news18-kannada Updated:July 4, 2020, 2:42 PM IST
ಡೊನಾಲ್ಡ್ ಟ್ರಂಪ್ನ ಮಗ ಮತ್ತು ಆತನ ಪ್ರೇಯಸಿ
ನವದೆಹಲಿ (ಜು. 4): ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಿರಿಯ ಮಗನ ಗರ್ಲ್ಫ್ರೆಂಡ್ ಕಿಂಬೆರ್ಲಿ ಗಿಲ್ಫೋಯ್ಲೆಗೂ ಕೊರೋನಾ ಸೋಂಕು ತಗುಲಿದೆ. ತಕ್ಷಣ ಅವರನ್ನು ಕ್ವಾರಂಟೈನ್ನಲ್ಲಿಡಲಾಗಿದೆ. ಅವರಿಗೆ ಕೊರೋನಾ ಪಾಸಿಟಿವ್ ದೃಢಪಟ್ಟ ಕೂಡಲೆ ಮತ್ತೊಮ್ಮೆ ಟೆಸ್ಟ್ ಮಾಡಿ ಖಚಿತಪಡಿಸಿಕೊಳ್ಳಲಾಗಿದೆ.
ಡೊನಾಲ್ಡ್ ಟ್ರಂಪ್ ಅವರ ಹಿರಿಯ ಮಗನ ಜೊತೆ ಡೇಟಿಂಗ್ ಮಾಡುತ್ತಿರುವ ಕಿಂಬೆರ್ಲಿ ಗಿಲ್ಫೋಯ್ಲೆಗೆ ಕೊರೋನಾದ ಯಾವುದೇ ಲಕ್ಷಣಗಳೂ ಕಾಣಿಸಿಕೊಂಡಿರಲಿಲ್ಲ. ಹೀಗಾಗಿ, ಆಕೆ ಪರೀಕ್ಷೆ ಮಾಡಿಸಿಕೊಂಡಿರಲಿಲ್ಲ. ಆಕೆಯ ಜೊತೆಯಲ್ಲಿದ್ದ ಡೊನಾಲ್ಡ್ ಟ್ರಂಪ್ ಅವರ ಮಗನಿಗೂ ವೈದ್ಯಕೀಯ ತಪಾಸಣೆ ಮಾಡಲಾಗಿದ್ದು, ಅವರಿಗೆ ಕೊರೋನಾ ನೆಗೆಟಿವ್ ಬಂದಿದೆ. ಆದರೂ ಮುನ್ನೆಚ್ಚರಿಕಾ ಕ್ರಮವಾಗಿ ಅವರು ಕೂಡ ಮನೆಯಲ್ಲೇ ಕ್ವಾರಂಟೈನ್ ಆಗಿದ್ದಾರೆ.
ಇದನ್ನೂ ಓದಿ: Vande Bharat Mission: ವಂದೇ ಭಾರತ್ ಮಿಷನ್ನಡಿ 137 ದೇಶಗಳಿಂದ 5.3 ಲಕ್ಷ ಭಾರತೀಯರು ವಾಪಾಸ್!
ಕೆಲವು ದಿನಗಳ ಹಿಂದೆ ಡೊನಾಲ್ಡ್ ಟ್ರಂಪ್ ಪಾಲ್ಗೊಂಡಿದ್ದ ಕಾರ್ಯಕ್ರಮವನ್ನು ವೀಕ್ಷಿಸಲು ಟ್ರಂಪ್ನ ಮಗ ಮತ್ತು ಆತನ ಗರ್ಲ್ಫ್ರೆಂಡ್ ಕಿಂಬೆರ್ಲಿ ದಕ್ಷಿಣ ಡಾಕೋತ್ಗೆ ತೆರಳಿದ್ದರು. ಇದೀಗ ಮುನ್ನೆಚ್ಚರಿಕಾ ಕ್ರಮವಾಗಿ ಕಿಂಬೆರ್ಲಿ ಎಲ್ಲೂ ಸಾರ್ವಜನಿಕವಾಗಿ ಕಾಣಿಸಿಕೊಳ್ಳದಂತೆ ಸೂಚಿಸಲಾಗಿದೆ.
Published by:
Sushma Chakre
First published:
July 4, 2020, 2:42 PM IST