ಮಗಳ ಮದುವೆ ನಿಮಿತ್ತ ಸಾವಿರಾರು ಜನರಿಗೆ ಅನ್ನಸೇವೆ ಮಾಡಿದ ಅಂಬಾನಿ ಕುಟುಂಬ

Ganesh Nachikethu
Updated:December 8, 2018, 9:04 AM IST
ಮಗಳ ಮದುವೆ ನಿಮಿತ್ತ ಸಾವಿರಾರು ಜನರಿಗೆ ಅನ್ನಸೇವೆ ಮಾಡಿದ ಅಂಬಾನಿ ಕುಟುಂಬ
Ganesh Nachikethu
Updated: December 8, 2018, 9:04 AM IST
ಏಷ್ಯಾದ ಶ್ರೀಮಂತ ಉದ್ಯಮಿ, ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಅವರ ಪುತ್ರಿ ಇಶಾ ಅಂಬಾನಿಯವರ ಮದುವೆಗೆ ತಯಾರಿ ನಡೆಯುತ್ತಿದೆ. ಡಿಸೆಂಬರ್ 12 ರಂದು ಮದುವೆ ನಡೆಯಲಿದ್ದು, ಸಾಲುಸಾಲು ವಿವಾಹಪೂರ್ವ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಇದರ ಭಾಗವಾಗಿಯೇ ಇಂದು ಉದಯಪುರದಲ್ಲಿ ಅನ್ನ ಸೇವಾ ಕಾರ್ಯಕ್ರಮವೂ ಆಯೋಜಿಸಲಾಗಿದೆ. ನಾರಾಯಣ ಸೇವಾ ಸಂಸ್ಥಾನದಲ್ಲಿ ಇವತ್ತು, ಡಿಸೆಂಬರ್ 7 ರಿಂದ ಅನ್ನಸಂತರ್ಪಣೆ ಪ್ರಾರಂಭವಾಗಿದ್ದು, 10 ರವರೆಗೂ ಈ ಕಾರ್ಯಕ್ರಮ  ನಡೆಯಲಿದೆ.

ಮುಖೇಶ್ ಅಂಬಾನಿಯವರು ಈ ಬಗ್ಗೆ ಈಗಾಗಲೇ ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. ಇಲ್ಲಿ ಉದಯಪುರ್ ಜನರ ಆಶೀರ್ವಾದ ನಮ್ಮ ಮನೆಯ ಮಗಳಿಗೆ ಬೇಕಿದೆ. ನಮ್ಮಿಂದ ಒಂದಷ್ಟು ಜನರ ಹಸಿವು ನೀಗುತ್ತದೆ ಎಂದರೆ ಸಂತಸದ ವಿಷಯ. ಹೀಗಾಗಿ ಸುಮಾರು 5,100 ಜನರ ಹಸಿವು ನೀಗಿಸುವಂತಹ ಅನ್ನ ಸೇವಾ ಯೋಜನೆ ಹಾಕಿಕೊಂಡಿದ್ದೇವೆ. ಇಲ್ಲಿ ಮೂರು ದಿನಗಳ ಕಾಲ ಮೂರು ಹೊತ್ತು ಅನ್ನ ಸಂತರ್ಪಣೆ ನಡೆಯಲಿದೆ ಎಂದರು.ಇಂದು ನಡೆದ ಅನ್ನ ಸೇವಾ ಕಾರ್ಯಕ್ರಮದಲ್ಲಿ ಮುಖೇಶ್ ಅಂಬಾನಿ ಸೇರಿದಂತೆ ನೀತಾ ಅಂಬಾನಿ, ಅಜಯ್, ಸ್ವಾತಿ ಪಿರಮಾಳ್, ಇಶಾ ಅಂಬಾನಿ ಹಾಗೂ ಆನಂದ್ ಪಿರಮಾಳ್ ಅವರು ಭಾಗಿಯಾಗಿದ್ದಾರೆ. ಇವರ ಪ್ರೀತಿಗೆ ಜನರು ಮೆಚ್ಚುಗೆ ಕೂಡ ವ್ಯಕ್ತಪಡಿಸಿದ್ದಾರೆ.

ಇನ್ನು, ನಿಶಾ ಅಂಬಾನಿಯವರ ವಿವಾಹಪೂರ್ವ ಕಾರ್ಯಕ್ರಮಗಳೂ ನಡೆಯಲಿದೆ. ಈ ವೇಳೆ ಕರಕುಶಲ ವಸ್ತುಗಳ ಪ್ರದರ್ಶನಕ್ಕಾಗಿ ಸ್ವದೇಶಿ ಬಜಾರ್ ಸೆಟಪ್ ಮಾಡಲಾಗುತ್ತದೆ. ದೇಶದ ವಿವಿಧ ಭಾಗಗಳಿಂದ 108 ಬಗೆಯ ವೈವಿಧ್ಯಮಯವಾದ ಕರಕುಶಲ ಕಲಾ ವಸ್ತುಗಳ ಪ್ರದರ್ಶನ ನಡೆಯಲಿದೆ. ಈ ಕರಕುಶಲ ವಸ್ತುಗಳ ಪ್ರದರ್ಶನ ಕಲಾರಸಿಕರಿಗೆ ರಸದೌತಣ ನೀಡಲಿದೆ. ಇಂಥ ಅದ್ಭುತವಾದ ಕಲಾ ಲೋಕದ ದರ್ಶನಕ್ಕೆ ಮುಖ್ಯ ಅತಿಥಿಗಳಾಗಿ ಗಣ್ಯರು ಆಗಮಿಸಲಿದ್ದಾರೆ.ಹವ್ಯಾಸಿ ಕಲಾವಿದರು, ವಿದ್ಯಾರ್ಥಿಗಳು ಹಾಗೂ ವೃತ್ತಿಪರ ಕಲಾವಿದರಿಂದ 108ಕ್ಕೂ ಅಧಿಕ ಚಿತ್ರಗಳ ಪ್ರದರ್ಶನ ನಡೆಯಲಿದೆ. ಒಂದೊಂದು ಭಿನ್ನ ವಿಭಿನ್ನ ಕಥೆಗಳನ್ನು ಬಿಂಬಿಸುವ ಚಿತ್ರಕಲಾ ಪ್ರದರ್ಶನ ಮನಸೂರೆಗೊಳ್ಳಲಿದೆ. ನೋಡುಗರ ಭಾವಕ್ಕನುಗುಣವಾಗಿ ಶೀರ್ಷಿಕೆ ವಸ್ತು ಚಿತ್ರಗಳು ಹಾಗೂ ಚಿತ್ರಗಳು ವೀಕ್ಷಕರ ಮನಸ್ಸನ್ನು ಸೆಳೆಯಲಿದೆ.
Loading...

ಅನಿಲ್ ಅಂಬಾನಿಯವರ ಸ್ವದೇಶಿ ಬಜಾರ್ ಎಂಬ ಕಲ್ಪನೆ ಅದ್ಭುತವಾಗಿದೆ. ಕರಕುಶಲ ಗೃಹ-ಉದ್ಯಮಗಳ ಕಾರ್ಮಿಕರು/ಕುಶಲ ಕರ್ಮಿಗಳಿಗೆ ಸಹಾಯವಾಗಲಿದೆ ಎನ್ನಲಾಗಿದೆ. ಈಗಾಗಲೇ ರಿಲಯನ್ಸ್ ಸಂಸ್ಥೆಯಿಂದ ಹಲವಾರು ಸಾವಿರಾರು ಕುಶಲ ಕರ್ಮಿಗಳಿಗೆ ಬೆಂಬಲವಾಗಿ ನಿಂತಿದೆ. ಅಲ್ಲದೇ ತಮ್ಮ ಗುರಿಯನ್ನು ತಲುಪಿಸಲು ಎಲ್ಲಾ ರೀತಿಯಲ್ಲೂ ಸಹಾಯ ಮಾಡಿದೆ ಎನ್ನಲಾಗಿದೆ.

ಇತ್ತೀಚೆಗಷ್ಟೆ ಮಗನ ಮದುವೆ ಸಂಭ್ರಮ ಮುಗಿಸಿರುವ ರಿಲಯನ್ಸ್ ಇಂಡಸ್ಟ್ರೀಸ್ ಸಂಸ್ಥೆಯ ಒಡೆಯ ಮುಖೇಶ್ ಅಂಬಾನಿ ಮನೆಯಲ್ಲಿ ಈಗ ಮತ್ತೊಂದು ಮದುವೆ ಸಂಭ್ರಮ. ಮುಖೇಶ್ ಅಂಬಾನಿ ಅವರ ಒಬ್ಬಳೆ ಮಗಳಾದ ಇಶಾ ಅಂಬಾನಿ ಇದೇ ಡಿಸೆಂಬರ್ 12ರಂದು ಆನಂದ್ ಅವರನ್ನು ಕೈ ಹಿಡಿಯಲ್ಲಿದ್ದು, ಮನೆಯಲ್ಲಿ ಈಗಾಗಲೇ ಸಂಭ್ರಮ ಹೆಚ್ಚಿದೆ. ದೇಶದ ಶ್ರೀಮಂತ ಉದ್ಯಮಿಗಳಲ್ಲಿ ಒಬ್ಬರಾದ ಮುಖೇಶ್ ಮಗಳ ಮದುವೆಗೆ ವಿಶೇಷ ಆಮಂತ್ರಣ ಪತ್ರಿಕೆ ಈಗಾಗಲೇ ಸಿದ್ಧವಾಗಿದೆ. ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
First published:December 7, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...