ಲೋಕಸಭಾ ಚುನಾವಣೆಗಾಗಿ ಬಿಜೆಪಿಯತ್ತ ವಾಲಿದ ಎಸ್ಪಿ ಉಚ್ಛಾಟಿತ ನಾಯಕ ಅಮರ್​ ಸಿಂಗ್​

news18
Updated:August 1, 2018, 12:26 PM IST
ಲೋಕಸಭಾ ಚುನಾವಣೆಗಾಗಿ ಬಿಜೆಪಿಯತ್ತ ವಾಲಿದ ಎಸ್ಪಿ ಉಚ್ಛಾಟಿತ ನಾಯಕ ಅಮರ್​ ಸಿಂಗ್​
news18
Updated: August 1, 2018, 12:26 PM IST
ನ್ಯೂಸ್​ 18 ಕನ್ನಡ

ಲಕ್ನೋ (ಆ.1): ಸಮಾಜವಾದಿ ಪಕ್ಷದಿಂದ ಉಚ್ಛಾಟನೆಗೊಂಡಿರುವ ಹಿರಿಯ ರಾಜಕಾರಣಿ ಅಮರ್​ ಸಿಂಗ್​ ಮತ್ತೊಮ್ಮೆ ರಾಜಕೀಯಕ್ಕೆ ಪ್ರವೇಶ ಮಾಡಲಿದ್ದು, ಈ ಬಾರಿ ಅವರು ಬಿಜೆಪಿ ಕಡೆ ವಾಲುವ ಸಾಧ್ಯತೆ ಹೆಚ್ಚಿದೆ.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಅವರು ಅಸಮ್​ಗಢ್​ ಕ್ಷೇತ್ರದಿಂದ ಇಳಿಯುವ ಸಾಧ್ಯತೆ ಇದ್ದು, ಅವರಿಗೆ ಬಿಜೆಪಿ ಮೈತ್ರಿಯ ಸುಹೇಲ್​ದೇವ್​ ಭಾರತೀಯ ಸಮಾಜ ಪಕ್ಷ(ಎಸ್​ಬಿಎಸ್​ಪಿ) ಟಿಕೆಟ್​ ನೀಡುವುದಾಗಿ ತಿಳಿಸಿದೆ.

ಪ್ರಸ್ತುತ ಸಮಾಜವಾದಿ ಪಕ್ಷದ ಹಿರಿಯ ಮುಖಂಡರಾಗಿರುವ ಮುಲಾಯಂ ಸಿಂಗ್​ ಯಾದವ್​ ಅವರು ಅಸಮ್​ಗಢ್ ಕ್ಷೇತ್ರ ಪ್ರತಿನಿಧಿಸುತ್ತಿದ್ದಾರೆ.

ಅಮರ್​ ಸಿಂಗ್​ ಹಿರಿಯ ನಾಯಕರು. ಅವರು 2019ರಲ್ಲಿ ಲೋಕಸಭಾ ಚುನಾವಣೆಗೆ ಅಜಾಮ್​ಗಢ್ ಕ್ಷೆತ್ರದಿಂದ  ಸ್ಪರ್ಧೆ ಮಾಡುವುದಾದರೆ,  ಅವರಿಗೆ ಟಿಕೆಟ್​ ನೀಡುತ್ತೇವೆ. ಎಸ್​ಬಿಎಸ್​ಪಿ ಬಾಗಿಲು ಅವರಿಗೆ ಸದಾ ತೆಗೆದಿರುತ್ತದೆ ಎಂದಿದ್ದು,  ಇದೇ ವೇಳೆ  ಎನ್​ಡಿಎ ಜೊತೆಗೆ ಸೀಟು ಹಂಚಿಕೆ ಬಗ್ಗೆ ಇನ್ನು ನಿರ್ಧಾರವಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ

ಮೋದಿ ಇತ್ತೀಚೆಗೆ ಲಕ್ನೋಗೆ ಭೇಟಿ ನೀಡಿದ್ದ ವೇಳೆ ನನ್ನನ್ನು ಉದ್ಯಮಿಗಳ ಜೊತೆ ಗುರುತಿಸಿಕೊಳ್ಳುವ ಬಗ್ಗೆ ವಿಪಕ್ಷಗಳ ಟೀಕೆಗೆ ಮಾಡುತ್ತೀವೆ.   ರಾಜಕೀಯ ನಾಯಕರು ಉದ್ಯಮಿಗಳ ಜೊತೆ ಹಿಂಬಾಗಿಲಿನ ಸಂಬಂಧ ಕುರಿತು ಅಮರ್​ ಸಿಂಗ್​ಗೆ ಕೇಳಿ ಹೇಳುತ್ತಾರೆ ಎಂದು ವೀಕ್ಷಕರ ಸಾಲಿನಲ್ಲಿ ಕುಳಿತ ಅವರತ್ತ ಬೆಟ್ಟು ಮಾಡಿ ತೋರಿಸಿದರು.

ತಿಂಗಳ ಹಿಂದಷ್ಟೇ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯ ನಾಥ್​ ಅವರನ್ನು ಅಮರ್​ ಸಿಂಗ್​ ಭೇಟಿಯಾಗಿದ್ದರು, ಅಲ್ಲದೇ ಇದು ಸಾಮಾನ್ಯ ಭೇಟಿಯಷ್ಟೇ ಎಂದು ಸಮಜಾಷಿಸಿ ನೀಡಿದ್ದರು.
Loading...

ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್​ ಯಾದವ್​ ಅವರ ಬಲಗೈ ಬಂಟ ಎಂದೇ ಅಮರ್​ ಸಿಂಗ್​ ಅವರು ಗುರುತಿಸಿಕೊಂಡಿದ್ದರು.

ಅಮರ್​ ಸಿಂಗ್​ ಜಾತಿವಾದಿ ಎಂಬ ಕಾರಣವನ್ನು ಒಡ್ಡಿ ಅವರನ್ನು ಸಮಾಜವಾದಿ ಪಕ್ಷದಿಂದ ಬಿಎಸ್ಪಿ ಉಚ್ಛಾಟಿಸಿತ್ತು.

ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರನ್ನು ಬೆಂಬಲಿಸುವುದಾಗಿ ಅಮರ್​ಸಿಂಗ್​ ಹೇಳಿದ್ದರು. ರಾಜಕಾರಣಿಗಳಿಗೆ ವಿವೇಕ ಮತ್ತು ಸಂವೇದನೆ ಇರಬೇಕು ಎಂಬುದನ್ನು ನಾನು ನಂಬುತ್ತೇನೆ. ಇದು ಉತ್ತರಪ್ರದೇಶ ಕಾಂಗ್ರೆಸ್​ ನಾಯಕರಲ್ಲಿ ಇಲ್ಲ. ಎಸ್​ಪಿ ಮತ್ತು ಬಿಎಸ್ಪಿ ಒಂದೇ ನಾಣ್ಯದ ಎರಡು ಮುಖಗಳು. ಎರಡು ಪಕ್ಷಗಳು ಜಾತಿ ರಾಜಕಾರಣವನ್ನು ಸಂಕೇತಿಸುತ್ತಿದೆ. ಆದರೆ ನಾನು ಜಾತ್ಯಾತೀತವಾದದಲ್ಲಿ ನಂಬಿಕೆ ಹೊಂದಿದ್ದೇನೆ ಎಂದರು.

ಅಜಾಮ್​ಗಢ ಲೋಕಸಭಾ ಕ್ಷೇತ್ರದಲ್ಲಿ ಐದು ವಿಧಾನ ಸಭಾ ಕ್ಷೇತ್ರಗಳಿದ್ದು, 2017ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಇಲ್ಲಿ ಎಸ್ಪಿ, ಬಿಎಸ್ಪಿ ಗೆಲುವು ಪಡೆದಿತ್ತು.

 

 
First published:August 1, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ