ವಿಮಾನದಲ್ಲಿ ಜೀವನ್ಮರಣ ಸ್ಥಿತಿಯಲ್ಲಿದ್ದ ಭಾರತೀಯ ಪ್ರಯಾಣಿಕನಿಗೆ ಚಿಕಿತ್ಸೆ ನೀಡಲೊಪ್ಪದ ಪಾಕ್​ ವೈದ್ಯರು!


Updated:August 14, 2018, 9:58 PM IST
ವಿಮಾನದಲ್ಲಿ ಜೀವನ್ಮರಣ ಸ್ಥಿತಿಯಲ್ಲಿದ್ದ ಭಾರತೀಯ ಪ್ರಯಾಣಿಕನಿಗೆ ಚಿಕಿತ್ಸೆ ನೀಡಲೊಪ್ಪದ ಪಾಕ್​ ವೈದ್ಯರು!
  • Share this:
ನ್ಯೂಸ್​ 18 ಕನ್ನಡ

ನವದೆಹಲಿ(ಆ.14): ಪಾಕಿಸ್ತಾನದ ಅಮಾನವೀಯ ಮುಖ ಮತ್ತೊಮ್ಮೆ ಬಯಲಾಗಿದೆ. ಟರ್ಕಿಯಿಂದ ಭಾರತಕ್ಕೆ ಪ್ರಯಾಣಿಸುತ್ತಿದ್ದ ರಾಜಸ್ಥಾನದ ಬಿವಾಡಿಯ ನಿವಾಸಿ ವಿಪಿನ್​ ಎಂಬವರ ಆರೋಗ್ಯ ಹದಗೆಟ್ಟಿತ್ತು. ಇದನ್ನು ಗಮನಿಸಿದ ಪೈಲಟ್​ ಲಾಹೋರ್​ ಏರ್​ಪೋರ್ಟ್​ನಲ್ಲಿ ವಿಮಾನವನ್ನು ಎಮರ್ಜೆನ್ಸಿ ಲ್ಯಾಂಡಿಂಗ್​ ಮಾಡಲು ನಿರ್ಧರಿಸಿದರು. ಆದರೆ ಲ್ಯಾಂಡಿಂಗ್​ ಮಾಡಿದ ಬಳಿಕ ಪಾಕಿಸ್ತಾನದ ವೈದ್ಯ ಸಿಬ್ಬಂದಿಗಳು ಮಾತ್ರ ಭಾರತೀಯ ಪ್ರಯಾಣಿಕ ವಿಪಿನ್​ಗೆ ಚಿಕಿತ್ಸೆ ನೀಡಲು ನಿರಾಕರಿಸಿದ್ದಾರೆ. ಕಾರಣ ಕೇಳಿದಾಗ ವಿಪಿನ್​ ಭಾರತೀಯನೆಂಬ ಕಾರಣ ನೀಡಿದ್ದಾರೆ. ಸದ್ಯ ಗುರುಗಾಂವ್​ನ ಮೆದಾಂತಾ ಆಸ್ಪತ್ರೆಯಲ್ಲಿ ವಿಪಿನ್​ಗೆ ಚಿಕಿತ್ಸೆ ನೀಡಲಾಗುತ್ತಿದೆ.

ಘಟನೆ ಆಗಸ್ಟ್​ 13 ರಂದು ನಡೆದಿದ್ದು, ವಿಪಿನ್​ ಬರೋಬ್ಬರಿ ಮೂರು ಗಂಟೆಗಳ ಕಾಲ ಲಾಹೋರ್​ನಲ್ಲಿ ಟರ್ಕಿ ಏರ್​ಲೈನ್ಸ್​ನಲ್ಲಿ ಚಡಪಡಿಸಿಕೊಂಡಿದ್ದರೆನ್ನಲಾಗಿದೆ. ಬಳಿಕ ಟರ್ಕಿ ಏರ್​ಲೈನ್ಸ್​ ದೆಹಲಿಗೆ ವಾಪಾಸಾಗಿದ್ದು, ಅವರನ್ನು ಗುರುಗಾಂವ್​ನ ಮೆದಾಂತಾ ಆಸ್ಪತ್ರೆಗೆ ಭರ್ತಿ ಮಾಡಲಾಗಿದೆ. ವಿಪಿನ್​ ಆರೋಗ್ಯ ಸ್ಥಿತಿ ಇನ್ನೂ ಗಂಭೀರವಾಗಿದೆ ಎನ್ನಲಾಗಿದೆ.

ವಿಪಿನ್​ ಜೊತೆ ಪ್ರಯಾಣಿಸುತ್ತಿದ್ದ ಜಲಂಧರ್​ ನಿವಾಸಿ ಪಂಕಜ್​ ಮೆಹ್ತಾ ಈ ಘಟನೆಯ ಸಂಪೂರ್ಣ ವಿವರವನ್ನು ಟ್ವಿಟ್​ ಮಾಡುವ ಮೂಲಕ ಪ್ರಧಾನಿ ಮೋದಿ ಹಾಗೂ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್​ ಅವರ ಗಮನಕ್ಕೆ ತಂದಿದ್ದಾರೆ. ವಿಪಿನ್​ ವಿಮಾ ಕಂಪೆನಿಯಲ್ಲಿ ಸೇಲ್ಟ್​ ಮ್ಯಾನೇಜರ್​ ಆಗಿ ಕಾರ್ಯ ನಿರ್ವಹಿಸುತ್ತಿದ್ದು, ಕಂಪೆನಿಯಿಂದಲೇ ಆಯೋಜಿಸಲಾಗಿದ್ದ ಮೂರು ದಿನಗಳ ಟೂರ್​ ಮೇಲೆ ಟರ್ಕಿಗೆ ಹೊರಟಿದ್ದರೆನ್ನಲಾಗಿದೆ.
ಪಂಕಜ್​ರವರ ಅನುಸಾರ, ಆಗಸ್ಟ್​ 12 ರ ಸಂಜೆ ವಿಮಾನದ ಮೂಲಕ ಇಸ್ತಾಂಬುಲ್​ ಏರ್​ಪೋರ್ಟ್​ನಿಂದ ದೆಹಲಿಗೆ ಇವರು ಪ್ರಯಾಣಿಸುತ್ತಿದ್ದರು. ಆದರೆ ರಾತ್ರಿ ಸುಮಾರು 10 ಗಂಟೆಗೆ ವಿಪಿನ್​ ವೈನ್​ ಕುಡಿದಿದ್ದರು. ಆದರೆ ಇದನ್ನು ಸೇವಿಸಿದ ಬಳಿಕ ಅವರ ಆರೋಗ್ಯ ಸ್ಥಿತಿ ಹದಗೆಡಲಾರಂಭಿಸಿತ್ತು. ರಾತ್ರಿ ಸುಮಾರು 1 ಗಂಟೆಗೆ ಅವರು ಪ್ರಜ್ಞಾಹೀನರಾಗಿದ್ದರು. ಸಿಬ್ಬಂದಿಗಳ ಸಹಾಯ ಕೆಳಲಾಯಿತು. ಈ ವೇಳೆ ವಿಮಾನದಲ್ಲಿದ್ದ ಭಾರತೀಯ ವೈದ್ಯರೊಬ್ಬರು ಅವರಿಗೆ ಚಿಕಿತ್ಸೆ ನೀಡಲು ಪ್ರಯತ್ನಿಸಿದರು. ಆದರೆ ಯಾವುದೇ ಪ್ರಯೋಜನವಾಗದಾಗ ರಾತ್ರಿ ಸುಮಾರು 1.30ಕ್ಕೆ ಲಾಹೋರ್​ ಏರ್ಪೋರ್ಟ್​ನಲ್ಲಿ ಎಮರ್ಜೆನ್ಸಿ ಲ್ಯಾಂಡಿಗ್​ ಮಾಡಲಾಯಿತು. ಆದರೆ ಆಸ್ಪತ್ರೆಗೆ ಭರ್ತಿ ಮಾಡಿ ಚಿಕಿತ್ಸೆ ನೀಡಲು ಅಲ್ಲಿನ ವೈದ್ಯರು ನಿರಾಕರಿಸಿದ್ದಾರೆ. ಹೀಗಾಗಿ ಸುಮಾರು 3 ಗಂಟೆಗಳ ಬಳಿಕ ವಿಮಾನವು ದೆಹಲಿಗೆ ಹೊರಟಿತ್ತು ಎಂದಿದ್ಧಾರೆ.
First published:August 14, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading