Amarinder Singh Join BJP? ಬಿಜೆಪಿ ಸೇರ್ತಾರಾ ಮಾಜಿ ಸಿಎಂ ಅಮರೀಂದರ್ ಸಿಂಗ್? ಶಾ- ನಡ್ಡಾ ಭೇಟಿ ಸಾಧ್ಯತೆ

likely to meet Amit Shah and JP Nadda: ಕ್ಯಾಪ್ಟನ್ ದೆಹಲಿ ಪ್ರಯಾಣದ ಬೆನ್ನಲ್ಲೇ ಪಂಜಾಬ್ ಕಾಂಗ್ರೆಸ್ ನಲ್ಲಿ ರಾಜಕೀಯ ಚರ್ಚೆಗಳು ತೀವ್ರಗೊಂಡಿವೆ. ಇಬ್ಬರು ನಾಯಕರ ಭೇಟಿ ಬಳಿಕ ಅಮರೀಂದರ್ ಸಿಂಗ್ ಬಿಜೆಪಿ ಸೇರುವ ಅಧಿಕೃತ ಹೇಳಿಕೆ ನೀಡಬಹುದು ಎಂದು ಊಹಿಸಲಾಗಿದೆ.

ಅಮರೀಂದರ್ ಸಿಂಗ್

ಅಮರೀಂದರ್ ಸಿಂಗ್

  • Share this:
    ನವದೆಹಲಿ: ಪಂಜಾಬ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಕ್ಯಾಪ್ಟನ್ ಅಮರೀಂದರ್ ಸಿಂಗ್ (Amarinder Singh) ಮಂಗಳವಾರ ಸಂಜೆ ದೆಹಲಿ ತಲುಪಲಿದ್ದಾರೆ. ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ  (Union Home Minister Amit Shah), ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ (BJP president JP Nadda) ಅವರನ್ನ ಭೇಟಿಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಕ್ಯಾಪ್ಟನ್ ದೆಹಲಿ ಪ್ರಯಾಣದ ಬೆನ್ನಲ್ಲೇ ಪಂಜಾಬ್ ಕಾಂಗ್ರೆಸ್ ನಲ್ಲಿ ರಾಜಕೀಯ ಚರ್ಚೆಗಳು ತೀವ್ರಗೊಂಡಿವೆ. ಇಬ್ಬರು ನಾಯಕರ ಭೇಟಿ ಬಳಿಕ ಅಮರೀಂದರ್ ಸಿಂಗ್ ಬಿಜೆಪಿ ಸೇರುವ ಅಧಿಕೃತ ಹೇಳಿಕೆ ನೀಡಬಹುದು ಎಂದು ಊಹಿಸಲಾಗಿದೆ. ರಾಜಕೀಯ ವಿಶ್ಲೇಷಕರಿಂದ ವಿರೋಧ ಪಕ್ಷಗಳೆಲ್ಲ ಕ್ಯಾಪ್ಟನ್ ಮುಂದಿನ ನಡೆ ಏನು ಇರಬಹುದು ಎಂದು ಲೆಕ್ಕ ಹಾಕುತ್ತಿವೆ.

    ನವಜೋತ್ ಸಿಂಗ್ ಸಿಧು (Navjot Singh Sidhu) ಜೊತೆಗಿನ ಕಲಹದಿಂದಾಗಿ ಅಮರೀಂದರ್ ಸಿಂಗ್ (Captain Amarinder Singh)  ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಕ್ಯಾಪ್ಟನ್ ಸ್ಥಾನಕ್ಕೆ ಕಾಂಗ್ರೆಸ್ ಹೈಕಮಾಂಡ್ ಅಳೆದುತೂಗಿ ಚರಣ್‍ಜಿತ್ ಸಿಂಗ್ ಚನ್ನಿ Charanjit Singh Channi) ಅವರನ್ನ ತಂದಿದೆ. ಕೆಲ ದಿನಗಳ ಹಿಂದೆಯೂ ಸಂಪುಟ ವಿಸ್ತರಣೆ ಮಾಡೋದರ ಜೊತೆಗೆ ಕ್ಯಾಪ್ಟನ್ ಆಪ್ತರಿಗೆ ಕ್ಯಾಬಿನೆಟ್ ನಿಂದ ಕೊಕ್ ನೀಡಲಾಗಿದೆ.

    ಮುಂದಿನ ಆಯ್ಕೆ ಬಿಜೆಪಿ ಅಂದಿದ್ರು 

    ಕ್ಯಾಪ್ಟನ್ ಅಮರೀಂದರ್ ಸಿಂಗ್ ರಾಜೀನಾಮೆ ಮುಂದಿನ ಆಯ್ಕೆ ಉಳಿದಿರೋದು ಬಿಜೆಪಿ ಮಾತ್ರ ಎಂದು ಹೇಳುವ ಮೂಲಕ ಕಾಂಗ್ರೆಸ್ ತೊರೆಯುವ ಸುಳಿವು ನೀಡಿದ್ದರು. ರಾಜಕೀಯದಲ್ಲಿ 52 ವರ್ಷದ ಅನುಭವವುಳ್ಳ ಅಮರೀಂದರ್ ಸಿಂಗ್, ಒಂಬತ್ತೂವರೆ ವರ್ಷಗಳ ಕಾಲ ಸಿಎಂ ಆಗಿದ್ದಾರೆ. ಹಾಗಾಗಿ ರಾಜಕೀಯದಲ್ಲಿ ತಮ್ಮದೇ ಆಪ್ತ ಬಣವನ್ನು ಹೊಂದಿದ್ದಾರೆ. ಈ ಹಿಂದೆ ಮುಖ್ಯಮಂತ್ರಿ ಆಗಿದ್ದಾಗ ಅಮಿತ್ ಶಾ ಅವರನ್ನ ಭೇಟಿಯಾಗಿದ್ದರು. ದೆಹಲಿ ನಾಯಕರ ಜೊತೆಯಲ್ಲಿಯೂ ಅಮರೀಂದರ್ ಸಿಂಗ್ ಉತ್ತಮ ಒಡನಾಟ ಹೊಂದಿದ್ದಾರೆ. ಬಹುತೇಕರು ಅಮರೀಂದರ್ ಸಿಂಗ್ ಕಮಲ ಬಾವುಟ ಹಿಡಿಯೋದು ಖಚಿತ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.

    ಇದನ್ನೂ ಓದಿ: Navjot Singh Sidhu Resignation: ಪಂಜಾಬ್​ ಕಾಂಗ್ರೆಸ್​ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಸಿಧು: ಮುಂದುವರೆದ ಕಗ್ಗಂಟು

    2017ರಲ್ಲಿ ಹೈಕಮಾಂಡ್ ಜೊತೆ ಮುನಿಸು 

    2017ರ ಪಂಜಾಬ್ ವಿಧಾನಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್ ಹೈಕಮಾಂಡ್ ಮತ್ತು ಅಮರೀಂದರ್ ಸಿಂಗ್ ನಡುವೆ ವೈಮನಸ್ಸು ಏರ್ಪಟ್ಟಿತ್ತು. ಅಂದು ಪ್ರತಾಪ್ ಸಿಂಗ್ ಬಾರ್ವಾ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು. ಅಂದು ಮುನಿಸಿಕೊಂಡಿದ್ದ ಕ್ಯಾಪ್ಟನ್ ಜಾಟ್ ಸಮುದಾಯದ ಬೃಹತ್ ಸಮಾವೇಶ ನಡೆಸಿ, ಕಾಂಗ್ರೆಸ್ ಗೆ ಟಕ್ಕರ್ ಕೊಟ್ಟಿದ್ದರು. ತದನಂತರ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಗಾದಿ ನೀಡಿದಾಗ ಅಮರೀಂದರ್ ಸಿಂಗ್ ಶಾಂತವಾಗಿದ್ದರು. ಅಂದು ಸಹ ಬಿಜೆಪಿ ಸೇರುವ ಕುರಿತು ಚಿಂತನೆ ನಡೆಸುತ್ತಿರುವದಾಗಿ ಕ್ಯಾಪ್ಟನ್ ಹೇಳಿದ್ದರು.

    ಕೃಷಿ ಕಾನೂನು ಸಂಕಟದಲ್ಲಿ ಕ್ಯಾಪ್ಟನ್ 

    ಒಂದು ವೇಳೆ ಕೊರಳಿಗೆ ಕೇಸರಿ ಶಲ್ಯ ಧರಿಸಿದ್ರೆ, ಕೇಂದ್ರದ ನೂತನ ಕೃಷಿ ಕಾನೂನುಗಳ ಬಗ್ಗೆ ಅಮರೀಂದರ್ ಸಿಂಗ್ ನಿಲುವು ಏನು ಎಂಬುವುದು ಯಕ್ಷ ಪ್ರಶ್ನೆಯಾಗಿದೆ. ಕಳೆದ ವರ್ಷ ದೆಹಲಿ ಗಡಿಗಳಲ್ಲಿ ಅನ್ನದಾತರ ನಡೆಸುತ್ತಿರುವ ಪ್ರತಿಭಟನೆಯನ್ನು ಅಮರೀಂದರ್ ಸಿಂಗ್ ಸಮರ್ಥಿಸಿಕೊಂಡಿದ್ದರು. ಈ ಸಂಬಂಧ ದೆಹಲಿಗೆ ತೆರಳಿ ಅಮಿತ್ ಶಾ ಅವರನ್ನ ಭೇಟಿಯಾಗಿ ಕೃಷಿ ಕಾನೂನು ಹಿಂಪಡೆದುಕೊಳ್ಳುವಂತೆ ಮನವಿ ಸಹ ಸಲ್ಲಿಸಿದ್ದರು. ಈಗ ಬಿಜೆಪಿ ಸೇರ್ಪಡೆಗೊಂಡರೆ ತಮ್ಮ ನಿಲುವನ್ನು ಕ್ಯಾಪ್ಟನ್ ಬದಲಿಸಿಕೊಳ್ಳುತ್ತಾರಾ ಅನ್ನೋ ಪ್ರಶ್ನೆಯ ಉತ್ತರದ ನಿರೀಕ್ಷೆಯಲ್ಲಿ ಪಂಜಾಬ್ ಜನತೆ ಇದ್ದಾರೆ.

    ವರದಿ: ಮಹ್ಮದ್​ ರಫೀಕ್​ ಕೆ 
    Published by:Kavya V
    First published: