ಗುಜರಾತ್​​ ಹಿಂಸಾಚಾರ: ವಲಸಿಗರ ಮೇಲೆ ಹಲ್ಲೆ, ‘ಠಾಕೂರ್​​ ಸೇನೆ’ ಕೈವಾಡವಿಲ್ಲ ಎಂದು ಅಲ್ಪೇಶ್​​ ಸ್ಪಷ್ಟನೆ..

ನಾವು ಭಾರತೀಯರು, ನಾವೆಲ್ಲ ಒಂದು. ಹದಿನಾಲ್ಕು ವರ್ಷದ ಬಾಲಕಿ ಮೇಲೆ ನಡೆದ ಅತ್ಯಚಾರದ ವಿರುದ್ಧ ಹೋರಾಟ ಮಾಡಬೇಕಿದೆ. ಅಲ್ಲದೇ  ಆರೋಪಿಗೆ ಶಿಕ್ಷೆ ಆಗಬೇಕು. ಉತ್ತರ ಭಾರತದ ಯಾವುದೇ ವಲಸಿಗರ ಮೇಲೆ ಠಾಕೂರ್​​ ಸಮುದಾಯದವರು ಹಲ್ಲೆ ಮಾಡಿಲ್ಲ- ಅಲ್ಪೇಶ್​​ ಠಾಕೂರ್​​

Ganesh Nachikethu
Updated:October 9, 2018, 4:45 PM IST
ಗುಜರಾತ್​​ ಹಿಂಸಾಚಾರ: ವಲಸಿಗರ ಮೇಲೆ ಹಲ್ಲೆ, ‘ಠಾಕೂರ್​​ ಸೇನೆ’ ಕೈವಾಡವಿಲ್ಲ ಎಂದು ಅಲ್ಪೇಶ್​​ ಸ್ಪಷ್ಟನೆ..
ಅಲ್ಪೇಶ್​​ ಠಾಕೂರ್
  • Share this:
ನ್ಯೂಸ್​​-18 ಕನ್ನಡ

ನವದೆಹಲಿ(ಅ.09): ಉತ್ತರ ಭಾರತೀಯರ ಮೇಲೆ ನಡೆಯುತ್ತಿರುವ ಹಲ್ಲೆಯ ಹಿಂದೆ ಗುಜರಾತ್​​ನ ಪ್ರಬಲ ಠಾಕೂರ್​​ ಸಮುದಾಯದ ಕೈವಾಡವಿದೆ ಎನ್ನಲಾಗಿದ್ದ ಆರೋಪವನ್ನು ಕಾಂಗ್ರೆಸ್​​ ಶಾಸಕ ಅಲ್ಪೇಶ್​​ ಠಾಕೂರ್​​​ ತಿರಸ್ಕರಿಸಿದ್ದಾರೆ. ಅಲ್ಲದೇ ನಮ್ಮ ಸಮುದಾಯದ ವಿರುದ್ಧ ಇತರರನ್ನು ಎತ್ತಿಕಟ್ಟಲು ಸುಳ್ಳು ಆರೋಪ ಎಸಲಾಗುತ್ತಿದೆ. ಎಂದಿಗೂ ಠಾಕೂರ್​​ ಸಮುದಾಯ ಇನ್ನೊಬ್ಬರ ಮೇಲೆ ದಾಳಿ ನಡೆಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಬಿಹಾರ ಮೂಲದ ವ್ಯಕ್ತಿಯೋರ್ವ ಠಾಕೂರ್​​ ಸಮುದಾಯಕ್ಕೆ ಸೇರಿದ ಅಪ್ರಪ್ತೆ ಬಾಲಕಿ ಮೇಲೆ ಬರ್ಬರವಾಗಿ ಅತ್ಯಚಾರವೆಸಗಿದ್ದ. ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಉತ್ತರ ಭಾರತೀಯ ವಲಸಿಗರ ಮೇಲೆ ವ್ಯಾಪಕ ದಾಳಿ ನಡೆದಿತ್ತು. ಈ ದಾಳಿ ಹಿಂದೆ ಠಾಕೂರ್​​ ಸೇನೆಯ ಕೈವಾಡವಿದೆ ಎಂದು ಆರೋಪಿಸಲಾಗಿತ್ತು. ಅಲ್ಲದೇ ಈ ಹಿಂಸಾಚರಕ್ಕೆ ಕಾಂಗ್ರೆಸ್​​ ಶಾಸಕ ಅಲ್ಪೇಶ್​​ ಠಾಕೂರ್​​ ಕುಮ್ಮಕ್ಕು ನೀಡುತ್ತಿದ್ಧಾರೆ ಎನ್ನಲಾಗಿತ್ತು.

ಸಾರ್ವಜನಿಕವಾಗಿ ಠಾಕೂರ್​​ ಸಮುದಾಯ  ಮೇಲಿನ ಆರೋಪಕ್ಕೆ ಪ್ರತಿಕ್ರಿಯಿಸಿದ ಅಲ್ಪೇಶ್ ಅವರು, ನಮ್ಮ ಸಮುದಾಯದವರು ಬಡ ಅಮಾಯಕರು. ಕಳೆದ ಐದು ವರ್ಷಗಳಿಂದ ಯಾವುದೇ ಹಿಂಸಾಚಾರದಲ್ಲಿ ಭಾಗಿಯಾಗಿಲ್ಲ. ನಮ್ಮ ಸಮುದಾಯದ ವಿರುದ್ಧ ಇತರೆ ಜಾತಿಗಳನ್ನು ಎತ್ತಿಕಟ್ಟಲು ಹಾಗೂ ನಾನು ಕಾಂಗ್ರೆಸ್​​ ಶಾಸಕ ಎಂಬ ಕಾರಣಕ್ಕೆ ಆರೋಪ ಎಸಗಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಾವು ಭಾರತೀಯರು, ನಾವೆಲ್ಲ ಒಂದು. ಹದಿನಾಲ್ಕು ವರ್ಷದ ಬಾಲಕಿ ಮೇಲೆ ನಡೆದ ಅತ್ಯಚಾರದ ವಿರುದ್ಧ ಹೋರಾಟ ಮಾಡಬೇಕಿದೆ. ಅಲ್ಲದೇ  ಆರೋಪಿಗೆ ಶಿಕ್ಷೆ ಆಗಬೇಕು. ಉತ್ತರ ಭಾರತದ ಯಾವುದೇ ವಲಸಿಗರ ಮೇಲೆ ಠಾಕೂರ್​​ ಸಮುದಾಯದವರು ಹಲ್ಲೆ ಮಾಡಿಲ್ಲ. ದಯವಿಟ್ಟು ಮಾಡಬೇಡಿ ಎಂದು ತಮ್ಮ ಸಮುದಾಯಕ್ಕೆ ಕಾಂಗ್ರೆಸ್​ ಶಾಸಕ ಅಲ್ಪೇಶ್​​ ಠಾಕೂರ್​​ ಮನವಿ ಮಾಡಿದರು.

ಗುಜಾರತ್​​ನಲ್ಲಿ ಉತ್ತರ ಭಾರತೀಯರ ವಿರುದ್ಧ ಹಲ್ಲೆ ನಡೆಸಲಾಗಿದೆ. ಈ ಹಿಂಚಾರದಲ್ಲಿ ಹಲವರಿಗೆ ಗಂಭಿರ ಗಾಯಾಗಳಾಗಿವೆ. ಈವರೆಗೆ ಸುಮಾರು 50 ಸಾವಿರಕ್ಕೂ ಹೆಚ್ಚು ವಲಸಿಗರು ತಮ್ಮ ಸ್ವಗ್ರಾಮಗಳಿಗೆ ತೆರಳಿದ್ದಾರೆ. ಆದರೆ ಕೇಂದ್ರ ಸರ್ಕಾರ ಮಾತ್ರ ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದೆ ದಿವ್ಯ ಮೌನ ವಹಿಸಿದೆ.

ರಕ್ಷಣೆ ನೀಡುವಂತೆ ಉತ್ತರ ಭಾರತೀಯರು ಕೇಂದ್ರಕ್ಕೆ ಮನವಿ ಸಲ್ಲಿಸಿದ್ದರೂ ಸಹ ಇದುವರೆಗೆ ಯಾವುದೇ ಪರಿಣಾಮಕಾರಿ ಕ್ರಮ ಕೈಗೊಂಡಿಲ್ಲ. ವ್ಯಾಪಕ  ಹಿಂಸಾಚಾರ ನಡೆಸುವವರ ಮೇಲೆ ದೂರು ದಾಖಲಿಸುವ, ಹಿಂಸಾಚಾರವನ್ನು ತಹಬದಿಗೆ ತಂದು ಸೂಕ್ತ ಕ್ರಮ ಕೈಗೊಳ್ಳುವ, ಇಲ್ಲವೇ ಗುಜರಾತ್​ ಸರ್ಕಾರದ ಜೊತೆ ಮಾತುಕತೆ ನಡೆಸಿ ಸಲಹೆ-ಸೂಚನೆಗಳನ್ನು ನೀಡುವ ಯಾವುದೇ ಕ್ರಮಕ್ಕೆ ಕೇಂದ್ರ ಮುಂದಾಗಿಲ್ಲ ಎನ್ನಲಾಗಿದೆ.ಇದನ್ನೂ ಓದಿ: ಜೀವ ಉಳಿಸಿಕೊಳ್ಳಲು ಗುಜರಾತ್​ನಿಂದ ಕಾಲ್ಕಿತ್ತ 50,000ಕ್ಕೂ ಹೆಚ್ಚು ಉತ್ತರ ಭಾರತೀಯರು

ಬಿಹಾರ, ಜಾರ್ಖಂಡ್​, ಮಧ್ಯಪ್ರದೇಶ, ಉತ್ತರ ಪ್ರದೇಶದಿಂದ ಕೂಲಿ ಕೆಲಸ ಮಾಡಲು ಬಂದಿದ್ದವರು ಈಗ ಜೀವ ಉಳಿಸಿಕೊಳ್ಳಲು ಮನೆಯತ್ತ ಮುಖಮಾಡಿದ್ದಾರೆ. ಕಾರ್ಮಿಕರು ವಲಸೆ ಹೋಗುತ್ತಿರುವ ಕಾರಣ ಗುಜರಾತ್​ನಲ್ಲಿ ಕೆಲವು ಕಾರ್ಖಾನೆಗಳನ್ನು ಮುಚ್ಚಲಾಗುತ್ತಿದೆ.

----------------
ರಶ್ಮಿಕಾ ಮಂದಣ್ಣ ಹೊಸ ಹಾಟ್​ ಫೋಟೋ ಶೂಟ್​ ವಿಡಿಯೋ..!
First published:October 9, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ