news18-kannada Updated:January 20, 2021, 9:00 PM IST
ಜೋ ಬಿಡೆನ್- ಕಮಲಾ ಹ್ಯಾರೀಸ್
'ಅಮೆರಿಕದಲ್ಲಿ ಇಂದು ಹೊಸ ದಿನ' ಎಂದು ನೂತನ ಅಧ್ಯಕ್ಷ ಜೋ ಬಿಡೆನ್ ತಿಳಿಸಿದ್ದಾರೆ. ಅಮೆರಿಕದ 46ನೇ ಅಧ್ಯಕ್ಷರಾಗಿ ಇಂದು ಪ್ರಮಾಣವಚನವನ್ನು ಅವರು ಸ್ವೀಕರಿಸಲಿದ್ದಾರೆ. ಇದಕ್ಕೂ ಮುನ್ನ ಟ್ವೀಟರ್ನಲ್ಲಿ 'ಇಂದು ಅಮೆರಿಕಕ್ಕೆ ಹೊಸ ದಿನ' ಎಂದು ಸಂದೇಶ ರವಾನಿಸಿದ್ದಾರೆ. ಟ್ರಂಪ್ ಶ್ವೇತಭವನ ತೊರೆಯುತ್ತಿದ್ದಂತೆ ಅವರು ಈ ಸಂದೇಶವನ್ನು ಟ್ವೀಟ್ ಮಾಡಿದ್ದಾರೆ. ಜೋ ಬಿಡನ್ ಶ್ವೇತಭವನ ಉದ್ಘಾಟನೆಗೂ ಮುನ್ನವೇ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಶ್ವೇತಭವನದಿಂದ ಹೊರನಡೆದಿದ್ದಾರೆ. ಶ್ವೇತಭವನವನ್ನು ತೊರೆದ ಅವರು ಅಲ್ಲಿನ ಹತ್ತಿರದ ಮಿಲಿಟರಿ ನೆಲೆಗೆ ತೆರಳಲಿದ್ದು, ಅಲ್ಲಿಂದ ಪ್ಲೋರಿಡಾಗೆ ಹಾರಲಿದ್ದಾರೆ. ಸಾಂಪ್ರದಾಯಿಕವಾಗಿ ನಿರ್ಗಮಿತ ಅಧ್ಯಕ್ಷರು ಹೊಸ ಅಧ್ಯಕ್ಷರ ಉದ್ಘಾಟನೆಯಲ್ಲಿ ಹಾಜರಿರುತ್ತಾರೆ. ಆದರೆ, ಟ್ರಂಪ್ ನೂತನ ಅಧ್ಯಕ್ಷ ಜೋ ವಿಡೆನ್ ಶ್ವೇತ ಭವನ ಪ್ರವೇಶದ ವೇಳೆ ಉಪಸ್ಥಿತರಿರಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. ಇನ್ನು ಅವರು ಹೊರಡುವ ವೇಳೆ ಜೋ ಬಿಡೆನ್ಗೆ ಸಂದೇಶವೊಂದನ್ನು ಬಿಟ್ಟು ತೆರಳಿದ್ದಾರೆ ಎಂದು ಅಮೆರಿಕದ ಮಾಧ್ಯಮಗಳು ವರದಿ ಮಾಡಿದೆ.
ಜೋ ಬಿಡೆನ್ ಶ್ವೇತಾ ಭವನ ಪ್ರವೇಶಿಸಿರುವುದಕ್ಕೆ ಮಾಜಿ ಅಧ್ಯಕ್ಷ ಬರಾಕ್ ಒಬಮಾ ಅವರು ಅಭಿನಂದಿಸಿದ್ದಾರೆ.
ಅಮೆರಿಕದ ಉಪಾಧ್ಯಕ್ಷೆಯಾಗಿ ಕಮಲಾ ಹ್ಯಾರಿಸ್ ಪ್ರಮಾಣವಚನ ಸ್ವೀಕರಿಸುತ್ತಿರುವುದಕ್ಕೆ ಅಮೆರಿಕ ಮಾಜಿ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಸಂತಸ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ. ಇದೊಂದು ಐತಿಹಾಸಿಕ ಮತ್ತು ಅದ್ಭುತ ದಿನ ಎಂದು ಬಣ್ಣಿಸಿದ್ದಾರೆ.
ಅಮೆರಿಕದ 46ನೇ ಅಧ್ಯಕ್ಷರ ಪ್ರಮಾಣವಚನ ಕಾರ್ಯಕ್ರಮ ವಾಷಿಂಗ್ಟನ್ ಡಿಸಿಯ ಶ್ವೇತಭವನದ ಪಶ್ಚಿಮ ದ್ವಾರದಲ್ಲಿ ನಡೆಯಲಿದೆ. ಅಮೆರಿಕ ಸುಪ್ರೀಂ ಕೋರ್ಟ್ನ ಮುಖ್ಯ ಜಾನ್ ರಾಬರ್ಟ್ ಬಿಡೆನ್ಗೆ ಪ್ರಮಾಣವಚನ ಬೋಧಿಸಲಿದ್ದಾರೆ. ಕಮಲಾ ಹ್ಯಾರಿಸ್ಗೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಸೋನಿಯಾ ಸೋಟೊಮೇಯರ್ ಪ್ರಮಾಣವಚನ ಬೋಧಿಸಲಿದ್ದಾರೆ. ಪ್ರಮಾಣ ವಚನದ ವೇಳೆ ಹಿಂಸಾಚಾರ ಸಂಭವಿಸಿದಂತೆ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.
Published by:
Seema R
First published:
January 20, 2021, 9:00 PM IST