• Home
  • »
  • News
  • »
  • national-international
  • »
  • Amazon : ಗುಜರಾತ್ MSMEಗಳಿಗೆ ಅಮೆಜಾನ್ ತರಬೇತಿ- ಸರ್ಕಾರದ ಒಪ್ಪಂದಕ್ಕೆ CAIT ವಿರೋಧ

Amazon : ಗುಜರಾತ್ MSMEಗಳಿಗೆ ಅಮೆಜಾನ್ ತರಬೇತಿ- ಸರ್ಕಾರದ ಒಪ್ಪಂದಕ್ಕೆ CAIT ವಿರೋಧ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

MSME: ಅಲ್ಲದೇ ಅಮೆಜಾನ್  ಗುಜರಾತ್ ರಾಜ್ಯದಿಂದ ಇ-ಕಾಮರ್ಸ್ ರಫ್ತುಗಳನ್ನು ಹೆಚ್ಚಿಸಲು ಸಹಾಯ ಮಾಡಲು ಗುಜರಾತ್‌ನ ಕೈಗಾರಿಕೆ ಮತ್ತು ಗಣಿ ಇಲಾಖೆಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ ಎಂದು ಹೇಳಿದೆ.

  • Share this:

ಗುಜರಾತ್​ನ MSMEಗಳಿಗೆ ಅಮೆಜಾನ್ ಗ್ಲೋಬಲ್ ಸೆಲ್ಲಿಂಗ್‌ನಲ್ಲಿ(Amazon Global Selling,) ತರಬೇತಿ ನೀಡಲು ಅಮೆಜಾನ್ ನಿರ್ಧಾರ ಮಾಡಿದೆ.  200 ಕ್ಕೂ ಹೆಚ್ಚು ದೇಶಗಳು ಮತ್ತು ಪ್ರಾಂತ್ಯಗಳಲ್ಲಿ ಲಕ್ಷಾಂತರ ಅಮೆಜಾನ್ ಗ್ರಾಹಕರಿಗೆ ತಮ್ಮ ಮೇಡ್ ಇನ್ ಇಂಡಿಯಾ(Made In India) ಉತ್ಪನ್ನಗಳನ್ನು ಮಾರಾಟ ಮಾಡಲು ಅನುವು ಮಾಡಿಕೊಡಲು ಅಮೆಜಾನ್ ಈ ಯೋಜನೆಯನ್ನು ಮಾಡಿದೆ.   ಆದರೆ ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ (CAIT) ಮಂಗಳವಾರ ಗುಜರಾತ್ ಸರ್ಕಾರವು ಅಮೆಜಾನ್ ಜೊತೆ ಒಪ್ಪಂದಕ್ಕೆ ಸಹಿ ಹಾಕಿರುವುದು ತಪ್ಪು ಎಂದು  ಟೀಕಿಸಿದ್ದು,  ಅಮೆರಿಕಾ ಮೂಲದ ಇ-ಕಾಮರ್ಸ್ ಕಂಪನಿ ಸ್ಪರ್ಧಾತ್ಮಕ ಅಂಶಗಳನ್ನು ಹೊಂದಿಲ್ಲ, ಏಕಸ್ವಾಮ್ಯತೆಗೆ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದೆ.  


ಅಲ್ಲದೇ ಅಮೆಜಾನ್ ಕಂಪನಿ   ಗುಜರಾತ್ ರಾಜ್ಯದಿಂದ ಇ-ಕಾಮರ್ಸ್ ರಫ್ತುಗಳನ್ನು ಹೆಚ್ಚಿಸಲು ಸಹಾಯ ಮಾಡಲು ಗುಜರಾತ್‌ನ ಕೈಗಾರಿಕೆ ಮತ್ತು ಗಣಿ ಇಲಾಖೆಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ ಎಂದು ಹೇಳಿದೆ.


ಮೆಮೊರಾಂಡಮ್ ಆಫ್ ಅಂಡರ್ಸ್ಟ್ಯಾಂಡಿಂಗ್ (MOU) ನ ಭಾಗವಾಗಿ, ಅಮೆಜಾನ್  ಗುಜರಾತ್​ನ ಎಂಎಸ್ ಎಂಇಗಳಿಗೆ ಅಮೆಜಾನ್ ಗ್ಲೋಬಲ್ ಸೆಲ್ಲಿಂಗ್ ನಲ್ಲಿ ತರಬೇತಿ ನೀಡಲಿದೆ ಎಂದು ಕಂಪನಿ ತಿಳಿಸಿದೆ.


ಇದನ್ನೂ ಓದಿ: ಕಿಸಾನ್ ರ‍್ಯಾಲಿಯಲ್ಲಿ ರಾಕೇಶ್ ಟಿಕಾಯತ್​​ರಿಂದ ಅಲ್ಲಾಹು ಅಕ್ಬರ್ ಘೋಷಣೆ; ಘಟನೆಯ ಅಸಲಿಯತ್ತೇನು?


ಗುಜರಾತ್ ವ್ಯಾಪಾರಿಗಳ ಜೊತೆಗೆ, ದೇಶದಾದ್ಯಂತದ ವ್ಯಾಪಾರಿಗಳು ಗುಜರಾತ್ ಸರ್ಕಾರದಿಂದ ಮೋಸ ಹೋಗಿದ್ದಾರೆ. ಅಮೆಜಾನ್ ಕಂಪನಿಯ ಜೊತೆ ಒಪ್ಪಂದ ಮಾಡಿಕೊಂಡಿರುವುದನ್ನ ಸಿಎಐಟಿ ವಿರೋಧಿಸುತ್ತದೆ ಎಂದು ಸಿಎಐಟಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.


ಒಂದು ಕಡೆ ಕೇಂದ್ರದ ಕಾನೂನುಬದ್ಧ ಸಂಸ್ಥೆಗಳಾದ ಕಾಂಪಿಟೇಷನ್ ಕಮಿಷನ್ ಆಫ್ ಇಂಡಿಯಾ (ಸಿಸಿಐ) ಮತ್ತು ಜಾರಿ ನಿರ್ದೇಶನಾಲಯ (ಇಡಿ) ಅಮೆಜಾನ್ ವಿರುದ್ಧ ಸ್ಪರ್ಧಾತ್ಮಕ ವಿರೋಧಿ ಚಟುವಟಿಕೆ ಮತ್ತು ಇ-ಕಾಮರ್ಸ್ ನಿಯಮಗಳ ಉಲ್ಲಂಘನೆಗಾಗಿ ತನಿಖೆ ನಡೆಸುತ್ತಿದೆ, ಆದರೆ ಗುಜರಾತ್ ಸರ್ಕಾರವು ಅವರೊಂದಿಗೆ ಒಪ್ಪಂದ ಮಾಡಿಕೊಂಡು ಮಾರಾಟವನ್ನು ಹೆಚ್ಚಿಸಲು ಪ್ರಯತ್ನಿಸುವುದು ಸರಿಯಲ್ಲ ಎಂದು ಒಕ್ಕೂಟ ಹೇಳಿದೆ.


ಇದನ್ನೂ ಓದಿ: ಸರ್ಕಾರ ರಚಿಸಿದ ತಾಲಿಬಾನ್, FBI Most Wanted ಉಗ್ರ ಇಲ್ಲಿ ಮಂತ್ರಿ!


ಕೇಂದ್ರ ಸರ್ಕಾರದ ವಕೀಲರು ಸುಪ್ರೀಂ ಕೋರ್ಟ್ ಸೇರಿದಂತೆ ವಿವಿಧ ನ್ಯಾಯಾಲಯಗಳಲ್ಲಿ ಅಮೆಜಾನ್ ವಿರುದ್ಧ ಪ್ರಕರಣ ದಾಖಲಿಸಿ, ಹೋರಾಟ ಮಾಡುತ್ತಿದ್ದಾರೆ. ಅಲ್ಲದೇ ಅದರ ಅಪರಾಧಗಳನ್ನು ಬಹಿರಂಗ ಮಾಡುತ್ತಿದ್ದಾರೆ. ಇದರ ನಡುವೆ ಗುಜರಾತ್ ರಾಜ್ಯ ಸರ್ಕಾರವು ಅಮೆಜಾನ್ ಜೊತೆ ಒಪ್ಪಂದವನ್ನು ಮಾಡಿಕೊಳ್ಳುತ್ತಿದೆ ಎಂದು ಒಕ್ಕೂಟ ಟೀಕಿಸಿದೆ.  ಬಿಜೆಪಿ ಅಧ್ಯಕ್ಷ ಜೆ ಪಿ ನಡ್ಡಾ ಮತ್ತು ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಅವರೊಂದಿಗೆ ಈ ವಿಷಯವನ್ನು ಪ್ರಸ್ತಾಪಿಸಿ ಚರ್ಚೆ ನಡೆಸುವುದಾಗಿ ಒಕ್ಕೂಟ ಹೇಳಿದೆ.  ಅಲ್ಲದೇ ಗುಜರಾತ್ ಸರ್ಕಾರದ ಈ ಒಪ್ಪಂದದಿಂದ ಉಂಟಾಗುವ ರಾಜಕೀಯ ಪರಿಣಾಮಗಳನ್ನು ವಿವರಿಸಲಾಗುವುದು ಎಂದು ಒಕ್ಕೂಟ ತಿಳಿಸಿದೆ.

Published by:Sandhya M
First published: