ವಾಷಿಂಗ್ಟನ್: 2008ರಲ್ಲಿ ಮುಂಬೈನಲ್ಲಿ (Mumbai) ನಡೆದಿದ್ದ ಭಯೋತ್ಪಾದಕರ ದಾಳಿ ( Terror Attack)) ಪ್ರಕರಣದಲ್ಲಿ ಭಾಗಿಯಾಗಿರುವ ಪಾಕಿಸ್ತಾನ (Pakistan) ಮೂಲದ ಕೆನಡಾ ಉದ್ಯಮಿ ತಹಾವ್ವುರ್ ರಾಣಾನನ್ನು(Tahawwur Rana) ಭಾರತಕ್ಕೆ (India) ಒಪ್ಪಿಸಲು ಅಮೆರಿಕಾ ಸ್ಥಳೀಯ ನ್ಯಾಯಾಲಯ (US Court) ಅನುಮತಿ ನೀಡಿದೆ. ಕಳೆದ ವರ್ಷ ಬಂಧನವಾಗಿದ್ದ ರಾಣಾನನ್ನು ಹಸ್ತಾಂತರಿಸಬೇಕೆಂಬ ಭಾರತ, ಅಮೆರಿಕಾ ಸರ್ಕಾರದ ಮೂಲಕ ಕೋರ್ಟ್ಗೆ ಮನವಿ ಸಲ್ಲಿಸಿತ್ತು.
ಯುಎಸ್ನ ಲಾಸ್ ಏಂಜಲೀಸ್‌ನ ಮ್ಯಾಜಿಸ್ಟ್ರೇಟ್ ನ್ಯಾಯಾಧೀಶರಾದ ಜಾಕ್ವೆಲಿನ್ ಚೂಲ್ಜಿಯನ್ ಅವರು 62 ವರ್ಷದ ರಾಣಾನನ್ನು ಭಾರತಕ್ಕೆ ಒಪ್ಪಿಸಲು ಅನುಮತಿ ನೀಡಿದ್ದಾರೆ. ಭಾರತ-ಅಮೇರಿಕಾ ಹಸ್ತಾಂತರ ಒಪ್ಪಂದದ ಅಡಿಯಲ್ಲಿ ರಾಣಾನನ್ನು ಹಸ್ತಾಂತರಿಸಲು ನಿರ್ಧಾರ ಕೈಗೊಳ್ಳಲಾಗಿದೆ.
ಈ ಹಸ್ತಾಂತರ ನಿರ್ಧಾರವು ವಾಷಿಂಗ್ಟನ್ ಡಿಸಿಗೆ ಪ್ರಧಾನಿ ಮೋದಿಯವರ ಭೇಟಿಗೆ ಒಂದು ತಿಂಗಳ ಮುಂಚೆ ತೆಗೆದುಕೊಳ್ಳಲಾಗಿದೆ. ಅಲ್ಲಿ ಅವರನ್ನು ಅಧ್ಯಕ್ಷ ಜೋ ಬಿಡನ್ ಮತ್ತು ಪ್ರಥಮ ಮಹಿಳೆ ಜಿಲ್ ಬಿಡೆನ್ ಅವರು ಜೂನ್ 22 ರಂದು ಸ್ಟೇಟ್ ಡಿನ್ನರ್ ಆಯೋಜಿಸಲಿದ್ದಾರೆ.
ಮುಂಬೈ ಉಗ್ರರ ದಾಳಿ ಸಂಬಂಧಿಸಿದಂತೆ ಭಾಗಿಯಾಗಿರುವ ಆರೋಪಿಯನ್ನು ಒಪ್ಪಿಸಬೇಕು ಎಂದು ಭಾರತ ಮನವಿ ಮಾಡಿತ್ತು. ಈ ಸಂಬಂಧ ಕಳೆದ ವರ್ಷ ಜೂನ್ 10ರಂದು ಈತನನ್ನು ಬಂಧಿಸಲಾಗಿತ್ತು. ಬಿಡೆನ್ ಸರ್ಕಾರ ರಾಣಾನನ್ನು ಭಾರತಕ್ಕೆ ಹಸ್ತಾಂತರಿಸುವುದಕ್ಕೆ ಕೋರ್ಟ್ಗೆ ಮನವಿ ಸಲ್ಲಿಸಿತ್ತು.
ಕೋರ್ಟ್ ಈ ಪ್ರಕರಣದ ವಿಚಾರಣೆ ಜೂನ್ 2021ರಲ್ಲಿ ಕೊನೆಯದಲ್ಲಿ ವಿಚಾರಣೆ ನಡೆದಿತ್ತು. ರಾಣಾನನ್ನು ಭಾರತಕ್ಕೆ ಒಪ್ಪಿಸಬೇಕು ಎಂದು ಅಮೆರಿಕಾ ಸರ್ಕಾರವು ಮನವಿಯ ಬಗ್ಗೆ ಕೋರ್ಟ್ ಈವರೆಗೆ ತೀರ್ಪು ನೀಡಿರಲಿಲ್ಲ. ಇದೀಗ ರಾಣಾನನ್ನು ಭಾರತಕ್ಕೆ ಒಪ್ಪಿಸಲು ಅನುಮತಿ ನೀಡಿದೆ.
ಮುಂಬೈ ಮೇಲಿನ ದಾಳಿಯ ಯೋಜನೆಯಲ್ಲಿ ಭಾಗಿ
ಪಾಕಿಸ್ತಾನ ಮೂಲದ ಕೆನಡಾ ಪ್ರಜೆಯಾದ ತಹವ್ವುರ್ ರಾಣಾ ತನ್ನ ಬಾಲ್ಯದ ಗೆಳೆಯ ದಾವೂದ್ ಗಿಲಾನಿ ಎಂದು ಕರೆಯಲ್ಪಡುವ ಡೇವಿಡ್ ಕೋಲ್ಮನ್ ಹೆಡ್ಲಿ ಮತ್ತು ಇತರರೊಂದಿಗೆ ಸೇರಿ ಮುಂಬೈನಲ್ಲಿ ಲಷ್ಕರ್ ಭಯೋತ್ಪಾದಕ ದಾಳಿಯ ಯೋಜನೆ ಮತ್ತು ಕಾರ್ಯಗತಗೊಳಿಸುವಿಕೆಯಲ್ಲಿ ಪಾಲು ದಾರನಾಗಿದ್ದಾನೆ ಎಂದು ಭಾರತ ಆರೋಪಿಸಿತ್ತು.
ಮುಂಬೈ ಭಯೋತ್ಪಾದನಾ ದಾಳಿಯನ್ನು ಯೋಜಿಸಿದ್ದ ಪಾಕಿಸ್ತಾನ ಮೂಲದ ಭಯೋತ್ಪಾದಕ ಗುಂಪು ಲಷ್ಕರ್-ಎ-ತೊಯ್ಬಾಗೆ ಸ್ಪೋಟಕ ವಸ್ತುಗಳ ಬೆಂಬಲವನ್ನು ನೀಡಿದ ರಾಣಾನನ್ನು 2011 ರಲ್ಲಿ ಚಿಕಾಗೋದಲ್ಲಿ ದೋಷಿ ಎಂದು ಘೋಷಿಸಲಾಗಿತ್ತು. ಆತ ಡೇವಿಡ್ ಕೋಲ್ಮನ್ ಹೆಡ್ಲಿ ತನ್ನ ಚಿಕಾಗೋ ಮೂಲದ ವಲಸೆ ಕಾನೂನು ವ್ಯವಹಾರದ ಶಾಖೆಯನ್ನು ಮುಂಬೈನಲ್ಲಿ ತೆರೆಯಲು ಮತ್ತು ಡೆನ್ಮಾರ್ಕ್‌ನಲ್ಲಿ ಕಂಪನಿಯ ಪ್ರತಿನಿಧಿಯಾಗಿ ಪ್ರಯಾಣಿಸಲು ಅನುಮತಿಸಿದ ಆರೋಪವನ್ನು ಎದುರಿಸಿದ್ದ ಎಂದು ತಿಳಿದುಬಂದಿದೆ.
ಇದನ್ನೂ ಓದಿ: Mangaluru: ಕದ್ರಿ ದೇವಾಲಯಕ್ಕೆ ನುಗ್ಗಿದ ಮೂವರು ಅಪರಿಚಿತರು; ಮನೆ ಮಾಡಿದ ಆತಂಕ
2008 ನವೆಂಬರ್ 26 ಮುಂಬೈ ನಗರದಲ್ಲಿ ಪಾಕಿಸ್ತಾನದ ಲಷ್ಕರ್-ಇ-ತೊಯ್ಬಾ ಉಗ್ರ ಸಂಘಟನೆಯ ಭಯೋತ್ಪಾದಕರು ದಾಳಿ ನಡೆಸಿದ್ದರು. ಸತತ ಮೂರು ದಿನಗಳ ಕಾಲ ದೇಶದ ಆರ್ಥಿಕ ರಾಜಧಾನಿ ಮುಂಬೈ ಮಹಾನಗರಿ ಉಗ್ರರ ಕಪಿಮುಷ್ಟಿಯಲ್ಲಿ ನಲುಗಿತ್ತು. ಸಮುದ್ರ ಮಾರ್ಗದಿಂದ ಬಂದಿದ್ದ ಲಷ್ಕರ್ ಉಗ್ರ ಸಂಘಟನೆಯ 10 ಉಗ್ರರು ಜನನಿಬಿಡ ಪ್ರದೇಶಗಳಾದ ತಾಜ್ ಮಹಲ್ ಹೊಟೇಲ್, ಒಬೇರಾಯ್ ಹೊಟೇಲ್, ಲಿಯೋಪೋಲ್ಡ್ ಕೆಫೆ, ನಾರಿಮನ್ ಹೌಸ್, ಛತ್ರಪತಿ ಶಿವಾಜಿ ರೈಲ್ವೆ ಟರ್ಮಿನಸ್ ಮೊದಲಾದ ಕಡೆ ಮನಬಂದಂತೆ ಬಂದೂಕು ಮತ್ತು ಬಾಂಬಿನ ಮೂಲಕ ದಾಳಿ ನಡೆಸಿದರು. ಈ ದುರ್ಘಟನೆಯಲ್ಲಿ ಆರು ಜನ ಅಮೆರಿಕಾದ ನಾಗರಿಕರು, ಹಲವು ವಿದೇಶೀಯರೂ ಸೇರಿದಂತೆ 166 ಜನರು ಸಾವಿಗೀಡಾಗಿದ್ದರು. 300ಕ್ಕೂ ಅಧಿಕ ಜನರು ಗಾಯ ಗೊಂಡಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ