ಪಾಟ್ನಾ (ಬಿಹಾರ): ಮುಖ್ಯಮಂತ್ರಿ ನಿತೀಶ್ ಕುಮಾರ್ (CM Nitish Kumar) ಅವರ ತವರು ಜಿಲ್ಲೆ ನಳಂದಾದಲ್ಲಿ ದಯಾನೀಯ ಘಟನೆಯೊಂದು ನಡೆದಿದೆ. ಆಂಬ್ಯುಲೆನ್ಸ್ (Ambulance) ಬಾರದ ಹಿನ್ನೆಲೆ ತರಕಾರಿ ಮಾರುವ ತಳ್ಳು ಗಾಡಿಯಲ್ಲೇ ಗರ್ಭಿಣಿ ಪತ್ನಿಯನ್ನು (Pregnant Wife) ಆಸ್ಪತ್ರೆಗೆ ಸಾಗಿಸಲಾಗಿದೆ. ಬಿಹಾರ್ ಶರೀಫ್ನ ಕಮ್ರುದ್ದೀನ್ ಗಂಜ್ ನಿವಾಸಿ ರಾಜೀವ್ ಪ್ರಸಾದ (Rajeev Prasad) ಎಂಬುವರು ಗರ್ಭಿಣಿ ಪತ್ನಿಯನ್ನು ತಳ್ಳು ಗಾಡಿಯಲ್ಲಿ ಆಸ್ಪತ್ರೆಗೆ (Hospital) ಸೇರಿಸಿದ್ದಾರೆ.
ಆಂಬ್ಯುಲೆನ್ಸ್ ಕಳುಹಿಸುವಂತೆ ಮನವಿ
ಪತ್ನಿಗೆ ಹೆರಿಗೆ ನೋವು ಕಾಣಿಸಿಕೊಂಡ ಬಳಿಕ ರಾಜೀವ್ ಪ್ರಸಾದ ಆಂಬ್ಯುಲೆನ್ಸ್ಗೆ ಕರೆ ಮಾಡಿದ್ದಾರೆ. ಆಸ್ಪತ್ರೆಯ ಉಚಿತ ಕರೆ ನಂಬರ್ಗೆ ಪದೇ ಪದೇ ಕರೆ ಮಾಡಿ ಆಂಬ್ಯುಲೆನ್ಸ್ ಕಳುಹಿಸುವಂತೆ ಮನವಿ ಮಾಡಿದ್ದಾರೆ. ಆದರೆ ಅವರು ರಾಜೀವ್ ಮನವಿಗೆ ಕ್ಯಾರೆ ಎಂದಿಲ್ಲ.
ತರಕಾರಿ ಗಾಡಿಯಲ್ಲಿ ಪತ್ನಿ ಕರೆತಂದ ಪತಿ
ಬಳಿಕ ಏನು ಮಾಡ್ಬೇಕು ಎನ್ನುವುದು ತಿಳಿಯದೆ ಅನಿವಾರ್ಯವಾಗಿ ತರಕಾರಿ ಗಾಡಿಯಲ್ಲಿ ಪತ್ನಿಯನ್ನು ಕರೆದುಕೊಂಡು ಹೋಗಿದ್ದಾರೆ. ಅಷ್ಟೇ ಅಲ್ಲದೆ ಆಸ್ಪತ್ರೆಗೆ ಹೋದ ನಂತರ ಸ್ಟ್ರೆಚರ್ ನೀಡಲು ಸಹ ಅಲ್ಲಿನ ಸಿಬ್ಬಂದಿ ನಿರಾಕರಿಸಿದರು. ಹೀಗಾಗಿ ಗಾಡಿಯನ್ನೇ ಎಮರ್ಜೆನ್ಸಿ ವಾರ್ಡ್ವರೆಗೆ ತೆಗೆದುಕೊಂಡು ಹೋದೆ ಎಂದು ರಾಜೀವ್ ಪ್ರಸಾದ್ ಆರೋಪಿಸಿದ್ದಾರೆ.
ಆಸ್ಪತ್ರೆಯಲ್ಲಿ ಸ್ಟ್ರೆಚರ್ ಕೂಡ ನೀಡಿಲ್ಲ
ಆಂಬ್ಯುಲೆನ್ಸ್ ನೀಡದೆ ತರಕಾರಿ ಗಾಡಿಯಲ್ಲಿ ಹೆಂಡತಿಯನ್ನು ಆಸ್ಪತ್ರೆಗೆ ಕರೆದೊಯ್ದರೂ ಆಸ್ಪತ್ರೆ ಬಾಗಿಲಿನಲ್ಲೂ ಸ್ಟ್ರೆಚರ್ ನೀಡಿಲ್ಲ. ಬಳಿಕ ತಳ್ಳುವ ಗಾಡಿಯಲ್ಲೇ ಹೆಂಡತಿಯನ್ನು ವಾರ್ಡ್ಗೆ ಶಿಫ್ಟ್ ಮಾಡಿದ್ದಾನೆ.
ಬಿಹಾರದಲ್ಲಿ ಇಂಥಾ ಘಟನೆ ಸಾಮಾನ್ಯವಾಗಿ ಹೋಗಿದೆ
ಸರ್ಕಾರಿ ಆಸ್ಪತ್ರೆಗಳು ಆಂಬ್ಯುಲೆನ್ಸ್ ನೀಡಲು ನಿರಾಕರಿಸುವುದರಿಂದ ಜನರು ಮೃತ ದೇಹಗಳನ್ನು ಹೆಗಲ ಮೇಲೆ, ಸೈಕಲ್ಗಳಲ್ಲಿ ಸಾಗಿಸುವ ಪರಿಸ್ಥಿತಿ ಬಿಹಾರದಲ್ಲಿ ಸಾಮಾನ್ಯವಾಗಿದೆ. ಆದ್ರೆ ಈ ಪ್ರಕರಣದಲ್ಲಿ ಜೀವಂತ ಇರುವ ಗರ್ಭಿಣಿಯನ್ನು ಕರೆದೊಯ್ಯಲು ಆಂಬ್ಯುಲೆನ್ಸ್ ಬರದಿರುವುದು ವಿಪರ್ಯಾಸವೇ ಸರಿ.
ಇದನ್ನೂ ಓದಿ: Police Suspend: ದಂಪತಿಯಿಂದ ಹಣ ವಸೂಲಿ; ಇಬ್ಬರು ಹೊಯ್ಸಳ ಗಸ್ತು ಪೊಲೀಸರು ಸಸ್ಪೆಂಡ್
ಅನೇಕ ಯೋಜನೆ ಆರಂಭಿಸಿದ್ರು ಪ್ರಯೋಜನವಿಲ್ಲ
ಇಂಥ ಸಮಸ್ಯೆಗಳ ನಿವಾರಣೆಗಾಗಿ ಬಿಹಾರದ ಆರೋಗ್ಯ ಸಚಿವ ತೇಜಸ್ವಿ ಯಾದವ್ ಅವರು ಪ್ರತಿ ಜಿಲ್ಲಾ ಆಸ್ಪತ್ರೆಗೆ ಹಾಸಿಗೆ, ಸ್ಟ್ರೆಚರ್ಗಳು, ಆಂಬ್ಯುಲೆನ್ಸ್, ಆಮ್ಲಜನಕ ಸಿಲಿಂಡರ್, ಔಷಧಿ, ಮತ್ತು ಇತರ ಸಾಧನಗಳನ್ನು ಉಚಿತವಾಗಿ ಒದಗಿಸಲು ಮಿಷನ್ 60 ಯೋಜನೆಯನ್ನು ಪ್ರಾರಂಭಿಸಿದ್ದರು.
ಮೂಟೆಯಲ್ಲಿ ಪತ್ನಿ ಶವ ಸಾಗಿಸಿದ
ಪತ್ನಿಯ ಶವ ಸಂಸ್ಕಾರಕ್ಕೂ (Cremation) ಹಣವಿಲ್ಲದೇ ಪತ್ನಿಯ ಶವವನ್ನು ಮೂಟೆಯಲ್ಲಿ ತುಂಬಿಕೊಂಡು ಹೋಗಿರುವ ಹೃದಯವಿದ್ರಾವಕ ಘಟನೆ ಚಾಮರಾಜನಗರ (Chamarajanagar) ಜಿಲ್ಲೆಯ ಯಳಂದೂರು ಪಟ್ಟಣದಲ್ಲಿ ನಡೆದಿತ್ತು. ಮಂಡ್ಯ ಮೂಲದ ಕಾಳಮ್ಮ(26) ಎಂಬುವರು ಮೃತಪಟ್ಟಿದ್ದು, ಅವರ ಪತಿ ರವಿ ಮೂಟೆಯಲ್ಲಿ ಶವ (Dead Body) ಸಾಗಿಸಿದ್ದರು. ಈ ವೇಳೆ ಪೊಲೀಸರೇ (Police) ಮಧ್ಯಪ್ರವೇಶ ಮಾಡಿ ವಿಚಾರಿಸಿದ್ದಾರೆ.
ಆಲೆಮನೆಯಲ್ಲಿ ವಾಸವಿದ್ದ ಗಂಡ-ಹೆಂಡತಿ
ಹೆಗಲ ಮೇಲೆ ಹೊತ್ತುಕೊಂಡು ಹೋಗ್ತಿದ್ದ ಪತಿ
ಅನಾರೋಗ್ಯದಿಂದ ಬಳಲುತ್ತಿದ್ದ ಕಾಳಮ್ಮ ಮಂಗಳವಾರ ರಾತ್ರಿ ಮೃತಪಟ್ಟಿದ್ದಾರೆ. ಆಕೆಯನ್ನು ಕಳೆದುಕೊಂಡು ನೋವಿನಲ್ಲಿದ್ದ ಪತಿಗೆ ಅಂತ್ಯಸಂಸ್ಕಾರಕ್ಕೆ ಹಣ ಹೊಂದಿಸುವುದು ಹೇಗೆಂದು ದಿಕ್ಕು ತೋಚದೆ ಶವವನ್ನು ಚೀಲದಲ್ಲಿ ಹಾಕಿಕೊಂಡು ತನ್ನ ಹೆಗಲ ಮೇಲೆ ಹೊತ್ತುಕೊಂಡು ಪಟ್ಟಣದ ಸುವರ್ಣವತಿ ನದಿ ಕಡೆಗೆ ಅಂತ್ಯ ಸಂಸ್ಕಾರ ಮಾಡಲೆಂದು ತೆರಳಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ