America v/s China: ಚೀನಾಕ್ಕೆ "ಹುಷಾರ್" ಎಂದಿದ್ದೇಕೆ ಅಮೆರಿಕಾ? 'ಡ್ರ್ಯಾಗನ್ ರಾಷ್ಟ್ರ'ದ ವಿರುದ್ಧ ತಿರುಗಿ ಬೀಳ್ತಾನಾ 'ದೊಡ್ಡಣ್ಣ'?

ಚೀನಾ ಪರೋಕ್ಷವಾಗಿ ರಷ್ಯಾಗೆ ಸಹಾಯ ಮಾಡುತ್ತಿದೆ. ಇದೀಗ ಡ್ರ್ಯಾಗನ್ ರಾಷ್ಟ್ರ ಚೀನಾ ವಿರುದ್ಧ ದೊಡ್ಡಣ್ಣ ಅಮೆರಿಕಾ ಕೆಂಗಣ್ಣು ಬೀರಿದೆ. ಉಕ್ರೇನ್ ಹಾಗೂ ರಷ್ಯಾ ನಡುವಿನ ಯುದ್ಧದಲ್ಲಿ ಚೀನಾ ರಷ್ಯಾಕ್ಕೆ ಯಾವುದೇ ರೀತಿಯ ಸಹಾಯ ಮಾಡಬಾರದು ಅಂತ ಅಮೆರಿಕ ಎಚ್ಚರಿಕೆ ನೀಡಿದೆ.

ಅಮೆರಿಕಾ, ಚೀನಾ ಅಧ್ಯಕ್ಷರು

ಅಮೆರಿಕಾ, ಚೀನಾ ಅಧ್ಯಕ್ಷರು

  • Share this:
ರಷ್ಯಾ (Russia) ಹಾಗೂ ಉಕ್ರೇನ್ (Ukraine) ನಡುವಿನ ಯುದ್ಧ (War) ಮುಂದುವರೆದಿದೆ. ಉಕ್ರೇನ್‌ ಅನ್ನು ಬಗ್ಗು ಬಡಿಯಲೇ ಬೇಕು ಅಂತ ನಿರ್ಧರಿಸಿರುವ ರಷ್ಯಾ, ಆಧುನಿಕ ಶಸ್ತ್ರಾಸ್ತ್ರಗಳನ್ನು ಪ್ರಯೋಗಿಸುತ್ತಿದೆ. ಸದ್ಯ ರಷ್ಯಾ-ಉಕ್ರೇನ್ ನಡುವಿನ ಭೀಕರ ಯುದ್ಧವು (Russia Ukraine War) ಜಾಗತಿಕ ವಲಯದಲ್ಲಿ ಸಂಚಲನವನ್ನೇ ಮೂಡಿಸಿದೆ. ರಷ್ಯಾದ ದಾಳಿ (Attack) ತೀವ್ರವಾಗುತ್ತಲೇ ಇದೆಮತ್ತೊಂದೆಡೆ ಚೀನಾ (China) ಪರೋಕ್ಷವಾಗಿ ರಷ್ಯಾಗೆ ಸಹಾಯ ಮಾಡುತ್ತಿದೆ. ಇದೀಗ ಡ್ರ್ಯಾಗನ್ (Dragan) ರಾಷ್ಟ್ರ ಚೀನಾ ವಿರುದ್ಧ ದೊಡ್ಡಣ್ಣ ಅಮೆರಿಕಾ (America) ಕೆಂಗಣ್ಣು ಬೀರಿದೆ. ಉಕ್ರೇನ್ ಹಾಗೂ ರಷ್ಯಾ ನಡುವಿನ ಯುದ್ಧದಲ್ಲಿ ಚೀನಾ ರಷ್ಯಾಕ್ಕೆ ಯಾವುದೇ ರೀತಿಯ ಸಹಾಯ ಮಾಡಬಾರದು ಅಂತ ಅಮೆರಿಕ ಎಚ್ಚರಿಕೆ ನೀಡಿದೆ.

ಯುಎಸ್ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್ ಸುಲ್ಲಿವಾನ್ ರೋಮ್‌ನಲ್ಲಿ ಚೀನಾದ ಉನ್ನತ ರಾಜತಾಂತ್ರಿಕ ಯಾಂಗ್ ಜೀಚಿ ಅವರೊಂದಿಗೆ ಏಳು ಗಂಟೆಗಳ ಸಂಭಾಷಣೆಯಲ್ಲಿ ರಷ್ಯಾದೊಂದಿಗೆ ಚೀನಾದ ಹೊಂದಾಣಿಕೆಯ ಬಗ್ಗೆ ಕಳವಳವನ್ನು ವ್ಯಕ್ತಪಡಿಸಿದರು.

7 ಗಂಟೆಗಳ ಸಭೆಯಲ್ಲಿ ಮಹತ್ವದ ಚರ್ಚೆ

ಅಮೆರಿಕನ್ ಅಧಿಕಾರಿಗಳು ಇತರ ವಿಷಯಗಳ ಜೊತೆಗೆ ಏಳು ಗಂಟೆಗಳ ಸುದೀರ್ಘ ಸಭೆಯಲ್ಲಿ, US ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್ ಸುಲ್ಲಿವಾನ್ ಎಚ್ಚರಿಕೆ ನೀಡಿದ್ದಾರೆ. ವಾಷಿಂಗ್ಟನ್‌ನ "ರಷ್ಯಾದೊಂದಿಗಿನ ಚೀನಾದ ಹೊಂದಾಣಿಕೆಯ ಬಗ್ಗೆ ನಮಗೆ ಕಳವಳ ಇದೆ" ಅಂತ ಚೀನಾದ ಉನ್ನತ ಅಧಿಕಾರಿ ಯಾಂಗ್‌ಗೆ ತಿಳಿಸಿದರು. ಬೀಜಿಂಗ್ ಮಾಸ್ಕೋಗೆ ಬೆಂಬಲವನ್ನು ನೀಡಿದರೆ, ಚೀನಾದ ಮೇಲೆ "ಮಹತ್ವದ ಪರಿಣಾಮಗಳು" ಉಂಟಾಗುತ್ತವೆ ಎಂದು ಜೀಚಿ ಅವರಿಗೆ ಎಚ್ಚರಿಕೆ ನೀಡಿದರು.

ಮಿಲಿಟರಿ ಸಹಾಯ ಮಾಡುತ್ತಾ ಚೀನಾ?

ಸೋಮವಾರ ರೋಮ್‌ನಲ್ಲಿ ನಡೆದ ಈ ಸಭೆಯು ಫೈನಾನ್ಷಿಯಲ್ ಟೈಮ್ಸ್‌ನ ವರದಿಗಳ ನಂತರ, ರಷ್ಯಾ ಕೇಳಿರುವ ನಿರ್ದಿಷ್ಟ ಮಿಲಿಟರಿ ಬೆಂಬಲವನ್ನು ನೀಡಲು ಚೀನಾ ಇಚ್ಛೆಯನ್ನು ತೋರಿಸಿದೆ ಎಂದು ಯುಎಸ್ ಆರೋಪಿಸಿದೆ. ಆದರೆ ಯುಎಸ್ ಅಧಿಕಾರಿಗಳು ಅಧಿಕೃತವಾಗಿ ವರದಿಗಳ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ. ಚೀನಾದೊಂದಿಗೆ "ಖಾಸಗಿ ಮತ್ತು ನೇರವಾಗಿ" ತೊಡಗಿಸಿಕೊಳ್ಳುತ್ತಾರೆ ಎಂದು ಸಮರ್ಥಿಸಿಕೊಂಡಿದ್ದಾರೆ.

ಇದನ್ನೂ ಓದಿ: Russiaದಿಂದ ಭಾರತಕ್ಕೆ ಭರ್ಜರಿ ಆಫರ್: ದೇಶದಲ್ಲಿ ಅಗ್ಗವಾಗಲಿದೆಯಾ ಪೆಟ್ರೋಲ್, ಡಿಸೇಲ್?

ಎಲ್ಲವನ್ನೂ ಗಮನಿಸುತ್ತಿದೆ ಅಮೆರಿಕಾ

ಅಮೆರಿಕದ ಶ್ವೇತಭವನವು ರಷ್ಯಾದ ಉಕ್ರೇನ್ ಆಕ್ರಮಣದ ಚರ್ಚೆಗಳನ್ನು ಕ್ಷಣ ಕ್ಷಣಕ್ಕೂ ಗಮನಿಸುತ್ತಲೇ ಇದೆ. "ಗಣನೀಯ" ಎಂದು ವಿವರಿಸಿದೆ, ಎರಡೂ ಕಡೆಯವರು ಸಂವಹನದ ಮುಕ್ತ ಮಾರ್ಗಗಳನ್ನು ನಿರ್ವಹಿಸಲು ಒಪ್ಪುತ್ತಾರೆ.

ಚೀನಾಗೆ ಅಮೆರಿಕಾ ಖಡಕ್ ಎಚ್ಚರಿಕೆ

"ಈ ಸಭೆಯಲ್ಲಿ ನಾವು ಏನು ತಿಳಿಸಿದ್ದೇವೆ ಮತ್ತು ನಮ್ಮ ರಾಷ್ಟ್ರೀಯ ಭದ್ರತಾ ಸಲಹೆಗಾರರಿಂದ ತಿಳಿಸಲಾಗಿದೆ ಎಂದರೆ ಚೀನಾ ಸರ್ಕಾರವು ರಷ್ಯಾಗೆ ಮಿಲಿಟರಿ ಅಥವಾ ಇತರ ಸಹಾಯವನ್ನು ಒದಗಿಸಿದರೆ, ನಿರ್ಬಂಧಗಳನ್ನು ಉಲ್ಲಂಘಿಸಿದರೆ ಅಥವಾ ಯುದ್ಧದ ಪ್ರಯತ್ನವನ್ನು ಬೆಂಬಲಿಸಿದರೆ, ಗಮನಾರ್ಹ ಪರಿಣಾಮಗಳು ಉಂಟಾಗುತ್ತವೆ" ಶ್ವೇತಭವನದ ವಕ್ತಾರ ಜೆನ್ ಪ್ಸಾಕಿ, ಆ ಪರಿಣಾಮಗಳು ಯಾವ ಸ್ವರೂಪವನ್ನು ತೆಗೆದುಕೊಳ್ಳಬಹುದು ಎಂಬುದನ್ನು ವಿವರಿಸಲು ನಿರಾಕರಿಸಿದರು.

ಸಭೆಯಲ್ಲಿ ಕಳವಳ ವ್ಯಕ್ತಪಡಿಸಿದ ಅಮೆರಿಕಾ

ಯುನೈಟೆಡ್ ಸ್ಟೇಟ್ ಡಿಪಾರ್ಟ್ಮೆಂಟ್ ವಕ್ತಾರ ನೆಡ್ ಪ್ರೈಸ್ ಹೆಚ್ಚು ನೇರವಾಗಿದ್ದರು ಮತ್ತು ಆಕ್ರಮಣದ ಹಿನ್ನೆಲೆಯಲ್ಲಿ ರಷ್ಯಾಕ್ಕೆ ಚೀನಾದ ಬೆಂಬಲದ ಬಗ್ಗೆ ಕಳವಳ ವ್ಯಕ್ತಪಡಿಸಿದು. ಸಭೆಯಲ್ಲಿ ಅಮೆರಿಕಾ ತನ್ನ ಕಳವಳವನ್ನು ನೇರವಾಗಿ ಮತ್ತು ಸ್ಪಷ್ಟವಾಗಿ" ವ್ಯಕ್ತಪಡಿಸಿದೆ ಮತ್ತು ಚೀನಾದ ಸಂಬಂಧಕ್ಕೆ ಮಾತ್ರವಲ್ಲದೆ ಅಂತಹ ಯಾವುದೇ ಬೆಂಬಲದ ಪರಿಣಾಮಗಳ ಬಗ್ಗೆ ಎಚ್ಚರಿಕೆ ನೀಡಿದೆ.

ಇದನ್ನೂ ಓದಿ: Offer to India: ಅಮೆರಿಕಾ ಬೇಡ ಅಂದ್ಬಿಟ್ಟಿದೆ, ನೀವೇ ಜಾಸ್ತಿ ತಗೊಳ್ಳಿ.. ಭಾರತಕ್ಕೆ Russia ಆಫರ್!

ಅಮೆರಿಕಾ ಎಲ್ಲವನ್ನೂ ಗಮನಿಸುತ್ತಿದೆ

ಚೀನಾ  ಅಥವಾ ಯಾವುದೇ ಇತರ ದೇಶವು ರಷ್ಯಾಕ್ಕೆ ಯಾವುದೇ ರೀತಿಯ ಬೆಂಬಲವನ್ನು ಒದಗಿಸುತ್ತದೆ, ಅದು ವಸ್ತು ಬೆಂಬಲವಾಗಿದ್ದರೂ ಸಹ, ನಾವು ತುಂಬಾ ಹತ್ತಿರದಿಂದ ನೋಡುತ್ತಿದ್ದೇವೆ. ಅದು ಆರ್ಥಿಕ ಬೆಂಬಲವಾಗಲಿ, ಅದು ಆರ್ಥಿಕ ಬೆಂಬಲವಾಗಲಿ ಪ್ರಪಂಚದ ಎಲ್ಲಿಂದಲಾದರೂ ಅಂತಹ ಯಾವುದೇ ಬೆಂಬಲವು ನಮಗೆ ಹೆಚ್ಚಿನ ಕಾಳಜಿಯನ್ನು ನೀಡುತ್ತದೆ ಅಂತ ಅಮೆರಿಕಾ ವಕ್ತಾರರು ತಿಳಿಸಿದ್ದಾರೆ.
Published by:Annappa Achari
First published: