Amethi: ಮೊಬೈಲ್​ ಕದ್ದಿರುವ ಆರೋಪ: ಅಪ್ರಾಪ್ತ ಬಾಲಕಿ ಮೇಲೆ ಅಮಾನುಷ ಹಲ್ಲೆ

ಬಾಲಕಿ ಕಾಲಿಗೆ ಕೋಲಿನಿಂದ ಅಮಾನುಷವಾಗಿ ಇಬ್ಬರು ಯುವಕರು ಥಳಿಸಿದ್ದು, ಮನೆ ಮಂದಿಯೆಲ್ಲಾ ಈ ಘಟನೆ ನೋಡುತ್ತಾ ನಿಂತಿರುವ ವಿಡಿಯೋ ವೈರಲ್​ ಆಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಲಕ್ನೋ (ಡಿ. 29): ಮೊಬೈಲ್ ಕದ್ದಿರುವ ಆರೋಪದ ಮೇಲೆ ಮನೆಯ ಸದಸ್ಯರು ಸೇರಿ ದಲಿತ ಅಪ್ರಾಪ್ತ ಬಾಲಕಿಗೆ (Minor Girl) ಮನಸೋ ಇಚ್ಛೆ ಥಳಿಸಿರುವ ಘಟನೆ ಉತ್ತರ ಪ್ರದೇಶದ ಅಮೇಥಿಯಲ್ಲಿ (Amethi) ನಡೆದಿದೆ. ಬಾಲಕಿ ಕಾಲಿಗೆ ಕೋಲಿನಿಂದ ಅಮಾನುಷವಾಗಿ ಇಬ್ಬರು ಯುವಕರು ಥಳಿಸಿದ್ದು, ಮನೆ ಮಂದಿಯೆಲ್ಲಾ ಈ ಘಟನೆ ನೋಡುತ್ತಾ ನಿಂತಿರುವ ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಈ ವಿಡಿಯೋ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಓರ್ವನನ್ನು ಬಂಧಿಸಲಾಗಿದ್ದು, ಉಳಿದ ಆರೋಪಿಗಳಿಗೆ ಶೋಧ ನಡೆಸಲಾಗಿದೆ.

    ಅಮಾನವೀಯವಾಗಿ ಬಾಲಕಿಗೆ ಥಳಿಸಿದ ಮನೆ ಮಂದಿ

    ಅಪ್ರಾಪ್ತ ಬಾಲಕಿಯನ್ನು ನೆಲದ ಮೇಲೆ ಕೂರಿಸಿ ಆಕೆಯ ಕಾಲುಗಳನ್ನು ಎತ್ತಿ ಪಾದಕ್ಕೆ ಕಾಲಿನಿಂದ ಬೀಸಿ ಹೊಡೆಯುತ್ತಿರುವ ದೃಶ್ಯ ಸಾಕಷ್ಟು ಕ್ರೂರತೆ ಹೊಂದಿದೆ. ಈ ವೇಳೆ ಮನೆಯ ಮೂರು ಮಹಿಳೆಯರು ಅಲ್ಲಿಯೇ ಇದ್ದು, ಆಕೆಗೆ ಮೊಬೈಲ್ ಕಳುವಿನ ಕುರಿತು ಪ್ರಶ್ನಿಸುತ್ತಿರುವುದು ಕಂಡು ಬಂದಿದೆ. ಆಕೆ ನೋವಿನಿಂದ ಕಿರುಚಿದರೂ ಬಿಡದೇ ಹೊಡೆಯುತ್ತಿರುವ ವ್ಯಕ್ತಿ ಆಕೆಯ ಜುಟ್ಟು ಹಿಡಿದು ಎಳೆದಾಡಿರುವ ದೃಶ್ಯ ಅಮಾನವೀಯತೆಗೆ ಸಾಕ್ಷಿಯಾಗಿದೆ.

    ಈ ಘಟನೆ ಕುರಿತು ಹೇಳಿಕೆ ನೀಡಿರುವ ಅಮೇಥಿಯ ಸರ್ಕಲ್ ಆಫೀಸರ್ ಅರ್ಪಿತ್ ಕಪೂರ, ಘಟನೆ ಸಂಬಂಧ ಪ್ರಕರಣ ದಾಖಲಿಸಲಾಗಿದ್ದು, ಆರೋಪಿಗಳ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆ ಮತ್ತು ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯಡಿ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ ಎಂದು ಹೇಳಿದ್ದಾರೆ. ಇದುವರೆಗೆ ನಮನ್ ಸೋನಿ ಎಂಬ ಆರೋಪಿಯನ್ನು ಬಂಧಿಸಲಾಗಿದ್ದು, ಇತರೆ ಆರೋಪಿಗಳನ್ನು ಶೀಘ್ರವೇ ಬಂಧಿಸಲಾಗುವುದು ಎಂದು ತಿಳಿಸಿದರು.

    ಅಮೇಥಿಯ ಸಂಸದೆಯಾಗಿರುವ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಅವರು ಈ ಘಟನೆಯ ಬಗ್ಗೆ ಕಿಡಿಕಾರಿದ್ದಾರೆ.

    ಕಾಂಗ್ರೆಸ್​​ ನಾಯಕಿ ಕಿಡಿ

    ಇನ್ನು ಘಟನೆ ಖಂಡಿಸಿರುವ ಕಾಂಗ್ರೆಸ್​ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ, ಯೋಗಿ ಆದಿತ್ಯನಾಥ್ ಸರ್ಕಾರದಲ್ಲಿ ಗನ್ ತರಬೇತಿ ಪಡೆದಿದ್ದಾರೆ. ರಾಜ್ಯದಲ್ಲಿ ಪ್ರತಿದಿನ 34 ಜಾತಿವಾದಿ ಅಪರಾಧಗಳು ಮತ್ತು 135 ಮಹಿಳೆಯರ ವಿರುದ್ಧದ ಅಪರಾಧಗಳು ವರದಿಯಾಗುತ್ತಿದ್ದರೂ ಅದರ ಪೊಲೀಸ್ ಆಡಳಿತವು ನಿದ್ದೆ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ಅಲ್ಲದೇ, 24 ಗಂಟೆಯೊಳಗೆ ಅಪರಾಧಿಗಳನ್ನು ಹಿಡಿಯದಿದ್ದಲ್ಲಿ ಕಾಂಗ್ರೆಸ್‌ ದೊಡ್ಡ ಪ್ರತಿಭಟನೆ ನಡೆಸಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ

    ಇದನ್ನು ಓದಿ: 32 ವರ್ಷಕ್ಕೆ ಹಾರ್ಟ್​ ಅಟ್ಯಾಕ್​; ಭಾರತದ ಮಹಿಳಾ ಯುವ ಉದ್ಯಮಿ ಇನ್ನಿಲ್ಲ

    ಏನಿದು ಘಟನೆ

    ಅಮೇಥಿಯ ರಾಯ್‌ಪುರ ಫುಲ್ವಾರಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮೂಲಗಳ ಪ್ರಕಾರ, ಗ್ರಾಮದ ನಿವಾಸಿ ಸೂರಜ್ ಸೋನಿ ಎಂಬುವರಿಂದ ಎರಡು ಮೊಬೈಲ್ ಫೋನ್ ಗಳನ್ನು ಕಳವು ಮಾಡಲಾಗಿದೆ. ಸಿಸಿಟಿವಿ ದೃಶ್ಯಾವಳಿಯಲ್ಲಿ ಹುಡುಗಿ ಫೋನ್‌ಗಳನ್ನು ಕದಿಯುತ್ತಿದ್ದಳು ಎಂಬುದಾಗಿ ಹೇಳಲಾಗಿದೆ. ಈ ಹಿನ್ನಲೆ ಈ ಕುರಿತು ಪೊಲೀಸರಿಗೆ ತಿಳಿಸುವ ಬದಲು, ಸೋನಿ ಮತ್ತು ಸ್ನೇಹಿತ ಹುಡುಗಿಯನ್ನು ಹಿಡಿದು ಮನೆಯಲ್ಲಿ ಈ ರೀತಿ ಥಳಿಸಿದ್ದಾರೆ.

    ಇದನ್ನು ಓದಿ: ಶೇ 50ರಷ್ಟು ಆಸನ ಭರ್ತಿ; ಮೆಟ್ರೋ, ಬಸ್ ನಿಲ್ದಾಣದ ಮುಂದೆ ಸಾಲುಗಟ್ಟಿದ ದೆಹಲಿ ಮಂದಿ

    ಪೊಲೀಸರು ಬಾಲಕಿಯನ್ನು ಸಂಪರ್ಕಿಸಿದ್ದು ಆಕೆಯ ತಂದೆಯ ದೂರಿನ ಆಧಾರದ ಮೇಲೆ ಆರೋಪಿಗಳಾದ ಸೂರಜ್ ಸೋನಿ, ಶಿವಂ ಮತ್ತು ಸಕಲ್ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆ, ಎಸ್‌ಸಿ ಮತ್ತು ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.

    ಬಾಲಕಿ ಅಮೇಥಿ ಜಿಲ್ಲೆಯ ಸಂಗ್ರಾಮ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮದ ನಿವಾಸಿಯಾಗಿದ್ದು, ರಾಯ್‌ಪುರ ಫುಲ್ವಾರಿ ಪಟ್ಟಣದಲ್ಲಿ ಈ ಘಟನೆ ನಡೆದಿದೆ ಎಂದು ಅಧಿಕಾರಿ ತಿಳಿಸಿದ್ದಾರೆ
    Published by:Seema R
    First published: