಿತು ಮಹತ್ವದ ಘೋಷಣೆ ಮಾಡಿದ ಗೃಹ ಸಚಿವ ಅಮಿತ್ ಶಾ

Amit Shah: ಜಮ್ಮು ಕಾಶ್ಮೀರದ ಕುರಿತು ಮಹತ್ವದ ಘೋಷಣೆ ಮಾಡಿದ ಗೃಹ ಸಚಿವ ಅಮಿತ್ ಶಾ

ಅಮಿತ್ ಶಾ

ಅಮಿತ್ ಶಾ

ಈ ಮೀಸಲಾತಿ ಪಡೆಯಲು ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಮೀಸಲಾತಿ ಕಾಯ್ದೆಗೆ ತಿದ್ದುಪಡಿ ತರಬೇಕಿದೆ.

  • Share this:

ಜಮ್ಮು: ಕೇಂದ್ರ ಗೃಹ ಸಚಿವ ಅಮಿತ್ ಶಾ (Home Minister Amit Shah) ಅವರು ಇಂದು ಜಮ್ಮು ಮತ್ತು ಕಾಶ್ಮೀರದ (Jammu Kashmir) ರಾಜೌರಿಯಲ್ಲಿ ಗುಜ್ಜರ್ ಮತ್ತು ಬಕರ್‌ವಾಲ್‌ಗಳ ಸಮುದಾಯದ ಜೊತೆಗೆ ಪಹಾರಿ ಸಮುದಾಯಕ್ಕೆ (Pahari Community)  ಶೀಘ್ರದಲ್ಲೇ ಶಿಕ್ಷಣ ಮತ್ತು ಉದ್ಯೋಗಗಳಲ್ಲಿ ಪರಿಶಿಷ್ಟ ಪಂಗಡ (ST) ಮೀಸಲಾತಿ ಸಿಗಲಿದೆ ಎಂದು ಘೋಷಿಸಿದ್ದಾರೆ. ಈ ಮೀಸಲಾತಿ ಪಡೆಯಲು ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಮೀಸಲಾತಿ ಕಾಯ್ದೆಗೆ ತಿದ್ದುಪಡಿ ತರಬೇಕಿದೆ. ಹೀಗೆ ಮೀಸಲಾತಿ ಕಾಯ್ದೆಗೆ ತಿದ್ದುಪಡಿ ತಂದು ಪಹಾರಿ ಸಮುದಾಯಕ್ಕೆ ST ಸ್ಥಾನಮಾನ ದೊರೆತರೆ ಇದು ಭಾರತದಲ್ಲಿ ಭಾಷಾವಾರು ಗುಂಪು ಮೀಸಲಾತಿಯನ್ನು ಗಳಿಸಿದ ಮೊದಲ ನಿದರ್ಶನವಾಗಲಿದೆ. 


ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಸ್ಥಾಪಿಸಿದ ಆಯೋಗವು ಈ ಮೀಸಲಾತಿಯ ಕುರಿತು   ವರದಿಯನ್ನು ಕಳುಹಿಸಿದೆ. ವರದಿಯಲ್ಲಿ ಗುಜ್ಜರ್, ಬಕರ್ವಾಲ್ ಮತ್ತು ಪಹಾರಿ ಸಮುದಾಯಗಳಿಗೆ ಮೀಸಲಾತಿಯನ್ನು ಶಿಫಾರಸು ಮಾಡಲಾಗಿದೆ. ಈ ಶಿಫಾರಸನ್ನು ಶೀಘ್ರದಲ್ಲೇ ನೀಡಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಘೋಷಿಸಿದ್ದಾರೆ.


ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ಅರ್ಪಿಸಲು ಕರೆ
ಆಗಸ್ಟ್ 5, 2019 ರಂದು ಜಮ್ಮು ಮತ್ತು ಕಾಶ್ಮೀರಕ್ಕೆ ಕೆಲವು ಸ್ವಾಯತ್ತತೆಯನ್ನು ನೀಡಿದ ಸಾಂವಿಧಾನಿಕ ನಿಬಂಧನೆಗಳಾದ 35 ಎ ಮತ್ತು 370 ರ ಟೊಳ್ಳಾದ ಕ್ರಮಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದ ಹೇಳಬೇಕೆಂದು ಗೃಹ ಸಚಿವ ಅಮಿತ್ ಶಾ ಅವರು ಸಭೆಯಲ್ಲಿ ನೆರೆದಿದ್ದ ಜನರಿಗೆ ಕರೆ ನೀಡಿದ್ದಾರೆ.


ನಡೆಯಲಿದೆ ವಿಧಾನಸಭಾ ಚುನಾವಣೆ
ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿ ವಿಧಾನಸಭಾ ಕ್ಷೇತ್ರಗಳನ್ನು ಗುರುತಿಸಲಾಗಿದೆ. ಮತದಾರರ ಪಟ್ಟಿಯನ್ನು ಅಂತಿಮಗೊಳಿಸುವ ಪ್ರಕ್ರಿಯೆಯು ಬಹುತೇಕ ಮುಗಿದಿದೆ ಎಂದು ವರದಿಯಾಗಿದೆ. ಮೊದಲ ವಿಧಾನಸಭಾ ಚುನಾವಣೆಯು ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿದೆ.


ಜಮ್ಮು ಕಾಶ್ಮೀರದಲ್ಲಿ ಗುಲಾಂ ನಬಿ ಆಜಾದ್ ಗುರಿಯೇನು?
ಗುಲಾಂ ನಬಿ ಆಜಾದ್ (Ghulam Nabi Azad) ಕೊನೆಗೂ ತಮ್ಮ ಹೊಸ ಪಕ್ಷಕ್ಕೆ ಹೆಸರು ಘೋಷಿಸಿದ್ದಾರೆ. ಹೊಸ ಪಕ್ಷಕ್ಕೆ ಡೆಮಾಕ್ರಟಿಕ್ ಆಜಾದ್ ಪಾರ್ಟಿ ( Democratic Azad Party) ಎಂದು ಅವರು ಹೆಸರಿಟ್ಟಿದ್ದಾರೆ. ಅಲ್ಲದೇ ಈ ಹೊಸ ಪಕ್ಷದ ಧ್ವಜವನ್ನೂ ಅವರು ಅನಾವರಣಗೊಳಿಸಿದ್ದಾರೆ. ಸ್ವತಂತ್ರ ಆಲೋಚನೆ ಮತ್ತು ಸಿದ್ಧಾಂತಕ್ಕೆ ಡೆಮಾಕ್ರಟಿಕ್ ಆಜಾದ್ ಪಾರ್ಟಿ ಒತ್ತು ನೀಡಲಿದೆ ಎಂದು ಗುಲಾಂ ನಬಿ ಆಜಾದ್ ಘೋಷಿಸಿದ್ದಾರೆ. ಕಾಂಗ್ರೆಸ್ ತೊರೆದು ಹೊಸ ಪಕ್ಷದ ಮೂಲಕ ಜಮ್ಮು ಕಾಶ್ಮೀರದಲ್ಲಿ ಚುನಾವಣೆಗೆ ಸ್ಪರ್ಧೆ ನಡೆಸುವುದಾಗಿ ಅವರು ಈ ಮುನ್ನವೇ ಘೋಷಣೆ ಮಾಡಿದ್ದರು.


ಇದನ್ನೂ ಓದಿ: Hemant Kumar Lohia: ಜಮ್ಮು ಕಾಶ್ಮೀರದ ಹಿರಿಯ IPS​ ಅಧಿಕಾರಿಯ ಭೀಕರ ಹತ್ಯೆ: ಅಮಿತ್ ಶಾಗೆ ಚಿಕ್ಕ ಉಡುಗೊರೆ ಎಂದ ಉಗ್ರ ಸಂಘಟನೆ!


ಹಿರಿಯ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಪ್ರಾಥಮಿಕ ಸದಸ್ಯತ್ವ ಸೇರಿದಂತೆ ಕಾಂಗ್ರೆಸ್ ಪಕ್ಷದ ಎಲ್ಲ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದರು. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಉದ್ದೇಶಿಸಿ ಪತ್ರ ಬರೆದಿದ್ದ ಗುಲಾಂ ನಬಿ ಆಜಾದ್, ಹಿರಿಯ ನಾಯಕರನ್ನು ಬದಿಗಿರಿಸುವ ಪ್ರವೃತ್ತಿ ಹೆಚ್ಚುತ್ತಿರುವ ಕಾರಣವನ್ನು ಪಕ್ಷದಿಂದ ನಿರ್ಗಮಿಸಲು ಕಾರಣವೆಂದು ಉಲ್ಲೇಖಿಸಿದ್ದರು.


ಜಿ 23 ಗುಂಪಿನ ಪ್ರಮುಖ ಸದಸ್ಯ
ಆಜಾದ್ ಅವರು ಕಾಂಗ್ರೆಸ್‌ನ 'ಜಿ23' ಗುಂಪಿನ ಪ್ರಮುಖ ಸದಸ್ಯರಾಗಿದ್ದರು. ಈ ಗುಂಪು ಪಕ್ಷದ ನಾಯಕತ್ವವನ್ನು ಟೀಕಿಸುತ್ತಿದೆ. ಸಂಘಟನೆಯ ಬದಲಾವಣೆಗೆ ಒತ್ತಾಯಿಸುತ್ತಿದೆ. ರಾಜ್ಯಸಭೆಯಿಂದ ನಿವೃತ್ತರಾದ ನಂತರ ಆಜಾದ್ ಅವರನ್ನು ಮತ್ತೆ ಮೇಲ್ಮನೆಗೆ ಕಳುಹಿಸಿಲ್ಲ ಎಂಬುವುದು ಉಲ್ಲೇಖನೀಯ.


ಇದನ್ನೂ ಓದಿ: Satyanarayan Puja: ಸತ್ಯನಾರಾಯಣ ಪೂಜೆ ಮಾಡಿಸಿದ್ರೂ ಹೆಣ್ಣು ಸಿಕ್ಕಿಲ್ಲ! ಅರ್ಚಕರಿಗೆ ಹಿಗ್ಗಾಮುಗ್ಗಾ ಥಳಿತ!


ಮೊದಲೇ ಕಾಂಗ್ರೆಸ್ ತ್ಯಜಿಸುವ ಸುಳಿವು ನೀಡಿದ್ದ ಆಜಾದ್
ಆಗಸ್ಟ್ 16 ರಂದು ಗುಲಾಂ ನಬಿ ಆಜಾದ್ ಜಮ್ಮು ಮತ್ತು ಕಾಶ್ಮೀರ ಕಾಂಗ್ರೆಸ್ ಪ್ರಚಾರ ಸಮಿತಿಯ ಮುಖ್ಯಸ್ಥ ಸ್ಥಾನವನ್ನು ತ್ಯಜಿಸಿದ್ದರು. ಆಗಲೇ ಅವರು ಇನ್ನಷ್ಟು ಮಹತ್ವದ ನಿರ್ಧಾರ ಕೈಗೊಳ್ಳುವ ಸುಳಿವು ಲಭ್ಯವಾಗಿತ್ತು.

Published by:ಗುರುಗಣೇಶ ಡಬ್ಗುಳಿ
First published: