ಅಮೆಜಾನ್ (Amazon) ರೀಟೇಲ್ ತಾಣವು ಇದೀಗ ಮೊಕದ್ದಮೆಯನ್ನು ಎದುರಿಸುತ್ತಿದ್ದು ಹದಿಹರೆಯದವರಿಗೆ ಆತ್ಯಹತ್ಯೆ ಮಾಡಿಕೊಳ್ಳಲು ನೆರವಾಗುವ ಕಿಟ್ಗಳೆಂದು ಕರೆಯುವ ವಸ್ತುಗಳನ್ನು ಮಾರಾಟ ಮಾಡುತ್ತಿದೆ ಎಂಬ ಆರೋಪಕ್ಕೆ ಗುರಿಯಾಗಿದೆ. ಆತ್ಮಹತ್ಯೆಮಾಡಿಕೊಂಡು ಮಕ್ಕಳನ್ನು (Children) ಅಗಲಿರುವ ಎರಡು ಕುಟುಂಬಗಳು ಇ-ಕಾಮರ್ಸ್ ದೈತ್ಯ ಅಮೆಜಾನ್ ವಿರುದ್ಧ ಮೊಕದ್ದಮೆ ಹೂಡಿದ್ದು ಹದಿಹರೆಯದ ಮಕ್ಕಳು ವೆಬ್ಸೈಟ್ ಮೂಲಕ ಪ್ರಾಣಾಂತಿಕ ರಾಸಾಯನಿಕವನ್ನು (Chemical) ಖರೀದಿಸಿದ್ದು ನಂತರ ತಮ್ಮ ಜೀವವನ್ನು ತೆಗೆದುಕೊಂಡಿದ್ದಾರೆ ಎಂದು ಪ್ರತಿಪಾದಿಸಿ ಮೊಕದ್ದಮೆ (Lawsuit) ಹೂಡಿದ್ದಾರೆ. 16 ರ ಹರೆಯದ ಕ್ರಿಸ್ಟಿನ್ ಜಾನ್ಸನ್ ಹಾಗೂ 17 ವರ್ಷದ ಈಥನ್ ಮೆಕಾರ್ಥಿ ಅವರ ಪೋಷಕರು ತಮ್ಮ ಮಕ್ಕಳ ದುರಂತ ಸಾವಿಗೆ ರಿಟೇಲ್ ತಾಣವೇ ಕಾರಣಿಕರ್ತ ಎಂದು ದೂರಿದ್ದಾರೆ.
ಮಕ್ಕಳ ಸಾವಿಗೆ ಕಾರಣೀಕರ್ತನಾದ ಅಮೆಜಾನ್
ಆಹಾರ ರಕ್ಷಕ ರಾಸಾಯನಿಕ ಸೋಡಿಯಂ ನೈಟ್ರೈಟ್ ಹೆಚ್ಚಿನ ಮಟ್ಟದ ಶುದ್ಧತೆಯ ಹೆಸರಿನಲ್ಲಿ ಸೈಟ್ನಲ್ಲಿ ಮಾರಾಟವಾಗಿದೆ. ಈ ಕುರಿತು ಕಳೆದ ತಿಂಗಳು ಕ್ಯಾಲಿಫೋರ್ನಿಯಾದ ನ್ಯಾಯಾಲಯದಲ್ಲಿ ದೂರು ದಾಖಲಾಗಿದೆ.
ರಾಸಾಯನಿಕವನ್ನು ಖರೀದಿಸಿದ ಗ್ರಾಹಕರು ರಾಸಾಯನಿಕದ ಸರಿಯಾದ ಡೋಸ್ ಅನ್ನು ಅಳೆಯಲು ಮಾಪನ, ವಾಂತಿ ನಿರೋಧಕ ಔಷಧ ಹಾಗೂ ಜೊತೆಯಾಗಿ ಸಾಯಲು ಈ ಸಾಮಾಗ್ರಿಗಳನ್ನು ಹೇಗೆ ನಿರ್ವಹಿಸುವುದು ಎಂಬ ಸೂಚನೆಗಳನ್ನೊಳಗೊಂಡ ಅಮೆಜಾನ್ ಆವೃತ್ತಿಯ ಕೈಪಿಡಿಯನ್ನು ಖರೀದಿಸಲು ಅಮೆಜಾನ್ ಶಿಫಾರಸು ಮಾಡಿದೆ ಎಂಬುದಾಗಿ ಮೊಕದ್ದಮೆಯಲ್ಲಿ ಉಲ್ಲೇಖಿಸಲಾಗಿದೆ.
ವಿಷಕಾರಿಯಾಗಿರುವ ಮಾರಣಾಂತಿಕ ಉತ್ಪನ್ನ
ಅಮೆಜಾನ್ ಸೈನೈಡ್ನಷ್ಟೇ ವಿಷಕಾರಿಯಾಗಿರುವ ಮಾರಣಾಂತಿಕ ಉತ್ಪನ್ನವನ್ನು ಮಾರುತ್ತಿದೆ ಎಂಬುದಾಗಿ ಕುಟುಂಬಗಳ ವಕೀಲರಾದ ಕ್ಯಾರಿ ಗೋಲ್ಡ್ಬರ್ಗ್ ಮತ್ತು ನವೋಮಿ ಲೀಡ್ಸ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಆತ್ಮಹತ್ಯಗೆ ಬಳಸಬಹುದಾದ ಹಗ್ಗ, ಚಾಕು ಅಥವಾ ಇನ್ನಿತರ ಉಪಕರಣಗಳಿಗಿಂತ ರಾಸಾಯನಿಕವನ್ನು ಮಾರಾಟ ಮಾಡುವುದು ಭಿನ್ನವಾಗಿದೆ ಏಕೆಂದರೆ ತಾಣವು ಉತ್ಪನ್ನವನ್ನು ಶುದ್ಧತೆಯ ಹೆಸರಿನಲ್ಲಿ ಮಾರುತ್ತಿದ್ದರೂ ಗೃಹಬಳಕೆಯ ಉತ್ಪನ್ನವಾಗಿ ಇದನ್ನು ಸೂಚಿಸಿಲ್ಲ ಎಂದು ವಕೀಲರು ವಾದಿಸಿದ್ದಾರೆ.
ಇದನ್ನೂ ಓದಿ: Lucy Letby: ನವಜಾತ ಶಿಶುಗಳಿಗೆ ಇನ್ಸುಲಿನ್ ರೂಪದಲ್ಲಿ ವಿಷವುಣಿಸಿದ ನರ್ಸ್: ಹೀಗೆ ಬಯಲಾಯ್ತು ಈ ನಿಗೂಢ ರಹಸ್ಯ!
ವಾಣಿಜ್ಯ ಆಹಾರ ತಯಾರಿಕೆಯಲ್ಲಿ ಸೋಡಿಯಂ ನೈಟ್ರೈಟ್ ಅನ್ನು ಕಡಿಮೆ ಸಾಂದ್ರತೆಗಳಲ್ಲಿ ಬಳಸಲಾಗುತ್ತದೆ. ಆದಾಗ್ಯೂ, ಸೋಡಿಯಂ ನೈಟ್ರೈಟ್ ಅನ್ನು ಹೆಚ್ಚು ಸೇವಿಸುವವರು ಉಸಿರಾಟದ ತೊಂದರೆ, ಹೊಟ್ಟೆ ನೋವು ಅಥವಾ ಇನ್ನಿತರ ಕಾರಣಗಳಿಂದ ಸಾಯಬಹುದು. ಅಮೆಜಾನ್ನಿಂದ ಮಾರಾಟವಾಗುತ್ತಿರುವ ರಾಸಾಯನಿಕದ ಕೆಲವು ಉದಾಹರಣೆಗಳು ಹೆಚ್ಚಿನ ಶುದ್ಧತೆಯ ಮಟ್ಟವನ್ನು ಹೊಂದಿವೆ, ಅಂದರೆ ಅದು ಹೆಚ್ಚು ವಿಷಕಾರಿಯಾಗಿದೆ ಎಂದರ್ಥ ಎಂದು ಗೋಲ್ಡ್ಬರ್ಗ್ ತಿಳಿದ್ದಾರೆ.
ಈ ವರ್ಷದ ಆರಂಭದಲ್ಲಿ ವಾಷಿಂಗ್ಟನ್ನಲ್ಲಿ ಕಾನೂನು ಸಂಸ್ಥೆಯು ಇದೇ ರೀತಿಯ ದೂರನ್ನು ದಾಖಲಿಸಿದೆ ಎಂಬುದಾಗಿ ವಕೀಲರು ತಿಳಿಸಿದ್ದು, ಇ-ಕಾಮರ್ಸ್ ದೈತ್ಯ ಅದೇ ಔಷಧವನ್ನು ಆತ್ಮಹತ್ಯೆಯಿಂದ ಸಾವನ್ನಪ್ಪಿದ ಇತರ ಇಬ್ಬರಿಗೆ ಮಾರಾಟ ಮಾಡಿದೆ ಎಂದು ತಿಳಿಸಿದ್ದಾರೆ.
ಸಾಂತ್ವಾನ ಹೇಳಿದ ಅಮೆಜಾನ್ ಸಂಸ್ಥೆ
ಆತ್ಮಹತ್ಯೆ ಮಾಡಿಕೊಂಡ ಯುವಕರ ಕುಟುಂಬಗಳಿಗೆ ಸಾಂತ್ವಾನವನ್ನು ತಿಳಿಸಿರುವ ಅಮೆಜಾನ್ ತಾಣ ಗ್ರಾಹಕರ ಸುರಕ್ಷತೆಯೇ ಸಂಸ್ಥೆಯ ಪ್ರಮುಖ ಆದ್ಯತೆಯಾಗಿದೆ ಎಂದು ತಿಳಿಸಿದೆ. ಅನ್ವಯವಾಗುವ ಕಾನೂನು ಹಾಗೂ ನೀತಿ ನಿಯಮಗಳನ್ನು ಮಾರಾಟಗಾರರು ಅನುಸರಿಸಬೇಕು ಎಂಬುದಾಗಿ ಕಂಪೆನಿ ತಿಳಿಸಿದೆ.
ಕಂಪೆನಿ ವಕ್ತಾರರೊಬ್ಬರು ರಾಸಾಯನಿಕವು ಕಾನೂನಿನಿಂದ ಪರಿಗಣನೆಗೆ ಒಳಪಟ್ಟಿದ್ದು ಹೆಚ್ಚು ವ್ಯಾಪಕವಾಗಿ ಬಳಸಲಾಗುವ ಉತ್ಪನ್ನ ಎಂಬುದಾಗಿ ವಿವರಿಸಿದ್ದಾರೆ. ಆಹಾರ ಹಾಗೂ ಪ್ರಯೋಗಾಲಯಗಳಲ್ಲಿ ರಾಸಾಯನಿಕ ವಿಶ್ಲೇಷಣೆ ಅಥವಾ ಇತರ ಪ್ರತಿಕ್ರಿಯೆಗಳಲ್ಲಿ ಬಳಸುವ ವಸ್ತು ಅಥವಾ ಮಿಶ್ರಣವಾಗಿದೆ. ಇದನ್ನು ಸೇವನೆಗೆ ಉದ್ದೇಶಿಸಲಾಗಿಲ್ಲ ಹಾಗೂ ದುರಾದೃಷ್ಟವಶಾತ್ ಇತರ ಉತ್ಪನ್ನಗಳಂತೆಯೇ ಇದನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಮೊಕದ್ದಮೆಯ ಪ್ರಕಾರ ಲೌಡ್ವುಲ್ಫ್ ಎಂಬ ಕಂಪನಿಯು ರಾಸಾಯನಿಕವನ್ನು ತಯಾರಿಸಿದ್ದು, ಕಂಪೆನಿಯು ಇನ್ನು ಮುಂದೆ ಸೈಟ್ನಲ್ಲಿ ಲಭ್ಯವಿರುವುದಿಲ್ಲ. ಅಮೆಜಾನ್ ರಾಸಾಯನಿಕದ ಕುರಿತಂತೆ ಸೈಟ್ನ ಹಲವಾರು ವಿಭಾಗಗಳಲ್ಲಿ ಪ್ರತಿವಿಷದ ಬ್ರ್ಯಾಂಡ್ ಕುರಿತಂತೆ ಜಾಹೀರಾತುಗಳನ್ನು ಮಾರಾಟ ಮಾಡಿದೆ ಎಂದು ಅಮೆಜಾನ್ ತಿಳಿಸಿದೆ. ಆದಾಗ್ಯೂ, ಲೌಡ್ವುಲ್ಫ್ ಪುಟವು ಪ್ರತಿವಿಷವನ್ನು ಉಲ್ಲೇಖಿಸಲಿಲ್ಲ ಎಂಬುದಾಗಿ ಮೊಕದ್ದಮೆಯಲ್ಲಿ ತಿಳಿಸಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ