ಮಳೆಯಿಂದ ಅಮರನಾಥ ಯಾತ್ರೆ ವಿಳಂಬ: ಬೇಸ್​ ಕ್ಯಾಂಪ್​ನಲ್ಲಿ ಕಾಯುತ್ತಿರುವ ಯಾತ್ರಾರ್ಥಿಗಳು

news18
Updated:June 28, 2018, 1:20 PM IST
ಮಳೆಯಿಂದ ಅಮರನಾಥ ಯಾತ್ರೆ ವಿಳಂಬ: ಬೇಸ್​ ಕ್ಯಾಂಪ್​ನಲ್ಲಿ ಕಾಯುತ್ತಿರುವ ಯಾತ್ರಾರ್ಥಿಗಳು
  • News18
  • Last Updated: June 28, 2018, 1:20 PM IST
  • Share this:
ನ್ಯೂಸ್​ 18 ಕನ್ನಡ
ಶ್ರೀನಗರ (ಜೂನ್​ 28):  ದಕ್ಷಿಣ ಕಾಶ್ಮೀರದ ಗಡಿಭಾಗದಲ್ಲಿರುವ ಅಮರನಾಥ ಯಾತ್ರೆಯ ಮೊದಲ ತಂಡದ ಯಾತ್ರಾರ್ಥಿಗಳು ಇಂದು ಶಿಖರವನ್ನು ಹತ್ತಲಾರಂಭಿಸಬೇಕಿತ್ತು. ಆದರೆ, ಅತಿಯಾದ ಮಳೆಯಿಂದಾಗಿ ಪಹಾಲ್ಗಂ ಮತ್ತು ಬಲ್ತಾಲ್ ಬೇಸ್​ ಕ್ಯಾಂಪ್​ನಲ್ಲೇ ಉಳಿಯುವಂತಾಗಿದೆ.

ಅಮರನಾಥ ಯಾತ್ರೆಗೆ ತೆರಳುವ ಹಾದಿ ಕಡಿದಾಗಿರುವುದರಿಂದ ಮಳೆ ಸಂಪೂರ್ಣ ನಿಂತು, ದಾರಿ ಒಣಗಿದ ನಂತರವಷ್ಟೆ ಬೇಸ್​ ಕ್ಯಾಂಪಿನಿಂದ ಪ್ರಯಾಣ ಬೆಳೆಸಲು ಸಾಧ್ಯ. ವಾತಾವರಣ ಸಮಸ್ಥಿತಿಗೆ ಬಂದ ನಂತರ ಯಾತ್ರಾರ್ಥಿಗಳು ಬೆಟ್ಟ ಹತ್ತಲಾರಂಭಿಸಲಿದ್ದಾರೆ. ಉಗ್ರಗಾಮಿಗಳ ಬೆದರಿಕೆ ಹೆಚ್ಚಾಗಿರುವ ಕಾರಣ ಕಳೆದ ವರ್ಷಗಳಿಗಿಂತ ಈ ವರ್ಷ ಸರ್ಕಾರದಿಂದ ಹೆಚ್ಚಿನ ಭದ್ರತೆ ಒದಗಿಸಲಾಗಿದೆ.

ಅಮರಯಾತ್ರೆಗೆ ತೆರಳಲಿರುವ ಭಕ್ತರಲ್ಲಿ 1,904 ಜನ ಪಹಲ್ಗಾಂನ ಮಾರ್ಗವನ್ನು ಆಯ್ಕೆ ಮಾಡಿಕೊಂಡಿದ್ದು, 1,091 ಜನ ಬಲ್ತಾಲ್​ ಮಾರ್ಗವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಮೊದಲ ತಂಡದಲ್ಲಿ 2,334 ಪುರುಷರು, 520 ಮಹಿಳೆಯರು, 21 ಮಕ್ಕಳು, 120 ಸಾಧುಗಳು ಇದ್ದಾರೆ. ಜಮ್ಮುವಿನಿಂದ 400 ಕಿ.ಮೀ. ಇರುವ ಅಮರನಾಥ ದೇವಾಲಯಕ್ಕೆ ಯಾತ್ರಿಗಳು 60 ದಿನಗಳ ಕಾಲ ಪ್ರಯಾಣಿಸಲಿದ್ದಾರೆ.
First published:June 28, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading