ಉತ್ತರಪ್ರದೇಶದ ಅಜಮ್​ಗರ್​ ಲೋಕಸಭಾ ಕ್ಷೇತ್ರದಿಂದ ಅಖಿಲೇಶ್​ ಯಾದವ್ ಸ್ಪರ್ಧೆ

ಅಖಿಲೇಶ್​ ಯಾದವ್ ತಂದೆ ಮುಲಾಯಂ ಸಿಂಗ್ ಯಾದವ್ ಅವರು ಹಾಲಿ ಈ ಕ್ಷೇತ್ರದ ಪ್ರತಿನಿಧಿಯಾಗಿದ್ದಾರೆ. ಮುಸ್ಲಿಂ ಮತ್ತು ಯಾದವ್​ ಸಮುದಾಯದ ಮತಬ್ಯಾಂಕ್​ ಹೊಂದಿರುವ ಕ್ಷೇತ್ರವಾಗಿದೆ. ಸಮಾಜವಾದಿ ಪಕ್ಷದ ವರಿಷ್ಠರು ಮೈನ್​ಪುರಿ ಕ್ಷೇತ್ರಕ್ಕೆ ಹೋಗಲಿದ್ದಾರೆ.

HR Ramesh | news18
Updated:March 24, 2019, 11:26 AM IST
ಉತ್ತರಪ್ರದೇಶದ ಅಜಮ್​ಗರ್​ ಲೋಕಸಭಾ ಕ್ಷೇತ್ರದಿಂದ ಅಖಿಲೇಶ್​ ಯಾದವ್ ಸ್ಪರ್ಧೆ
ಅಖಿಲೇಶ್ ಯಾದವ್
HR Ramesh | news18
Updated: March 24, 2019, 11:26 AM IST
ಲಕ್ನೋ: ಸಮಾಜವಾದಿ ಪಕ್ಷ (ಎಸ್​ಪಿ)ದ ಮುಖ್ಯಸ್ಥ ಅಖಿಲೇಶ್ ಯಾದವ್ ಉತ್ತರಪ್ರದೇಶದ ಅಜಮ್​ಗರ್​ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ ಎಂದು ಪಕ್ಷ ಇಂದು ಹೇಳಿದೆ. ಎಸ್​ಪಿಯ ಮಿತ್ರಪಕ್ಷ ಬಿಎಸ್​ಪಿ ಮುಖ್ಯಸ್ಥೆ ಮಾಯಾವತಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ ಎಂದು ಹೇಳಿದ ಮರುದಿನ ಎಸ್​ಪಿ ಈ ಘೋಷಣೆ ಮಾಡಿದೆ.

ಅಖಿಲೇಶ್​ ಯಾದವ್ ಅವರು 2009ರ ಲೋಕಸಭೆ ಚುನಾವಣೆಯಲ್ಲಿ ಕನ್ನೌಜ್​ ಕ್ಷೇತ್ರದಿಂದ ಸ್ಪರ್ಧೆ ಮಾಡಿ, ಗೆದ್ದಿದ್ದರು. 2012ರಲ್ಲಿ ಉತ್ತರಪ್ರದೇಶ ಮುಖ್ಯಮಂತ್ರಿಯಾದ ನಂತರ ಈ ಕ್ಷೇತ್ರವನ್ನು ಬಿಟ್ಟಿದ್ದರು. ಅವರ ಹೆಂಡತಿ ಡಿಂಪಲ್ ಯಾದವ್​ ಸದ್ಯ ಆ ಕ್ಷೇತ್ರದ ಹಾಲಿ ಸಂಸದೆಯಾಗಿದ್ದಾರೆ. ಮುಂದೆಯೂ ಅವರು ಇದೇ ಕ್ಷೇತ್ರದಿಂದ ಸ್ಪರ್ಧೆ ಮಾಡಲಿದ್ದಾರೆ.

ಇದನ್ನು ಓದಿ: ಉತ್ತರಪ್ರದೇಶದಲ್ಲಿ ಎಸ್​ಪಿ-ಬಿಎಸ್​ಪಿ ಸೀಟು ಹಂಚಿಕೆ ಪೂರ್ಣ; ಮಾಯಾವತಿಗೆ 38, ಅಖಿಲೇಶ್ ಯಾದವ್​ಗೆ 37 ಕ್ಷೇತ್ರಗಳುಅಖಿಲೇಶ್​ ಯಾದವ್ ತಂದೆ ಮುಲಾಯಂ ಸಿಂಗ್ ಯಾದವ್ ಅವರು ಹಾಲಿ ಈ ಕ್ಷೇತ್ರದ ಪ್ರತಿನಿಧಿಯಾಗಿದ್ದಾರೆ. ಮುಸ್ಲಿಂ ಮತ್ತು ಯಾದವ್​ ಸಮುದಾಯದ ಮತಬ್ಯಾಂಕ್​ ಹೊಂದಿರುವ ಕ್ಷೇತ್ರವಾಗಿದೆ. ಸಮಾಜವಾದಿ ಪಕ್ಷದ ವರಿಷ್ಠರು ಮೈನ್​ಪುರಿ ಕ್ಷೇತ್ರಕ್ಕೆ ಹೋಗಲಿದ್ದಾರೆ. ಇದು ಕೂಡ ಸಮಾಜವಾದಿ ಪಕ್ಷದ ಭದ್ರಕೋಟೆಯಾಗಿದೆ.

First published:March 24, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ