• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Narendra Modi: ರಷ್ಯಾ-ಉಕ್ರೇನ್ ಯುದ್ಧ ನಿಲ್ಲಿಸಲು ಮೋದಿಯವರಿಂದ ಮಾತ್ರ ಸಾಧ್ಯ! ಅಮೇರಿಕಾ ಶ್ವೇತಭವನದ ಹೇಳಿಕೆ

Narendra Modi: ರಷ್ಯಾ-ಉಕ್ರೇನ್ ಯುದ್ಧ ನಿಲ್ಲಿಸಲು ಮೋದಿಯವರಿಂದ ಮಾತ್ರ ಸಾಧ್ಯ! ಅಮೇರಿಕಾ ಶ್ವೇತಭವನದ ಹೇಳಿಕೆ

ಮಧ್ಯಸ್ಥಿಕೆ ವಹಿಸ್ತಾರಾ ಮೋದಿ? (ಚಿತ್ರಕೃಪೆ: Internet)

ಮಧ್ಯಸ್ಥಿಕೆ ವಹಿಸ್ತಾರಾ ಮೋದಿ? (ಚಿತ್ರಕೃಪೆ: Internet)

ರಷ್ಯಾ ಹಾಗೂ ಉಕ್ರೇನ್ ನಡುವಿನ ಯುದ್ಧ ತಡೆಯಲು ಭಾರತದತ್ತ (India) ‘ವಿಶ್ವದ ದೊಡ್ಡಣ್ಣ’ನೇ ನೋಡುತ್ತಿದ್ದಾನೆ! “ರಷ್ಯಾ ಉಕ್ರೇನ್ ಯುದ್ಧ ತಡೆಯಲು ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಂದ (PM Narendra Modi) ಸಾಧ್ಯ” ಅಂತ ಅಮೇರಿಕಾದ ಶ್ವೇತಭವನದಲ್ಲಿ (US White House) ಅಭಿಪ್ರಾಯ ವ್ಯಕ್ತವಾಗಿದ್ದಾಗಿ ಸುದ್ದಿ ಮೂಲಗಳು ತಿಳಿಸಿವೆ.

ಮುಂದೆ ಓದಿ ...
  • Share this:

ವಾಷಿಂಗ್ಟನ್, ಅಮೆರಿಕ: ರಷ್ಯಾ ಹಾಗೂ ಉಕ್ರೇನ್ ನಡುವಿನ ಯುದ್ಧ (Russia Ukraine war) ಮುಂದುವರೆದಿದೆ. ಉಕ್ರೇನ್ ಮೇಲೆ ರಷ್ಯಾ ಯಾವೆಲ್ಲಾ ಅಸ್ತ್ರ (weapon) ಪ್ರಯೋಗಿಸಿದರೂ ಉಕ್ರೇನ್ ಮಾತ್ರ ಮಣಿಯುತ್ತಿಲ್ಲ. ಸುಮಾರು ಒಂದು ವರ್ಷದ ಹಿಂದೆ ಪ್ರಾರಂಭವಾದ ರಷ್ಯಾ ಉಕ್ರೇನ್ ಕದನ ಈಗಲೂ ಮುಂದುವರೆದಿದೆ. ಈ ನಡುವೆ ಯುದ್ಧ ನಿಲ್ಲಿಸಲು ಅಮೇರಿಕಾ (America) ಸೇರಿದಂತೆ ಹಲವು ರಾಷ್ಟ್ರಗಳು ಪ್ರಯತ್ನಿಸುತ್ತಲೇ ಇವೆ. ಆದರೆ ಅದು ಯಶಸ್ವಿಯಾಗುತ್ತಿಲ್ಲ. ಇದೀಗ ರಷ್ಯಾ ಹಾಗೂ ಉಕ್ರೇನ್ ನಡುವಿನ ಯುದ್ಧ ತಡೆಯಲು ಭಾರತದತ್ತ (India) ‘ವಿಶ್ವದ ದೊಡ್ಡಣ್ಣ’ನೇ ನೋಡುತ್ತಿದ್ದಾನೆ! “ರಷ್ಯಾ ಉಕ್ರೇನ್ ಯುದ್ಧ ತಡೆಯಲು ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಂದ (PM Narendra Modi) ಸಾಧ್ಯ” ಅಂತ ಅಮೇರಿಕಾದ ಶ್ವೇತಭವನದಲ್ಲಿ (US White House) ಅಭಿಪ್ರಾಯ ವ್ಯಕ್ತವಾಗಿದ್ದಾಗಿ ಸುದ್ದಿ ಮೂಲಗಳು ತಿಳಿಸಿವೆ.   


“ರಷ್ಯಾ- ಉಕ್ರೇನ್ ಯುದ್ಧ ತಡೆಯಲು ಮೋದಿಯವರಿಂದ ಸಾಧ್ಯ”


ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧವನ್ನು ತಡೆಯಲು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಯಾವುದೇ ಪ್ರಯತ್ನಗಳನ್ನು ಅಮೇರಿಕ ಸ್ವಾಗತಿಸುತ್ತದೆ ಎಂದು ಅಮೇರಿಕಾದ ಶ್ವೇತಭವನ ಪುನರುಚ್ಚರಿಸಿದೆ. ಶ್ವೇತಭವನದ ರಾಷ್ಟ್ರೀಯ ಭದ್ರತಾ ಮಂಡಳಿಯ ವಕ್ತಾರ ಜಾನ್ ಕಿರ್ಬಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಯುದ್ಧವನ್ನು ನಿಲ್ಲಿಸಲು ಪುಟಿನ್‌ಗೆ ಇನ್ನೂ ಸಮಯವಿದೆ ಎಂದು ನಾನು ಭಾವಿಸುತ್ತೇನೆ. ಆದರೆ ಈ ಬಗ್ಗೆ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮನವರಿಕೆ ಮಾಡಬಹುದು.


ರಷ್ಯಾ ಅಧ್ಯಕ್ಷ ಪುಟಿನ್ ಜೊತೆ ನರೇಂದ್ರ ಮೋದಿ


“ಮೋದಿ ನಿರ್ಧಾರಕ್ಕೆ ಅಮೇರಿಕಾ ಬೆಂಬಲವಿದೆ”


ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕೈಗೊಳ್ಳಲು ಸಿದ್ಧರಿರುವ ಯಾವುದೇ ಪ್ರಯತ್ನಗಳ ಬಗ್ಗೆ ಮಾತನಾಡಲು ನಾನು ಅವಕಾಶ ನೀಡುತ್ತೇನೆ. ಉಕ್ರೇನ್‌ನಲ್ಲಿ ಯುದ್ಧದ ಅಂತ್ಯಕ್ಕೆ ಕಾರಣವಾಗುವ ಯಾವುದೇ ಪ್ರಯತ್ನವನ್ನು ಅಮೇರಿಕಾ ತುಂಬು ಹೃದಯದಿಂದ ಸ್ವಾಗತಿಸುತ್ತದೆ ಅಂತ ಶ್ವೇತಭವನದ ರಾಷ್ಟ್ರೀಯ ಭದ್ರತಾ ಮಂಡಳಿಯ ವಕ್ತಾರ ಜಾನ್ ಕಿರ್ಬಿ ಹೇಳಿದ್ದಾರೆ.


ಉಕ್ರೇನ್ ಅಧ್ಯಕ್ಷ ವೋಲ್ದಿಮಿರ್ ಝೆಲ್ಯಂಸ್ಕಿ ಜೊತೆ ಮೋದಿ


ಇದನ್ನೂ ಓದಿ: Narendra Modi: ಮಹಾವಿಪತ್ತು ತಪ್ಪಿಸಿದ್ದೇ ನರೇಂದ್ರ ಮೋದಿ! ಪ್ರಧಾನಿ ಬಗ್ಗೆ ಅಮೆರಿಕಾ ಮೆಚ್ಚುಗೆ ಮಾತು!


“ಉಕ್ರೇನ್‌ನ ನಾಶಕ್ಕೆ ವ್ಲಾಡಿಮಿರ್ ಪುಟಿನ್ ಅವರೇ ಕಾರಣ”


ಉಕ್ರೇನ್ ವಿನಾಶಕ್ಕೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೇ ಕಾರಣ ಅಂತ ಜಾನ್ ಕಿರ್ಬಿ ಹೇಳಿದ್ದಾರೆ. ರಷ್ಯಾದ ಭೀಕರ ಹಾಗೂ ನಿರಂತರ ದಾಳಿಯಿಂದಾಗಿ ಉಕ್ರೇನಿಯನ್ ಜನರು ಏನಾಗುತ್ತಿದ್ದಾರೆ ಎಂಬುದಕ್ಕೆ ಜವಾಬ್ದಾರರಾಗಿರುವ ವ್ಯಕ್ತಿ ವ್ಲಾಡಿಮಿರ್ ಪುಟಿನ್. ಅವರು ಇದೀಗ ಆ ಆ ವಿನಾಶಕಾರಿ ಯುದ್ಧವನ್ನು ನಿಲ್ಲಿಸಬಹುದು ಎಂದು ಜಾನ್ ಕಿರ್ಬಿ ಹೇಳಿದ್ದಾರೆ.


 ಅಜಿತ್ ದೋವಲ್ ಭೇಟಿ ಬೆನ್ನಲ್ಲೇ ಅಮೇರಿಕಾ ಹೇಳಿಕೆ


ಕಳೆದ ಎರಡು ದಿನಗಳ ಹಿಂದೆಯಷ್ಟೇ ಅಜಿತ್ ದೋವಲ್ ಅವರು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ದ್ವಿಪಕ್ಷೀಯ ಚರ್ಚೆ ನಡೆಸಿದ್ದರು. ರಷ್ಯಾದ ಮಾಸ್ಕೋದಲ್ಲಿ ಅಜಿತ್ ಅವರು ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಸಭೆ ನಡೆಸಿದ ಬೆನ್ನಲ್ಲೇ ಅಮೇರಿಕ ಈ ಹೇಳಿಕೆ ನೀಡಿದೆ.
ಮಹಾವಿಪತ್ತು ತಪ್ಪಿಸಿದ್ದೇ ನರೇಂದ್ರ ಮೋದಿ ಎಂದಿದ್ದ ಅಮೇರಿಕಾ!


ಈ ಹಿಂದೆ ರಷ್ಯಾ-ಉಕ್ರೇನ್ ಯುದ್ಧದ ಕುರಿತಂತೆ ಭಾರತದ ಪ್ರಧಾನಿ ನರೇಂದ್ರ ಮೋದಿ ರಷ್ಯಾಗೆ ತಿಳಿ ಹೇಳಿದ್ದರು. ಯುದ್ಧ ಮುಂದುವರೆಸುವುದು ಸರಿಯಲ್ಲ ಅಂತ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಮೋದಿ ಹೇಳಿದ್ದರು. ನರೇಂದ್ರ ಮೋದಿಯವರ ಈ ಮಾತಿಗೆ ಅಮೆರಿಕಾ (America) ಬೆಂಬಲ ಸೂಚಿಸಿತ್ತು. ಭಾರತದ ಪ್ರಧಾನಿ ನರೇಂದ್ರ ಮೋದಿಯವರ ವಿದೇಶಾಂಗ ನೀತಿ ಬಗ್ಗೆ ಮೆಚ್ಚುಗೆ ಸೂಚಿಸಿರುವ ಅಮೆರಿಕಾ ಗುಪ್ತಚರ ಇಲಾಖೆ, “ಭಾರತದ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಮಾತಿನಿಂದ ಜಗತ್ತಿನ ದೊಡ್ಡ ವಿಪತ್ತನ್ನು ತಪ್ಪಿಸಿದ್ದಾರೆ” ಅಂತ ಶ್ಲಾಘಿಸಿತ್ತು.

Published by:Annappa Achari
First published: