• Home
  • »
  • News
  • »
  • national-international
  • »
  • PM Modi: ಭಾರತದೊಂದಿಗೆ ಮೈತ್ರಿಗೆ ಮುಂದಾದ ಅಮೆರಿಕಾ! ರಷ್ಯಾ ಜೊತೆಗಿನ ಒಪ್ಪಂದ ಕಾರಣವೇ?

PM Modi: ಭಾರತದೊಂದಿಗೆ ಮೈತ್ರಿಗೆ ಮುಂದಾದ ಅಮೆರಿಕಾ! ರಷ್ಯಾ ಜೊತೆಗಿನ ಒಪ್ಪಂದ ಕಾರಣವೇ?

ಪ್ರಧಾನಿ ನರೇಂದ್ರ ಮೋದಿ

ಪ್ರಧಾನಿ ನರೇಂದ್ರ ಮೋದಿ

ದುರುದ್ದೇಶಪೂರಿತ ನಾಯಕರು ತಮ್ಮ ಸ್ಥಾನಗಳನ್ನು ಹೇಗೆ ದುರುಪಯೋಗಪಡಿಸಿಕೊಳ್ಳಬಹುದು ಎಂಬುದಕ್ಕೆ ಮಾಸ್ಕೋ ಉದಾಹರಣೆಯಾಗಿದೆ ಎಂದು ಯೆಲೆನ್ ರಷ್ಯಾಕ್ಕೆ ಚಾಟಿಯೇಟು ನೀಡಿದ್ದಾರೆ.

  • News18 Kannada
  • Last Updated :
  • New Delhi, India
  • Share this:

ಇತ್ತೀಚಿನ ಮಾಸ್ಕೋ ಭೇಟಿಯ ಸಂದರ್ಭದಲ್ಲಿ ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ (S Jaishankar) ಭಾರತದ 'ಅಸಾಧಾರಣವಾದ ಸ್ಥಿರ ಮತ್ತು ಸಮಯ-ಪರೀಕ್ಷಿತ ಪಾಲುದಾರ' ಎಂದು ರಷ್ಯಾವನ್ನು ಶ್ಲಾಘಿಸಿದ ನಂತರ, ಯುಎಸ್ ಖಜಾನೆ ಕಾರ್ಯದರ್ಶಿ ಜಾನೆಟ್ ಯೆಲೆನ್ (US Secretary of Treasury Janet Yellen)  ಪ್ರಸ್ತುತ ಭೌಗೋಳಿಕ ರಾಜಕೀಯ ಸನ್ನಿವೇಶದ ಯುಎಸ್ – ಭಾರತ - ಬಾಂಧವ್ಯದ ಮಹತ್ವಕ್ಕೆ ಪ್ರಾಮುಖ್ಯತೆ ನೀಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ (PM Narendra Modi) ಹಾಗೂ ಭಾರತವನ್ನು (India) ಶ್ಲಾಘಿಸಿದರು.


ಯುಎಸ್ ಭಾರತ ಮೈತ್ರಿ
ಅಮೆರಿಕಾ ಹಾಗೂ ಭಾರತದ ಆರ್ಥಿಕ ಹಣಕಾಸು ಪಾಲುದಾರಿಕೆಯಲ್ಲಿ ಭಾಗವಹಿಸಲು ಯೆಲೆನ್ ಭಾರತಕ್ಕೆ ಒಂದು ದಿನದ ಪ್ರವಾಸದಲ್ಲಿದ್ದಾರೆ. ಜಾಗತಿಕ ಆರ್ಥಿಕತೆಯ ಪಥವನ್ನು ಭಾರತ ಮತ್ತು ಯುಎಸ್ ಒಟ್ಟಾಗಿ ಕೈಗೊಳ್ಳುವ ಕೆಲಸದಿಂದ ರೂಪಿಸಲಾಗುವುದು ಎಂದು ತಿಳಿಸಿರುವ ಅವರು, ಇಂಡೋ-ಪೆಸಿಫಿಕ್ ಸಮೃದ್ಧಿ ಹಾಗೂ ಭದ್ರತೆಗೆ ಇದು ಅಗತ್ಯವಾದುದು ಎಂದು ತಿಳಿಸಿದ್ದಾರೆ. ವಿಶ್ವದ ಅತಿದೊಡ್ಡ ಆರ್ಥಿಕತೆಯಾಗಿ, ವಿಶ್ವದ ಅತ್ಯಂತ ಪರಿಹರಿಸಲಾಗದ ಸಮಸ್ಯೆಗಳ ಮೇಲೆ ಪ್ರಗತಿ ಸಾಧಿಸಲು ನಮಗೆ ಉತ್ತಮ ಅವಕಾಶ ಮತ್ತು ಮಹತ್ತರವಾದ ಜವಾಬ್ದಾರಿ ಇದೆ ಎಂದು ಯೆಲೆನ್ ನವದೆಹಲಿ-ವಾಷಿಂಗ್ಟನ್ ಬಾಂಧವ್ಯದ ಕುರಿತು ತಿಳಿಸಿದ್ದಾರೆ.


ಮುಂದುವರಿದ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳು ನೀತಿ ವ್ಯತ್ಯಾಸಗಳನ್ನು ಹೇಗೆ ನಿರ್ಮಿಸಿಕೊಳ್ಳಬಹುದು ಮತ್ತು ಪ್ರಮುಖ ನೀತಿ ಉದ್ದೇಶಗಳ ಮೇಲೆ ಹೇಗೆ ಮುಂದುವರಿಯಬಹುದು ಎಂಬುದಕ್ಕೆ ನಮ್ಮ ಮುಂದುವರಿದ ಪಾಲುದಾರಿಕೆ ಒಂದು ಉದಾಹರಣೆಯಾಗಿದೆ ಎಂದು  ಭಾವಿಸುವುದಾಗಿ ಎಂದು ಯುಎಸ್ ಖಜಾನೆ ಕಾರ್ಯದರ್ಶಿ ತಿಳಿಸಿದ್ದಾರೆ.


ರಷ್ಯಾದ ಉದಾಹರಣೆ
ದುರುದ್ದೇಶಪೂರಿತ ನಾಯಕರು ತಮ್ಮ ಸ್ಥಾನಗಳನ್ನು ಹೇಗೆ ದುರುಪಯೋಗಪಡಿಸಿಕೊಳ್ಳಬಹುದು ಎಂಬುದಕ್ಕೆ ಮಾಸ್ಕೋ ಉದಾಹರಣೆಯಾಗಿದೆ ಎಂದು ಯೆಲೆನ್ ರಷ್ಯಾಕ್ಕೆ ಚಾಟಿಯೇಟು ನೀಡಿದ್ದಾರೆ. ಇದೇ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಭಾರತವನ್ನು ಶ್ಲಾಘಿಸಿದ್ದಾರೆ. ದುರುದ್ದೇಶವನ್ನು ಹೊಂದಿರುವ ನಾಯಕರು ತಮ್ಮ ಮಾರುಕಟ್ಟೆ ಸ್ಥಾನಗಳನ್ನು ಭೌಗೋಳಿಕ ರಾಜಕೀಯ ಹತೋಟಿ ಪಡೆಯಲು ಅಥವಾ ತಮ್ಮ ಸ್ವಂತ ಲಾಭಕ್ಕಾಗಿ ವ್ಯಾಪಾರವನ್ನು ಅಡ್ಡಿಪಡಿಸಲು ದಾಳವಾಗಿ ಹೇಗೆ ಬಳಸಿಕೊಳ್ಳುತ್ತಾರೆ ಎಂಬುದಕ್ಕೆ ರಷ್ಯಾ ಉದಾಹರಣೆಯಾಗಿದೆ ಎಂದು ಅವರು ತಿಳಿಸಿದ್ದಾರೆ.


ಇದನ್ನೂ ಓದಿ: Queen Cleopatra: ಈಜಿಪ್ಟಿನ ದೇವಾಲಯದ ಕೆಳಗೆ ಸುರಂಗ ಪತ್ತೆ, ಕ್ಲಿಯೋಪಾತ್ರಳ ಸಮಾಧಿಯ ಮಹತ್ವದ ಸುಳಿವು!


ಪ್ರಧಾನಿ ನರೇಂದ್ರ ಮೋದಿಯವರ ಇದು ಯುದ್ಧದ ಯುಗವಲ್ಲ ಎಂಬ ಮಾತನ್ನು ಪುನರುಚ್ಛರಿಸಿದ ಯುಎಸ್ ಖಜಾನೆ ಕಾರ್ಯದರ್ಶಿ ಮೋದಿಯವರು ಹೇಳಿದ ಮಾತು ಸರಿಯಾಗಿದೆ. ಕಷ್ಟಕರ ಸಮಯಗಳು ನಮ್ಮನ್ನು ಪರೀಕ್ಷಿಸುತ್ತವೆ ಆದರೆ ಸವಾಲು ಭಾರತ ಮತ್ತು ಯುಎಸ್ ಅನ್ನು ಹಿಂದೆಂದಿಗಿಂತಲೂ ಹತ್ತಿರ ತರುತ್ತಿವೆ ಎಂದು ನಾನು ನಂಬುತ್ತೇನೆ ಎಂಬುದಾಗಿ ಅವರು ತಿಳಿಸಿದ್ದಾರೆ.


ಭಾರತದ ಪಾಲುದಾರನಾಗಲು ಯುಎಸ್ ವಿಫಲನಾಗಿದೆ
ಅಮೇರಿಕಾದ ಸ್ಟೇಟ್ ಡಿಪಾರ್ಟ್ಮೆಂಟ್ ವಕ್ತಾರ ನೆಡ್ ಪ್ರೈಸ್ ಇತ್ತೀಚೆಗೆ ಅಮೆರಿಕಾ ಸಂಯುಕ್ತ ಸಂಸ್ಥಾನವು ಭಾರತದ ಪಾಲುದಾರನಾಗಲು ವಿಫಲವಾಗಿದೆ ಎಂಬ ಸಂಗತಿಯನ್ನು ಅಂಗೀಕರಿಸಿದ್ದಾರೆ. ಶೀತಲ ಸಮರದ ಸಮಯದಲ್ಲಿ ಯುನೈಟೆಡ್ ಸ್ಟೇಟ್ಸ್ ಭಾರತಕ್ಕೆ ಆರ್ಥಿಕ ಪಾಲುದಾರ, ಭದ್ರತಾ ಪಾಲುದಾರ, ಮಿಲಿಟರಿ ಪಾಲುದಾರನಾಗುವ ಸ್ಥಿತಿಯಲ್ಲಿಲ್ಲದ ಸಮಯದಲ್ಲಿ ಯುಎಸ್ ಭಾರತದ ಪಾಲುದಾರನಾಗಲು ವಿಫಲವಾಗಿದೆ ಎಂದು ತಿಳಿಸಿದ್ದಾರೆ.


ರಷ್ಯಾ ಜೊತೆ ಲಾಭದಾಯಕ ಬಾಂಧವ್ಯಕ್ಕೆ ಭಾರತದ ಹೆಜ್ಜೆ
ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು ರಷ್ಯಾದ ವಿದೇಶಾಂಗ ವ್ಯವಹಾರಗಳ ಸಚಿವ ಸೆರ್ಗೆಯ್ ಲಾವ್ರೊವ್ ಅವರನ್ನು ಭೇಟಿಯಾದ ನಂತರ ಭಾರತವು ರಷ್ಯಾದ ಕಚ್ಚಾ ತೈಲವನ್ನು ಖರೀದಿಸುವುದನ್ನು ಮುಂದುವರೆಸುತ್ತದೆ ಎಂದು ತಿಳಿಸಿದ್ದಾರೆ. ಏಕೆಂದರೆ ವಿಶ್ವಾದ್ಯಂತ ಇಂಧನ ಮಾರುಕಟ್ಟೆಗಳು ಒತ್ತಡಕ್ಕೊಳಗಾದಾಗ ಅತ್ಯಂತ ಅನುಕೂಲಕರವಾದ ಅವಧಿಗಳಲ್ಲಿ ಭಾರತದ ನಂಬಿಕೆಯನ್ನು ಗಳಿಸಲು ರಷ್ಯಾ ಕಾರ್ಯನಿರ್ವಹಿಸಿದೆ ಎಂದು ಜೈಶಂಕರ್ ತಿಳಿಸಿದ್ದಾರೆ.


ಇದನ್ನೂ ಓದಿ: Air India: ಬಿಳಿ ಕೂದಲಿರೋ ಪುರುಷರು ಫುಲ್ ಬಾಲ್ಡ್ ಮಾಡ್ಕೊಳ್ಳಿ, ಮಹಿಳೆಯರು ಬಳೆ ಕಡಿಮೆ ಹಾಕಿ! ಏರ್ ಇಂಡಿಯಾ ಸಿಬ್ಬಂದಿಗೆ ಹೊಸ ರೂಲ್ಸ್


ರಷ್ಯಾವು ಭಾರತದ ಸ್ಥಿರ ಹಾಗೂ ಸಮಯ-ಪರೀಕ್ಷಿತ ಪಾಲುದಾರನಾಗಿದೆ. ಯಾವುದೇ ವಸ್ತುನಿಷ್ಠ ಮೌಲ್ಯಮಾಪನವು ನಮ್ಮ ಎರಡೂ ದೇಶಗಳಿಗೆ ಉತ್ತಮವಾಗಿ ಸೇವೆ ಸಲ್ಲಿಸಿದೆ ಎಂಬುದನ್ನು ಖಾತ್ರಿಪಡಿಸಿದೆ. ಎರಡೂ ದೇಶಗಳು ಸ್ಪಷ್ಟ ಆಸಕ್ತಿ ಹಾಗೂ ಬದ್ಧತೆಯನ್ನು ಹೊಂದಿದ್ದು ಆ ಸಂಬಂಧವನ್ನು ಸ್ಥಿರವಾಗಿ ಇರಿಸಲು ನಾನು ಬಯಸಿದ್ದೇನೆ ಎಂದು ಜೈಶಂಕರ್ ಮಾಸ್ಕೋಗೆ ಎರಡು ದಿನಗಳ ಭೇಟಿಯ ಸಂದರ್ಭದಲ್ಲಿ ತಿಳಿಸಿದ್ದಾರೆ.

Published by:ಗುರುಗಣೇಶ ಡಬ್ಗುಳಿ
First published: