• Home
  • »
  • News
  • »
  • national-international
  • »
  • Ambulance Theft: ಆ್ಯಂಬುಲೆನ್ಸ್ ಕದ್ದು 8 ಕಿಮೀ ಓಡಿಸಿ ಪಾರಾದ 13 ವರ್ಷದ ಬಾಲಕ!

Ambulance Theft: ಆ್ಯಂಬುಲೆನ್ಸ್ ಕದ್ದು 8 ಕಿಮೀ ಓಡಿಸಿ ಪಾರಾದ 13 ವರ್ಷದ ಬಾಲಕ!

ಆ್ಯಂಬುಲೆನ್ಸ್

ಆ್ಯಂಬುಲೆನ್ಸ್

ಆ್ಯಂಬುಲೆನ್ಸ್ ವಾಹನ ಚಾಲಕ ಬಿಜೋ ಎಂಬ ವ್ಯಕ್ತಿ ಕೀಲಿಯನ್ನು ವಾಹನದೊಳಗೆ ಬಿಟ್ಟು ನೀರು ಸಂಗ್ರಹಿಸಲು ಹೊರಟಿದ್ದಾಗ ಅಪ್ರಾಪ್ತ ಬಾಲಕ ವಾಹನವನ್ನು ಕಳ್ಳತನ ಮಾಡಿದ್ದಾನೆ ಎನ್ನಲಾಗಿದೆ.

  • News18 Kannada
  • 2-MIN READ
  • Last Updated :
  • Kerala, India
  • Share this:

    ತ್ರಿಶೂರ್: ಕೇರಳದ (Kerala) ತ್ರಿಶೂರ್‌ನಲ್ಲಿ 13 ವರ್ಷದ ಬಾಲಕನೊಬ್ಬ ಆಸ್ಪತ್ರೆಯಿಂದ ಆ್ಯಂಬುಲೆನ್ಸ್ ಕದ್ದು 8 ಕಿ.ಮೀ ದೂರ ಓಡಿಸಿದ ವಿಲಕ್ಷಣ ಘಟನೆ ಮಂಗಳವಾರ ನಡೆದಿದೆ. ಆ್ಯಂಬುಲೆನ್ಸ್ (Ambulance) ಚಾಲಕ ಕಳ್ಳತನದ ದೂರು ದಾಖಲಿಸಿದ್ದಾರೆ. ವರದಿಗಳ ಪ್ರಕಾರ, 10 ನೇ ತರಗತಿಯಲ್ಲಿ ಓದುತ್ತಿರುವ ಹುಡುಗ ಸುಮಾರು ಒಂದು ವಾರದಿಂದ ಜ್ವರದಿಂದ ಬಳಲುತ್ತಿದ್ದ. ಜ್ವರಕ್ಕೆ ಎಂದು ತ್ರಿಶೂರ್ ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ (Treatment)  ಪಡೆಯುತ್ತಿದ್ದ. ಬಾಲಕನ ತಂದೆ ಅದೇ ಆಸ್ಪತ್ರೆಯಲ್ಲಿ (Hospital) ಕೆಲಸ ಮಾಡುತ್ತಿದ್ದರು ಎಂದು ವರದಿಯಾಗಿದೆ.


    ನಿನ್ನೆ ಬಾಲಕ ಆಸ್ಪತ್ರೆಯ ಹೊರಗೆ ನಿಲ್ಲಿಸಿದ್ದ ಆಂಬ್ಯುಲೆನ್ಸ್ ಅನ್ನು ಅದರ ಚಾಲಕ ವಾಹನದಿಂದ ದೂರ ಹೋದಾಗ ಬಾಲಕ ಕದ್ದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆ್ಯಂಬುಲೆನ್ಸ್ ವಾಹನ ಚಾಲಕ ಬಿಜೋ ಎಂಬ ವ್ಯಕ್ತಿ ಕೀಲಿಯನ್ನು ವಾಹನದೊಳಗೆ ಬಿಟ್ಟು ನೀರು ಸಂಗ್ರಹಿಸಲು ಹೊರಟಿದ್ದಾಗ ಅಪ್ರಾಪ್ತ ಬಾಲಕ ವಾಹನವನ್ನು ಕಳ್ಳತನ ಮಾಡಿದ್ದಾನೆ ಎನ್ನಲಾಗಿದೆ.


    ಉತ್ತರ ಪ್ರದೇಶದಲ್ಲಿ 5 ವರ್ಷದ ಬಾಲಕನನ್ನು ರಸ್ತೆಗೆ ಬಡಿದು ಕೊಂದ ರಕ್ಕಸ!
    ಉತ್ತರ ಪ್ರದೇಶದ ಪ್ರತಾಪ್‌ಗಢದಲ್ಲಿ ಹುಚ್ಚು ಯುವಕನೊಬ್ಬ ಅಮಾಯಕನನ್ನು ಥಳಿಸಿ ಬರ್ಬರವಾಗಿ ಕೊಂದಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಪ್ರಕರಣವು ಉದಯಪುರ ಪೊಲೀಸ್ ಠಾಣಾ ವ್ಯಾಪ್ತಿಯ ಭಾಗವತ್ ಗ್ರಾಮದಲ್ಲಿ ನಡೆದಿದೆ.  ಹುಚ್ಚು ಯುವಕ ರಸ್ತೆಯಲ್ಲಿ ಸರಕುಗಳನ್ನು ಖರೀದಿಸಲು ಹೋಗುತ್ತಿದ್ದ ಐದು ವರ್ಷದ ಅಮಾಯಕ ಬಾಲಕನನ್ನು ಹೊಡೆದು ಕೊಂದಿದ್ದಾನೆ. ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಈ ಹೃದಯ ವಿದ್ರಾವಕ ಘಟನೆಯಿಂದ ಪ್ರದೇಶದಲ್ಲಿ ಸಂಚಲನ ಮೂಡಿದೆ.


    ಇದನ್ನೂ ಓದಿ: Uttarakhand: ಡ್ಯಾನ್ಸ್​ ಮಾಡುತ್ತಾ ಕುಸಿದು ಬಿದ್ದ ತಂದೆ, ಮಗಳ ಮದುವೆಯ ಹಿಂದಿನ ದಿನವೇ ದಾರುಣ ಸಾವು!


    ಬಾಲಕ ಮೃತಪಟ್ಟಿರುವುದಾಗಿ ಘೋಷಿಸಿದ ವೈದ್ಯರು
    ಘಟನೆಯ ನಂತರ ಆರೋಪಿ ಅರವಿಂದ್ ಪರಾರಿಯಾಗಿದ್ದಾನೆ. ಗ್ರಾಮಸ್ಥರ ನೆರವಿನಿಂದ ಸಂಬಂಧಿಕರು ಮಗುವನ್ನು ವೈದ್ಯಕೀಯ ಕಾಲೇಜಿಗೆ ಕರೆದೊಯ್ದಿದ್ದಾರೆ. ಆದರೆ ವೈದ್ಯರು ಮಗು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ. ಮಾಹಿತಿ ಲಭಿಸಿದ ತಕ್ಷಣ ಸಿಒ ಜೊತೆಗೆ ಭಾರೀ ಪೊಲೀಸ್ ಪಡೆ ಸ್ಥಳಕ್ಕೆ ತಲುಪಿತು. ಅಲ್ಲದೆ ಈ ಬಗ್ಗೆ ತನಿಖೆ ನಡೆಸಿದ್ದಾರೆ. ಯುವಕ ಅಮಾಯಕನನ್ನು ಹೊಡೆದು ಕೊಂದಿದ್ದಾನೆ ಎಂದು ಲಾಲ್‌ಗಂಜ್ ಸರ್ಕಲ್ ಸಿಒ ರಾಮ್‌ಸುರತ್ ಸೋಂಕರ್ ತಿಳಿಸಿದ್ದಾರೆ.


    ಇದನ್ನೂ ಓದಿ: Uttarakhand: ಧರ್ಮ ಮುಚ್ಚಿಟ್ಟು ಮದುವೆ ನಾಟಕ: ವಿವಾಹದ ಹಿಂದಿನ ದಿನ ಸಿಕ್ಕಿಬಿದ್ದ ಕಿರಾತಕ!


    ಅದೇ ಸಮಯದಲ್ಲಿ, ವೈದ್ಯಕೀಯ ಕಾಲೇಜಿನಲ್ಲಿ ಮಗು ಸತ್ತಿದೆ ಎಂದು ವೈದ್ಯರು ಘೋಷಿಸಿದ್ದಾರೆ. ಇದನ್ನು ಕೇಳಿದ ಪೋಷಕರು ಗಾಬರಿಗೊಂಡಿದ್ದಾರೆ. ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಸಿಕ್ಕಿರುವ ಮಾಹಿತಿ ಪ್ರಕಾರ ಭಾಗವತ್ ಗ್ರಾಮದ ನಿವಾಸಿ ಕಮಲೇಶ್ ಜಮೀನಿಗೆ ತೆರಳಿದ್ದು, ಪತ್ನಿ ಮಕ್ಕಳು ಮನೆಯಲ್ಲಿದ್ದರು. ಈ ಮಧ್ಯೆ, ಐದು ವರ್ಷದ ಮುಗ್ಧ ಬಾಲಕ ಅಗತ್ಯ ಸಾಮಾಗ್ರಿಗಳನ್ನು ಖರೀದಿಸಲು ಅಂಗಡಿಗೆ ಹೋಗುತ್ತಿದ್ದ. ಇದೇ ಸಂದರ್ಭದಲ್ಲಿ ಇತ್ತ ಆರೋಪಿ ಅರವಿಂದ್ ತನ್ನ ಮನೆಯ ಬಳಿ ಕುಟುಂಬ ಸದಸ್ಯರೊಂದಿಗೆ ಜಗಳ ಮಾಡುತ್ತಿದ್ದ.


    ಬರಲಿಲ್ಲ ಆಂಬ್ಯುಲೆನ್ಸ್, ತರಕಾರಿ ಗಾಡಿಯಲ್ಲಿ ಗರ್ಭಿಣಿ ಪತ್ನಿಯನ್ನು ಆಸ್ಪತ್ರೆಗೆ ಸಾಗಿಸಿದ ಪತಿ
    ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ತವರು ಜಿಲ್ಲೆ ನಳಂದಾದಲ್ಲಿ ದಯಾನೀಯ ಘಟನೆಯೊಂದು ನಡೆದಿದೆ. ಆಂಬ್ಯುಲೆನ್ಸ್ ಬಾರದ ಹಿನ್ನೆಲೆ ತರಕಾರಿ ಮಾರುವ ತಳ್ಳು ಗಾಡಿಯಲ್ಲೇ ಗರ್ಭಿಣಿ ಪತ್ನಿಯನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಬಿಹಾರ್ ಶರೀಫ್​ನ ಕಮ್ರುದ್ದೀನ್ ಗಂಜ್ ನಿವಾಸಿ ರಾಜೀವ್ ಪ್ರಸಾದ  ಎಂಬುವರು ಗರ್ಭಿಣಿ ಪತ್ನಿಯನ್ನು ತಳ್ಳು ಗಾಡಿಯಲ್ಲಿ ಆಸ್ಪತ್ರೆಗೆ ಸೇರಿಸಿದ್ದಾರೆ.

    Published by:ಗುರುಗಣೇಶ ಡಬ್ಗುಳಿ
    First published: