ಶಿವಸೇನೆಯ ಏಕೈಕ ಮುಸ್ಲಿಮ್ ಶಾಸಕ ಅಬ್ದುಲ್ ಸತ್ತಾರ್ ಸಚಿವ ಸ್ಥಾನಕ್ಕೆ ರಾಜೀನಾಮೆ?

ಈ ಸುದ್ದಿ ಬಗ್ಗೆ ಮಾತನಾಡಿದ ಶಿವಸೇನಾದ ರಾಜ್ಯಸಭಾ ಸದಸ್ಯ ಅನಿಲ್ ದೇಸಾಯಿ ಅವರು ಮಹಾರಾಷ್ಟ್ರ ಸರ್ಕಾರದ ಯಾವ ಸಚಿವರೂ ರಾಜೀನಾಮೆ ನೀಡಿಲ್ಲ. ಯಾವುದೇ ರಾಜೀನಾಮೆಯನ್ನ ಅಂಗೀಕರಿಸುವುದೂ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

news18
Updated:January 4, 2020, 4:30 PM IST
ಶಿವಸೇನೆಯ ಏಕೈಕ ಮುಸ್ಲಿಮ್ ಶಾಸಕ ಅಬ್ದುಲ್ ಸತ್ತಾರ್ ಸಚಿವ ಸ್ಥಾನಕ್ಕೆ ರಾಜೀನಾಮೆ?
ಅಬ್ದುಲ್ ಸತ್ತಾರ್
  • News18
  • Last Updated: January 4, 2020, 4:30 PM IST
  • Share this:
ನವದೆಹಲಿ(ಜ. 04): ಶಿವಸೇನಾ ಪಕ್ಷದ ಏಕೈಕ ಶಾಸಕ ಅಬ್ದುಲ್ ಸತ್ತಾರ್ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಮೂಲಗಳು ಹೇಳಿವೆ. ವಿಧಾನಸಭಾ ಚುನಾವಣೆಗೆ ಸ್ವಲ್ಪ ಕಾಲ ಮುನ್ನ ಶಿವಸೇನೆಯನ್ನು ಸೇರಿದ್ದ ಅಬ್ದುಲ್ ಸತ್ತಾರ್ ಅವರಿಗೆ ಸಂಪುಟದಲ್ಲಿ ಖಾತೆ ಹಂಚಿಕೆ ಮತ್ತು ದರ್ಜೆ ತೃಪ್ತಿ ತಂದಿಲ್ಲ. ಹೀಗಾಗಿ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ, ಶಿವಸೇನಾ ಪಕ್ಷ ಈ ಸುದ್ದಿಯನ್ನು ಅಲ್ಲಗಳೆದಿದೆ. ಅಬ್ದುಲ್ ಸತ್ತಾರ್ ಅವರಿಂದ ಈ ಬಗ್ಗೆ ಯಾವುದೇ ಸ್ಪಷ್ಟನೆ ಬಂದಿಲ್ಲ.

ಔರಂಗಾಬಾದ್​ನ ಸಿಲ್ಲೋದ್ ಕ್ಷೇತ್ರದ ಅಬ್ದುಲ್ ಸತ್ತಾರ್ ಅವರಿಗೆ ಪಶುಸಂಗೋಪನೆ ಖಾತೆಯ ರಾಜ್ಯ ದರ್ಜೆಯ ಸಚಿವ ಸ್ಥಾನ ನೀಡಲಾಗಿತ್ತು. ಸತ್ತಾರ್ ಅವರು ಸಂಪುಟ ದರ್ಜೆಯ ಖಾತೆಗೆ ಬೇಡಿಕೆ ಇಟ್ಟಿದ್ದರೆನ್ನಲಾಗಿದೆ. ಅವರ ಈ ಬೇಡಿಕೆಗೆ ಹಸಿರುನಿಶಾನೆ ತೋರಿಸಲು ಶಿವಸೇನಾ ನಾಯಕತ್ವ ಹಿಂದೇಟು ಹಾಕುತ್ತಿದೆ. ಈ ಹಿನ್ನೆಲೆಯಲ್ಲಿ ಅಬ್ದುಲ್ ಸತ್ತಾರ್ ಅವರು ಸಂಪುಟದಿಂದ ಹೊರಬರಲು ನಿರ್ಧರಿಸಿದರು ಎನ್ನುತ್ತವೆ ಆ ಮೂಲಗಳು.

ಇದನ್ನೂ ಓದಿ: ದೆಹಲಿಯಲ್ಲಿ ನಡೆದ ಉಗ್ರರ ದಾಳಿಯಲ್ಲೂ ಸುಲೇಮನಿ ಕೈವಾಡ?; ಇರಾನ್ ಸೇನಾ ಮುಖ್ಯಸ್ಥನ ಹತ್ಯೆಗೆ ಟ್ರಂಪ್ ಸಮರ್ಥನೆ

ಈ ಸುದ್ದಿ ಬಗ್ಗೆ ಮಾತನಾಡಿದ ಶಿವಸೇನಾದ ರಾಜ್ಯಸಭಾ ಸದಸ್ಯ ಅನಿಲ್ ದೇಸಾಯಿ ಅವರು ಮಹಾರಾಷ್ಟ್ರ ಸರ್ಕಾರದ ಯಾವ ಸಚಿವರೂ ರಾಜೀನಾಮೆ ನೀಡಿಲ್ಲ. ಯಾವುದೇ ರಾಜೀನಾಮೆಯನ್ನ ಅಂಗೀಕರಿಸುವುದೂ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಶಿವಸೇನಾದ ಹಿರಿಯ ಮುಖಂಡ ಸಂಜಯ್ ರಾವತ್ ಕೂಡ ಈ ರಾಜೀನಾಮೆ ಸುದ್ದಿಯನ್ನು ನಿರಾಕರಿಸಿದ್ಧಾರೆ.

“ಯಾವುದೇ ಖಾತೆಯೂ ಸಣ್ಣದಲ್ಲ. ಯಾರಾದರೂ ಹಾಗೆ ಭಾವಿಸಿದರೆ ಅದು ತಪ್ಪು” ಎಂದು ಸಂಜಯ್ ರಾವತ್ ಪರೋಕ್ಷವಾಗಿ ಟೀಕಿಸಿದ್ದಾರೆ.

ಇದನ್ನೂ ಓದಿ: ಗುರುದ್ವಾರದ ನಂಕಾನ ಸಾಹಿಬ್​ನಲ್ಲಿ ಕಲ್ಲು ತೂರಾಟ; ಸಿಖ್ಖರ ರಕ್ಷಣೆಗೆ ಕ್ರಮ ವಹಿಸುವಂತೆ ಪಾಕ್ ಸರ್ಕಾರಕ್ಕೆ ಭಾರತ ಆಗ್ರಹ

ಇನ್ನು, ಅಬ್ದುಲ್ ಸತ್ತಾರ್ ಅವರು ವಿಧಾನಸಭಾ ಚುನಾವಣೆಗೆ ಮುನ್ನ ಕಾಂಗ್ರೆಸ್ ಪಕ್ಷದಲ್ಲಿದ್ದವರು. ಸಿಲ್ಲೋದ್ ಕ್ಷೇತ್ರಕ್ಕೆ ಕಾಂಗ್ರೆಸ್ ಟಿಕೆಟ್ ಸಿಗದಿದ್ದ ಹಿನ್ನೆಲೆಯಲ್ಲಿ ಆ ಪಕ್ಷ ತ್ಯಜಿಸಿದವರು. ಬಿಜೆಪಿಗೆ ಹೋಗುವ ಮನಸ್ಸಿನಲ್ಲಿದ್ದ ಅವರನ್ನು ಶಿವಸೇನೆಯೇ ಸೆಳೆದುಕೊಂಡು ಟಿಕೆಟ್ ನೀಡಿತ್ತು. ಈಗ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರೆ ಶಿವಸೇನೆಗೆ ಮುಜುಗರ ಪರಿಸ್ಥಿತಿ ಉಂಟಾಗಬಹುದು.ಶಿವಸೇನೆಯ ಉದ್ಧವ್ ಠಾಕ್ರೆ ನೇತೃತ್ವದಲ್ಲಿ ರಚನೆಯಾಗಿರುವ ಮಹಾ ವಿಕಾಸ್ ಆಘಾಡಿ ಮೈತ್ರಿ ಸರ್ಕಾರದ ಸಂಪುಟದಲ್ಲಿ ಒಟ್ಟು 36 ಸಚಿವರಿದ್ದಾರೆ. ಆದರೆ, ಖಾತೆ ಹಂಚಿಕೆ ವಿಚಾರದಲ್ಲಿ ಕಾಂಗ್ರೆಸ್, ಎನ್​ಸಿಪಿ, ಶಿವಸೇನಾ ಈ ಮೂರೂ ಮಿತ್ರಪಕ್ಷಗಳಲ್ಲಿ ಅಸಮಾಧಾನ ಉದ್ಭವಿಸಿದೆ. ಅನೇಕ ಹಿರಿಯರು ಸಚಿವ ಸ್ಥಾನ ಸಿಗದೇ ಬೇಸರಗೊಂಡಿದ್ಧಾರೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

First published:January 4, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ