ಈಶಾನ್ಯ ರಾಜ್ಯಗಳಿಗೆ ರಿಲೀಫ್: ಪೌರತ್ವ ತಿದ್ದುಪಡಿ ಮಸೂದೆಯಲ್ಲಿ ಇನ್ನರ್ ಲೈನ್ ಪರ್ಮಿಟ್ ವ್ಯವಸ್ಥೆಗೆ ವಿನಾಯಿತಿ

ಇನ್ನರ್ ಲೈನ್ ಪರ್ಮಿಟ್ ಅಥವಾ ಒಳ ಪ್ರವೇಶದ ಪರವಾನಿಗೆ ಅಂದರೆ ನಿರ್ದಿಷ್ಟ ಪ್ರದೇಶಕ್ಕೆ ಹೋಗಿ ಬರಲು ಕೆಲ ನಿರ್ಬಂಧ ಮತ್ತು ನಿಬಂಧನೆಗಳನ್ನು ವಿಧಿಸಲಾಗಿರುತ್ತದೆ. ಹೊರಗಿನವರು ಈ ಪ್ರದೇಶಗಳಿಗೆ ಹೋಗಿ ಬರಲು ನಿರ್ದಿಷ್ಟ ಕಾಲಾವಧಿಗೆ ಅನುಮತಿ ನೀಡಿ ಕೇಂದ್ರ ಸರ್ಕಾರ ಪ್ರಯಾಣ ದಾಖಲೆ ನೀಡುತ್ತದೆ. ಈ ದಾಖಲೆಯೇ ಇನ್ನರ್ ಲೈನ್ ಪರ್ಮಿಟ್ (ಐಎಲ್​ಪಿ) ಆಗಿದೆ.

Vijayasarthy SN | news18
Updated:December 4, 2019, 4:46 PM IST
ಈಶಾನ್ಯ ರಾಜ್ಯಗಳಿಗೆ ರಿಲೀಫ್: ಪೌರತ್ವ ತಿದ್ದುಪಡಿ ಮಸೂದೆಯಲ್ಲಿ ಇನ್ನರ್ ಲೈನ್ ಪರ್ಮಿಟ್ ವ್ಯವಸ್ಥೆಗೆ ವಿನಾಯಿತಿ
ಪೌರತ್ವ ಮಸೂದೆ ವಿರೋಧಿಸಿ ನಡೆದ ಪ್ರತಿಭಟನೆ
  • News18
  • Last Updated: December 4, 2019, 4:46 PM IST
  • Share this:
ನವದೆಹಲಿ(ಡಿ. 04): ನೂತನ ಪೌರತ್ವ ತಿದ್ದುಪಡಿ ಮಸೂದೆಯಲ್ಲಿ ಈಶಾನ್ಯ ರಾಜ್ಯಗಳ ಇನ್ನರ್​ಲೈನ್ ಪರ್ಮಿಟ್ (ಐಎಲ್​ಪಿ) ವ್ಯಾಪ್ತಿಯ ಪ್ರದೇಶಗಳಿಗೆ ವಿನಾಯಿತಿ ನೀಡಲಾಗಿದೆ. ಇದರೊಂದಿಗೆ, ಪೌರತ್ವ ತಿದ್ದುಪಡಿ ಮಸೂದೆಯನ್ನು ಬಲವಾಗಿ ವಿರೋಧಿಸುತ್ತಾ ಬಂದಿರುವ ಈಶಾನ್ಯ ರಾಜ್ಯಗಳಿಗೆ ಸಮಾಧಾನ ತಂದಿದೆ. ಇಂದು ಕೇಂದ್ರ ಸಂಪುಟದಲ್ಲಿ ಅನುಮೋದನೆ ಸಿಕ್ಕಿರುವ ಈ ನೂತನ ತಿದ್ದುಪಡಿ ಮಸೂದೆಯಲ್ಲಿ ಈಶಾನ್ಯ ರಾಜ್ಯಗಳ ಹಿತಾಸಕ್ತಿಯನ್ನು ಗಮನಿಸಿ ಬದಲಾವಣೆಗಳನ್ನು ತರಲಾಗಿದೆ. ಸಂವಿಧಾನದ ಆರನೇ ಶೆಡ್ಯೂಲ್​ನ ಅಡಿಯಲ್ಲಿ ಬರುವ ಈಶಾನ್ಯ ಪ್ರದೇಶಗಳಿಗೆ ಈ ನೂತನ ತಿದ್ದುಪಡಿ ಮಸೂದೆಯಲ್ಲಿ ರಕ್ಷಣೆ ನೀಡಲಾಗಿದೆ.

ಹಿಂದಿನ ಎನ್​ಡಿಎ-1 ಸರ್ಕಾರದ ಅವಧಿಯಲ್ಲಿ ರೂಪಿಸಲಾಗಿದ್ದ ಪೌರತ್ವ ತಿದ್ದುಪಡಿ ಮಸೂದೆಯಲ್ಲಿ ಕೆಲವಾರು ಬದಲಾವಣೆಗಳನ್ನು ತರಲಾಗಿದೆ. ಈಶಾನ್ಯ ರಾಜ್ಯಗಳ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ಸೆಕ್ಷನ್ 6ಎ ಅನ್ನು ಸೇರಿಸಲಾಗಿದೆ. ಹಿಂದಿನ ತಿದ್ದುಪಡಿ ಮಸೂದೆಯಲ್ಲಿ ಇನ್ನರ್ ಲೈನ್ ಪರ್ಮಿಟ್ ಮತ್ತು ಆರನೇ ಸ್ಕೆಡ್ಯೂಲ್ ಪ್ರದೇಶಗಳಿಗೆ ರಕ್ಷಣೆ ನೀಡಲಾಗಿರಲಿಲ್ಲ. ಈಗ ಅಗತ್ಯ ತಿದ್ದುಪಡಿ ಮಾಡಲಾಗಿದೆ.

ಇದನ್ನೂ ಓದಿ: ಅತ್ಯಾಚಾರಿಗಳಿಗೆ ಕಾಂಡೋಮ್ ನೀಡಿ, ಲೈಂಗಿಕ ಆಸೆಗಳನ್ನು ಪೂರೈಸಿ, ಸಾವಿನಿಂದ ಪಾರಾಗಿ; ನಿರ್ಮಾಪಕನಿಂದ ವಿಕೃತ ಸಲಹೆ

“ಸಂವಿಧಾನದ ಆರನೇ ಸ್ಕೆಡ್ಯೂಲ್​ನಲ್ಲಿ ಒಳಗೊಂಡಿರುವಂತೆ ಅಸ್ಸಾಮ್, ಮೇಘಾಲಯ, ಮಿಝೋರಾಮ್ ಮತ್ತು ತ್ರಿಪುರಾ ರಾಜ್ಯಗಳಿಗೆ ಹಾಗೂ 1873ರ ಬೆಂಗಾಳ್ ಈಸ್ಟರ್ನ್ ಫ್ರಾಂಟಿಯರ್ ರೆಗ್ಯುಲೇಶನ್​ನ ಅಡಿಯಲ್ಲಿ ಸೂಚಿತವಾದ ಇನ್ನರ್ ಲೈನ್ ಪರ್ಮಿಟ್ ವ್ಯಾಪ್ತಿಗೆ ಬರುವ ಪ್ರದೇಶಗಳಿಗೆ ಈ ಸೆಕ್ಷನ್​ನ ಯಾವುದೇ ಅಂಶ ಅನ್ವಯವಾಗುವುದಿಲ್ಲ” ಎಂದು ಈ ನೂತನ ತಿದ್ದುಪಡಿ ಮಸೂದೆಯಲ್ಲಿ ತಿಳಿಸಲಾಗಿದೆ.

ಏನಿದು ಇನ್ನರ್ ಲೈನ್ ಪರ್ಮಿಟ್?

ಕೆಲ ಪ್ರದೇಶಗಳ ಅಮೂಲ್ಯ ಜನಸಂಪತ್ತು, ಸಾಂಸ್ಕೃತಿಕ ವೈಶಿಷ್ಟ್ಯತೆಯನ್ನು ಕಾಪಾಡುವ ಸಲುವಾಗಿ ಕೆಲ ವಿಶೇಷ ವ್ಯವಸ್ಥೆ ರೂಪಿಸಲಾಗಿದೆ. ಅದರಲ್ಲಿ ಇನ್ನರ್ ಲೈನ್ ಪರ್ಮಿಟ್ ವ್ಯವಸ್ಥೆಯೂ ಒಂದು. ಇನ್ನರ್ ಲೈನ್ ಪರ್ಮಿಟ್ ಅಥವಾ ಒಳ ಪ್ರವೇಶದ ಪರವಾನಿಗೆ ಅಂದರೆ ನಿರ್ದಿಷ್ಟ ಪ್ರದೇಶಕ್ಕೆ ಹೋಗಿ ಬರಲು ಕೆಲ ನಿರ್ಬಂಧ ಮತ್ತು ನಿಬಂಧನೆಗಳನ್ನು ವಿಧಿಸಲಾಗಿರುತ್ತದೆ. ಹೊರಗಿನವರು ಈ ಪ್ರದೇಶಗಳಿಗೆ ಹೋಗಿ ಬರಲು ನಿರ್ದಿಷ್ಟ ಕಾಲಾವಧಿಗೆ ಅನುಮತಿ ನೀಡಿ ಕೇಂದ್ರ ಸರ್ಕಾರ ಪ್ರಯಾಣ ದಾಖಲೆ ನೀಡುತ್ತದೆ. ಈ ದಾಖಲೆಯೇ ಇನ್ನರ್ ಲೈನ್ ಪರ್ಮಿಟ್ (ಐಎಲ್​ಪಿ) ಆಗಿದೆ.

ಇದನ್ನೂ ಓದಿ: ಗೂಗಲ್ ಮಾತೃಸಂಸ್ಥೆ ALPHABET ಗೂ ಭಾರತದ ಸುಂದರ್ ಪಿಚ್ಚೈ ಈಗ ಸಿಇಒರಾಜನಾಥ್ ಸಿಂಗ್ ಗೃಹ ಮಂತ್ರಿಯಾಗಿದ್ದ ಅವಧಿಯಲ್ಲಿ ಬಂದ ಪೌರತ್ವ ತಿದ್ದುಪಡಿ ಮಸೂದೆಯಲ್ಲಿ ಈ ಇನ್ನರ್ ಲೈನ್ ಪರ್ಮಿಟ್ ವ್ಯವಸ್ಥೆಯನ್ನು ಕೈಬಿಡಲಾಗಿತ್ತು. ಈಗ ನೂತನ ಗೃಹ ಸಚಿವ ಅಮಿತ್ ಶಾ ಅವರು ಈಶಾನ್ಯ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ನಾಗರಿಕ ಸಮಾಜ ಸಂಘಟನೆಗಳೊಂದಿಗೆ ಸರಣಿ ಮಾತುಕತೆ ನಡೆಸಿದ ಬಳಿಕ ಅಂತಿಮ ಕರಡು ರೂಪುಗೊಂಡಿದೆ.

ಇದೇ ವೇಳೆ, ನೂತನ ಪೌರತ್ವ ತಿದ್ದುಪಡಿ ಮಸೂದೆಯ ಕರಡಿನಲ್ಲಿರುವ ಗಮನಿಸುವ ವಿಚಾರವೆಂದರೆ ಓಸಿಐ ಕಾರ್ಡ್​ಗೆ ಸಂಬಂಧಿಸಿದ್ದು. ಸಾಗರೋತ್ತರ ಭಾರತೀಯ ಪ್ರಜೆ (ಓವರ್​ಸೀಸ್ ಸಿಟಿಜನ್ ಆಫ್ ಇಂಡಿಯಾ – ಓಸಿಐ) ಕಾರ್ಡ್ ಹೊಂದಿರುವವರು ಕಾನೂನು ಉಲ್ಲಂಘಿಸಿರುವುದು ಕಂಡು ಬಂದರೆ ಏಕಾಏಕಿ ಕ್ರಮ ಕೈಗೊಳ್ಳುವುದಿಲ್ಲ. ಅದಕ್ಕೆ ಮುಂಚೆ ಅವರಿಗೆ ತಮ್ಮ ವಾದ ಮಂಡಿಸುವ ಸಾಕಷ್ಟು ಅವಕಾಶ ನೀಡಲಾಗುತ್ತದೆ.

ಈ ನೂತನ ಪೌರತ್ವ ತಿದ್ದುಪಡಿ ಮಸೂದೆಗೆ ಕೇಂದ್ರ ಸಂಪುಟ ಅನುಮೋದನೆ ನೀಡಿದೆ. ಸೋಮವಾರ ಈ ಮಸೂದೆ ಲೋಕಸಭೆಯಲ್ಲಿ ಮಂಡನೆಯಾಗಲಿದೆ.

(ವರದಿ: ಅರುಣಿಮಾ)

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

First published: December 4, 2019, 4:46 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading