Rahul Gandhi: '24/7 ಸುಳ್ಳು ಹೇಳಲು ನಾನು ನರೇಂದ್ರ ಮೋದಿಯಲ್ಲ'; ಚುನಾವಣಾ ಪ್ರಚಾರದಲ್ಲಿ ರಾಹುಲ್ ಗಾಂಧಿ ವ್ಯಂಗ್ಯ
ನಾನು ನಿಮಗೆ ಸುಳ್ಳು ಹೇಳಲು ಇಲ್ಲಿಗೆ ಬಂದಿಲ್ಲ. ನನ್ನ ಹೆಸರು ನರೇಂದ್ರ ಮೋದಿ ಅಲ್ಲ. ಅಸ್ಸಾಂ, ರೈತರು ಅಥವಾ ಇನ್ನಾವುದೇ ವಿಷಯದ ಬಗ್ಗೆ ಅವರು ಸುಳ್ಳು ಹೇಳುವುದನ್ನು ಕೇಳಲು ಬಯಸಿದರೆ, ಟಿವಿ ಆನ್ ಮಾಡಿ, ಅವರು ಭಾರತಕ್ಕೆ ದಿನದ 24 ಗಂಟೆಯು ಸುಳ್ಳು ಹೇಳುತ್ತಾರೆ ಎಂದು ರಾಹುಲ್ ಗಾಂಧಿ ಗೇಲಿ ಮಾಡಿದ್ದಾರೆ.
ಅಸ್ಸಾಂ (ಮಾರ್ಚ್ 31); ಭಾರತದ ಜನರಿಗೆ 24/7 ಸುಳ್ಳು ಹೇಳಲು ನಾನು ಪ್ರಧಾನಿ ನರೇಂದ್ರ ಮೋದಿ ಅಲ್ಲ. ಸತ್ಯದ ಮಾತುಗಳನ್ನು ಕೇಳಬೇಕು ಎಂದರೆ ಮಾತ್ರ ನನ್ನ ಚುನಾವಣಾ ಪ್ರಚಾರ ಮತ್ತು ರ್ಯಾಲಿಗಳಿಗೆ ಬನ್ನಿ ಎಂದು ರಾಹುಲ್ ಗಾಂಧಿ ಕರೆ ನೀಡಿದ್ದಾರೆ. ಅಸ್ಸಾಂ ವಿಧಾನ ಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಅಸ್ಸಾಂನಲ್ಲಿ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾರೆ. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹರಿಹಾಯ್ದಿರುವ ರಾಹುಲ್ ಗಾಂಧಿ, "ಮೋದಿ ಪ್ರಧಾನಿಯಾದ ದಿನದಿಂದ ದೇಶದ ಜನರಿಗೆ 24/7 ಸುಳ್ಳು ಹೇಳುತ್ತಲೇ ಇದ್ದಾರೆ. ಆದರೆ, ಸುಳ್ಳು ಹೇಳಲು ನಾನು ಮೋದಿಯಲ್ಲ ಸತ್ಯದ ಮಾತುಗಳನ್ನು ಕೇಳಬೇಕು ಎಂದರೆ ಮಾತ್ರ ನನ್ನ ಚುನಾವಣಾ ರ್ಯಾಲಿಗೆ ಬನ್ನಿ" ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
"ನಾನು ನಿಮಗೆ ಸುಳ್ಳು ಹೇಳಲು ಇಲ್ಲಿಗೆ ಬಂದಿಲ್ಲ. ನನ್ನ ಹೆಸರು ನರೇಂದ್ರ ಮೋದಿ ಅಲ್ಲ. ಅಸ್ಸಾಂ, ರೈತರು ಅಥವಾ ಇನ್ನಾವುದೇ ವಿಷಯದ ಬಗ್ಗೆ ಅವರು ಸುಳ್ಳು ಹೇಳುವುದನ್ನು ಕೇಳಲು ಬಯಸಿದರೆ, ಟಿವಿ ಆನ್ ಮಾಡಿ, ಅವರು ಭಾರತಕ್ಕೆ ದಿನದ 24 ಗಂಟೆಯು ಸುಳ್ಳು ಹೇಳುತ್ತಾರೆ" ಎಂದು ರಾಹುಲ್ ಗಾಂಧಿ ಗೇಲಿ ಮಾಡಿದ್ದಾರೆ.
ಇದೇ ವೇಳೆ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ನರೇಂದ್ರ ಮೋದಿ, "ನಾವು ನೀಡಿದ ಭರವಸೆಯಂತೆ, ಛತ್ತೀಸ್ಗಢದಲ್ಲಿ ಅಧಿಕಾರ ವಹಿಸಿಕೊಂಡ ಆರು ಗಂಟೆಗಳಲ್ಲಿ ಕೃಷಿ ಸಾಲವನ್ನು ಮನ್ನಾ ಮಾಡಿದ್ದೇವೆ, ಹಿಂದಿನ ಯುಪಿಎ ಸರ್ಕಾರವು ರೈತರ 70,000 ಕೋಟಿ ರೂ.ಗಳ ಕೃಷಿ ಸಾಲವನ್ನು ಮನ್ನಾ ಮಾಡಿದೆ. ವಿವಿಧ ಭಾಷೆಗಳು, ಜನಾಂಗಗಳು ಮತ್ತು ಸಿದ್ಧಾಂತಗಳ ಜನರು ನನ್ನ ಮಾತುಗಳನ್ನು ಶಾಂತಿಯುತವಾಗಿ ಕೇಳುತ್ತಿದ್ದಾರೆ, ಏಕೆಂದರೆ ಇದು ಅಸ್ಸಾಂ. ಆದರೆ ಬಿಜೆಪಿ ಒಬ್ಬ ಸಹೋದರನನ್ನು ಇನ್ನೊಬ್ಬರ ವಿರುದ್ಧ ಹೋರಾಡುವಂತೆ ಮಾಡುತ್ತದೆ ಮತ್ತು ದ್ವೇಷವನ್ನು ಹರಡುತ್ತದೆ. ಆದರೆ, ಹೊರಗಿನವರಿಗೆ ಚಹಾ ತೋಟದ ಒಪ್ಪಂದಗಳನ್ನು ನೀಡುತ್ತಾರೆ" ಎಂದು ಆರೋಪಿಸಿದ್ದಾರೆ.
"ಅಸ್ಸಾಂನಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ತನ್ನದೇ ಆದ ಮುಖ್ಯಮಂತ್ರಿಯನ್ನು ಆಯ್ಕೆ ಮಾಡುತ್ತದೆ. ಅಸ್ಸಾಂ ರಾಜ್ಯವನ್ನು ನಾಗ್ಪುರ (ಆರ್ಎಸ್ಎಸ್ ಪ್ರಧಾನ ಕಚೇರಿ) ಅಥವಾ ದೆಹಲಿಯಿಂದ ನಿಯಂತ್ರಿಸಲು ಬಿಡುವುದಿಲ್ಲ” ಎಂದು ಹೇಳಿದ್ದಾರೆ.
39 ವಿಧಾನಸಭಾ ಕ್ಷೇತ್ರಗಳ ಅಸ್ಸಾಂ ವಿಧಾನಸಭಾ ಚುನಾವಣೆಗೆ ಗುರುವಾರ ಎರಡನೇ ಹಂತದಲ್ಲಿ ಮತದಾನ ನಡೆಯಲಿದೆ. ಏಪ್ರಿಲ್ 6 ರಂದು ಮೂರನೇ ಮತ್ತು ಕೊನೆಯ ಹಂತದ ಮತದಾನ ನಡೆಯಲಿದ್ದು, ಮೇ 2 ರಂದು ಫಲಿತಾಂಶ ಹೊರಬೀಳಲಿವೆ.
Published by:MAshok Kumar
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ