ಪಾಕ್, ಚೀನಾ ಗಮನದಲ್ಲಿಟ್ಟುಕೊಂಡು ಅಂಬಾಲಾ, ಹಶೀಮರ್ ರಫೇಲ್ ಯುದ್ಧ ವಿಮಾನ ನೆಲೆಯಾಗಿ ಆಯ್ಕೆ

ಈ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು ಎರಡು ರಫೇಲ್ ಸ್ಕ್ವಾಡ್ರನ್​ಗಳನ್ನು ಹರಿಯಾಣದ ಅಂಬಾಲಾ ವಾಯುಪಡೆ ವಿಮಾನ ನಿಲ್ದಾಣ ಹಾಗೂ ಪಶ್ಚಿಮ ಬಂಗಾಳದ ಹಶೀಮರ್ ವಾಯುಪಡೆ ವಿಮಾನ ನಿಲ್ದಾಣಗಳನ್ನು ಆಯ್ಕೆ ಮಾಡಲಾಗಿದೆ. ದೆಹಲಿಯ ಉತ್ತರಕ್ಕೆ 200 ಕಿಲೋಮೀಟರ್ ದೂರದಲ್ಲಿರುವ ಅಂಬಾಲಾ ವಾಯುಪಡೆ ನಿಲ್ದಾಣ ದೆಹಲಿಯ ವೆಸ್ಟರ್ನ್ ಏರ್ ಕಮಾಂಡ್‌ನ ಅಧೀನದಲ್ಲಿ ಕಾರ್ಯನಿರ್ವಹಿಸಲಿದೆ.

ರಫೇಲ್ ಯುದ್ಧ ವಿಮಾನ

ರಫೇಲ್ ಯುದ್ಧ ವಿಮಾನ

 • Share this:
  ಮುಂದಿನ ವಾರದ ನಂತರ ಐದು ರಫೇಲ್ ಯುದ್ಧ ವಿಮಾನಗಳು ಭಾರತದ ನೆಲವನ್ನು ಸ್ಪರ್ಶಿಸಲಿವೆ. ಮತ್ತು ಭಾರತೀಯ ವಾಯುಪಡೆಗೆ ಸೇರ್ಪಡೆಯಾಗಲಿವೆ. ಇದರೊಂದಿಗೆ ಭಾರತೀಯ ಸೇನೆಯ ಇತಿಹಾಸದಲ್ಲಿ ಮಹತ್ವದ ಅಧ್ಯಾಯವೊಂದು ಆರಂಭವಾಗಲಿದೆ.

  ಭಾರತ ಫ್ರಾನ್ಸ್​ನ ಡಸಾಲ್ಟ್ ಏವಿಯೇಷನ್​ನೊಂದಿಗೆ 59,000 ಕೋಟಿ ರೂಪಾಯಿಗೆ 36 ರಫೇಲ್​ ಯುದ್ಧ ವಿಮಾನ ಖರೀದಿ (ಎರಡು ಸ್ಕ್ಯಾಡ್ರನ್​ಗಳಿಗೆ ತಲಾ 18ರಂತೆ) ಒಪ್ಪಂದ ಮಾಡಿಕೊಂಡಾಗ 2016 ಸೆಪ್ಟೆಂಬರ್​ನಲ್ಲಿ ಚೀನಾದೊಂದಿಗೆ ಲೈನ್​ ಆಫ್ ಆ್ಯಕ್ಚುವಲ್ ಕಂಟ್ರೋಲ್ (ಎಲ್​ಎಸಿ) ಉದ್ಧಕ್ಕೂ ಯುದ್ಧ ವಾತಾವರಣ ನಿರ್ಮಾಣವಾಗಲಿದೆ ಎಂದು ಯಾರೂ ಊಹಿಸಿರಲಿಲ್ಲ.

  ಹಾಗೆಯೇ ಅಂಬಾಲಾ ವಾಯುಪಡೆ ನಿಲ್ದಾಣದಲ್ಲಿ 17ನೇ ಸ್ಕ್ವಾಡ್ರನ್ ಪುನರುತ್ಥಾನಗೊಳಿಸಿದಾಗ ಅಥವಾ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಕಳೆದ ಅಕ್ಟೋಬರ್​ನಲ್ಲಿ ನೈರುತ್ಯ ಫ್ರೆಂಚ್ ಪಟ್ಟಣವಾದ ಬೋರ್ಡೆಕ್ಟ್​ನ ಡೆಸಾಲ್ಟ್ ಏವಿಯೇಷನ್ ಘಟಕದಲ್ಲಿ ಮೊದಲ ರಫೇಲ್​ ಯುದ್ಧ ವಿಮಾನವನ್ನು ಸ್ವೀಕರಿಸಿದಾಗ 2019ರ ಸೆಪ್ಟೆಂಬರ್ 11 ಘಟನೆಯನ್ನು ಯಾರೂ ಊಹಿಸಿರಲಿಲ್ಲ.

  2020ರ ಜುಲೈ ಅಂತ್ಯದೊಳಗೆ ಭಾರತಕ್ಕೆ ಮೊದಲ ಹಂತದಲ್ಲಿ ಐದು ರಫೇಲ್ ಯುದ್ಧ ವಿಮಾನಗಳು ಭಾರತೀಯ ವಾಯಪಡೆಗೆ ಸೇರ್ಪಡೆಯಾಗಲಿವೆ. ಹವಾಮಾನ ಪರಿಸ್ಥಿತಿಗೆ ಅನುಗುಣವಾಗಿ ಜುಲೈ 29ರಂದು ಈ ವಿಮಾನಗಳನ್ನು ಅಂಬಾಲಾ ವಾಯುಪಡೆ ವಿಮಾನ ನಿಲ್ದಾಣದಲ್ಲಿ ಸೇರ್ಪಡೆಗೊಳಿಸಿಕೊಳ್ಳಲಾಗುವುದು. ರಫೇಲ್ ಯುದ್ಧ ವಿಮಾನ ಆಗಮನ ಸುದ್ದಿ ಪ್ರಸಾರಕ್ಕೆ ಯಾವುದೇ ಯೋಚನೆ ಮಾಡಿಲ್ಲ. ಅಂತಿಮ ಸೇರ್ಪಡೆ ಕಾರ್ಯಕ್ರಮ ಎರಡನೇ ಹಂತದಲ್ಲಿ ಆಗಸ್ಟ್​ 20ರಂದು ನಡೆಯಲಿದ್ದು, ಆಗ ಮಾಧ್ಯಮದಲ್ಲಿ ಈ ವಿಷಯ ಸಂಪೂರ್ಣ ಪ್ರಸಾರಕ್ಕೆ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಭಾರತೀಯ ವಾಯುಪಡೆಯ ಮೂಲಗಳು ತಿಳಿಸಿವೆ.

  ಆದರೆ, ಲಡಾಖ್‌ನಲ್ಲಿ ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ ಅಪರಿಚಿತ ಸಂಖ್ಯೆಯ ಸಾವು-ನೋವುಗಳೊಂದಿಗೆ ಭಾರತದ 20 ಸೈನಿಕರ ಸಾವು ಮತ್ತು 76 ಮಂದಿ ಗಾಯಗೊಂಡರು. ಇದು ಬೀಜಿಂಗ್‌ನೊಂದಿಗಿನ ಮಿಲಿಟರಿ ಸಮೀಕರಣವನ್ನು ಬದಲಾಯಿಸಿತು. 42 ಸ್ಕ್ವಾಡ್ರನ್‌ಗಳ ಅನುಮೋದಿತ ಬಲಕ್ಕಿಂತ 12 ಕಡಿಮೆ ಇರುವ ವಾಯುಪಡೆಗೆ, ಯಂತ್ರಗಳು ಮತ್ತು ಮಾನವ ಸಂಪನ್ಮೂಲಗಳ ವಿಷಯದಲ್ಲಿ ಪರಿಸ್ಥಿತಿ ದುಃಸ್ವಪ್ನವಾಗಿದೆ.

  ರಫೇಲ್ ಫೈಟರ್ ಜೆಟ್‌ಗಳನ್ನು ಸ್ವಾಧೀನಪಡಿಸಿಕೊಳ್ಳುವುದು ಚೀನಾ ಮತ್ತು ಪಾಕಿಸ್ತಾನದ ಮೇಲೆ ಕಣ್ಣಿಟ್ಟಿರುವುದರಲ್ಲಿ ಯಾವುದೇ ಸಂದೇಹವಿಲ್ಲ, ಆದರೆ ಬೀಜಿಂಗ್‌ನೊಂದಿಗಿನ ಸಂಬಂಧವು ಒಡೆದ ಹಡಗಿನಂತೆ ಬೇಗನೆ ಹದಗೆಡುತ್ತದೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಪ್ರಬಲ ನಿರ್ಣಾಯಕ ರಫೇಲ್ ಜೆಟ್‌ಗಳು ವಾಯುಪಡೆಗೆ ಸೇರ್ಪಡೆಯಾಗುವುದರಿಂದ, ಶಕ್ತಿಯ ಮೂಲಕ ಶಾಂತಿ ಎಂಬ ಹಳೆಯ ಗಾದೆ ಮಾತು ಸತ್ಯವಾಗುವುದಿಲ್ಲ ಎಂಬುದು ಎಲ್ಲರಿಗೂ ತಿಳಿಯದ ಗುಟ್ಟೇನಲ್ಲ.  ರಫೇಲ್ ಸ್ಕ್ವಾಡ್ರನ್​ಗಳಿಗೆ ದೇಶೀಯ ನೆಲೆ  ಭಾರತ ಪಾಕಿಸ್ತಾನದೊಂದಿಗೆ 740 ಕಿ.ಮೀ. ಲೈನ್​ ಆಫ್ ಕಂಟ್ರೋಲ್​ (ಎಲ್​ಒಸಿ) ಗಡಿ ಹಂಚಿಕೊಂಡಿದೆ. ಮತ್ತು ಗಡಿ ವಾಸ್ತವ ರೇಖೆ (ಎಲ್​ಎಸಿ)ಯಲ್ಲಿ 3448 ಕಿ.ಮೀ. ಗಡಿಯನ್ನು ಚೀನಾದೊಂದಿಗೆ ಹಂಚಿಕೊಂಡಿದೆ. ಈ ಬೃಹತ್ ಭೌಗೋಳಿಕ ವಿಸ್ತಾರದ ಗಡಿ ಹಂಚಿಕೆಯೊಂದಿಗೆ ದೇಶವನ್ನು ರಕ್ಷಿಸಬೇಕಾಗಿದೆ.

  ಈ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು ಎರಡು ರಫೇಲ್ ಸ್ಕ್ವಾಡ್ರನ್​ಗಳನ್ನು ಹರಿಯಾಣದ ಅಂಬಾಲಾ ವಾಯುಪಡೆ ವಿಮಾನ ನಿಲ್ದಾಣ ಹಾಗೂ ಪಶ್ಚಿಮ ಬಂಗಾಳದ ಹಶೀಮರ್ ವಾಯುಪಡೆ ವಿಮಾನ ನಿಲ್ದಾಣಗಳನ್ನು ಆಯ್ಕೆ ಮಾಡಲಾಗಿದೆ. ದೆಹಲಿಯ ಉತ್ತರಕ್ಕೆ 200 ಕಿಲೋಮೀಟರ್ ದೂರದಲ್ಲಿರುವ ಅಂಬಾಲಾ ವಾಯುಪಡೆ ನಿಲ್ದಾಣ ದೆಹಲಿಯ ವೆಸ್ಟರ್ನ್ ಏರ್ ಕಮಾಂಡ್‌ನ ಅಧೀನದಲ್ಲಿ ಕಾರ್ಯನಿರ್ವಹಿಸಲಿದೆ.

  ಕಳೆದ ಫೆಬ್ರವರಿಯಲ್ಲಿ ಪಾಕಿಸ್ತಾನದ ಬಾಲಾಕೋಟ್​ನ ಉಗ್ರರ ನೆಲೆಗಳ ಮೇಲೆ ಏರ್​​ಸ್ಟ್ರೈಕ್​ ಮಾಡುವ ಸಂದರ್ಭದಲ್ಲಿ ಮಿರಾಜ್ 2000 ವಿಮಾನಗಳು ಇದೇ ವಾಯು ನಿಲ್ದಾಣದಿಂದ ಹಾರಿದ್ದವು. ಅಂಬಾಲಾ ವಾಯುಪಡೆ ವಿಮಾನ ನಿಲ್ದಾಣ 1999ರ ಕಾರ್ಗಿಲ್​ ಯುದ್ಧದ ಸಂದರ್ಭದಲ್ಲೂ ಮಹತ್ವದ ಪಾತ್ರ ವಹಿಸಿದೆ.

  ಅಂಬಾಲಾ ವಾಯುಪಡೆ ವಿಮಾನ ನಿಲ್ದಾಣದಲ್ಲಿ ಈಗಾಗಲೇ ಜಾಗ್ವಾರ್ ವಿಮಾನದ ಎರಡು ಸ್ಕ್ವಾಡ್ರನ್​ (ನಂ.14 ಮತ್ತು ನಂ 15) ಇದ್ದು, ರಫೇಲ್ ಮೂರನೇ ಸೇರ್ಪಡೆಯಾಗಿದೆ.  ಜಾಗ್ವಾರ್​ಗಳಿಗಿಂತ ರಫೇಲ್ ನಮಗೆ ಹೆಚ್ಚು ಶಕ್ತಿ ನೀಡುತ್ತದೆ. ಉತ್ತರ ಮತ್ತು ಪಶ್ಚಿಮ ದಿಕ್ಕಿನಲ್ಲಿ ಅಗತ್ಯವಿರುವ ವ್ಯಾಪ್ತಿಯು ಹೆಚ್ಚಾದಾಗ ಅಂಬಾಲಾ ವಿಮಾನ ನಿಲ್ದಾಣ ನಮಗೆ ಸಾಕಷ್ಟು ಅನುಕೂಲಕರವಾಗಿದೆ. ಫಾರ್ವರ್ಡ್ ಬೇಸ್‌ಗಳಲ್ಲಿ ಸಾಧ್ಯವಾಗದ ಗಾಳಿಯಿಂದ ಗಾಳಿಯಲ್ಲಿ ಇಂಧನ ತುಂಬಿಸಲು ನಮಗೆ ಸಾಕಷ್ಟು ಪ್ರದೇಶವಿದೆ ಎಂದು ನಿವೃತ್ತ ಏರ್ ಮಾರ್ಷಲ್ ಪಿ.ಕೆ.ಬಾರ್ಬೊರಾ ಅವರು ಟ್ರಿಬ್ಯುನ್​ಗೆ ಹೇಳಿದ್ದರು.

  ಎರಡನೇ ರಫೇಲ್ ನೆಲೆಯಾಗಿ ಪಶ್ಚಿಮ ಬಂಗಾಳದ ಹಶಿಮರ್ ವಾಯುಪಡೆ ವಿಮಾನ ನಿಲ್ದಾಣ ಗುರುತಿಸಲಾಗಿದೆ. ವಾಯು ಶಕ್ತಿಯಲ್ಲಿ ಭಾರತಕ್ಕೆ ಪಾಕಿಸ್ತಾನ ನಿಜವಾದ ಶತ್ರುವೇ ಅಲ್ಲ, ನಮ್ಮ ಪೂರ್ವದ ನೆರೆಯ ಚೀನಾದ ಬಗ್ಗೆಯೇ ಹೆಚ್ಚು ಗಮನವಹಿಸಲೇಬೇಕು. ನಮ್ಮ ಬಳಿ ರಫೇಲ್ ಇಲ್ಲದಿದ್ದಾಗ, ನಾವು ಪೂರ್ವದಲ್ಲಿ ಸುಖೋಯ್‌ನ ಮೂರು ಸ್ಕ್ವಾಡ್ರನ್‌ಗಳನ್ನು ಸ್ಥಳಾಂತರಿಸಿದ್ದೇವು. ಈಗ ರಫೇಲ್ ಜೊತೆಗೆ ಚೀನಾ ಬೆದರಿಕೆಯನ್ನು ಎದುರಿಸಲು ನಮಗೆ ಸಾಕಷ್ಟಯ ಸಂಖ್ಯೆಯ ಫೈಟರ್​ಜೆಟ್​ಗಳು ಮತ್ತು ಯುದ್ಧ ಬಾಂಬರ್‌ಗಳನ್ನು ಹೊಂದಿದ್ದೇವೆ ಎಂದು ನಿವೃತ್ತ ಏರ್ ಮಾರ್ಷಲ್ ಬಾರ್ಬೋರಾ ಅವರು ಹೇಳಿದ್ದರು.

  ಈ ಸುದ್ದಿಯನ್ನು ಇಂಗ್ಲಿಷ್​ನಲ್ಲಿ ಓದಿ: Ambala, Hasimara Rafale bases strategically selected to address Pakistan and China, optimise limited resources

  ಗಾಲ್ವಾನ್ ಕಣಿವೆಯಲ್ಲಿ ಇತ್ತೀಚೆಗೆ ಎರಡು ದೇಶಗಳ ಸೈನಿಕರ ನಡುವಿನ ಹಿಂಸಾತ್ಮಕ ಘರ್ಷಣೆಯು ಅಂಬಾಲಾ ಮತ್ತು ಹಶೀಮರದ ರಫೇಲ್ ಸ್ಕ್ವಾಡ್ರನ್‌ಗಳನ್ನು ಆಧಾರವಾಗಿಟ್ಟುಕೊಳ್ಳುವ ನಿರ್ಧಾರಕ್ಕೆ ಚೀನಾ ಕಾರ್ಯತಂತ್ರ ಎಂದು ಸಾಬೀತುಪಡಿಸಿತು. ಮತ್ತು ತನ್ನ ಮಿತ್ರ ರಾಷ್ಟ್ರ ಪಾಕಿಸ್ತಾನವನ್ನು ಸಂತೋಷಗೊಳಿಸುವ ಭಾಗವೂ ಆಗಿತ್ತು.

  ರಫೇಲ್ ಫೈಟರ್ ಜೆಟ್ ವಿಶೇಷಗಳು

  ಎರಡು ಎಂಜಿನ್ ಹೊಂದಿರುವ ಮಲ್ಟಿ ರೋಲ್ ಯುದ್ಧ ವಿಮಾನ, ರಫೇಲ್ ಎಲೆಕ್ಟ್ರಾನಿಕ್ ಸ್ಕ್ಯಾನಿಂಗ್ ರಾಡಾರ್ ಹೊಂದಿರುವ ಮೊದಲ ಯುರೋಪಿಯನ್ ವಿಮಾನವಾಗಿದೆ. ರಫೇಲ್ ಫೈಟರ್ ಜೆಟ್‌ನ 'ಓಮ್ನಿರೋಲ್' ಸಾಮರ್ಥ್ಯಗದೊಂದಿಗೆ, ಭಾರತೀಯ ವಾಯುಪಡೆ ಎಷ್ಟೇ ದೂರದವರೆಗೆ ಬೇಕಾದರೂ ಅಗತ್ಯ ರಕ್ಷಣಾ ಸಾಮಗ್ರಿಗಳನ್ನು ಹೊತ್ತೊಯ್ಯಬಲ್ಲ ಸಾಮರ್ಥ್ಯ ಹೊಂದಿದೆ. ಅಲ್ಲದೇ, ನಿಖರವಾಗಿ ನಿರ್ದಿಷ್ಟ ದಾಳಿಗಳನ್ನು ಸಮರ್ಪಕವಾಗಿ ನಡೆಸಬಲ್ಲವಾಗಿವೆ.

  ರಫೇಲ್ ತಯಾರಕಾ ಸಂಸ್ಥೆಯಾದ ಡಸಾಲ್ಟ್ ಏವಿಯೇಷನ್ ಪ್ರಕಾರ, ರಫೇಲ್ ಮೂರು ಮಾದರಿಗಳನ್ನು ಹೊಂದಿದೆ.  ವಾಯುಪಡೆಯ ಒಂದು ಆಸನ ರಫೇಲ್ ಸಿ, ವಾಯುಪಡೆಯ ಎರಡು ಆಸನಗಳ ರಫೇಲ್ ಬಿ, ಮತ್ತು ನೌಕಾಪಡೆಯ ಒಂದು ಆಸನ ರಫೇಲ್ ಎಂ ಗರಿಷ್ಠ ಏರ್​ಫ್ರೇಮ್ ಮತ್ತು ಸಲಕರಣೆಗಳ ಸಾಮಾನ್ಯತೆಯನ್ನು ಹೊಂದಿದೆ.

  ರಕ್ಷಣಾ ವಲಯದಲ್ಲಿ, ಭಾರತೀಯ ವಾಯುಪಡೆ (ಐಎಎಫ್) ನಮ್ಮ ದೀರ್ಘಾವಧಿಯ ರಫ್ತು ಗ್ರಾಹಕರಾಗಿದ್ದು, 1953ರಿಂದ ಡಸಾಲ್ಟ್ ವಿಮಾನವನ್ನು ಹಾರಿಸುತ್ತಿದೆ. 2016ರಲ್ಲಿ 36 ರಫೇಲ್‌ಗೆ ಯುದ್ಧ ವಿಮಾನ ಖರೀದಿ ಒಪ್ಪಂದಕ್ಕೆ ಸಹಿ ಮಾಡಲಾಗಿದೆ. ಮತ್ತು ಮಿರಾಜ್ 2000 ಐ/ಟಿಐ ಆಧುನೀಕರಣ ಈ ಐತಿಹಾಸಿಕ ಸಹಭಾಗಿತ್ವದ ಮುಂದುವರಿಕೆ ಭಾಗವಾಗಿದೆ ಎಂದು ಡಸಾಲ್ಟ್ ಏವಿಯೇಷನ್ ಹೇಳಿಕೆಯಲ್ಲಿ ತಿಳಿಸಿದೆ.

  ಇದನ್ನು ಓದಿ: Rafale Jet: ಭಾರತಕ್ಕೆ ಮೊದಲ ರಫೇಲ್ ಜೆಟ್​ ಹಸ್ತಾಂತರಿಸಿದ ಫ್ರಾನ್ಸ್; ಇಲ್ಲಿದೆ ಫೋಟೋಗಳು

  ರಫೇಲ್ ಯುದ್ಧ ವಿಮಾನ 2004ರಲ್ಲೇ ಫ್ರೆಂಚ್ ನೌಕಪಡೆ ಪ್ರವೇಶಿಸಿತ್ತು. ಮತ್ತು 2006ರಲ್ಲಿ ಫ್ರೆಂಚ್ ವಾಯುಪಡೆ ಸೇರ್ಪಡೆಗೊಂಡಿತ್ತು. ಅಫ್ಘಾನಿಸ್ತಾನ, ಲಿಬಿಯಾ, ಮಾಲಿ, ಇರಾಕ್ ಮತ್ತು ಸಿರಿಯಾ ಯುದ್ಧದ ಸಂದರ್ಭದಲ್ಲಿ ರಫೇಲ್ ವಿಮಾನ ತನ್ನ ಸಾಮರ್ಥ್ಯವನ್ನು ಸಾಬೀತು ಮಾಡಿದೆ.

  ಇದೀಗ ರಫೇಲ್ ಯುದ್ಧ ವಿಮಾನ ಭಾರತೀಯ ವಾಯುಪಡೆ ಸೇರ್ಪಡೆಯಾಗುವುದರೊಂದಿಗೆ ದೇಶದ ವಾಯುಪಡೆ ಶಕ್ತಿಯನ್ನು ಮತ್ತಷ್ಟು ಹೆಚ್ಚಿಸಿದೆ. ಗಡಿಯಲ್ಲಿ ನೆರೆಯ ರಾಷ್ಟ್ರಗಳ ದಾಳಿಯನ್ನು ಸಮರ್ಥವಾಗಿ ತಡೆಗಟ್ಟಲು ಈ ರಫೇಲ್ ಯುದ್ಧ ವಿಮಾನಗಳು ಭಾರತಕ್ಕೆ ಸಾಕಷ್ಟು ಶಕ್ತಿ ಒದಗಿಸಲಿವೆ.
  Published by:HR Ramesh
  First published: