ಚಂದ್ರಯಾನ-2 ವಿಕ್ರಂ ಲ್ಯಾಂಡರ್​ಅನ್ನು ನಮ್ಮ ಸ್ವಂತ ಆರ್ಬಿಟರ್ ಈಗಾಗಲೇ ಪತ್ತೆ ಮಾಡಿತ್ತು; ಇಸ್ರೋ ಅಧ್ಯಕ್ಷ ಕೆ.ಶಿವನ್

ಇಸ್ರೋ ಸೆಪ್ಟೆಂಬರ್ 10ರಂದೇ ಈ ಬಗ್ಗೆ ತನ್ನ ವೆಬ್​ಸೈಟ್​ನಲ್ಲಿ ಹೀಗೆ ಬರೆದುಕೊಂಡಿದೆ. ಚಂದ್ರಯಾನ-2 ವಿಕ್ರಂ ಲ್ಯಾಂಡರ್ ಅನ್ನು ನಮ್ಮ ಸ್ವಂತ ಆರ್ಬಿಟರ್ ಪತ್ತೆ ಮಾಡಿದೆ. ಆದರೆ, ಅದರ ಜೊತೆಗೆ ಸಂಪರ್ಕ ಸಾಧ್ಯವಾಗಿಲ್ಲ. ಮರುಸಂಪರ್ಕಕ್ಕಾಗಿ ಎಲ್ಲ ರೀತಿಯ ಪ್ರಯತ್ನವನ್ನು ಮಾಡಲಾಗುತ್ತಿದೆ ಎಂದು ಹೇಳಿತ್ತು.

HR Ramesh | news18-kannada
Updated:December 4, 2019, 2:18 PM IST
ಚಂದ್ರಯಾನ-2 ವಿಕ್ರಂ ಲ್ಯಾಂಡರ್​ಅನ್ನು ನಮ್ಮ ಸ್ವಂತ ಆರ್ಬಿಟರ್ ಈಗಾಗಲೇ ಪತ್ತೆ ಮಾಡಿತ್ತು; ಇಸ್ರೋ ಅಧ್ಯಕ್ಷ ಕೆ.ಶಿವನ್
ಕೆ. ಶಿವನ್
  • Share this:
ಚಂದ್ರನ ದಕ್ಷಿಣ ಮೇಲ್ಮೈ ಮೇಲೆ ಸಾಫ್ಟ್​ ಲ್ಯಾಂಡಿಂಗ್​ ಮಾಡುವ ವೇಳೆ ಸಂಪರ್ಕ ಕಡಿದುಕೊಂಡ ಚಂದ್ರಯಾನ-2 ವಿಕ್ರಂ ಲ್ಯಾಂಡರ್​ ಪತನಗೊಂಡಿತ್ತು. ವಿಕ್ರಂ ಲ್ಯಾಂಡರ್ ಪತನಗೊಂಡ ಸ್ಥಳವನ್ನು ನಾಸಾ ಗುರುತಿಸಿದ ಒಂದು ದಿನದ ಬಳಿಕ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಇಸ್ರೋ ಅಧ್ಯಕ್ಷ ಕೆ.ಶಿವನ್ ಅವರು ವಿಕ್ರಂ ಲ್ಯಾಂಡರ್ ಅನ್ನು ನಮ್ಮ ಸ್ವಂತ ಆರ್ಬಿಟರ್ ಇದಕ್ಕೂ ಮುನ್ನವೇ ಪತ್ತೆಮಾಡಿತ್ತು. ಮತ್ತು ಅದನ್ನು ನಾವು ನಮ್ಮ ವೆಬ್​ಸೈಟ್​ನಲ್ಲೂ ಕೂಡ ನಾವು ಪ್ರಕಟಿಸಿದ್ದೆವು ಎಂದು ತಿಳಿಸಿದ್ದಾರೆ.

ವಿಕ್ರಂ ಲ್ಯಾಂಡರ್ ಅನ್ನು ನಮ್ಮ ಸ್ವಂತ ಆರ್ಬಿಟರ್ ಪತ್ತೆ ಮಾಡಿತ್ತು. ಅದನ್ನು ನಾವು ಈಗಾಗಲೇ ನಮ್ಮ ವೆಟ್​ಸೈಟ್​ನಲ್ಲಿ ಪ್ರಕಟ ಕೂಡ ಮಾಡಿದ್ದೆವೆ. ನೀವು ಬೇಕಿದ್ದರೆ ಹಿಂದಕ್ಕೆ ಹೋಗಿ ಅದನ್ನು ಪರಿಶೀಲಿಸಬಹುದು ಎಂದು ಶಿವನ್ ಹೇಳಿದ್ದಾರೆ.

ಚಂದ್ರಯಾನ-2 ವಿಕ್ರಮ್​​​​​ ಲ್ಯಾಂಡರ್​​​ ಪತನವಾದ ಸ್ಥಳವನ್ನು ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾದ ಲೂನಾರ್ ಆರ್ಬಿಟರ್ ಪತ್ತೆ ಹಚ್ಚಿತ್ತು. ಇಸ್ರೋದ ವಿಕ್ರಮ್​​​ ಲ್ಯಾಂಡರ್​​​​ ಪತನಗೊಂಡಿದ್ದ ಸ್ಥಳದ ಚಿತ್ರ ಸರೆ ಹಿಡಿದ ನಾಸಾದ ಲೂನಾರ್ ಆರ್ಬಿಟರ್, ಫೋಟೋವನ್ನು ಮಂಗಳವಾರ ಬಿಡುಗಡೆ ಮಾಡಿತ್ತು. ವಿಕ್ರಮ್​​​ ಲ್ಯಾಂಡಿಂಗ್ ಮುನ್ನ ಚಂದ್ರನ ಮೇಲ್ಮೈ ಹೇಗಿತ್ತು, ಲ್ಯಾಂಡಿಂಗ್ ನಂತರ ಚಂದ್ರನ ಮೇಲ್ಮೈ ಹೇಗಿದೆ ಎಂಬ ಚಿತ್ರವನ್ನು ಸರೆ ಹಿಡಿಯಲಾಗಿತ್ತು.

ನಾಸಾ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ಚಿಕ್ಕ ಚಿಕ್ಕ ಕಲೆಗಳಿಂದ ಕೂಡಿದ ಚಿತ್ರವನ್ನು ತನ್ನ ವೆಬ್​ಸೈಟ್​ನಲ್ಲಿ ಸೆಪ್ಟಂಬರ್ 26ರಂದು ಬಿಡುಗಡೆ ಮಾಡಿತ್ತು. ಲ್ಯಾಂಡರ್​ಅನ್ನು ಹುಡುಕಲು ಸಾರ್ವಜನಿಕರಿಗೆ ಆಹ್ವಾನ ನೀಡಿತ್ತು. ಭಾರತದ ಶಣ್ಮುಗ ಸುಬ್ರಮಣಿಯನ್ ಎಂಬುವವರು ಲ್ಯಾಂಡರ್​ ಅವಶೇಷಗಳನ್ನು ಸರಿಯಾಗಿ ಗುರುತಿಸಿದ್ದರು. ಲ್ಯಾಂಡರ್ ಅವಶೇಷದ ಮೊದಲ ತುಂಡು ಪತನಗೊಂಡ ಸ್ಥಳದಿಂದ 750 ಮೀಟರ್ ವಾಯವ್ಯದಲ್ಲಿ ಪತ್ತೆಯಾಗಿದೆ ಎಂದು ಹೇಳಿತ್ತು.

ಇದನ್ನು ಓದಿ: Chandrayaan-2: ಚಂದ್ರಯಾನ 2 ವಿಕ್ರಮ್ ಲ್ಯಾಂಡರ್ ಪತನವಾದ ಸ್ಥಳ ಪತ್ತೆ ಹಚ್ಚಿದ ನಾಸಾ

ಏತನ್ಮಧ್ಯೆ, ಇಸ್ರೋ ಸೆಪ್ಟೆಂಬರ್ 10ರಂದೇ ಈ ಬಗ್ಗೆ ತನ್ನ ವೆಬ್​ಸೈಟ್​ನಲ್ಲಿ ಹೀಗೆ ಬರೆದುಕೊಂಡಿದೆ. ಚಂದ್ರಯಾನ-2 ವಿಕ್ರಂ ಲ್ಯಾಂಡರ್ ಅನ್ನು ನಮ್ಮ ಸ್ವಂತ ಆರ್ಬಿಟರ್ ಪತ್ತೆ ಮಾಡಿದೆ. ಆದರೆ, ಅದರ ಜೊತೆಗೆ ಸಂಪರ್ಕ ಸಾಧ್ಯವಾಗಿಲ್ಲ. ಮರುಸಂಪರ್ಕಕ್ಕಾಗಿ ಎಲ್ಲ ರೀತಿಯ ಪ್ರಯತ್ನವನ್ನು ಮಾಡಲಾಗುತ್ತಿದೆ ಎಂದು ಹೇಳಿತ್ತು.
First published: December 4, 2019, 2:18 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading