• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Alaska: ಅಲಸ್ಕಾ ಪ್ರಾಂತ್ಯದಲ್ಲಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಮತ್ತೊಂದು ವಸ್ತುವನ್ನು ಹೊಡೆದರುಳಿಸಿದ ಅಮೆರಿಕಾ!

Alaska: ಅಲಸ್ಕಾ ಪ್ರಾಂತ್ಯದಲ್ಲಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಮತ್ತೊಂದು ವಸ್ತುವನ್ನು ಹೊಡೆದರುಳಿಸಿದ ಅಮೆರಿಕಾ!

ಅಮೆರಿಕಾ ಸೇನಾ ವಿಮಾನ

ಅಮೆರಿಕಾ ಸೇನಾ ವಿಮಾನ

ಕಳೆದ ವಾರ ಸ್ಪೈ ಬಲೂನ್‌ ಪತ್ತೆ ಹಚ್ಚಿ ಅದನ್ನು ಹೊಡೆದುರುಳಿಸಿದ ಬೆನ್ನಲ್ಲೇ ಈ ಬಾರಿ ಅಂತಹುದೇ ಅನುಮಾನಾಸ್ಪದ ವಸ್ತುವೊಂದು ವಾಯು ಮಾರ್ಗದಲ್ಲಿ ತಿರುಗಾಟ ಮಾಡುತ್ತಿದ್ದರಿಂದ ಚೀನಾ ಕುತಂತ್ರ ನಡೆಸುತ್ತಿದೆ ಎಂಬ ಆತಂಕ ಅಮೆರಿಕಾದಲ್ಲಿ ಹೆಚ್ಚಿದೆ.

  • Share this:

ವಾಷಿಂಗ್ಟನ್‌: ಉತ್ತರ ಅಮೆರಿಕಾದಲ್ಲಿರುವ (America) ಯುಎಸ್‌ (US) ರಾಜ್ಯ ಅಲಸ್ಕಾದ (Alaska) ವಾಯು ಮಾರ್ಗದಲ್ಲಿ 40000 ಅಡಿ ಎತ್ತರದಲ್ಲಿ ಹಾರಾಡುತ್ತಿದ್ದ ಅಪರಿಚಿತ ವಸ್ತುವೊಂದನ್ನು ಅಮೆರಿಕಾ ಸೇನೆಯ ಫೈಟರ್‌ ಜೆಟ್‌ ಹೊಡೆದುರುಳಿಸಿದೆ. ಕಳೆದ ವಾರವಷ್ಟೇ ಚೀನಾ ಬೇಹುಗಾರಿಕೆ (China Spying) ನಡೆಸುತ್ತಿದೆ ಎನ್ನಲಾದ ಅಪರಿಚಿತ ಬಲೂನ್ ಅನ್ನು ಅಮೆರಿಕಾ ಸೇನೆ ಹೊಡೆದುರುಳಿಸಿತ್ತು. ಇದೀಗ ಎರಡೇ ವಾರದ ಅಂತರದಲ್ಲಿ ಮತ್ತೊಂದು ಅಪರಿಚಿತ ವಸ್ತು ಅಮೆರಿಕಾದ ವಾಯು ಮಾರ್ಗದಲ್ಲಿ ಹಾರಾಡುತ್ತಿದ್ದನ್ನು ಗಮನಿಸಿದ ಸೇನೆ ಫೈಟರ್ ಜೆಟ್ ಮೂಲಕ ಹೊಡೆದುರುಳಿಸಿದೆ.


ಅಮೇರಿಕಾ ಅಧ್ಯಕ್ಷ ಜೋ ಬೈಡನ್ ಅವರ ಸೂಚನೆಯ ಮೇರೆಗೆ ಸೇನಾ ಫೈಟರ್ ಕಾರ್ಯಾಚರಣೆ ನಡೆಸಿದ್ದು, ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶ್ವೇತ ಭವನದ ರಾಷ್ಟ್ರೀಯ ಭದ್ರತಾ ಮಂಡಳಿಯ ವಕ್ತಾರ ಜಾನ್ ಕಿರ್ಬೇ, ಅಂದಾಜು 40,000 ಅಡಿ ಅಂದರೆ 13,000 ಮೀಟರ್ ಎತ್ತರದಲ್ಲಿ ಹಾರಾಡುತ್ತಿದ್ದ ಆ ನಿಗೂಢ ವಸ್ತುವನ್ನು ಗಮನಿಸಿದ್ದೆವು. ದಿನನಿತ್ಯ ಸಂಚರಿಸುವ ಪ್ರಯಾಣಿಕ ವಿಮಾನಗಳಿಗೆ ಇದರಿಂದ ಅಪಾಯವಾಗುವ ಸಾಧ್ಯತೆ ಇದ್ದ ಹಿನ್ನೆಲೆಯಲ್ಲಿ ಅದನ್ನು ಹೊಡೆದುರುಳಿಸಲಾಗಿದೆ. ಆದರೆ ಅದು ನಮ್ಮನ್ನು ಗೂಢಚಾರಿಕೆ ಮಾಡುತ್ತಿತ್ತು ಅನ್ನುವ ಕಾರಣಕ್ಕೆ ಅಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.


ಇದನ್ನೂ ಓದಿ: Spy Balloon: ಶಂಕಿತ ಬಲೂನ್‌ ಹೊಡೆದುರುಳಿಸಿದ ಅಮೆರಿಕಾ: ತಿರುಗೇಟು ನೀಡುವ ಎಚ್ಚರಿಕೆ ಕೊಟ್ಟ ಚೀನಾ!


ಅಮೆರಿಕಾ ಸ್ಪಷ್ಟನೆ ಏನು?


ವಾಣಿಜ್ಯ ಕೆಲಸಗಳಿಗಾಗಿ ಹಾರಾಡುವ ವಿಮಾನಗಳು ಹಾಗೂ ಖಾಸಗಿ ಜೆಟ್‌ಗಳು ಸುಮಾರು 45,000 ಅಡಿಗಳಷ್ಟು ಎತ್ತರದ ಹಾರಬಹುದಾಗಿದೆ. ನಾವು ಗಮನಿಸಿದ ಅಪರಿಚಿತ ವಸ್ತು ಸಣ್ಣ ಕಾರ್‌ನ ಗಾತ್ರದಲ್ಲಿತ್ತು. ಕಳೆದ ವಾರ ಹೊಡೆದುರುಳಿಸಿದ ಚೀನಾದ ಶಂಕಿತ ಸ್ಕೈ ಬಲೂನ್‌ ಗಾತ್ರಗಿಂತಲೂ ಸಣ್ಣದಾಗಿತ್ತು. ಹೀಗಾಗಿ ಯಾವುದೇ ಸಮಸ್ಯೆ ಉಂಟಾಗಬಾರದು ಅನ್ನುವ ಕಾರಣಕ್ಕೆ ವಾಯಡೆಯ ಫೈಟರ್ ಜೆಟ್‌ಗಳು ದಕ್ಷಿಣ ಕೆರೊಲಿನಾದಲ್ಲಿನ ಕರಾವಳಿ ಪ್ರದೇಶದ ಬಳಿ ಆ ಅಪರಿಚಿತ ವಸ್ತುವನ್ನು ಹೊಡೆದುರುಳಿಸಿದೆ ಎಂದು ವಕ್ತಾರ ಜಾನ್ ಕಿರ್ಬೇ ತಿಳಿಸಿದ್ದಾರೆ.


ಕಳೆದ ವಾರ ಸ್ಪೈ ಬಲೂನ್‌ ಪತ್ತೆ ಹಚ್ಚಿದ ಬೆನ್ನಲ್ಲೇ ಈ ಬಾರಿ ಅಂತಹುದೇ ಅನುಮಾನಾಸ್ಪದ ವಸ್ತುವೊಂದು ವಾಯು ಮಾರ್ಗದಲ್ಲಿ ತಿರುಗಾಟ ಮಾಡುತ್ತಿದ್ದರಿಂದ ಚೀನಾ ಕುತಂತ್ರ ನಡೆಸುತ್ತಿದೆ ಎಂಬ ಆತಂಕ ಅಮೆರಿಕಾದಲ್ಲಿ ಹೆಚ್ಚಿದ್ದು, ಈ ಬಗ್ಗೆ ಕಠಿಣ ನಿಲುವು ತಳೆಯುವಂತೆ ಸಾರ್ವಜನಿಕರು ಅಮೆರಿಕಾ ಅಧ್ಯಕ್ಷ ಬೈಡೆನ್ ಸರ್ಕಾರದ ಮೇಲೆ ಒತ್ತಡ ಹೇರಿದ್ದಾರೆ.


ಇದನ್ನೂ ಓದಿ: Pakistan: ಪಾಕ್​ ತಂಡದ ಕೋಚ್​ ಆಗಿ ಅಮೆರಿಕಾ ನೀಲಿ ತಾರೆ ಡ್ಯಾನಿ ಡೇನಿಯಲ್ಸ್! ‘ನೀವು ಭಾರೀ ರಸಿಕರು ಕಣ್ರೋ’ ಅಂತ ಕಾಲೆಳೆದ ನೆಟ್ಟಿಗರು!


ಬೇಹುಗಾರಿಕೆ ನಡೆಸಲಾಗಿತ್ತೇ?


ಇನ್ನು ಕಳೆದ ವಾರ ಹೊಡೆದುರುಳಿಸಿದ ಸ್ಪೈ ಬಲೂನ್ ಇರಬಹುದು ಅಥವಾ ಎರಡನೇ ಬಾರಿಗೆ ಹೊಡೆದುರುಳಿಸಿದ ಅನುಮಾನಾಸ್ಪದ ವಸ್ತು ಇರಬಹುದು ಇವೆರಡು ಕೂಡ ಕಣ್ಗಾವಲಿನ ಉಪಕರಣಗಳನ್ನು ಹೊಂದಿತ್ತೇ ಎಂಬುದನ್ನು ಪತ್ತೆ ಹಚ್ಚಲು ಅಧಿಕಾರಿಗಳು ವಿಫಲರಾಗಿದ್ದಾರೆ. ಯಾಕೆಂದರೆ ಆಕಾಶದಲ್ಲೇ ಈ ಎರಡೂ ಅನುಮಾನಾಸ್ಪದ ವಸ್ತುಗಳನ್ನು ಉಡಾಯಿಸಿದ್ದರಿಂದ ತನಿಖೆಗೆ ಉಪಕಾರಿ ಆಗುವಂತಹ ಅವುಗಳ ಯಾವುದೇ ಅವಶೇಷಗಳು ಅಧಿಕಾರಿಗಳಿಗೆ ಸಿಕ್ಕಿಲ್ಲ. ಹೀಗಾಗಿ ಈ ಬಾರಿ ಉಡಾಯಿಸಿದ ಅನುಮಾನಾಸ್ಪದ ವಸ್ತುವಿನ ಒಳಗೂ ಕಣ್ಗಾವಲಿನ ಉಪಕರಣಗಳು ಇತ್ತೇ ಅನ್ನೋದನ್ನು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ.
ಇನ್ನು ನಿನ್ನೆ ಹೊಡೆದುರುಳಿಸಿದ ಅಪರಿಚಿತ ವಸ್ತುವನ್ನು ಹೊಡೆಯುವ ಮೊದಲು ಅಮೆರಿಕಾದ ಪೆಂಟಗನ್ ಪೈಲೆಟ್‌ಗಳು ಅದನ್ನು ಗಮನಿಸಲು ಸನಿಹಕ್ಕೆ ತೆರಳಿದ್ದರು. ಆ ವೇಳೆ ಅಪರಿಚಿತ ವಸ್ತುವಿನಲ್ಲಿ ಮನುಷ್ಯರು ಇರೋದು ತಿಳಿದು ಬಂದಿಲ್ಲ.

Published by:Avinash K
First published: