ಪರಿಸರ ಮಾಲಿನ್ಯ, ನೈರ್ಮಲ್ಯದ ಕುರಿತ ಅರಿವು ಭಾರತ, ಚೀನಾ, ರಷ್ಯಾ ದೇಶಗಳಿಗೆ ಇಲ್ಲ; ಡೊನಾಲ್ಡ್ ಟ್ರಂಪ್​ ಕಿಡಿ

ಭಾರತ, ಚೀನಾ ಹಾಗೂ ರಷ್ಯಾ ಸೇರಿದಂತೆ ಹಲವಾರು ರಾಷ್ಟ್ರಗಳಲ್ಲಿ ಇಂದು ಪರಿಸರ ಮಾಲಿನ್ಯ ಅಪಾಯಕಾರಿ ಮಟ್ಟ ಮೀರಿದೆ. ಅದರಲ್ಲೂ ಏಷ್ಯಾ ಖಂಡದ ಈ ಬಲಿಷ್ಠ ರಾಷ್ಟ್ರಗಳಲ್ಲಿ ಕುಡಿಯಲು ಶುದ್ಧ ನೀರಿಲ್ಲ. ಉಸಿರಾಡಲು ಶುದ್ಧ ಗಾಳಿಯೂ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೂ, ಪರಿಸರದ ಶುದ್ಧತೆ ಕುರಿತು ಈ ರಾಷ್ಟ್ರಗಳಿಗೆ ಅರಿವಿಲ್ಲದಂತಾಗಿರುವುದು ಶೋಚನೀಯ ಸಂಗತಿ ಎಂದು ಟ್ರಂಪ್ ವಿಷಾಧಿಸಿದ್ದಾರೆ.

MAshok Kumar | news18
Updated:June 6, 2019, 1:45 PM IST
ಪರಿಸರ ಮಾಲಿನ್ಯ, ನೈರ್ಮಲ್ಯದ ಕುರಿತ ಅರಿವು ಭಾರತ, ಚೀನಾ, ರಷ್ಯಾ ದೇಶಗಳಿಗೆ ಇಲ್ಲ; ಡೊನಾಲ್ಡ್ ಟ್ರಂಪ್​ ಕಿಡಿ
ಡೊನಾಲ್ಡ್​ ಟ್ರಂಪ್​
  • News18
  • Last Updated: June 6, 2019, 1:45 PM IST
  • Share this:
ಲಂಡನ್ (ಜೂನ್.06); ಏಷ್ಯಾ ಖಂಡದಲ್ಲಿ ಪರಿಸರ ಮಾಲಿನ್ಯ ದಿನೇ ದಿನೇ ಏರಿಕೆಯಾಗುತ್ತಿದೆ. ಆದರೆ, ಮಾಲಿನ್ಯವನ್ನು ಹತೋಟಿಯಲ್ಲಿಡುವ ಹಾಗೂ ನೈರ್ಮಲ್ಯದ ಕುರಿತ ಅರಿವು ಭಾರತ, ಚೀನಾ ಹಾಗೂ ರಷ್ಯಾ ದಂತಹ ರಾಷ್ಟ್ರಗಳಿಗೆ ಇಲ್ಲ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆರೋಪಿಸಿದ್ದಾರೆ.

ಲಂಡನ್​ ರಾಜಕುಮಾರ ಚಾರ್ಲೆಸ್ ಕಳೆದ ಹಲವು ವರ್ಷಗಳಿಂದ ಪರಿಸರ ಮಾಲಿನ್ಯ ಹಾಗೂ ಹವಾಮಾನ ಬದಲಾವಣೆ ಕುರಿತು ವಿಶ್ವದಾದ್ಯಂತ ಅರಿವು ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ. ಹೀಗಾಗಿ ವಿಶ್ವ ಪರಿಸರ ದಿನವಾದ ಜೂನ್​.5 ರಂದು ಚಾರ್ಲೆಸ್ ಆಹ್ವಾನದ ಮೇರೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇಂಗ್ಲೆಂಡ್ ಪ್ರವಾಸವನ್ನು ಕೈಗೊಂಡಿದ್ದರು.

ಈ ವೇಳೆ ಬ್ರಿಟೀಷ್ ಮಾಧ್ಯಮಕ್ಕೆ ಸಂದರ್ಶನ ನೀಡಿ ವಿಶ್ವ ಪರಿಸರದ ವಸ್ತುಸ್ಥಿತಿ ಹಾಗೂ ವಾತಾವರಣದಲ್ಲಾಗುತ್ತಿರುವ ಬದಲಾವಣೆ ಕುರಿತು ಮಾತನಾಡಿದ ಡೊನಾಲ್ಡ್ ಟ್ರಂಪ್, “ಭಾರತ, ಚೀನಾ ಹಾಗೂ ರಷ್ಯಾ ಸೇರಿದಂತೆ ಹಲವಾರು ರಾಷ್ಟ್ರಗಳಲ್ಲಿ ಇಂದು ಪರಿಸರ ಮಾಲಿನ್ಯ ಅಪಾಯಕಾರಿ ಮಟ್ಟ ಮೀರಿದೆ. ಅದರಲ್ಲೂ ಏಷ್ಯಾ ಖಂಡದ ಈ ಬಲಿಷ್ಠ ರಾಷ್ಟ್ರಗಳಲ್ಲಿ ಕುಡಿಯಲು ಶುದ್ಧ ನೀರಿಲ್ಲ. ಉಸಿರಾಡಲು ಶುದ್ಧ ಗಾಳಿಯೂ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೂ, ಪರಿಸರದ ಶುದ್ಧತೆ ಕುರಿತು ಈ ರಾಷ್ಟ್ರಗಳಿಗೆ ಅರಿವಿಲ್ಲದಂತಾಗಿರುವುದು ಶೋಚನೀಯ ಸಂಗತಿ” ಎಂದು ವಿಷಾಧಿಸಿದ್ದಾರೆ.

ಇದನ್ನೂ ಓದಿ : World Environment Day: ಇದು ಸಂಭ್ರಮದ ಹೊತ್ತಲ್ಲ, ಎಚ್ಚರ ತಪ್ಪಿದರೆ ಪ್ರಕೃತಿಯೇ ಇರಲ್ಲ

ಅಲ್ಲದೆ “ಈ ರಾಷ್ಟ್ರಗಳ ಕೆಲವು ನಗರಗಳಿಗೆ ನಾನು ಭೇಟಿ  ನೀಡಿದ್ದೇನೆ. ಆ ನಗರಗಳ ಹೆಸರನ್ನು ಹೇಳಲು ನಾನು ಇಚ್ಛಿಸುವುದಿಲ್ಲ. ಆದರೆ,  ಅಲ್ಲಿ ಉಸಿರಾಡುವುದು ಸಹ ಕಷ್ಟವೆನ್ನುವಂತಹ ಪರಿಸ್ಥಿತಿ ಇದೆ. ಅಭಿವೃದ್ಧಿಯ ಹೆಸರಿನ ಪೈಪೋಟಿಗೆ ಬಿದ್ದಿರುವ ಈ ರಾಷ್ಟ್ರಗಳು ಅಭಿವೃದ್ಧಿಗಾಗಿ ಪರಿಸರವನ್ನು ಊಹೆಗೂ ಮೀರಿ ಮಾಲಿನ್ಯಗೊಳಿಸುತ್ತಿವೆ” ಎಂದು ಕಿಡಿಕಾರಿದ್ದಾರೆ.

ಇದೇ ಸಮಯದಲ್ಲಿ ಅಮೆರಿಕದ ವಾತಾವರಣದ ಬಗ್ಗೆ ಮಾತನಾಡಿದ ಅವರು, “ವಿಶ್ವದಲ್ಲೇ ಅತ್ಯುತ್ತಮ ವಾತಾವರಣ ಹಾಗೂ ಶುದ್ಧ ಗಾಳಿ ಹೊಂದಿರುವ ದೇಶಗಳ ಪಟ್ಟಿಯಲ್ಲಿ ಅಮೆರಿಕ ಅಗ್ರಸ್ಥಾನದಲ್ಲಿದೆ. ಪರಿಸರದ ಸಂರಕ್ಷಣೆಗಾಗಿ ಇಲ್ಲಿನ ಸರ್ಕಾರ ಸಾಕಷ್ಟು ಕಟ್ಟುನಿಟ್ಟಿನ ಕ್ರಮ ಜರುಗಿಸಿದೆ. ಇದೇ ರೀತಿ ಎಲ್ಲಾ ರಾಷ್ಟ್ರಗಳು ಪರಿಸರ ಸಂರಕ್ಷಣೆಗೆ ಮುಂದಾಗಬೇಕು. ಮಾಲಿನ್ಯವನ್ನು ತಡೆಗಟ್ಟುವ ಕುರಿತು ತುರ್ತಾಗಿ ಆಲೋಚಿಸಬೇಕು ಹಾಗೂ ಪರಿಸರ ರಕ್ಷಣೆ ಕುರಿತ ಅಂತಾರಾಷ್ಟ್ರೀಯ ಒಪ್ಪಂದವನ್ನು ಪಾಲಿಸಬೇಕು” ಎಂದು ಮನವಿ ಮಾಡಿದ್ದಾರೆ.

First published:June 6, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...