ಒಡಕು ನಿವಾರಿಸಿ ಜನರನ್ನು ಒಗ್ಗೂಡಿಸುವುದು ನನ್ನ ಗುರಿ: ಅಮೆರಿಕ ನೂತನ ಅಧ್ಯಕ್ಷ ಜೋ ಬೈಡನ್

ಡೊನಾಲ್ಡ್ ಟ್ರಂಪ್ ಬೆಂಬಲಿಗರು ನಮ್ಮ ಶತ್ರುಗಳಲ್ಲ, ಅವರೂ ಅಮೆರಿಕನ್ನರೇ. ನಾನು ಒಡಕು ಸೃಷ್ಟಿಸುವಿಲ್ಲ, ಒಗ್ಗಟ್ಟು ಮೂಡಿಸುವಂಥ ಅಧ್ಯಕ್ಷನಾಗ ಬಯಸುತ್ತೇನೆ ಎಂದು ಅಮೆರಿಕದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಜೋ ಬೈಡನ್ ಹೇಳಿದ್ದಾರೆ.

ಜೋ ಬೈಡನ್ ಮತ್ತು ಕಮಲಾ ಹ್ಯಾರಿಸ್

ಜೋ ಬೈಡನ್ ಮತ್ತು ಕಮಲಾ ಹ್ಯಾರಿಸ್

 • News18
 • Last Updated :
 • Share this:
  ವಾಷಿಂಗ್ಟನ್(ನ. 08): ಡೊನಾಲ್ಡ್ ಟ್ರಂಪ್ ವಿರುದ್ಧ ಗೆಲುವು ಸಾಧಿಸಿ ಅಮೆರಿಕದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಜೋ ಬೈಡನ್ ಅವರು ದೇಶದ ಜನರಲ್ಲಿ ಒಗ್ಗಟ್ಟು ಮೂಡಿಸುವ ತಮ್ಮ ಇಚ್ಛೆಯನ್ನು ತೋರ್ಪಡಿಸಿದ್ದಾರೆ. ಡೆಲಾವೇರ್ ರಾಜ್ಯದ ವಿಲ್ಮಿಂಗ್ಟನ್ ನ ಗರದಲ್ಲಿರುವ ತಮ್ಮ ಮನೆಯ ಬಳಿ ನೆರೆದಿದ್ದ ಬೆಂಬಲಿಗರನ್ನುದ್ದೇಶಿಸಿ ಮಾತನಾಡುತ್ತಾ ಬೈಡನ್ ಅವರು ಈಗ ಅಮೆರಿಕಕ್ಕೆ ಚಿಕಿತ್ಸಕ ಸಮಯ ಬಂದಿದೆ ಎಂದರು.

  “ಒಡಕು ಸೃಷ್ಟಿಸುವುದಲ್ಲ, ಒಗ್ಗಟ್ಟು ಮೂಡಿಸುವಂಥ ಅಧ್ಯಕ್ಷನಾಗಬಯಸುತ್ತೇನೆ” ಎಂದು ಹೇಳಿದ ಅವರು ಡೊನಾಲ್ಡ್ ಟ್ರಂಪ್ ಬೆಂಬಲಿಗರ ವಿರುದ್ಧ ದ್ವೇಷ ಸಾಧನೆ ಇಲ್ಲವೆಂದರು. “ಅವರು (ಟ್ರಂಪ್ ಬೆಂಬಲಿಗರು) ನಮ್ಮ ಶತ್ತುಗಳಲ್ಲ. ಅವರೂ ಅಮೆರಿಕನ್ನರೇ… ಅಮೆರಿಕದಲ್ಲಿ ರಾಕ್ಷಸೀಕರಣದ ಯುಗಾಂತ್ಯದ ಆರಂಭ ಈಗಿನಿಂದಲೇ ಆರಂಭವಾಗಲಿ” ಎಂದು ಬಿಡೆನ್ ತಿಳಿಸಿದರು.

  “ನಾನು ಅಮೆರಿಕ ಅಧ್ಯಕ್ಷನಾಗಿ ಈ ದೇಶದ ಆತ್ಮಕ್ಕೆ ಮರುಜೀವ ತುಂಬಲು, ಈ ದೇಶದ ಬೆನ್ನೆಲುಬಾದ ಮಧ್ಯಮ ವರ್ಗದವರಿಗೆ ಪುಷ್ಟಿ ತುಂಬಲು ಮತ್ತು ಅಮೆರಿಕಕ್ಕೆ ಮತ್ತೆ ಜಾಗತಿಕ ಗೌರವ ಸಿಗಲು ಕೆಲಸ ಮಾಡುತ್ತೇನೆ” ಎಂದು ಜೋ ಬೈಡನ್ ಹೇಳಿದರು.

  ಇದನ್ನೂ ಓದಿ: ವಿಶ್ವಸಂಸ್ಥೆಯ ಆಡಳಿತ-ಹಣಕಾಸು ಸಲಹಾ ಸಮಿತಿಗೆ ಭಾರತದ ರಾಜತಾಂತ್ರಿಕ ಅಧಿಕಾರಿ ವಿದಿಷಾ ಮೈತ್ರಾ ಆಯ್ಕೆ

  “ಈ ದೇಶದ ಜನರು ಮಾತನಾಡಿದ್ದಾರೆ. ನಮಗೆ ಸ್ಪಷ್ಟ ಗೆಲುವು ನೀಡಿದ್ದಾರೆ” ಎಂದು ಹೇಳಿದ ಅವರು, ಟ್ರಂಪ್ ಅವರನ್ನು ಸೋಲಿಸಲು ಪ್ರಮುಖ ಪಾತ್ರ ವಹಿಸಿದ ಆಫ್ರಿಕನ್-ಅಮೆರಿಕನ್ ಸಮುದಾಯಕ್ಕೆ ಇದೇ ವೇಳೆ ವಂದನೆ ಸಲ್ಲಿಸಿದರು.

  ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಾಟ್ ಪಕ್ಷದ ಜೋ ಬೈಡನ್ ಅವರು ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ವಿರುದ್ಧ ಅಮೋಘ ಗೆಲುವು ಸಾಧಿಸಿದರು. ಬಹುಮತಕ್ಕೆ ಬೇಕಾದ 270 ಎಲೆಕ್ಟೋರಲ್ ವೋಟ್​ಗಳ ಪ್ರಮಾಣ ದಾಟಿ ಬೈಡನ್ 290 ವೋಟರ್ಸ್ ಬೆಂಬಲ ಹೊಂದಿದ್ದಾರೆ. ಡೊನಾಲ್ಡ್ ಟ್ರಂಪ್ ಅವರಿಗಿರುವ ಬೆಂಬಲ 213 ಮಾತ್ರ. ಬೈಡನ್ ಈವರೆಗೆ 7.45 ಕೋಟಿ ಜನರ ಮತಗಳನ್ನ ಪಡೆದರೆ, ಟ್ರಂಪ್ 7.02 ಕೋಟಿ ಜನರ ಬೆಂಬಲ ಪಡೆದಿದ್ದಾರೆ.

  ಇದನ್ನೂ ಓದಿ: ಅಮೆರಿಕ ಚುನಾವಣೆ; ಜೋ ಬಿಡೆನ್, ಕಮಲಾ ಹ್ಯಾರೀಸ್​ಗೆ ಅಭಿನಂದನೆ ಕೋರಿದ​ ನರೇಂದ್ರ ಮೋದಿ, ರಾಹುಲ್ ಗಾಂಧಿ

  ಭಾರತೀಯ ಮೂಲಕ ಕಮಲಾ ಹ್ಯಾರಿಸ್ ಅವರು ಜೋ ಬೈಡನ್​ಗೆ ಡೆಪ್ಯೂಟಿ ಆಗಿದ್ದಾರೆ. ಅಂದರೆ ಅವರು ಅಮೆರಿಕದ ಉಪಾಧ್ಯಕ್ಷೆಯಾಗಿದ್ದಾರೆ. ಈ ಸಾಧನೆ ಮಾಡಿದ ಅಮೆರಿಕದ ಮೊದಲ ಮಹಿಳೆ ಎಂಬ ಸಾರ್ವತ್ರಿಕ ದಾಖಲೆಯನ್ನೂ ಅವರು ಮಾಡಿದ್ದಾರೆ. ಕಮಲಾ ಹ್ಯಾರಿಸ್ ಅವರ ತಾಯಿ ಭಾರತೀಯೆಯಾದರೆ ತಂದೆ ವೆನಿಜ್ಯುವೆಲಾ ದೇಶದವರು. ಹೀಗಾಗಿ, ಅವರು ತಮ್ಮನ್ನು ಆಫ್ರಿಕನ್ ಅಮೆರಿಕನ್ ಎಂದೇ ಕಮಲಾ ಅವರು ಹೆಚ್ಚಾಗಿ ಹೇಳಿಕೊಳ್ಳುತ್ತಾರೆ.
  Published by:Vijayasarthy SN
  First published: