• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Jeff Bezos: ಸಹೋದರನ ಜೊತೆಗೆ ಬಾಹ್ಯಾಕಾಶಕ್ಕೆ ಹಾರಲಿರುವ ಜೆಫ್​ ಬೆಜೋಸ್​; ಇದಕ್ಕಾಗಿ ಖರ್ಚು ಮಾಡಿದ್ದೆಷ್ಟು?

Jeff Bezos: ಸಹೋದರನ ಜೊತೆಗೆ ಬಾಹ್ಯಾಕಾಶಕ್ಕೆ ಹಾರಲಿರುವ ಜೆಫ್​ ಬೆಜೋಸ್​; ಇದಕ್ಕಾಗಿ ಖರ್ಚು ಮಾಡಿದ್ದೆಷ್ಟು?

ಅಮೇಜಾನ್ ಸಿಇಒ ಜೆಫ್ ಬೆಜೋಸ್

ಅಮೇಜಾನ್ ಸಿಇಒ ಜೆಫ್ ಬೆಜೋಸ್

Jeff Bezos: ನ್ಯೂ ಶೆಪರ್ಡ್​​ ರಾಕೆಟ್​​ ಮತ್ತು ಕ್ಯಾಪ್ಸುಲ್​ ಕ್ಯಾಂಬೊ ಮೂಲಕ 6 ಪ್ರಯಾಣಿಕರು ಜೊತೆಗೆ ಸುಮಾರು 62 ಮೈಲಿ (100 ಕಿ.ಮೀ) ಹಾರಾಡಲಿದೆ. ಇನ್ನು ನ್ಯೂ ಶೆಪರ್ಡ್​ ಅನ್ನು ಸುರಕ್ಷಿತವಾಗಿ ವಿನ್ಯಾಸ ಮಾಡಲಾಗಿದೆ.

  • Share this:

    Amazon CEO Jeff Bezos: ಅಮೆಜಾನ್​​ ಸಿಇಒ ಜೆಫ್​ ಬೆಜೋಸ್​ ಅವರು ಮುಂದಿನ ತಿಂಗಳು ಬ್ಯಾಹಕಾಶಕ್ಕೆ ಹಾರುವುದಾಗಿ ಘೋಷಿಸಿದ್ದಾರೆ. ಬ್ಲೂ ಒರಿಜಿನ್ ಸಂಸ್ಥಾಪಕ ಮತ್ತು ಬೆಫ್​ ಬೆಜೋಸ್​ ಸಹೋದರ ಮಾರ್ಕ್​ ಬೆಜೋಸ್ ಇವರೊಂದಿಗೆ ನ್ಯೂ ಶೆಪರ್ಡ್​ ರಾಕೆಟ್​ ಮೂಲಕ ಬಾಹ್ಯಕಾಶಕ್ಕೆ ತೆರಳಲಿದ್ದಾರೆ. ಜುಲೈ 20ರಂದು ಬಾಹ್ಯಕಾಶಕ್ಕೆ ತೆರಳುವ ಪ್ಲಾನ್​ ಹಾಕಿಕೊಂಡಿದ್ದಾರೆ.


    10 ನಿಮಿಷದ ಪ್ರವಾಸ ಇದಾಗಿದೆ. ಅದರ ಜತೆಗೆ ನಾಲ್ಕು ನಿಮಿಷಗಳ ಕಾಲ ಕರ್ಮನ್​ ರೇಖೆಯ ಮೇಲೆ ಪ್ರಯಾಣಿಸಲಿದ್ದಾರೆ. ಕರ್ಮನ್​  ರೇಖೆಯು ಭೂಮಿಯ ವಾತಾವರಣ ಮತ್ತು ಬಾಹ್ಯಕಾಶದ ನಡುವಿನ ಗುರುತಿಸಲ್ಪಟ್ಟ ರೇಖೆಯಾಗಿದೆ.


    ನ್ಯೂ ಶೆಪರ್ಡ್​​ ರಾಕೆಟ್​​ ಮತ್ತು ಕ್ಯಾಪ್ಸುಲ್​ ಕ್ಯಾಂಬೊ ಮೂಲಕ 6 ಪ್ರಯಾಣಿಕರು ಜೊತೆಗೆ ಸುಮಾರು 62 ಮೈಲಿ (100 ಕಿ.ಮೀ) ಹಾರಾಡಲಿದೆ. ಇನ್ನು ನ್ಯೂ ಶೆಪರ್ಡ್​ ಅನ್ನು ಸುರಕ್ಷಿತವಾಗಿ ವಿನ್ಯಾಸ ಮಾಡಲಾಗಿದೆ.


    ಬೆಫ್​ ಬೆಜೋಸ್​ ಇನ್​ಸ್ಟಾಗ್ರಾಂಲ್ಲಿ ತನ್ನ ಸಹೋದರ ಮಾರ್ಕ್​​ ಬೆಜೋಸ್​ ಜತೆಗೆ ಬಾಹ್ಯಾಕಾಶ ಪ್ರವಾಸದ ಯೋಜನೆಯನ್ನ ಬಹಿರಂಗ ಪಡಿಸುತ್ತಾ, ನಾನು 5 ವರ್ಷವಿದ್ದಾಗ, ಬಾಹ್ಯಕಾಶದಲ್ಲಿ ಹಾರಾಟಬೇಕು ಎಂಬ ಕನಸು ಕಂಡಿದ್ದೆನು ಎಂದು ಹೇಳಿದರು.


    ನಂತರ ಮಾತು ಮುಂದುವರಿಸಿದ ಅವರು, ಜುಲೈ 20 ರಂದು ನಾನು ನನ್ನ  ಸಹೋದರೆನೊಂದಿಗೆ ಈ ಪ್ರಯಾಣ ಬೆಳೆಸುತ್ತೇನೆ. ಇದು ನನ್ನ ಸ್ನೇಹಿತನೊಂದಿಗೆ ದೊಡ್ಡ ಸಾಹಸ ಮಾಡುತ್ತಿದ್ದೇನೆ ಎಂದರು


    ರಾಯಿಟರ್ಸ್​​ ಪ್ರಕಾರ ಬ್ಲೂ ಒರಿಜಿನ್​ ನ್ಯೂ ಶೆಪರ್ಡ್​ ಮೂಲಕ ಬಾಹ್ಯಕಾಶಕ್ಕೆ ತೆರಳುವ ನೌಕೆಯ ಆಸಕ್ಕೆ 2.8 ಮಿಲಿಯನ್​ ಖರ್ಚು ಮಾಡಿದೆ ಎಂದು ಬಹಿರಂಗಪಡಿಸಿದೆ. ಜೂನ್​ 10ರವರೆಗೆ ಈ ಪ್ರಕ್ರಿಯೆ ನಡೆಯಲಿದ್ದು, ಜೂನ್​ 12ರಂದು ಅನ್​ಲೈನ್​ ಹರಾಜಿನ ಮೂಲಕ ಅಂತಿ ಹಂತದ ಪ್ರಕ್ರಿಯೆ ಮುಕ್ತಾಯಗೊಳ್ಳಿದೆ ಎಂದು ತಿಳಿಸಿದೆ.









    View this post on Instagram






    A post shared by Jeff Bezos (@jeffbezos)





    ಕಂಪನಿ ಏನು ಹೇಳುತ್ತದೆ?


    ಬ್ಲೂ ಒರಿಜಿನ್​ 2012ರಿಂದ ನ್ಯೂ ಶೆಪರ್ಡ್​ ಮತ್ತು ಅದರ ಸುರಕ್ಷಿತ ವ್ಯವಸ್ಥೆಯನ್ನು ಪರೀಕ್ಷಿಸುತ್ತಿದೆ. 15 ಯಶಸ್ವಿ ಕಾರ್ಯಚರಣೆಯ ಜೊತೆಗೆ 3 ಎಸ್ಕೇಪ್​ ಪರೀಕ್ಷೆಯನ್ನು ಎದುರಿಸಿದೆ. ತೊಂದರೆಯಾದ ಪ್ರಯಾನಿಕರು ಸುರಕ್ಷತವಾಗಿರುವಂತೆ ವ್ಯವಸ್ಥೆಯನ್ನು ಇದರಲ್ಲಿ ಕಲ್ಪಿಸಲಾಗಿದೆ.


    ಅಲನ್​ ಶೆಪರ್ಡ್​:


    ಬಾಹ್ಯಾಕಾಶಕ್ಕೆ ಹೋದ ಮೊದಲ ಅಮೆರಿಕ ಮೂಲದ ಮರ್ಕ್ಯುರಿ ಗಗನಯಾತ್ರಿ ಅಲನ್​ ಶೆಪರ್ಡ್​ ಅವರ ಹೆಸರನ್ನು ರಾಕೆಟ್​ಗೆ ಇಡಲಾಗಿದೆ.


    ನ್ಯೂ ಶೆಪರ್ಡ್​ ರಾಕೆಟ್​​ ಬ್ಲೂ ಒರಿಜಿನ್​ನ ಮರುಬಳಕೆ ಮಾಡಬಹುದಾದ ಸಬೋರ್ಬಿಟಲ್​ ರಾಕೆಟ್​ ವ್ಯವಸ್ಥೆಯಾಗಿದ್ದು, ಪೆಲೋಡ್​ ಮತ್ತು ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕರೆದೊಯ್ಯಲು ವಿನ್ಯಾಸಗೊಳಿಸಲಾಗಿದೆ.

    Published by:Harshith AS
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು