Delhi Curfew: ಬಾರ್​ಗಳ ಎದುರು ಮದ್ಯಕ್ಕಾಗಿ ಮುಗಿಬಿದ್ದ ದೆಹಲಿಯ ಜನ; ಔಷಧಿ ಬೇಡ ಮದ್ಯವೇ ಬೇಕು ಎಂದ ಮಹಿಳೆ!

ಕೊರೋನಾಗೆ ಕಡಿವಾಣ ಹಾಕಲು ಸಿಎಂ ಕೇಜ್ರಿವಾಲ್ ಇಂದು ರಾತ್ರಿಯಿಂದ ಕರ್ಫ್ಯೂ ಜಾರಿಗೊಳಿಸಿದ್ದಾರೆ. ಆದರೆ ಜನ ಮಾತ್ರ ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿ ಮದ್ಯದಂಗಡಿಗಳ ಮುಂದೆ ಭಾರೀ ಸಂಖ್ಯೆಯಲ್ಲಿ ಸೇರಿರುವುದು ಹೊಸ ತಲೆನೋವಾಗಿದೆ.

ಮದ್ಯಕೊಳ್ಳಲು ಸರತಿ ಸಾಲು

ಮದ್ಯಕೊಳ್ಳಲು ಸರತಿ ಸಾಲು

 • Share this:
  ದೆಹಲಿ (ಏ. 19): ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಒಂದು ವಾರ ಕರ್ಫ್ಯೂ ಘೋಷಿಸಿದ್ದಾರೆ. ಇಂದು ರಾತ್ರಿಯಿಂದಲೇ ದೆಹಲಿ ಸ್ತಬ್ಧವಾಗಲಿದೆ. ಒಂದು ವಾರಗಳ ಕಾಲ ಅಗತ್ಯ ವಸ್ತುಗಳನ್ನು ಹೊರತು ಪಡಿಸಿ ಎಲ್ಲಾ ಅಂಗಡಿ, ಮಾಲ್, ಬಾರ್​ಗಳು ಬಂದ್ ಆಗಲಿವೆ. ಹೀಗಾಗಿ ಮದ್ಯ ಪ್ರಿಯರು ದೆಹಲಿಯ ಬಾರ್​ಗಳ ಮುಂದೆ ಸಾಲುಗಟ್ಟಿ ನಿಂತಿದ್ದಾರೆ. ಜನ ಸಾಮಾಜಿಕ ಅಂತರವನ್ನೂ ಮರೆತು ಮದ್ಯ ಖರೀದಿಸಲು ಜಮಾಯಿಸಿದ್ದಾರೆ. ಬಹುತೇಕ ಬಾರ್​ಗಳ ಎದುರು ನೂರಾರು ಜನರಿಂದ ನೂಕ್ಕುನುಗ್ಗಲು ಸೃಷ್ಟಿಯಾಗಿದೆ.

  ಕೊರೋನಾಗೆ ಕಡಿವಾಣ ಹಾಕಲು ಸಿಎಂ ಕೇಜ್ರಿವಾಲ್ ಇಂದು ರಾತ್ರಿಯಿಂದ ಕರ್ಫ್ಯೂ ಜಾರಿಗೊಳಿಸಿದ್ದಾರೆ. ಆದರೆ ಜನ ಮಾತ್ರ ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿ ಮದ್ಯದಂಗಡಿಗಳ ಮುಂದೆ ಭಾರೀ ಸಂಖ್ಯೆಯಲ್ಲಿ ಸೇರಿರುವುದು ಹೊಸ ತಲೆನೋವಾಗಿದೆ. ಬಾರ್​​ಗಳೇ ಕೊರೋನಾ ಸೂಪರ್ ಸ್ಟ್ರೆಡರ್ ಹಾಟ್​ ಸ್ಪಾಟ್​ಗಳಾಗು ವ ದುಸ್ಥಿತಿ ನಿರ್ಮಾಣವಾಗಿದೆ. ಮಧ್ಯಾಹ್ನದ ವೇಳೆಗೆ ದಾಖಲೆ ಮಟ್ಟದಲ್ಲಿ ಮದ್ಯದ ಬಾಟಲಿಗಳು ಬಿಕರಿಯಾಗಿವೆ.  ಶಿವಪುರಿ ಗೇಟ್ ಬಳಿಯ ಬಾರ್​ವೊಂದ ಎದುರು ಮದ್ಯಕ್ಕಾಗಿ ಸರತಿ ಸಾಲಿನಲ್ಲಿ ನಿಂತಿದ್ದ ಮಹಿಳೆಯೊಬ್ಬರನ್ನು ಮಾಧ್ಯಮದವರ ಮಾತನಾಡಿಸಿದಾಗ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ನನಗೆ ಔಷಧಿ ಬೇಡ, ಮದ್ಯವೇ ಬೇಕು. ಅಲ್ಕೋಹಾಲ್ ಸೇವಿಸೋದರಿಂದ ಕೊರೋನಾ ಬರಲ್ಲ. ಇಂಜೆಕ್ಷನ್​ನಿಂದ ಯಾವುದೇ ಪ್ರಯೋಜನ ಇಲ್ಲ, ಔಷಧಿಯಿಂದ ಉಪಯೋಗ ಇದೆ ಎಂದಿದ್ದಾರೆ. ಹಲವು ವರ್ಷಗಳಿಂದ ಮದ್ಯ ಸೇವಿಸುತ್ತಿದ್ದು ಎಂದೂ ಔಷಧಿಯ ಅಗತ್ಯವೇ ಬೀಳಲಿಲ್ಲ ಎನ್ನುವ ಮೂಲಕ ಹುಬ್ಬೇರಿಸಿದ್ದಾರೆ.  ದೆಹಲಿಯಲ್ಲಿ ಪರಿಸ್ಥಿತಿ ಕೈ ಮೀರಿ ಹೋಗಿದೆ. ಹೀಗಾಗಿ ವಾರಾಂತ್ಯಕ್ಕೆ ಮಾತ್ರ ನಿಗದಿಯಾಗಿದ್ದ ಕರ್ಫ್ಯೂವನ್ನು ಒಂದು ವಾರ ಕಾಲ ವಿಸ್ತರಿಸಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಆದೇಶ ಹೊರಡಿಸಿದ್ದಾರೆ. ಇಂದು ರಾತ್ರಿ 10 ಗಂಟೆಯಿಂದ ಮುಂದಿನ ಸೋಮವಾರ ಬೆಳಗ್ಗೆ 5 ಗಂಟೆವರೆಗೂ ಅಂದರೆ ಒಂದು ವಾರ ಕಾಲ ದೆಹಲಿಯಲ್ಲಿ ಕರ್ಫ್ಯೂ ಜಾರಿಯಲ್ಲಿರುತ್ತದೆ. ಇದೊಂದು ಚಿಕ್ಕ ಲಾಕ್​ಡೌನ್ ಆಗಿದ್ದು ದೆಹಲಿಯನ್ನು ತೊರೆಯಬೇಡಿ ಎಂದು ವಲಸಿಗರಲ್ಲಿ ಸಿಎಂ ಕೇಜ್ರಿವಾಲ್ ಮನವಿ ಮಾಡಿಕೊಂಡಿದ್ದಾರೆ.

  ಇದನ್ನು ಓದಿ: ದೆಹಲಿಯಲ್ಲಿ ಇಂದು ರಾತ್ರಿಯಿಂದಲೇ 6 ದಿನ ಲಾಕ್​ಡೌನ್​ ಜಾರಿ; ಸಿಎಂ ಅರವಿಂದ್ ಕೇಜ್ರಿವಾಲ್ ಘೋಷಣೆ

  ದೆಹಲಿಯಲ್ಲಿ ಭಾನುವಾರ ಒಂದೇ ದಿನ ಒಟ್ಟು 25,462 ಹೊಸ ಕೊರೋನಾ ಪ್ರಕರಣಗಳು ಪತ್ತೆಯಾಗಿದ್ದವು. 161 ಮಂದಿ ಮೃತಪಟ್ಟಿದ್ದರು. ದೆಹಲಿಯಲ್ಲಿ ಪಾಸಿಟಿವಿಟಿ ದರ ಶೇ. 29.74ರಷ್ಟಿದೆ. ಸುಮಾರು 20,259 ಮಂದಿ ಈವರೆಗೆ ಕೊರೋನಾದಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ದೆಹಲಿಯಲ್ಲಿ ಒಟ್ಟು 74,941 ಸಕ್ರಿಯ ಪ್ರಕರಣಗಳಿವೆ. ಈವರೆಗೆ ಒಟ್ಟು 12,121 ಮಂದಿ ಕೊರೋನಾಗೆ ಬಲಿಯಾಗಿದ್ದಾರೆ.

  ದೇಶದಲ್ಲಿ ಕಳೆದ 24 ಗಂಟೆಯಲ್ಲಿ ಸುಮಾರು 2,73,810 ಕೊರೋನಾ ಪ್ರಕರಣಗಳು ಪತ್ತೆಯಾಗಿವೆ. ಜೊತೆಗೆ 1,619 ಮಂದಿ ಸಾವನ್ನಪ್ಪಿದ್ದಾರೆ. ದೇಶದಲ್ಲಿ ಒಟ್ಟು 19,29,329 ಸಕ್ರಿಯ ಕೊರೋನಾ ಪ್ರಕರಣಗಳಿವೆ. ಒಟ್ಟು ಕೊರೋನಾ ಸೋಂಕಿತರ ಸಂಖ್ಯೆ 1,50,61,919ಕ್ಕೆ ಏರಿಕೆಯಾಗಿದೆ. ಈವರೆಗೆ 1,29,53,821 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

  (ವರದಿ: ಕಾವ್ಯಾ ವಿ)
  Published by:Seema R
  First published: