‘ಬಿಜೆಪಿಯನ್ನು ಸೋಲಿಸಲು ವಿಪಕ್ಷಗಳು ಒಂದಾಗಬೇಕಿದೆ’: ನೊಬೆಲ್ ಪುರಸ್ಕೃತ ಅಮರ್ತ್ಯ ಸೇನ್


Updated:August 26, 2018, 12:54 PM IST
‘ಬಿಜೆಪಿಯನ್ನು ಸೋಲಿಸಲು ವಿಪಕ್ಷಗಳು ಒಂದಾಗಬೇಕಿದೆ’: ನೊಬೆಲ್ ಪುರಸ್ಕೃತ ಅಮರ್ತ್ಯ ಸೇನ್

Updated: August 26, 2018, 12:54 PM IST
ನ್ಯೂಸ್​-18 ಕನ್ನಡ

ನವದೆಹಲಿ(ಆಗಸ್ಟ್​.26): ಖ್ಯಾತ ಅರ್ಥಶಾಸ್ತ್ರಜ್ಞ ಮತ್ತು ನೊಬೆಲ್ ಪುರಸ್ಕೃತ ಅಮರ್ತ್ಯ ಸೇನ್​ ಅವರು, ಬಿಜೆಪಿ ವಿರುದ್ಧ ಕಾಂಗ್ರೆಸ್​ ಸೇರಿದಂತೆ ಎಲ್ಲಾ ಪಕ್ಷಗಳು ಒಗ್ಗೂಡುವಂತೆ ಕರೆ ನೀಡಿದ್ಧಾರೆ. ಅಲ್ಲದೇ ಪ್ರಜಾಪ್ರಭುತ್ವ ಅಪಾದಯಲ್ಲಿದೆ, ಹೀಗಾಗಿ ಎಡಪಂಥೀಯರು ಕೂಡ ಬಿಜೆಪಿಯೇತರ ಪಕ್ಷಗಳ ಜತೆ ಕೈಜೋಡಿಸಲು ಹಿಂಜರಿಯಬಾರದು ಎಂದು ಕಿವಿಮಾತು ಹೇಳಿದ್ಧಾರೆ.

ಲೋಕಸಭಾ ಚುನಾವಣೆ ಸಮೀಸುತ್ತಿದೆ. ಕೋಮುವಾದಿ ಬಿಜೆಪಿಯನ್ನು ಸೋಲಿಸಲು ಎಲ್ಲರೂ ಒಗ್ಗೂಡಬೇಕಿದೆ. ಎಲ್ಲಾ ಪಕ್ಷಗಳ ತಪ್ಪುಗಳನ್ನು ಖಂಡಿತಾ ವಿಮರ್ಶಿಸೋಣ. ಆದರೆ, ಕೋಮುಗಲಭೆ ಸೃಷ್ಟಿಸುವ ಸಮಾಜಘಾತುಕ ಶಕ್ತಿಗಳನ್ನು ಹಿಮ್ಮೆಟ್ಟಿಸೋಣ ಎಂದು ಅಮರ್ತ್ಯ ಸೇನ್​ ಕರೆ ನೀಡಿದ್ಧಾರೆ.

ಕೊಲ್ಕತ್ತಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಜೆಪಿಯನ್ನು ಕಟುವಾಗಿ ಟೀಕಿಸಿದ ಸೇನ್​, ಕಳೆದ 2014 ರ ಲೋಕಸಭಾ ಚುನಾವಣೆಯಲ್ಲಿ ಕೇವಲ ಶೇ. 31 ರಷ್ಟು ಮತ ಪಡೆದು ಮೋದಿ ಸರ್ಕಾರ ಅಧಿಕಾರ ಹಿಡಿದಿದೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ವಿರುದ್ಧವಾಗಿದೆ. ಮೋದಿ ಸರ್ಕಾರ ಜನರಿಗೆ ದ್ರೋಹ ಬಗೆದು, ಭ್ರಷ್ಟ ಅಧಿಕಾರ ನಡೆಸುತ್ತಿದೆ ಎಂದು ಆರೋಪಿಸಿದರು.

ದೇಶದಲ್ಲಿ ನಿರಂಕುಶ ಪ್ರಭುತ್ವವನ್ನು ನಿಲ್ಲಿಸಬೇಕು ಎಂಬ ಚರ್ಚೆ ನಡೆಯುತ್ತಿದೆ. ಬಿಜೆಪಿ ಪಕ್ಷದ ಸರ್ವಾಧಿಕಾರ ಧೋರಣೆ ನಿಲ್ಲಿಸಬೇಕು. ಹೀಗಾಗಿ, ಕೋಮುವಾದ ವಿರೋಧಿ ಶಕ್ತಿಗಳೆಲ್ಲ ಒಂದಾಗಿ ಕಮಲ ಪಡೆಯನ್ನು ಸೋಲಿಸಬೇಕಿದೆ. ನಿಮ್ಮ ಭಿನ್ನಾಭಿಪ್ರಾಯಗಳನ್ನು ಪಕ್ಕಕ್ಕಿಟ್ಟು ಒಗ್ಗೂಡಿ ಎಂದರು.

ನೊಬೆಲ್ ಪುರಸ್ಕೃತ ಅಮರ್ತ್ಯ ಸೇನ್ ಅವರನ್ನು ನರೇಂದ್ರ ಮೋದಿ ಸರ್ಕಾರ ಕೆಟ್ಟದಾಗಿ ನಡೆಸಿಕೊಂಡಿರುವ ಆರೋಪ ಕೇಳಿ ಬಂದಿತ್ತು. ನಳಂದಾ ವಿವಿ ಕುಲಪತಿಯಾಗಿ ಅವರ ಅವಧಿ ವಿಸ್ತರಣೆ ವಿಷಯದಲ್ಲಿ ಸರ್ಕಾರ ರಾಜಕೀಯ ಬೆರೆಸುತ್ತಿರುವುದು ಏಕೆ ಎಂದು ವಿಪಕ್ಷಗಳು ಬಿಜೆಪಿಯನ್ನು ಪ್ರಶ್ನಿದ್ದವು.

ಅಮರ್ತ್ಯ ಸೇನ್ ರಾಷ್ಟ್ರೀಯ ಸಂಪತ್ತಾಗಿದ್ದು, ಅವರನ್ನು ಸರಿಯಾಗಿ ನಡೆಸಿಕೊಳ್ಳದಿರುವುದು ದುರದೃಷ್ಟಕರ ವಿಷಯ ಕಿಡಿಕಾರಿದ್ದರು. ಅಮರ್ತ್ಯ ಸೇನ್ ನಮ್ಮ ದೇಶದ ಆಸ್ತಿ. ಅರ್ಥಶಾಸ್ತ್ರ, ಆಹಾರ ಭದ್ರತೆ ಕ್ಷೇತ್ರಗಳಲ್ಲಿ ಅವರು ಶ್ಲಾಘನೀಯ ಕೊಡುಗೆ ನೀಡಿದ್ದಾರೆ. ಸೇನ್ ಅವಧಿಯನ್ನು ವಿಸ್ತರಿಸದಿರಲು ಸರ್ಕಾರ ಹಿಂದೇಟು ಹಾಕುತ್ತಿದೆ ಎನ್ನಲಾಗಿತ್ತು.
First published:August 26, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ