"ಬಹುತೇಕ ಮಾಡಿದ್ದೀ": ಕಲೈಙರ್ ಪಾತ್ರ ಮಾಡಿದ ಪ್ರಕಾಶ್​ ರಾಜ್​ ನಟನೆಗೆ ಕರುಣಾನಿಧಿಯ ವಿಮರ್ಶೆ


Updated:August 10, 2018, 1:25 PM IST

Updated: August 10, 2018, 1:25 PM IST
ಪೂರ್ಣಿಮಾ ಮುರಳಿ, ನ್ಯೂಸ್​ 18 ಕನ್ನಡ

ಚೆನ್ನೈ(ಆ.09): ಇರುವರ್​ ಸಿನಿಮಾದ ಒಂದು ದೃಶ್ಯದಲ್ಲಿ, ಡಿಎಂಕೆ ಪಕ್ಷದ ಸ್ಥಾಪಕ ಅಣ್ಣದೊರೈ ತನ್ನ ರಾಜಕೀಯ ಶತ್ರುಗಳ ಗುಂಪೊಂದು ತನ್ನನ್ನು ಅಸಹಾಯಕ ಸ್ಥಿತಿಯಲ್ಲಿ ಬಿಟ್ಟು ತೆರಳಿದ ಸಂದರ್ಭದಲ್ಲಿ ಯುವಕ ಕರುಣಾನಿಧಿಯವರಲ್ಲಿ ಎದ್ದು ಬಂದು ತನ್ನ ಜೊತೆಗಿರುವಂತೆ ಕೇಳಿಕೊಳ್ಳುತ್ತಾರೆ.

ಈ ಸಿನಿಮಾವು ಬಿಡುಗಡೆಯಾಗಿ 21 ವರ್ಷಗಳ ಬಳಿಕ ಈ ಸಿನಿಮಾದ ಡೈಲಾಗ್​ 'ಎಳುಂದುವಾ'(ಎದ್ದು ಬಾ) ಎಂಬುವುದನ್ನು ಕಾವೇರಿ ಆಸ್ಪತ್ರೆಯ ಹೊರಗೆ ನೆರೆದಿದ್ದ ಕರುಣಾನಿಧಿಯವರ ಅಸಂಖ್ಯಾತ ಅಭಿಮಾನಿಗಳು ಮಂತ್ರದಂತೆ ಪಠಿಸಿದರು. ಕರುಣಾನಿಧಿಯವರ ಈ ನಿಷ್ಠಾವಂತ ಅಭಿಮಾನಿಗಳು, ಆಸ್ಪತ್ರೆಗೆ ಸೇರಿ ಜೀವನ್ಮರಣದ ಹೋರಾಟ ನಡೆಸುತ್ತಿದ್ದ ತಮ್ಮ ನೆಚ್ಚಿನ ನಾಯಕನಿಗಾಗಿ ಈ ಶಬ್ಧವನ್ನು ಮಂತ್ರದಂತೆ ಜಪಿಸುತ್ತಿದ್ದರು. 'ವಾ ವಾ ತಲೈವಾ, ಎಳುಂದುವಾ ತಲೈವಾ'(ಬಾ ಬಾ ನಾಯಕ, ಎದ್ದು ಬಾ ನಾಯಕ) ಎಂಬ ಮಾತುಗಳು ಆಸ್ಪತ್ರೆಯ ಹೊರಗೆ ಹಗಲು ರಾತ್ರಿ ಕೇಳಿ ಬಂದಿತ್ತು.

ಅಣ್ಣಾದೊರೈ ಹಾಗೂ ಕರುಣಾನಿಧಿ ಮತ್ತು ಕರುಣಾನಿಧಿ ಹಾಗೂ ಎಂ. ಜಿ. ರಾಮವಚಂದ್ರನ್​ ನಡುವಿನ ಸಂಬಂಧ ಆರಂಭವಾಗಿದ್ದು ಈ ಸಿನಿಮಾದಿಂದಲೇ. ಆದರೆ ಸಿನಿಮಾ ಬಿಡುಗಡೆಯಾಗುತ್ತಿದ್ದಂತೆಯೇ ಬಹುತೇಕ ಎಲ್ಲಾ ಪಕ್ಷಗಳಿಂದ ಟೀಕೆಗೊಳಗಾಗಿತ್ತು. ಇರುವರ್​ ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ ಅಷ್ಟೇನು ಸದ್ದು ಮಾಡಿಲ್ಲವಾದರೂ, ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗಿತ್ತು.

ಇನ್ನು ಈ ಸಿನಿಮಾದಲ್ಲಿ ಕರುಣಾನಿಧಿಯವರ ಪಾತ್ರ ನಿಭಾಯಿಸಿದ ಪ್ರಕಾಶ್​ ರಾಜ್​ರವರ ನಟನೆಗೆ ಖುದ್ದು ಕಲೈಙರ್ ಪ್ರಶಂಸೆ ವ್ಯಕ್ತಪಡಿಸಿದ್ದರು.

ಈ ಕುರಿತಾಗಿ CNN-News 18 ನೊಂದಿಗೆ ತಮ್ಮ ಅನುಭವ ಹಂಚಿಕೊಂಡ ಪ್ರಕಾಶ್​ ರಾಜ್​ ಈ ಸಿನಿಮಾದಲ್ಲಿ ತಾನು ಯಾರ ಪಾತ್ರದಲ್ಲಿ ಕಾಣಿಸಿಕೊಂಡಿದ್ದೆನೋ ಅವರನ್ನೇ ಭೇಟಿಯಾಗಿದ್ದು ಅತ್ಯಂತ ಅದ್ಭುತ ಕ್ಷಣವಾಗಿತ್ತು ಎಂದಿದ್ದಾರೆ.

ಅಂದು ಅವರಿಗೆ 70ಕ್ಕೂ ಹೆಚ್ಚು ವಯಸ್ಸಾಗಿತ್ತು, ನನಗೆ ಕೇವಲ 30 ಆಗಿತ್ತು. ಇದಾದ ಹಲವಾರು ವರ್ಷಗಳ ಬಳಿಕ ನಾನು ಕರುಣಾನಿಧಿಯವರನ್ನು ಭೇಟಿಯಾಗಿ ಸಿನಿಮಾದಲ್ಲಿ 'ನಾನು ನಿಮ್ಮಂತೆ ಕಾಣಿಸುತ್ತಿದ್ದೆನೇ?' ಎಂದು ಪ್ರಶ್ನಿಸಿದ್ದೆ. ಆಗ ಅವರು 'ಬಹುತೇಕ' ಎಂದಿದ್ದರು.
Loading...

-ಪ್ರಕಾಶ್​ ರಾಜ್


ಇನ್ನು ತಾವು ನಿಭಾಯಿಸಿದ್ದ ಪಾತ್ರದ ಕುರಿತಾಗಿ ಮಾತನಾಡಿದ ಪ್ರಕಾಶ್​ ರಾಜ್​ ರಾಜಕಾರಣಿಯಾಗಿದ್ದ ಕರುಣಾನಿಧಿಯವರ ಬಗ್ಗೆ ತನಗೆ ತಿಳಿದಿತ್ತು. ಆದರೆ ತಾನು ಮಾಡಿದ್ದ ಪಾತ್ರ ಅವರನ್ನು ವ್ಯಕ್ತಿಗತವಾಗಿ ತಿಳಿಯಲು ಸಹಾಯ ಮಾಡಿತು. ಅವರಲ್ಲಿದ್ದ ಅಪಾರ ಜ್ಞಾನ ಹಾಗೂ ಸಾಹಿತ್ಯದ ಮೇಲೆ ಅವರಿಗಿದ್ದ ಪ್ರೀತಿಯನ್ನು ಪರಿಚಯಿಸತು ಎಂದಿದ್ದಾರೆ.

ನಾನಂದು ವ್ಯಕ್ತಿತ್ವವನ್ನು ನೋಡಿದೆ. ಆದರೆ ನಾನವರನ್ನು ಅನುಕರಿಸಲಿಲ್ಲ. ಸಮಾಜದಲ್ಲಿರುವ ವ್ಯವಸ್ಥೆಯನ್ನು ಬದಲಾಯಿಸಿದ, ತನ್ನ ವೈಯುಕ್ತಿಕ ಜೀವನವನ್ನು ಧೈರ್ಯವಾಗಿ ಬದುಕಿದ ಹಾಗೂ ಜಾತಿ ರಾಜಕೀದ ಕುರಿತು ತಲೆಕೆಡಿಸಿಕೊಳ್ಳದ ವ್ಯಕ್ತಿಯನ್ನು ನೋಡುವುದೇ ಬಹಳ ಖುಷಿ ಕೊಟ್ಟಿತ್ತು ಎಂದಿದ್ದಾರೆ ಪ್ರಕಾಶ್​ ರಾಜ್​.

ಕಲ್ಕಿ ಸಿನಿಮಾಗೆ ತನಗೆ ರಾಜ್ಯ ಪ್ರಶಸ್ತಿ ನೀಡುವಾಗ ಕರುಣಾನಿಧಿಯವರು ಹೇಗೆ ಪರೋಕ್ಷವಾಗಿ ಇರುವರ್​ ಸಿನಿಮಾದಲ್ಲಿ ನಾನು ನಟಿಸಿರುವುದನ್ನು ಹೇಳಿಕೊಂಡಿದ್ದರೆಂದು ಪ್ರಕಾಶ್​ ರಾಜ್​ ಈ ಸಂದರ್ಭದಲ್ಲಿ ನೆನಪಿಸಿಕೊಂಡಿದ್ದಾರೆ. "ಈ ಪ್ರಶಸ್ತಿಯನ್ನು ನಿಮಗೆ ನೀಡಲು ನನಗೆ ಬಹಳ ಆನಂದವಾಗುತ್ತಿದೆ(ಆನಂದಮಾ). ಅದು ನಿನಗೆ ತಿಳಿದಿದೆ. ನನಗೂ ತಿಳಿದಿದೆ. ನಮಗೆ ತಿಳಿದಿದೆ" ಎಂದು ಕರುಣಾನಿಧಿ ಹೇಳಿದ್ದರಂತೆ.

"ಹೀಗೆ ಅವರು ಸಿನಿಮಾ ಹಾಗೂ ಪ್ರಶಸ್ತಿಗೆ 'ಆನಂದನ್' ಎಂದು ಹೇಳುವ ಮೂಲಕ ಸಂಬಂಧ ಕಲ್ಪಿಸಿದ್ದರು" ಎಂದಿದ್ದಾರೆ ಪ್ರಕಾಶ್​ ರಾಜ್​. ಕುತೂಹಲ ಎಂಬಂತೆ ಮಣಿ ರತ್ನಂ ತಮ್ಮ ಸಿನಿಮಾಗೆ 'ಆನಂದನ್​' ಎಂದು ಹೆಸರಿಟ್ಟಿದ್ದರು. ಇತ್ತ ಇರುವರ್​ ಸಿನಿಮಾದಲ್ಲಿ ಎಂಜಿಆರ್​ ಪಾತ್ರವನ್ನು ಆನಂದನ್​ ಹೆಸರಿನಿಂದಲೇ ಪರಿಚಯಿಸಲಾಗಿತ್ತು.
ಕರುಣಾನಿಧಿಯವರ ನಿಧನದ ಬಳಿಕ "ಕರುಣಾನಿಧಿಯಂತಹ ವ್ಯಕ್ತಿಯನ್ನು ಯಾವತ್ತೂ ಕಾಣಲು ಸಾದ್ಯವಿಲ್ಲ" ಎಂಬುವುದು ಪ್ರಕಾಶ್​ ರಾಜ್​ ಸೇರಿದಂತೆ ಹಲವಾರು ಮಂದಿಯ ಅಭಿಪ್ರಾಯವಾಗಿದೆ. "ಭವಿಷ್ಯದಲ್ಲಿ ಅಂತಹ ವ್ಯಕ್ತಿ ಇನ್ನೆಂದೂ ಸಿಗುವುದಿಲ್ಲ. ನಿಮಗೆ ಅವರಲ್ಲಿ ಭಿನ್ನತೆ ಕಾಣಬಹುದು ಆದು ಸರಿ. ಆದರೆ ಒಟ್ಟಾರೆಯಾಗಿ ಅವರೊಬ್ಬ ತಮಿಳುನಾಡಿನ ಹೆಮ್ಮೆಯ ವೀರ. ತುಳಿತಕ್ಕೊಳಗಾದರೂ, ಬಡ ಕುಟುಂಬದಿಂದ ಬಂದ ವ್ಯಕ್ತಿಯೊಬ್ಬ ಅಸಾಮಾನ್ಯವಾಗಿ ಸಾಧನೆ ಮಾಡಿ ಎದ್ದು ನಿಂತವರು. ಅವರೊಬ್ಬ ಅದ್ಭುತ ಕ್ರಾಂತಿಕಾರಿ" ಎಂಬುವುದು ಪ್ರಕಾಶ್​ ರಾಜ್​ರವರ ಮಾತಾಗಿದೆ.

"ಬಳಿಕ ನಡೆದ ಬೆಳವಣಿಗೆಗಳು, ಪಕ್ಷಕ್ಕೇನಾಯಿತು? ಹಾಗೂ ಅವರ ಮೇಲೆ ಕೇಳಿ ಬಂದ ಭ್ರಷ್ಟಾಚಾರ ಆರೋಪಗಳನ್ನು ಬದಿಗಿಡೋಣ. ಆದರೆ ಅವರು ಏಕಾಂಗಿಯಾಗಿ ಈ ಪಕ್ಷವನ್ನು ಮುನ್ನಡೆಸಿದರು ಅಲ್ಲದೇ ಎಲ್ಲಾ ರಾಷ್ಟ್ರೀಯ ಪಕ್ಷಗಳನ್ನು ದೂರವಿಟ್ಟರು. ಎಂಜಿಆರ್​ ಹಾಗೂ ಕರುಣಾನಿಧಿ ಇಬ್ಬರೂ ಸಾಂಸ್ಕೃತಿಕವಾಗಿ ಗುರುತಿಸಿಕೊಂಡವರು ಅಷ್ಟೊಂದು ಬದ್ಧತೆಯೊಂದಿಗೆ ಸರಿಸುಮಾರು 5 ದಶಕಗಳ ಕಾಲ ತಮ್ಮ ಗುರುತನ್ನು ಉಳಿಸಿಕೊಂಡು ಮುನ್ನಡೆಯುವುದು ಸಾಮಾನ್ಯ ವಿಚಾರವಲ್ಲ" ಎನ್ನುತ್ತಾರೆ ಪ್ರಕಾಶ್​ ರಾಜ್​
First published:August 10, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ