Amar Singh passes away: ರಾಜ್ಯಸಭಾ ಸದಸ್ಯ, ಸಮಾಜವಾದಿ ಪಕ್ಷದ ಮಾಜಿ ನಾಯಕ ಅಮರ್ ಸಿಂಗ್ ನಿಧನ

Amar Singh: ಕಳೆದ 7 ತಿಂಗಳ ಹಿಂದೆ ಸಿಂಗಾಪೂರ್​ನ ಮೌಂಟ್​ ಎಲಿಜಿಬೆತ್ ಆಸ್ಪತ್ರೆಗೆ ಅಮರ್​ ಸಿಂಗ್​ ಅವರನ್ನು ದಾಖಲಿಸಲಾಗಿತ್ತು.

news18-kannada
Updated:August 1, 2020, 5:49 PM IST
Amar Singh passes away: ರಾಜ್ಯಸಭಾ ಸದಸ್ಯ, ಸಮಾಜವಾದಿ ಪಕ್ಷದ ಮಾಜಿ ನಾಯಕ ಅಮರ್ ಸಿಂಗ್ ನಿಧನ
ಅಮರ್ ಸಿಂಗ್
  • Share this:
ನವದೆಹಲಿ(ಆ.01): ಅನಾರೋಗ್ಯದಿಂದ ಬಳಲುತ್ತಿದ್ದ ಸಮಾಜವಾದಿ ಪಕ್ಷದ ಮಾಜಿ ನಾಯಕ, ರಾಜ್ಯಸಭಾ ಸದಸ್ಯ ಅಮರ್ ಸಿಂಗ್ ಚಿಕಿತ್ಸೆ ಫಲಕಾರಿಯಾಗದೆ ಇಂದು ನಿಧನರಾಗಿದ್ದಾರೆ.

ಸಿಂಗ್ ಅವರಿಗೆ 64 ವರ್ಷ ವಯಸ್ಸಾಗಿತ್ತು. ಅನಾರೋಗ್ಯ ಹಿನ್ನೆಲೆ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಕಳೆದ 7 ತಿಂಗಳ ಹಿಂದೆ ಸಿಂಗಾಪೂರ್​ನ ಮೌಂಟ್​ ಎಲಿಜಿಬೆತ್ ಆಸ್ಪತ್ರೆಗೆ ಅಮರ್​ ಸಿಂಗ್​ ಅವರನ್ನು ದಾಖಲಿಸಲಾಗಿತ್ತು.

ಅಮರ್ ಸಿಂಗ್ ಅವರ ನಿಧನಕ್ಕೆ ರಾಜಕೀಯ ಗಣ್ಯರು ಕಂಬನಿ ಮಿಡಿದಿದ್ದಾರೆ.
ಬಿಜೆಪಿ ನಾಯಕ ಜ್ಯೋತಿರಾದಿತ್ಯ ಸಿಂಗ್, ಕೇಂದ್ರ ಸಚಿವ ಧರ್ಮೇಂದ್ರ ಫ್ರಧಾನ್ ಮತ್ತು ರಾಜ್ಯ ಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಅಮರ್ ಸಿಂಗ್ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.









ಸಿಂಗಾಪುರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರಾಜ್ಯಸಭಾ ಸದಸ್ಯ ಅಮರ್​ ಸಿಂಗ್ ಈ ಹಿಂದೆ ಮೂತ್ರಪಿಂಡ ಕಸಿ ಮಾಡಿಸಿಕೊಂಡಿದ್ದರು. ಅವರು 2013ನೇ ಇಸವಿಯಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದರು.
Published by: Latha CG
First published: August 1, 2020, 5:33 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading