ಭಾರತಕ್ಕೆ ವಿಶ್ವದ ದೊಡ್ಡಣ್ಣನ ಗಿಫ್ಟ್​; 3 ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿದ ಟ್ರಂಪ್

ರಕ್ಷಣಾ ವಿಚಾರವೇ ಆಗಿರಲಿ ಅಥವಾ ದೇಶದ ಭದ್ರತೆಯ ವಿಚಾರವೇ ಆಗಿರಲಿ ಭಾರತದ ಜೊತೆ ನಿಲ್ಲಲು ಅಮೆರಿಕ ಒಪ್ಪಿಗೆ ನೀಡಿದೆ. ಮಾನಸಿಕ ಆರೋಗ್ಯ, ವೈದ್ಯಕೀಯ ಉತ್ಪನ್ನ ಹಾಗೂ ಇಂಧನ ಕ್ಷೇತ್ರದಲ್ಲಿ ಒಪ್ಪಂದಕ್ಕೆ ಉಭಯ ರಾಷ್ಟ್ರಗಳು ಸಹಿ ಹಾಕಿವೆ.

ಡೊನಾಲ್ಡ್​ ಟ್ರಂಪ್​-ಮೋದಿ

ಡೊನಾಲ್ಡ್​ ಟ್ರಂಪ್​-ಮೋದಿ

  • Share this:
ನವದೆಹಲಿ (ಫೆ. 25):  ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಅವರ ಭಾರತ ಪ್ರವಾಸ ಇಂದು ಕೊನೆಯಾಗಲಿದೆ. ಸೋಮವಾರ ಅಹಮದಾಬಾದ್​ನ ಮೊಟೆರಾ ಸ್ಟೇಡಿಯಂ ಉದ್ಘಾಟನೆ ವೇಳೆ ಭಾರತದೊಂದಿಗೆ ಮಹತ್ವದ ರಕ್ಷಣಾ ಒಪ್ಪಂದದ ಬಗ್ಗೆ ಟ್ರಂಪ್ ಘೋಷಣೆ ಮಾಡಿದ್ದರು. ಅದರಂತೆ ಇಂದು ಒಟ್ಟು 3 ಮಹತ್ವದ ಒಪ್ಪಂದಗಳಿಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಸಹಿ ಹಾಕಿದ್ದಾರೆ.

ಈ ಬಗ್ಗೆ ಹೈದರಾಬಾದ್​ ಹೌಸ್​ನಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿರುವ ಪ್ರಧಾನಿ ಮೋದಿ ಮತ್ತು ಡೊನಾಲ್ಡ್​ ಟ್ರಂಪ್ ಮೂರು ಒಪ್ಪಂದಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಮಾನಸಿಕ ಆರೋಗ್ಯ, ವೈದ್ಯಕೀಯ ಉತ್ಪನ್ನ ಹಾಗೂ ಇಂಧನ ಕ್ಷೇತ್ರದಲ್ಲಿ ಒಪ್ಪಂದಕ್ಕೆ ಉಭಯ ರಾಷ್ಟ್ರಗಳು ಸಹಿ ಹಾಕಿವೆ. ಡ್ರಗ್ಸ್​ ದಂಧೆಯನ್ನು ನಿಯಂತ್ರಿಸಲು ಭಾರತ ಮತ್ತು ಅಮೆರಿಕ ಕೈಜೋಡಿಸಲಿವೆ. ಭಯೋತ್ಪಾದನೆಯನ್ನು ಬೆಂಬಲಿಸುವವರ ವಿರುದ್ಧ ಎರಡೂ ರಾಷ್ಟ್ರಗಳು ಸಮರ ಸಾರಲಿವೆ. ಭಾರತ ಮತ್ತು ಅಮೆರಿಕದ ನಡುವೆ ಮುಕ್ತ, ಪಾರದರ್ಶಕ ವ್ಯಾಪಾರ ನಡೆಯಲಿದೆ ಎಂದು ಈ ವೇಳೆ ಉಭಯ ನಾಯಕರು ಘೋಷಿಸಿದ್ದಾರೆ.ಭಾರತ ಮತ್ತು ಅಮೆರಿಕ ನಡುವೆ ಯಾವೆಲ್ಲ ಪ್ರಮುಖ ವಿಚಾರಗಳ ಬಗ್ಗೆ ಒಪ್ಪಂದ ಮಾಡಿಕೊಳ್ಳಬಹುದು ಎಂಬುದನ್ನು ಇಂದು ಚರ್ಚಿಸಲಾಗಿದೆ. ರಕ್ಷಣಾ ವಿಚಾರವೇ ಆಗಿರಲಿ ಅಥವಾ ದೇಶದ ಭದ್ರತೆಯ ವಿಚಾರವೇ ಆಗಿರಲಿ ಭಾರತದ ಜೊತೆ ನಿಲ್ಲಲು ಅಮೆರಿಕ ಒಪ್ಪಿಗೆ ನೀಡಿದೆ. ಭಾರತ ಮತ್ತು ಅಮೆರಿಕ ನಡುವಿನ ರಕ್ಷಣಾ ಒಪ್ಪಂದ ಈ ಭೇಟಿಯ ಪ್ರಮುಖ ಅಂಶ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

ಇದನ್ನೂ ಓದಿ: ತಾಜ್ ಮಹಲ್ ಹಾಗೂ ಪ್ರೇಮಕಥೆ ತಿಳಿದು ಭಾವುಕರಾದ ಡೊನಾಲ್ಡ್ ಟ್ರಂಪ್ ಮತ್ತವರ ಪತ್ನಿ

ನಾನು ಮತ್ತು ಟ್ರಂಪ್ ಕಳೆದ 8 ತಿಂಗಳಲ್ಲಿ 5 ಬಾರಿ ಭೇಟಿಯಾಗಿದ್ದೇವೆ. ಟ್ರಂಪ್ ಕುಟುಂಬ ಸಮೇತರಾಗಿ ನಮ್ಮ ದೇಶಕ್ಕೆ ಬಂದಿದ್ದು ಸಂತಸ ತಂದಿದೆ. ಈ ಭೇಟಿಯಿಂದ ಅಮೆರಿಕ- ಭಾರತ ಸಂಬಂಧ ಹೊಸ ಮಟ್ಟಕ್ಕೆ ಏರಿದೆ. ರಕ್ಷಣಾ ಕ್ಷೇತ್ರದಲ್ಲಿ ಉಭಯ ರಾಷ್ಟ್ರಗಳು ಸಹಯೋಗ ಹೊಂದಲಿವೆ. ಅಮೆರಿಕ ಮತ್ತು ಭಾರತದ ಜನರ ನಡುವೆ ಸಂಪರ್ಕ ಹೆಚ್ಚಾಗಬೇಕು. ಎರಡೂ ದೇಶಗಳ ವಿದ್ಯಾರ್ಥಿಗಳು, ವೃತ್ತಿಪರರು, ಗಣ್ಯರು ಇದರಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ. ನಾವು ಬಹುಮುಖ್ಯವಾದ ವ್ಯಾಪಾರ ಒಪ್ಪಂದದ ಬಗ್ಗೆಯೂ ಮಾತುಕತೆ ನಡೆಸಿದ್ದೇವೆ ಎಂದು ಮೋದಿ ತಿಳಿಸಿದ್ದಾರೆ.

ಇದನ್ನೂ ಓದಿ: Donald Trump India Visit Live: ದೊಡ್ಡ ಒಪ್ಪಂದಗಳಿಗೆ ಮಾತುಕತೆ ನಡೆಸುವುದರಿಂದ ಫಲ ಸಿಗುವ ವಿಶ್ವಾಸ ಬಂದಿದೆ: ಮೋದಿ

ಆಧುನಿಕ ಶಸ್ತ್ರಾಸ್ತ್ರ ಖರೀದಿಗೆ ಒಪ್ಪಂದ:

ಭಾರತದ ಭೇಟಿಯ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್, "ಭಾರತದ ಜೊತೆ ಒಪ್ಪಂದಕ್ಕೆ ಸಹಿ ಹಾಕಿದ್ದೇವೆ. ಇಂಧನ ಕ್ಷೇತ್ರದಲ್ಲಿ ಒಪ್ಪಂದ ಹಾಗೂ ರಕ್ಷಣಾ ಒಪ್ಪಂದಕ್ಕೂ ಸಹಿ ಹಾಕಿದ್ದೇವೆ," ಎಂದು ಹೇಳಿದ್ದಾರೆ. ಅಪಾಚೆ ಮತ್ತು ರೋಮಿಯೋ ಹೆಲಿಕಾಪ್ಟರ್ ಸೇರಿ 3 ಬಿಲಿಯನ್ ಡಾಲರ್​ಗೂ ಅಧಿಕ ಮೌಲ್ಯದ ಆಧುನಿಕ ಅಮೆರಿಕನ್ ಮಿಲಿಟರಿ ಶಸ್ತ್ರಾಸ್ತ್ರಗಳ ಖರೀದಿಯ ಬಗ್ಗೆಯೂ ಮಾತುಕತೆ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.
First published: