• Home
  • »
  • News
  • »
  • national-international
  • »
  • Narendra Modi: ಮಹಾವಿಪತ್ತು ತಪ್ಪಿಸಿದ್ದೇ ನರೇಂದ್ರ ಮೋದಿ! ಪ್ರಧಾನಿ ಬಗ್ಗೆ ಅಮೆರಿಕಾ ಮೆಚ್ಚುಗೆ ಮಾತು!

Narendra Modi: ಮಹಾವಿಪತ್ತು ತಪ್ಪಿಸಿದ್ದೇ ನರೇಂದ್ರ ಮೋದಿ! ಪ್ರಧಾನಿ ಬಗ್ಗೆ ಅಮೆರಿಕಾ ಮೆಚ್ಚುಗೆ ಮಾತು!

ಪ್ರಧಾನಿ ನರೇಂದ್ರ ಮೋದಿ

ಪ್ರಧಾನಿ ನರೇಂದ್ರ ಮೋದಿ

ಕಳೆದ ಸೆಪ್ಟೆಂಬರ್‌ನಲ್ಲಿ ಸಮರ್‌ಕಂಡ್‌ನಲ್ಲಿ ನಡೆದ ಎಸ್‌ಸಿಒ ಶೃಂಗಸಭೆಯ ಸಂದರ್ಭದಲ್ಲಿ, ಪಿಎಂ ಮೋದಿ ಅವರು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಸಲಹೆ ನೀಡಿದ್ದರು. ಈ ಸಲಹೆಗೆ ಅಮೆರಿಕಾ ಬಹುಪರಾಕ್ ಎಂದಿದೆ!

  • Share this:

ಅಮೆರಿಕ: ರಷ್ಯಾ ಹಾಗೂ ಉಕ್ರೇನ್ ನಡುವಿನ ಯುದ್ಧ (Russia Ukraine war) ಮುಂದುವರೆದಿದೆ. ಉಕ್ರೇನ್ ಮೇಲೆ ರಷ್ಯಾ ಯಾವೆಲ್ಲಾ ಅಸ್ತ್ರ ಪ್ರಯೋಗಿಸಿದರೂ ಉಕ್ರೇನ್ ಮಾತ್ರ ಮಣಿಯುತ್ತಿಲ್ಲ. ಇನ್ನು ರಷ್ಯಾ-ಉಕ್ರೇನ್ ಯುದ್ಧದ ಕುರಿತಂತೆ ಭಾರತದ ಪ್ರಧಾನಿ ನರೇಂದ್ರ ಮೋದಿ (Indian Prime Minister Narendra Modi) ರಷ್ಯಾಗೆ ತಿಳಿ ಹೇಳಿದ್ದರು. ಯುದ್ಧ ಮುಂದುವರೆಸುವುದು ಸರಿಯಲ್ಲ ಅಂತ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Russian President Vladimir Putin) ಅವರಿಗೆ ಹೇಳಿದ್ದರು. ಇದೀಗ ಪ್ರಧಾನಿ ನರೇಂದ್ರ ಮೋದಿಯವರ ಈ ಮಾತಿಗೆ ಅಮೆರಿಕಾ (America) ಬೆಂಬಲ ಸೂಚಿಸಿದೆ. ಪ್ರಧಾನಿ ನರೇಂದ್ರ ಮೋದಿಯವರ ವಿದೇಶಾಂಗ ನೀತಿ ಬಗ್ಗೆ ಮೆಚ್ಚುಗೆ ಸೂಚಿಸಿರುವ ಅಮೆರಿಕಾ ಗುಪ್ತಚರ ಇಲಾಖೆ (US Intelligence Department), “ಭಾರತದ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಮಾತಿನಿಂದ ಜಗತ್ತಿನ ದೊಡ್ಡ ವಿಪತ್ತನ್ನು ತಪ್ಪಿಸಿದ್ದಾರೆ” ಅಂತ ಶ್ಲಾಘಿಸಿದೆ.


ನರೇಂದ್ರ ಮೋದಿ ನಿಲುವಿಗೆ ಅಮೆರಿಕಾ ಮೆಚ್ಚುಗೆ


ರಷ್ಯಾ ಉಕ್ರೇನ್ ಯುದ್ಧದ ಬಗ್ಗೆ ಎಲ್ಲಾ ರೀತಿಯ ಹಿಂಸಾಚಾರಗಳನ್ನು ನಿಲ್ಲಿಸಲು ಮತ್ತು ರಾಜತಾಂತ್ರಿಕ ಮಾರ್ಗವನ್ನು ಅನುಸರಿಸಲು ಕರೆ ನೀಡುವ ಉಕ್ರೇನ್ ಸಂಘರ್ಷದ ಕುರಿತು ಪ್ರಧಾನಿ ನರೇಂದ್ರ ಮೋದಿಯವರ ನಿಲುವನ್ನು ಅಮೆರಿಕಾ ಮತ್ತೊಮ್ಮೆ ಸ್ವಾಗತಿಸಿದೆ.


ರಷ್ಯಾ ಉಕ್ರೇನ್ ಯುದ್ಧದ ಬಗ್ಗೆ ಮೋದಿ ಹೇಳಿದ್ದೇನು?


ಕಳೆದ ಸೆಪ್ಟೆಂಬರ್‌ನಲ್ಲಿ ಸಮರ್‌ಕಂಡ್‌ನಲ್ಲಿ ನಡೆದ ಎಸ್‌ಸಿಒ ಶೃಂಗಸಭೆಯ ಸಂದರ್ಭದಲ್ಲಿ, ಪಿಎಂ ಮೋದಿ ಅವರು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಸಲಹೆ ನೀಡಿದ್ದರು. "ಇಂದಿನ ಯುಗ ಯುದ್ಧದ ಯುಗವಲ್ಲ, ಶಾಂತಿ ಮೂಲಕ ವಿವಾದ ಬಗೆಹರಿಸುವ ನಿಟ್ಟಿನಲ್ಲಿ ಯೋಚಿಸಿ" ಎಂದು ಹೇಳಿದ್ದರು. ಆಹಾರ, ಇಂಧನ ಭದ್ರತೆ ಮತ್ತು ರಸಗೊಬ್ಬರಗಳ ಸಮಸ್ಯೆಗಳನ್ನು ಪರಿಹರಿಸಲು ಮಾರ್ಗಗಳನ್ನು ಕಂಡುಕೊಳ್ಳುವ ಅಗತ್ಯವನ್ನು ಅವರು ಒತ್ತಿ ಹೇಳಿದ್ದರು.


ಇದನ್ನೂ ಓದಿ: Pakistan Minister: ಪಾಕಿಸ್ತಾನದ ಬಳಿ ಅಣ್ವಸ್ತ್ರ ಇದೆ ಅನ್ನೋದು ಭಾರತಕ್ಕೆ ಗೊತ್ತಿರಲಿ! ಪಾಕ್ ಸಚಿವೆಯಿಂದ ಎಚ್ಚರಿಕೆ


 “ನರೇಂದ್ರ ಮೋದಿ ಜಗತ್ತಿನ ಮಹಾ ವಿನಾಶ ತಪ್ಪಿಸಿದ್ದಾರೆ!”


ಯುದ್ಧದ ಕುರಿತಂತೆ ಮೋದಿ ನಿಲುವನ್ನು ಅಮೆರಿಕಾ ಹಾಡಿ ಹೊಗಳಿದೆ. ''21ನೇ ಶತಮಾನದಲ್ಲಿ ಪರಮಾಣು ಅಸ್ತ್ರಗಳ ಸುರಕ್ಷತೆ, ಭದ್ರತೆ ಬಗ್ಗೆ ಆತಂಕ ತುಂಬಿರುವ ಸಮಯದಲ್ಲಿಎದುರಾದ ಉಕ್ರೇನ್‌ - ರಷ್ಯಾ ಸಂಘರ್ಷ ಪರಮಾಣು ದುರಂತದ ಭೀತಿಯನ್ನು ಹೆಚ್ಚಿಸಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿ, ರಷ್ಯಾ ಅಧ್ಯಕ್ಷ ವ್ಲಾಡಿಮರ್‌ ಪುಟಿನ್‌ ಜತೆ ಹಲವು ಬಾರಿ ಮಾತುಕತೆ ನಡೆಸುವ ಮೂಲಕ ಒಂದು ಮಟ್ಟಿಗೆ ಜಗತ್ತನ್ನು ವಿನಾಶಕಾರಿ ಪರಮಾಣು ದುರಂತದಿಂದ ಕಾಪಾಡಿದ್ದಾರೆ ಎಂದರೆ ತಪ್ಪಾಗದು ಅಂತ ಅಮೆರಿಕಾ ಗುಪ್ತಚರ ಇಲಾಖೆ ಹೇಳಿದೆ.


ಮುಂದುವರೆದ ರಷ್ಯಾ ಉಕ್ರೇನ್ ಯುದ್ಧ


ಒಂದೋ ನಾವು ಉಕ್ರೇನ್ ಯುದ್ಧವನ್ನು ಗೆಲ್ಲುತ್ತೇವೆ ಅಥವಾ ಜಗತ್ತು ನಾಶವಾಗುತ್ತದೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸಲಹೆಗಾರ ಅಲೆಕ್ಸಾಂಡರ್ ಡುಗಿನ್ ಹೇಳಿದ್ದಾರೆ. ಉಕ್ರೇನ್‌ನೊಂದಿಗಿನ ರಷ್ಯಾದ ಯುದ್ಧವು ಮಾಸ್ಕೋದ ವಿಜಯದ ಮೂಲಕ ಅಥವಾ ಇಡೀ ಜಗತ್ತಿನ ನಾಶದ ಮೂಲಕ ಕೊನೆಗೊಳ್ಳುತ್ತದೆ ಅಂತ ಅವರು ಹೇಳಿದ್ದಾರೆ.


ಇದನ್ನೂ ಓದಿ: T20 World Cup 2022: ದೇಶವು ತನ್ನ ಆಟಗಾರರ ಬಗ್ಗೆ ಹೆಮ್ಮೆಪಡುತ್ತದೆ, ಅಂಧರ ಟಿ20 ವಿಶ್ವಕಪ್ ಗೆಲುವಿಗೆ ಮೋದಿ ಮೆಚ್ಚುಗೆ


ಇದುವರೆಗೂ ರಷ್ಯಾದ 97 ಸಾವಿರ ಸೈನಿಕರ ಸಾವು


2022ರ ಫೆಬ್ರುವರಿ 24ರಂದು ಉಕ್ರೇನ್‌ ವಿರುದ್ಧ ರಷ್ಯಾ ಯುದ್ಧ ಆರಂಭಿಸಿತ್ತು. ಅಲ್ಲಿಂದ ಇಲ್ಲಿಯವರೆಗೆ ರಷ್ಯಾದ ಸುಮಾರು 97,690 ಸೈನಿಕರು ಹತರಾಗಿರುವುದಾಗಿ ಉಕ್ರೇನ್‌ ಹೇಳಿದೆ. ಇನ್ನು  5,958 ಶಸ್ತ್ರಸಜ್ಜಿತ ವಾಹನಗಳು, 2,985 ಟ್ಯಾಂಕ್‌ಗಳು, 1,947 ಫಿರಂಗಿಗಳು, 410 ರಾಕೆಟ್‌ ಉಡಾವಣಾ ವ್ಯವಸ್ಥೆ, 211 ವಾಯು ರಕ್ಷಣಾ ವ್ಯವಸ್ಥೆ ನಾಶವಾಗಿವೆ. ಉಳಿದಂತೆ 281 ಸೇನಾ ಜೆಟ್‌ಗಳು, 264 ಹೆಲಿಕಾಪ್ಟರ್‌ಗಳು, 1,648 ಡ್ರೋನ್‌ಗಳು, 653 ಕ್ಷಿಪಣಿಗಳು, 16 ಯುದ್ಧ ನೌಕೆಗಳು ಹಾಗೂ ಹಡಗುಗಳು, 4,577 ವಾಹನಗಳು, ಇಂಧನ ಟ್ಯಾಂಕ್‌ಗಳು ಹಾಗೂ 174 ವಿಶೇಷ ಸಾಧನಗಳು ನಾಶವಾಗಿವೆ ಅಂತ ರಷ್ಯಾ ಯುದ್ಧ ಇಲಾಖೆ ಮಾಹಿತಿ ನೀಡಿದೆ.

Published by:Annappa Achari
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು