HOME » NEWS » National-international » AMERICA MAY ANNOUNCE RESTRICTIONS ON WORK VISA SNVS

ಅಮೆರಿಕದ ಹೆಚ್-1ಬಿ ವೀಸಾಗೆ 6 ತಿಂಗಳು ನಿರ್ಬಂಧ? ಶೀಘ್ರದಲ್ಲೇ ಡೊನಾಲ್ಡ್ ಟ್ರಂಪ್ ನಿರ್ಧಾರ ಪ್ರಕಟ

ಅಮೆರಿಕ ಸರ್ಕಾರ ಈ ವರ್ಕ್ ವೀಸಾ ನಿರ್ಬಂಧಗಳನ್ನ ಘೋಷಿಸಿದರೆ ಸುಮಾರು 2.4 ಲಕ್ಷ ಮಂದಿಗೆ ಅಮೆರಿಕ ಪ್ರವೇಶ ಅಸಾಧ್ಯವಾಗಬಹುದು. ಭಾರತದಿಂದಲೂ ಪ್ರತೀ ವರ್ಷ ವರ್ಕ್ ವೀಸಾಗೆ ಅರ್ಜಿ ಸಲ್ಲಿಸುವವರ ಸಂಖ್ಯೆ ದೊಡ್ಡದಿದೆ.

news18-kannada
Updated:June 22, 2020, 8:38 PM IST
ಅಮೆರಿಕದ ಹೆಚ್-1ಬಿ ವೀಸಾಗೆ 6 ತಿಂಗಳು ನಿರ್ಬಂಧ? ಶೀಘ್ರದಲ್ಲೇ ಡೊನಾಲ್ಡ್ ಟ್ರಂಪ್ ನಿರ್ಧಾರ ಪ್ರಕಟ
ಡೊನಾಲ್ಡ್​ ಟ್ರಂಪ್​
  • Share this:
ವಾಷಿಂಗ್ಟನ್(ಜೂನ್ 22): ಕೊರೋನಾ ವೈರಸ್ ಸೋಂಕಿನಿಂದ ಘಾಸಿಗೊಂಡಿರುವ ಅಮೆರಿಕ ಸರ್ಕಾರ ಈಗ ವಿದೇಶೀಯರ ಆಗಮನಕ್ಕೆ ಬ್ರೇಕ್ ಹಾಕುವ ಸಾಧ್ಯತೆ ಇದೆ. ವರ್ಕ್ ವೀಸಾಗಳನ್ನ ತಾತ್ಕಾಲಿಕವಾಗಿ ಸ್ಥಗಿತಗೊಳಿಸುವ ಸಾಧ್ಯತೆ ಇದೆ. ಫಾಕ್ಸ್ ನ್ಯೂಸ್ ಜೊತೆ ಮೊನ್ನೆ ನಡೆದ ಸಂದರ್ಶನದಲ್ಲಿ ಮಾತನಾಡುತ್ತಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವರ್ಕ್ ವೀಸಾ ಮೇಲೆ ವಿವಿಧ ನಿರ್ಬಂಧಗಳನ್ನು ಸೋಮವಾರ ಪ್ರಕಟಿಸುವುದಾಗಿ ಸುಳಿವು ನೀಡಿದ್ಧಾರೆ.

ಬ್ಲೂಮ್​ಬರ್ಗ್ ನ್ಯೂಸ್ ನೀಡಿರುವ ಮಾಹಿತಿ ಪ್ರಕಾರ ಹೆಚ್-1ಬಿ ವೀಸಾ, ಹೆಚ್-2ಬಿ ವೀಸಾ ಮತ್ತು ಎಲ್-1 ವೀಸಾಗಳ ಮೇಲೆ ಅಮೆರಿಕ ಸರ್ಕಾರ 180 ದಿನಗಳ ಕಾಲ ನಿರ್ಬಂಧಗಳನ್ನ ಹೇರುವ ಸಾಧ್ಯತೆ ಇದೆ. ಆದರೆ, ಯಾವ ನಿರ್ಬಂಧಗಳೆಂದು ಇನ್ನೂ ಸ್ಪಷ್ಟವಾಗಿಲ್ಲ.

ಫಾಕ್ಸ್ ನ್ಯೂಸ್​ನ ಸಂದರ್ಶನದಲ್ಲಿ ಟ್ರಂಪ್ ಅವರು ಕೆಲ ದೊಡ್ಡ ಕಂಪನಿಗಳಿಗೆ ಸುದೀರ್ಘ ಕಾಲದಿಂದ ಬಂದು ಹೋಗುತ್ತಿರುವ ವೃತ್ತಿಪರರಿಗೆ ವೀಸಾ ನಿರ್ಬಂಧದಿಂದ ವಿನಾಯಿತಿ ನೀಡಲಾಗುವುದು ಎಂದಿದ್ದಾರೆ.

ಈಗಾಗಲೇ ವರ್ಕ್ ವೀಸಾ ಹೊಂದಿರುವ ವಿದೇಶೀ ಉದ್ಯೋಗಿಗಳು ಅಮೆರಿಕದಲ್ಲೇ ಇದ್ದರೆ ಅವರಿಗೆ ಹೊಸ ನಿರ್ಬಂಧಗಳು ಅನ್ವಯವಾಗುವುದಿಲ್ಲ. ಆದರೆ, ವರ್ಕ್ ವೀಸಾ ಹೊಂದಿದ್ದು ಅಮೆರಿಕಕ್ಕೆ ಇನ್ನೂ ಬಂದಿಲ್ಲದ ಉದ್ಯೋಗಿಗಳಿಗೆ ನಿರ್ಬಂಧಗಳು ಅನ್ವಯವಾಗುವ ಸಾಧ್ಯತೆ ಇದೆ ಎನ್ನುತ್ತಿವೆ ವರದಿಗಳು.

ಇದನ್ನೂ ಓದಿ: 150 ಬಿಲಿಯನ್ ಡಾಲರ್​ ಮಾರುಕಟ್ಟೆ ಮೌಲ್ಯ ಹೆಚ್ಚಿಸಿಕೊಂಡ ಭಾರತದ ಮೊದಲ ಕಂಪನಿ ರಿಲಯನ್ಸ್ ಇಂಡಸ್ಟ್ರೀಸ್

ಅಮೆರಿಕ ಸರ್ಕಾರ ಈ ವರ್ಕ್ ವೀಸಾ ನಿರ್ಬಂಧಗಳನ್ನ ಘೋಷಿಸಿದರೆ ಸುಮಾರು 2.4 ಲಕ್ಷ ಮಂದಿಗೆ ಅಮೆರಿಕ ಪ್ರವೇಶ ಅಸಾಧ್ಯವಾಗಬಹುದು. ಭಾರತದಿಂದಲೂ ಪ್ರತೀ ವರ್ಷ ವರ್ಕ್ ವೀಸಾಗೆ ಅರ್ಜಿ ಸಲ್ಲಿಸುವವರ ಸಂಖ್ಯೆ ದೊಡ್ಡದಿದೆ. ಅಮೆರಿಕದ ಈ ನಿರ್ಬಂಧಗಳಿಂದ ಬಹಳ ತೊಂದರೆ ಆಗುತ್ತದೆ ಎಂದು ಅಲ್ಲಿನ ಕಂಪನಿಗಳು ಅಸಮಾಧಾನ ವ್ಯಕ್ತಪಡಿಸಿವೆ.

Youtube Video
ಏನಿವು ವರ್ಕ್ ವೀಸಾಗಳು?

ಅಮೆರಿಕಕ್ಕೆ ಕೆಲಸದ ಮೇಲೆ ಹೋಗಲು ಮೂರು ರೀತಿಯ ವೀಸಾಗಳಿವೆ. ಹೆಚ್-1ಬಿ, ಹೆಚ್-2ಬಿ ಮತ್ತು ಎಲ್-1 ವೀಸಾ ಈ ಮೂರೂ ಕೂಡ ವರ್ಕ್ ವೀಸಾ ಮಾತ್ರ ಆಗಿದ್ದು ತಾತ್ಕಾಲಿಕವಾಗಿ ನೀಡಲಾಗುತ್ತದೆ. ಇವು ವಲಸೆಗೆ ನೀಡುವ ಅನುಮತಿ ಅಲ್ಲ. ಪದವೀಧರರು ಮತ್ತು ವೃತ್ತಿಪರ ಪರಿಣಿತರಿಗೆ ಹೆಚ್-1 ಬಿ ವೀಸಾ ನೀಡಲಾಗುತ್ತೆ. ಉನ್ನತ ಮಟ್ಟದ ಉದ್ಯೋಗಿಗಳಿಗೆ ಎಲ್-1 ವೀಸಾ ಸಿಗುತ್ತದೆ. ಕೌಶಲ್ಯವಿಲ್ಲದ ಕೆಲಸಗಾರರಿಗೆ ತಾತ್ಕಾಲಿಕವಾಗಿ ಹೆಚ್-2 ಬಿ ವೀಸಾ ನೀಡಲಾಗುತ್ತದೆ.
First published: June 22, 2020, 8:38 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories