ಆಂಧ್ರಪ್ರದೇಶ ರಾಜಧಾನಿಯಾಗಲು ಅಮರಾವತಿ ಸುರಕ್ಷಿತ ಸ್ಥಳವಲ್ಲ

ಈ ಪ್ರದೇಶದ ಬಹುಭಾಗಗಳು ಪ್ರವಾಹಕ್ಕೆ ತುತ್ತಾಗಿರುವುದುನ್ನು ಕಂಡಿದ್ದೇವೆ. ಇದು ರಾಜಧಾನಿಗೆ ಸೂಕ್ತವಾದ ಸ್ಥಳವಲ್ಲ ಎಂದು ಶಿವರಾಮಕೃಷ್ಣ ಸಮಿತಿ ವರದಿ ನೀಡಿದೆ ಎಂದು ಸಚಿವರು ತಿಳಿಸಿದ್ದಾರೆ

Seema.R | news18-kannada
Updated:August 21, 2019, 3:31 PM IST
ಆಂಧ್ರಪ್ರದೇಶ ರಾಜಧಾನಿಯಾಗಲು ಅಮರಾವತಿ ಸುರಕ್ಷಿತ ಸ್ಥಳವಲ್ಲ
ಅಮರಾವತಿ
  • Share this:
ಹೈದ್ರಾಬಾದ್​​ (ಆ.21):  ಅಖಂಡ ಆಂಧ್ರಪ್ರದೇಶ ಎರಡು ರಾಜ್ಯವಾಗಿ ಇಬ್ಬಾಗವಾದ ಬಳಿಕ ಹೈದ್ರಾಬಾದ್​ ನ್ನು ತೆಲಂಗಾಣ ರಾಜಧಾನಿಯನ್ನಾಗಿ ಮಾಡಿಕೊಂಡರೆ, ಆಂಧ್ರಪ್ರದೇಶ ಅಮರಾವತಿ ನಗರವನ್ನು ರಾಜಧಾನಿಯಾಗಿ ನಿರ್ಮಿಸಲು ಮುಂದಾಯಿತು.  ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅವರ ಕನಸಿನ ಯೋಜನೆಯಾದ  ಈ ಅಮರವಾತಿ ನಗರ ರಾಜಧಾನಿ ಮಾಡಲು ಸೂಕ್ತವಾದ ಸ್ಥಳವಲ್ಲ ಎಂದು ನಗರಾಭಿವೃದ್ಧಿ ಹಾಗೂ ನಗರಾಡಳಿತ ಸಚಿವ ಬೊತ್ಸ ಸತ್ಯನಾರಾಯಣನ್​ ತಿಳಿಸಿದ್ದಾರೆ.

ಈ ಪ್ರದೇಶದ ಬಹುಭಾಗಗಳು ಪ್ರವಾಹಕ್ಕೆ ತುತ್ತಾಗಿರುವುದುನ್ನು ಕಂಡಿದ್ದೇವೆ. ಇದು ರಾಜಧಾನಿಗೆ ಸೂಕ್ತವಾದ ಸ್ಥಳವಲ್ಲ ಎಂದು ಶಿವರಾಮಕೃಷ್ಣ ಸಮಿತಿ ವರದಿ ನೀಡಿದೆ ಎಂದು ಸಚಿವರು ತಿಳಿಸಿದ್ದಾರೆ.

ಇದೇ ವೇಳೆ ನಗರ ನಿರ್ಮಾಣ ವೆಚ್ಚದ ಕುರಿತು ಅವರು ಮಾತನಾಡಿದ್ದಾರೆ. ರಾಜಧಾನಿ ನಿರ್ಮಾಣಕ್ಕೆ ವ್ಯಯಿಸುತ್ತಿರುವ ವೆಚ್ಚ ಕುರಿತು ಈಗಾಗಲೇ ವೈಎಸ್​ಆರ್​ ಕಾಂಗ್ರೆಸ್​, ಜಗನ್​ ಮೋಹನ್​ ರೆಡ್ಡಿ ಹಾಗೂ ಎನ್​ ಚಂದ್ರಬಾಬು ನಾಯ್ದು ನಡುವೆ ವಾದ ವಿವಾದಗಳನ್ನು ಹುಟ್ಟು ಹಾಕಿತ್ತು.

ಇದನ್ನು ಓದಿ: ನೆರೆಪೀಡಿತ ಉತ್ತರಾಖಂಡ್​ನಲ್ಲಿ ವಿದ್ಯುತ್ ತಂತಿ ಸುತ್ತಿಕೊಂಡು ಹೆಲಿಕಾಪ್ಟರ್ ಪತನ; 3 ಸಾವು

ಕಳೆದ ಟಿಡಿಪಿ ಸರ್ಕಾರ ಜನರ ಹಣವನ್ನು ದುರ್ಬಳಕೆ ಮಾಡುಕೊಳ್ಳುತ್ತಿದೆ, ಇತರ ಪ್ರದೇಶಗಳ ನಿರ್ಮಾಣಕ್ಕೆ ಹೋಲಿಸಿದರೆ  ಅಮರಾವತಿ ನಗರ ನಿರ್ಮಾಣ ಮಾಡಲು ಅತಿಹೆಚ್ಚಿನ ಹಣ ಖರ್ಚು ಮಾಡಲಾಗುತ್ತಿದೆ, ಬೇರೆ ಕಡೆ ನೀವು ಒಂದು ಲಕ್ಷ ಖರ್ಚು ಮಾಡಿದರೆ, ಅಮರಾವತಿಗೆ ಎರಡು ಲಕ್ಷ ವ್ಯಯ ಮಾಡಲಾಗುತ್ತಿದೆ. ಈ ಬಗ್ಗೆ ಪುನರ್​ಪರಿಶೀಲಿಸಿ ನಿರ್ಧಾರ ಕೈ ಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

First published:August 21, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ